• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ನವಭಾರತದ ಪ್ರಾತಃಸ್ಮರಣೀಯರು ಸರ್.ಎಂ.ವಿಶ್ವೇಶ್ವರಯ್ಯ

cknewsnow desk by cknewsnow desk
September 15, 2023
in CKPLUS, CKPRESS, GUEST COLUMN, NATION, STATE
Reading Time: 2 mins read
0
ನವಭಾರತದ ಪ್ರಾತಃಸ್ಮರಣೀಯರು ಸರ್.ಎಂ.ವಿಶ್ವೇಶ್ವರಯ್ಯ
942
VIEWS
FacebookTwitterWhatsuplinkedinEmail

ಇಂದು ವಿಶ್ವೇಶ್ವರಯ್ಯ ಅವರ ಜನ್ಮದಿನ

ಇಂದು ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನ. ಸಾರ್ಥಕ 101 ವರ್ಷ ಬಾಳಿ ಬದುಕಿದ ಈ ಅದಮ್ಯ ಚೇತನ ಭಾರತ ಮಾತ್ರವಲ್ಲ ಜಗತ್ತಿನ ಕುಶಲತೆ, ನೈಪುಣ್ಯತೆಯ ವಿಕಾಸಕ್ಕೆ ಮಹಾನ್‌ ಕಾಣಿಕೆ ಕೊಟ್ಟವರು. ಅವರು ಕನ್ನಡಿಗರು, ಅದು ನಮ್ಮ ಹೆಮ್ಮೆ. ಸರ್‌ ಎಂ.ವಿ. ಅವರಿಗೆ ಇಲ್ಲಿದೆ ಅಕ್ಷರ ನಮನ.

by Dr. Guruprasad Hawaldar

ಹೊಸ ಹೊಸತನ್ನು ಆವಿಷ್ಕರಿಸುವ ಮೂಲಕ, ಸದೃಢ ಕಟ್ಟಡಗಳನ್ನು ನಿರ್ಮಿಸುವ ಮೂಲಕ, ನವನವೀನ ಯಂತ್ರಗಳನ್ನು ಅಭಿವೃದ್ಧಿಪಡಿಸುವ ಮೂಲಕ ನಮ್ಮ ಎಂಜಿನಿಯರ್­ಗಳು ದೇಶ ಕಟ್ಟುವ ಕಾಯಕದಲ್ಲಿ ನಿರತರಾಗಿದ್ದಾರೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶ ಇಂದು ದಾಪುಗಾಲಿಡುತ್ತಿದೆ ಎಂದರೆ ಅದಕ್ಕೆ ಕಾರಣ ಎಂಜಿನಿಯರ್­ಗಳು ಮತ್ತು ಅವರ ಅವಿರತ ಶ್ರಮ. ಅವರು ಮಾಡುತ್ತಿರುವ ಕಾರ್ಯ ಮತ್ತು ಭಾರತದ ಅಭಿವೃದ್ಧಿಗೆ ನೀಡುತ್ತಿರುವ ಅತ್ಯಮೂಲ್ಯ ಸೇವೆಯನ್ನು ನಾವು ಸ್ಮರಿಸಬೇಕಿದೆ.

ನಮ್ಮ ಹೆಮ್ಮೆಯ ಎಂಜಿನಿಯರ್‌ಗಳನ್ನು, ಅವರ ಕೊಡುಗೆಗಳನ್ನು ಸ್ಮರಿಸಲೆಂದೇ ವಿಶ್ವ ಕಂಡ ಆ ಮಹಾನ್ ಎಂಜಿನಿಯರ್, ಕೃಷ್ಣರಾಜಸಾಗರ ಅಣೆಕಟ್ಟಿನ ಶಿಲ್ಪಿ ಮೋಕ್ಷಗೊಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನ ಸೆಪ್ಟೆಂಬರ್‌ 15ರ ದಿನವನ್ನು ನಿಗದಿ ಮಾಡಲಾಗಿದೆ. ಭಾರತದಲ್ಲಿ ಎಂಜಿನಿಯರ್‌ಗಳ ದಿನವನ್ನು ಈ ದಿನದಂದು ಆಚರಿಸಲಾಗುತ್ತದೆ. 1861 ಸೆಪ್ಟೆಂಬರ್‌ 15ರಂದು ಜನಿಸಿದ ಸರ್‌ ಎಂವಿ ಅವರು ತಮ್ಮ ತಾಯ್ನಲಕ್ಕೆ ಸಲ್ಲಿಸಿದ ಅನುಪಮ ಸೇವೆ, ಕೊಟ್ಟ ಕಾಣಿಕೆ ಶತಮಾನಗಳ ನಂತರವೂ ಅವಿಚ್ಛಿನ್ನವಾಗಿ ಉಳಿದಿದೆ, ಉಳಿಯಲಿದೆ.

ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಜನಪ್ರಿಯವಾಗಿ ಸರ್ ಎಂವಿ ಎಂಬ ಹೆಸರಿನಿಂದ ಪ್ರಖ್ಯಾತರು. ಕನ್ನಡ ನಾಡಿನ ಕೀರ್ತಿಪತಾಕೆಯನ್ನು ವಿಶ್ವದ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ. ಸೆಪ್ಟೆಂಬರ್ 15, 1861ರಲ್ಲಿ ಅಂದಿನ ಮೈಸೂರು ಪ್ರಾಂತ್ಯದ ಚಿಕ್ಕಬಳ್ಳಾಪುರ ಬಳಿಯ ಮುದ್ದೇನಹಳ್ಳಿ ಗ್ರಾಮದಲ್ಲಿ ಜನಿಸಿದ್ದರು.

ತೆಲುಗು ಬ್ರಾಹ್ಮಣರ ಮನೆತನದ ಆಯುರ್ವೇದಿಕ್ ಪಂಡಿತರು ಆಗಿದ್ದ ಮೋಕ್ಷಗುಂಡಂ ಶ್ರೀನಿವಾಸ ಶಾಸ್ತ್ರಿ ಮತ್ತು ಶ್ರೀಮತಿ ವೆಂಕಟಲಕ್ಷ್ಮಮ್ಮ ಸರ್‌ ಎಂವಿ ಅವರ ತಂದೆ-ತಾಯಿ. ಮೋಕ್ಷಗುಂಡಂ ಎಂಬುದು ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲಿರುವ ಒಂದು ಹಳ್ಳಿ.

ಚಿಕ್ಕಬಳ್ಳಾಪುರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸ ಪ್ರಾರಂಭಿಸಿ, ನಂತರದ ಪ್ರೌಢಶಾಲಾ ವ್ಯಾಸಂಗವನ್ನು ಬೆಂಗಳೂರಿನಲ್ಲಿ ಪೂರೈಸಿದರು. ಬಿ.ಎ. ಪದವಿಯನ್ನು 1881ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪಡೆದರು. ಸಿವಿಲ್ ಎಂಜಿನಿಯರ್ ಪದವಿಯನ್ನು 1883ರಲ್ಲಿ ಪುಣೆಯ ಕಾಲೇಜ್ ಆಫ್ ಎಂಜಿನಿಯರಿಂಗ್‌ʼನಲ್ಲಿ ಪಡೆಯುವುದರ ಮೂಲಕ ಉನ್ನತ ಸಾಧನೆಯತ್ತ ಹೆಜ್ಜೆ ಹಾಕಿದರು.

ಮೊದಲಿಗೆ ಬಾಂಬೆ ಸರ್ಕಾರದ (ಇಂದಿನ ಮಹಾರಾಷ್ಟ್ರ), ಲೋಕೊಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ಬಾಂಬೆ ಸರ್ಕಾರದ ನಿಯಂತ್ರಣದಲ್ಲಿದ್ದ ಸಿಂಧ್ ಪ್ರಾಂತ್ಯದ, ಸಿಂಧು-ಸುಕ್ಕೂರಿಗೆ ನೀರು ಹರಿಸುವ ಯೋಜನೆಯ ಜವಾಬ್ದಾರಿ ಸರ್ ಎಂ.ವಿಶ್ವೇಶ್ವರಯ್ಯ ಅವರಿಗೆ ದೊರೆಯಿತು. ಅವರ ಕಾರ್ಯನಿಷ್ಠೆ, ಚಮತ್ಕಾರಿಕೆಯ ಕಾರ್ಯವೈಖರಿ ಸರ್ಕಾರದ ಗಮನ ಸೆಳೆಯುವಂತೆ ಮಾಡಿತ್ತು. ನಂತರ ಗುಜರಾತಿನ ಸೂರತ್ʼನಲ್ಲಿಯೂ ನೀರು ಸರಬರಾಜು ವ್ಯವಸ್ಥೆಯನ್ನು ಸಹ ಅತ್ಯುತ್ತಮ ರೀತಿಯಲ್ಲಿ ಯೋಜನೆ ತಯಾರಿಸಿ ಸಂಪೂರ್ಣಗೊಳಿಸಿದರು. ಈಗಲೂ ಸಹ ಬಹಳಷ್ಟು ಭೂಕಂಪಗಳು ಸಂಭವಿಸಿದ ನಂತರವೂ ಸರ್ ಎಂವಿ ಅವ್ವru ರ ಕಾಮಗಾರಿ ಸುರಕ್ಷಿತವಾಗಿದೆ.

