ಅಮೆರಿಕದ ವಿಜ್ಞಾನಿಗಳಿಗೆ ಪ್ರತಿಷ್ಠಿತ ಗೌರವ
ಸ್ಟಾಕ್ ಹೋಮ್ (ಸ್ವೀಡನ್): 2019ರಲ್ಲಿ ಕಾಣಿಸಿಕೊಂಡು ಜಗತ್ತಿನಾದ್ಯಂತ ಸುಮಾರು 17.6–31.4 ದಶಲಕ್ಷ ಜನರ ಸಾವಿಗೆ ಕಾರಣವಾದ ಕೊರೋನ ವೈರಸ್ (ಕೋವಿಡ್ -19) ಬಗೆಗಿನ ಆತಂಕ ಇನ್ನೂ ಕಡಿಮೆ ಆಗಿಲ್ಲ.
ಆದರೆ, ಅತ್ಯಂತ ವೇಗಗತಿಯಲ್ಲಿ ಸಂಶೋಧನೆಗೊಂಡ ಕೋವಿಡ್ ಲಸಿಕೆ ಜನರ ಜೀವ ಉಳಿಸಿತು.
ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿದ ಇವರು ಶ್ರೇಷ್ಠ ವೈದ್ಯ ವಿಜ್ಞಾನಿಗಳಿಗೆ 2023ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಪುರಸ್ಕಾರ ಸಂದಿದೆ.
ಕತಾಲಿನ್ ಕರಿಕೋ (ಹಂಗೇರಿ ಮೂಲದ ಅಮೆರಿಕದ ಪ್ರಜೆ ) ಹಾಗೂ ಡ್ರೀವ್ ವಿಸ್ಮನ್ (ಅಮೆರಿಕ) ಅವರಿಗೆ ಜಂಟಿಯಾಗಿ 2023ನೇ ಸಾಲಿನ ನೊಬೆಲ್ ಪುರಸ್ಕಾರ ಸಂದಿದೆ
ಕೊರೊನಾ ವೈರಸ್ ಕೋವಿಡ್ ಸೋಂಕು ಜಗತ್ತನ್ನು ಕಾಡುತ್ತಿದ್ದಾಗಲೇ ಈ ಇಬ್ಬರೂ ವಿಜ್ಞಾನಿಗಳು ಸಂಶೋಧನೆಯಲ್ಲಿ ನಿರತರಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದರು.
ಕತಾಲಿನ್ ಕರಿಕೋ ಹಾಗೂ ಡ್ರೀವ್ ವಿಸ್ಮನ್ ಅವರ ಸಂಶೋಧನೆಗಳು ಕೋವಿಡ್ ವೈರಾಣುವನ್ನೂ ಅರ್ಥೈಸಿಕೊಳ್ಳಲು ವೈದ್ಯಕೀಯ ಜಗತ್ತಿಗೆ ನೆರವು ನೀಡಿದೆ. ಕೋವಿಡ್ ವೈರಾಣು ಹೇಗೆ ಮಾನವನ ರೋಗ ನಿರೋಧಕ ಶಕ್ತಿ ಹಾಗೂ ರೋಗದ ವಿರುದ್ಧ ಹೋರಾಡುವ ವ್ಯವಸ್ಥೆಯನ್ನು ಭೇದಿಸುತ್ತದೆ ಎನ್ನುವುದರ ಕುರಿತಾಗಿ ಈ ಇಬ್ಬರೂ ವಿಜ್ಞಾನಿಗಳು ವ್ಯಾಪಕ ಅಧ್ಯಯನ ನಡೆಸಿದ್ದಾರೆ ಎಂದು ಸ್ವೀಡಿಷ್ ಅಕಾಡೆಮಿ ತಿಳಿಸಿದೆ.
ಕೋವಿಡ್ ವೈರಾಣು ಸಾಂಕ್ರಾಮಿಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಜನರು ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರು. ಅಂತಹ ಕ್ಲಿಷ್ಟ ವೇಳೆಯಲ್ಲಕಿ ಅತ್ಯಂತ ತ್ವರಿತವಾಗಿ ಕೋವಿಡ್ ವಿರುದ್ಧ ಹೋರಾಡುವ ರೋಗ ನಿರೋಧಕ ಲಸಿಕೆಯನ್ನು ಇವರಿಬ್ಬರೂ ಅಭಿವೃದ್ಧಿಪಡಿಸಿದರು. ಇದರಿಂದ ಅಪಾರ ಪ್ರಮಾಣದಲ್ಲಿ ಲಸಿಕೆಯನ್ನು ಉತ್ಪಾದನೆ ಮಾಡಲು ಕತಾಲಿನ್ ಕರಿಕೋ ಹಾಗೂ ಡ್ರೀವ್ ವಿಸ್ಮನ್ ಅವರ ಸಂಶೋಧನೆಗಳು ಜಾಗತಿಕವಾಗಿ ವೈದ್ಯಕೀಯ ರಂಗದ ನೆರವಿಗೆ ನಿಂತವು ಎಂದು ಅಕಾಡೆಮಿ ಅವರ ಸಾಧನೆಯನ್ನು ಶ್ಲಾಘಿಸಿದೆ.