1903ರಲ್ಲಿ ಪುಣೆಯ ಬಳಿ ‘ಖಡಕ್ ವಾಸ್ಲಾ ಜಲಾಶಯ’ ದಲ್ಲಿ, ತಮ್ಮ ವಿಶಿಷ್ಟವಾದ ತಂತ್ರಜ್ಞಾನದಿಂದ ಮಾಡಿದ್ದ ಸ್ವಯಂ ಚಾಲಿತ ಕಣಿವೆ ಮಾರ್ಗಗಳನ್ನು ಉಪಯೋಗಿಸಿ, ಜಲಾಶಯದ ಈ ತಂತ್ರಜ್ಞಾನ ವಿಶ್ವದಲ್ಲೇ ಪ್ರಥಮ ಬಾರಿಗೆ ತೋರಿಸಿಕೊಟ್ಟ ಏಕೈಕ ತಂತ್ರಜ್ಞಾನಿಯಾಗಿ ಐತಿಹಾಸಿಕ ಸಾಕ್ಷಿಯಾಗಿದ್ದಾರೆ ಸರ್ ಎಂ.ವಿ. 1909ರಲ್ಲಿ ಹೈದರಾಬಾದ್, ವಿಶಾಖಪಟ್ಟಣದಲ್ಲಿ ಪ್ರವಾಹದಿಂದ ರಕ್ಷಿಸಲು ಯೋಜನೆ ರೂಪಿಸಿ ಪೂರ್ಣಗೊಳಿಸಿದರು. ಜನ ಸಾಗರವನ್ನು ಆಕರ್ಷಿಸುತ್ತಿರುವ ವಿಶ್ವವಿಖ್ಯಾತ ಕೃಷ್ಣರಾಜ ಸಾಗರ ಆಣೆಕಟ್ಟೆಯನ್ನು ಜಗತ್ತೇ ಆಶ್ಚರ್ಯದಿಂದ ನೋಡುವಂಥದ್ದು.  ಅಂದಿನ ಕಾಲಘಟ್ಟದಲ್ಲಿ ಭಾರತದಲ್ಲೇ ಅತ್ಯಂತ ದೊಡ್ದ ಆಣೆಕಟ್ಟು ಎಂಬ ಹೆಗ್ಗಳಿಕೆ ಅದರದ್ದು.

ಕೃಷ್ಣರಾಜ ಸಾಗರ (ಕನ್ನಂಬಾಡಿ) ಜೀವನದಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾದ ಆಣೆಕಟ್ಟು. ನಿರ್ಮಾಣ ಪ್ರಾರಂಭಿಸಿ ನಾಲ್ಕು ವರ್ಷಗಳಲ್ಲೇ ಮುಗಿಸಿ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಿ ಜಗತ್ತಿನಲ್ಲಿ ಯಾರೊಬ್ಬರೂ ಮಾಡಿರದಂಥ  ಸಾಧನೆ ಮಾಡಿದರು ಅವರು. ಬೇರೆ ಆಣೆಕಟ್ಟುಗಳು ಸಿಮೆಂಟ್, ಕಾಂಕ್ರಿಟ್ʼನಿಂದ ನಿರ್ಮಾಣವಾಗಿದ್ದರೆ, ಕೆ.ಆರ್.ಎಸ್. ಆಣೆಕಟ್ಟು ಸರ್ ಎಂವಿ ಅವರ ಜಾಣ್ಮೆಯ ತಂತ್ರಜ್ಞಾನದಿಂದ ಸುಣ್ಣ ಮತ್ತು ಬೆಲ್ಲದ ಮಿಶ್ರಣದಿಂದ ಕಟ್ಟಿದ ಗಟ್ಟಿ ಮಾನವ ನಿರ್ಮಿತವಾಗಿದ್ದು, ದಾಖಲೆಯೊಂದಿಗೆ ಶತಮಾನದಿಂದ ಮೈಸೂರು, ಮಂಡ್ಯ, ಬೆಂಗಳೂರು, ತಮಿಳುನಾಡಿಗೆ ಜೀವಜಲವನ್ನು ನೀಡುತ್ತಿರುವ ಮಹಾನ್‌ ವಾಸ್ತುಶಿಲ್ಪವಾಗಿದೆ.

ಎಲ್ಲಿಯಾದರೂ ದುರಂತ ಸಂಭವಿಸಿದರೆ ಸ್ವಯಂ ಚಾಲಿತ ಗೇಟುಗಳು ತನ್ನಷ್ಟಕ್ಕೆ ತಾನೆ ತೆರೆದುಕೊಂಡು ಮುನ್ನುಗ್ಗುವ ಅಪಾರ ಪ್ರಮಾಣದ ನೀರು ಯಾರಿಗೂ ತೊಂದರೆಯಾಗದಂತೆ ಹರಿದು ಮುಂದೆ ಸಾಗಲು ಮುಂದಾಲೋಚನೆಯಿಂದ ಆಣೆಕಟ್ಟು ನಿರ್ಮಿಸುವಾಗಲೇ ವ್ಯವಸ್ಥೆ ಮಾಡಲಾಗಿದೆ. ಜಗತ್ತಿನ ಅದ್ಭುತಗಳ ಸಾಲಲ್ಲಿ ಒಂದಾದ ಕೃಷ್ಣರಾಜ ಸಾಗರ ಅಣೆಕಟ್ಟು ಒಂದು ಲಕ್ಷ ಇಪ್ಪತ್ತು ಸಾವಿರ ಏಕರೆ ಕೃಷಿ ಭೂಮಿಗೆ ನೀರುಣಿಸಿ, ದಕ್ಷಿಣ ಭಾರತದ ಕೋಟ್ಯಂತರ ಜೀವಿಗಳಿಗೆ ಜೀವ ಜಲವನ್ನು ನೀಡಿದ ಭಾರತದ ಭಾಗ್ಯವಿಧಾತ ಸರ್ ಎಂ. ವಿಶ್ವೇಶ್ವರಯ್ಯ ಅವರನ್ನು ದಕ್ಷಿಣ ಭಾರತದ ಜನತೆ ಮರೆಯುವಂತಿಲ್ಲ.

ಬೃಂದಾವನ ಉದ್ಯಾನವನದಲ್ಲಿ ವೈವಿಧ್ಯಮಯ ನರ್ತಿಸುವ ಕುಣಿದು ಕುಪ್ಪಳಿಸುವ ನೀರಿನ ಕಾರಂಜಿಗಳು, ಪುಷ್ಪಕಾಶಿ ಯೊಂದಿಗೆ ಜಗತ್ತಿನ ನಾನಾ ದೇಶದ ಪ್ರವಾಸಿಗರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ.

ಸರ್ ಎಂ.ವಿ ಎಂದೊಡನೆ, ಅಸಾಧಾರಣ ಎಂಜಿನಿಯರ್, ಅನನ್ಯ ರಾಷ್ಟ್ರಪ್ರೇಮ, ಕರ್ತವ್ಯನಿಷ್ಠ ಅಧಿಕಾರಿ, ದಕ್ಷ ಆಡಳಿತಗಾರ, ಭವ್ಯ ಭಾರತ ನಿರ್ಮಾಣದ ಕನಸುಗಾರ. ‘ಕೈಗಾರಿಕೆ ಇಲ್ಲವೇ ಸರ್ವನಾಶ’ ಎಂದು ಎಚ್ಚರಿಸಿದ ರಾಷ್ಟ್ರಚಿಂತಕ. ನಿಸ್ಸ್ವಾರ್ಥಿ, ಛಲವಾದಿ, ಎಂಬ ವಿಚಾರಗಳು ನಮ್ಮ ಮನಸ್ಸಿನಲ್ಲಿ ಮೂಡಿ ಬರುತ್ತವೆ. ಇಷ್ಟೇ ಅಲ್ಲದೇ ಸರ್ ಎಂವಿ ಅವರು ಮಾನವೀಯತೆಯುಳ್ಳ ದಯಾಳು ಹೃದಯದ ವ್ಯಕ್ತಿ ಆಗಿದ್ದರು.

ಅವರು ಚಿಕ್ಕಂದಿನಿಂದಲೂ ನಮ್ಮ ಸಂಸ್ಕೃತಿ ಸಂಪ್ರದಾಯಗಳಿಗೆ ಗೌರವ ಕೊಡುತ್ತಿದರು. ಸರ್ ಎಂವಿ ಅವರು ಮೈಸೂರು ಸಂಸ್ಥಾನದ ದಿವಾನರು ಆಗಿದ್ದ ಕಾಲದಲ್ಲಿ, ಅವರ ಸಂಭಂಧಿಕರು ಒಬ್ಬರು ಇವರ ಬಳಿ ಬಂದು ಮೈಸೂರು ಮಹಾರಾಜರ ಬಳಿ ಹೇಳಿ ಒಂದು ಒಳ್ಳೆಯ ಸಂಬಳದ ಕೆಲಸ ಧಕ್ಕಿಸಿಕೊಡುವುದಾಗಿ ಕೇಳಿದ್ದರಂತೆ. ಸರ್ ಎಂವಿ ಅವರು ಒಂದೇ ಮಾತಿನಲ್ಲಿ “ಆಗೋದಿಲ್ಲ” ಅಂತ ಹೇಳಿ ಜತೆಗೆ ಪ್ರತಿ ತಿಂಗಳು ಅವರ ಸ್ವಂತ ದುಡ್ಡಿನಲ್ಲಿ ಅವರ ಸಂಬಂಧಿಕನಿಗೆ 100 ರೂಪಾಯಿ ಕಳುಹಿಸುತ್ತಿದ್ದ ಸಹೃದಯರು.

ಅಧಿಕಾರವನ್ನು ಅವರೆಂದೂ ದುರುಪಯೋಗ ಮಾಡಿಕೊಳ್ಳುತ್ತಿರಲಿಲ್ಲ. ದಿವಾನರಾಗಿದ್ದ ಅವಧಿಯಲ್ಲಿ, ನಮ್ಮ ಸರ್ಕಾರ ಅವರಿಗೇ ಅಂತ ಒಂದು ಕಾರು ಕೊಟ್ಟಿತ್ತು. ಅವರು ಕೇವಲ ಕಚೇರಿಯ ಉಪಯೋಗಕ್ಕೆ ಮಾತ್ರ ಆ ಕಾರನ್ನು ಬಳಸುತ್ತಿದ್ದರು. ಅವರ ವೈಯಕ್ತಿಕ ಕೆಲಸಗಳಿಗೆ ಸ್ವಂತ ಕಾರನ್ನು ಉಪಯೋಗಿಸುತ್ತಿದ್ದರು. ಜತೆಗೆ ಸರ್ಕಾರದ ಕಾಗದ-ಪೆನ್ನನ್ನು ಸಹ ವೈಯಕ್ತಿಕ ವಿಷಯಗಳಿಗೆ ಉಪಯೋಗಿಸುತ್ತಿರಲಿಲ್ಲ.

ಸರ್ ಎಂವಿ ಅವರು ಶಿಸ್ತಿನ ಸಿಪಾಯಿ ಸಹ ಆಗಿದ್ದರು. ಪ್ರತಿನಿತ್ಯ ರಾತ್ರಿ 10 ಗಂಟೆಗೆ ಮಲಗಿ, ಬೆಳಗ್ಗೆ 6 ಗಂಟೆಗೆ ಎದ್ದು, 7 ಗಂಟೆಗೆಲ್ಲಾ ಕೆಲಸಕ್ಕೆ ಹೊರಡುತ್ತಿದ್ದರು.ಸರ್ ಎಂವಿ ಸಾಧನೆಗಳು ಅಪಾರ, ಅನಿಯಮಿತ ಹಾಗೂ ಅಸಂಖ್ಯಾತ. ಅವರ ಹೆಸರಿನಲ್ಲಿ ಹಲವಾರು ಕಾರ್ಖಾನೆಗಳು, ಶಾಲಾ-ಕಾಲೇಜುಗಳು ಬಂದವು.

ಬ್ರಿಟೀಷರು 1915ರಲ್ಲಿ ಸರ್ ಪ್ರಶಸ್ತಿ ನೀಡಿದರೆ, 1955ರಲ್ಲಿ ಭಾರತ ಸರಕಾರ ಭಾರತರತ್ನ ನೀಡಿ ಗೌರವಿಸಿತು. ಅವರವನ್ನು ಅರಸಿ ಬಂದ ಡಾಕ್ಟರೇಟ್ ಮತ್ತಿತರೆ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಏಪ್ರಿಲ್ 14, 1962ರಂದು ಅವರು ನಮ್ಮನ್ನು ಅಗಲಿದರು.ಕೆಲಸದ ಮೇಲಿನ ಶ್ರದ್ಧೆ, ಪ್ರಾಮಾಣಿಕತೆ ಮತ್ತು ಶಿಸ್ತು ಇವು ವಿಶ್ವೇಶ್ವರಯ್ಯರವರ ಟ್ರೇಡ್‌ಮಾರ್ಕ್ ಆಗಿತ್ತು.

ಒಬ್ಬ ಎಂಜಿನಿಯರ್ ಆಗಿ ದೇಶದ ಅಭಿವೃದ್ಧಿಯಲ್ಲಿ ಅವರು ವಹಿಸಿರುವ ಪಾತ್ರ ಅನನ್ಯ. ಇಂದು ಕೆಲವರು ಅವರ ಈ ಸಾಧನೆಯ ಬಗ್ಗೆ ಅವರ ನಿರ್ಮಿಸಿದ ಕೌಶಲ್ಯ ಯುತ ನಿರ್ಮಾಣದ ಬಗ್ಗೆ ಜನೋಪಯೋಗಿ ಯೋಜನೆಗಳ ಬಗ್ಗೆ ಕೊಂಕು, ಶಂಕೆ, ಅಸಹನೆ, ಕೆಸರಾಟದಲ್ಲಿ ತೊಡಗಿದ್ದಾರೆ. ಅವರ ಸಾಧನೆಗೆ ವಿಶ್ವವೇ ತಲೆಬಾಗಿದೆ. ಅದರೂ ಜನರಿಗೆ ಅರ್ಥವಾಗದೇ ಇದ್ದದ್ದು ವಿಪರ್ಯಾಸವೇ ಸರಿ.


Dr. Guruprasad Hawaldar

ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.

Tags: ckcknewsnowEngineer's dayengineeringguest columnsir m visvesvarayaSir Mokshagundam Visvesvaraya
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪುಸೆಟ್ಟುಗಳಿಗೆ 24/7 ಉಚಿತ ವಿದ್ಯುತ್

ಕೃಷಿ ಇಲಾಖೆಯೋ ಕಸಾಯಿಖಾನೆಯೋ

Leave a Reply Cancel reply

Your email address will not be published. Required fields are marked *

Recommended

ಬೆಲೆ ಏರಿಕೆಯಿಂದ ಜನ ಹೈರಾಣಾಗಿದ್ದಾರೆ, ಕೂಡಲೇ ಅಡುಗೆ ಎಣ್ಣೆ ದರ ನಿಯಂತ್ರಿಸಿ ಎಂದು ಪಿಎಂ, ಸಿಎಂ, ಆಹಾರ ಸಚಿವರಿಗೆ ಪತ್ರ ಬರೆದ ಸಂಸದ ಡಿ.ಕೆ ಸುರೇಶ್

ಬೆಲೆ ಏರಿಕೆಯಿಂದ ಜನ ಹೈರಾಣಾಗಿದ್ದಾರೆ, ಕೂಡಲೇ ಅಡುಗೆ ಎಣ್ಣೆ ದರ ನಿಯಂತ್ರಿಸಿ ಎಂದು ಪಿಎಂ, ಸಿಎಂ, ಆಹಾರ ಸಚಿವರಿಗೆ ಪತ್ರ ಬರೆದ ಸಂಸದ ಡಿ.ಕೆ ಸುರೇಶ್

4 years ago
ಸರಳ ಜಂಬೂ ಸವಾರಿ; ಅಭಿಮನ್ಯು ಹೊತ್ತ ಅಂಬಾರಿಯಲ್ಲಿ ವಿರಾಜಮಾನರಾಗಿದ್ದ ಚಾಮುಂಡೇಶ್ವರಿ ಅಮ್ಮನವರಿಗೆ ನಮಿಸಿದ ನಾಡಜನ

ಈ ವರ್ಷವೂ ಸರಳ, ಸಾಂಪ್ರದಾಯಿಕ ದಸರಾ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