161 ತಾಲೂಕುಗಳಲ್ಲಿ ತೀವ್ರ ಬರಗಾಲ; ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಕೂಡ ಬರಪೀಡಿತ
ಕಲಬುರಗಿ/ಬೆಂಗಳೂರು: ರಾಜ್ಯದಲ್ಲಿನ ಬರ ಅಧ್ಯಯನಕ್ಕೆ ಈವಾರದಲ್ಲಿ ಕೇಂದ್ರದಿಂದ ಮೂರು ತಂಡಗಳು ಅಗಮಿಸುತ್ತಿವೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಕಲ್ಬುರ್ಗಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿಭಾಗದ 7 ಜಿಲ್ಲೆಗಳಲ್ಲಿನ ಕೃಷಿ ಹಾಗೂ ಜಲಾನಯನ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಕೃಷಿ ಸಚಿವರು ಮಾಧ್ಯಮ ಪ್ರತಿನಿಧಿಗಳಿಗೆ ಈ ಮಾಹಿತಿ ನೀಡಿದರು.
ರಾಜ್ಯದಲ್ಲಿ ಒಟ್ಟು 40 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಅಂದಾಜು 28000 ಸಾವಿರ ಕೋಟಿ ರೂ ನಷ್ಟ ಸಂಭವಿಸಿದೆ ಎಂದು ಸಚಿವರು ಹೇಳಿದರು.
2023ರ ಮುಂಗಾರಿನಲ್ಲಿ 111 ಲಕ್ಷ ಟನ್ ಆಹಾರ ಧಾನ್ಯಗಳಲ್ಲಿ ಉತ್ಪಾದನೆ ಗುರಿ ಹೊಂದಲಾಗಿತ್ತು. ಬರಗಾಲದಿಂದ 58 ಲಕ್ಷಟನ್ ಉತ್ಪಾದನಾ ಹಾನಿ ಅಂದಾಜಿಸಲಾಗಿದೆ ಎಂದು ಕೃಷಿ ಸಚಿವರು ಮಾಹಿತಿ ನೀಡಿದರು.
ರಾಜ್ಯದ 31 ಜಿಲ್ಲೆಗಳ 161 ತಾಲೂಕುಗಳು ತೀವ್ರ ಹಾಗೂ 34 ತಾಲ್ಲೂಕುಗಳು ಸಾಧಾರಣ ಬರ ಎಂದು ಗುರುತಿಸಲಾಗಿದ್ದು ಒಟ್ಟಾರೆ 195 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ ಕೇಂದ್ರ ತಂಡ ಬರ ಪರಿಶೀಲನೆ ನಡೆಸಿ ವರದಿ ನೀಡಲಿವೆ ಎಂದರು.
ಬರದಿಂದ ಬಿತ್ತನಗೆ ಅಡ್ಡಿಯಾದ ರೈತರಿಗೆ 48 ಕೋಟಿ ರೂಪಾಯಿ ಪರಿಹಾರ ವಿತರಿಸಲಾಗುವುದು ಎಂದು ಸಚಿವರು ಹೇಳಿದರು.
ನೆಟ್ಟೆ ರೋಗ ಪರಿಹಾರ ಸಂಕಷ್ಟಕ್ಕೆ ಸಿಲಿಕಿದ ರೈತರಿಗೆ ಒಟ್ಟಾರೆ 224 ಕೋಟಿ ರೂ ಪರಿಹಾರ ಮಂಜೂರು ಮಾಡಿದ್ದು, 2 ಹಂತಗಳಲ್ಲಿ ಈವರೆಗೆ 148 ಕೋಟಿ ಬಿಡುಗಡೆ. ಮಾಡಲಾಗಿದೆ
ಕಲಬುರಗಿ ಜಿಲ್ಲೆಯ 1.58ಲಕ್ಷ ರೈತರಿಗೆ ಒಟ್ಟು 116 ಕೋಟಿ ರೂ ಪರಿಹಾರ ಒದಗಿಸಲಾಗಿದೆ ಎಂದರು.
ರಾಜ್ಯದಲ್ಲಿ ಜುಲೈನಲ್ಲಿ ಶೇ 29 ಅಧಿಕ ಮಳೆಯಾದರೂ ಆಗಸ್ಟ್‌ನಲ್ಲಿ ಶೇ 73 ಕೊರತೆಯಾಗಿದೆ. ಹಾಗಾಗಿ ಬೆಳೆ ನಷ್ಟ ಹೆಚ್ಚಾಗಿದೆ.ಕಲಬುರಗಿ ಜಿಲ್ಲೆಯಲ್ಲಿ ಮಳೆಯ ಕೊರತೆ ಕೇವಲ 5%
ಆದರೆ ಸಕಾಲದಲ್ಲಿ ಮಳೆಯಾಗದ ಕಾರಣ ಬೆಳೆ ಹಾನಿಯಾಗಿದ್ದು ಜಿಲ್ಲೆಯ 11 ತಾಲ್ಲೂಕುಗಳು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಕೃಷಿ ಭಾಗ್ಯ ಯೋಜನೆ ಈ ವರ್ಷ ಪುನಾರಂಭಿಸಿದ್ದು, ಇಲಾಖೆಯಿಂದ 100 ಕೋಟಿ ಅನುದಾನ ದೊರೆಯಲಿದ್ದು, ಮುಂದಿನ ವರ್ಷದಿಂದ ಹೆಚ್ಚಿನ ಅನುದಾನ ಮೀಸಲಿರಿಸಲಾಗುವುದು ಎಂದು ಚಲುವರಾಯಸ್ವಾಮಿ ಹೇಳಿದರು.
ನವೋದ್ಯಮ ಯೋಜನೆಯಡಿ ಹೊಸ ಏಫ್ ಪಿ ಒ ಗಳಿಗೆ 5 ರಿಂದ 20 ಲಕ್ಷ ರೂಪಾಯಿವರೆಗೆ ಸಾಲದ ನೆರವನ್ನು 20 – 50 ಲಕ್ಷಗಳಿಗೆ ಏರಿಕೆ.. ಇದಕ್ಕಾಗಿ 10 ಕೋಟಿ ಮೀಸಲಿರಿಸಾಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬೃಹತ್ ಕಟಾವ್ ಹಾರ್ವೆಸ್ಟರ್ ಹಬ್ ಸ್ಥಾಪನೆಗೆ 50 ಕೋಟಿ ರೂಪಾಯಿ ಮೀಸಲು 100 ಹಬ್ ಸ್ಥಾಪನೆಯಾದ ಮಾಡಲಾಗುವುದು ಎಂದರು.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಕೂಡ ಬರಪೀಡಿತ
ಎರಡೂ ಜಿಲ್ಲೆಗಳ ಹನ್ನೊಂದು 12 ತಾಲೂಕುಗಳು ಈಗಾಗಲೇ ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಕೇಂದ್ರ ತಂಡಗಳು ಜಿಲ್ಲೆಗಳಿಗೆ ಭೇಟಿ ನೀಡುತ್ತವೆಯಾ? ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಸಿಕೆನ್ಯೂಸ್ ನೌ ಜತೆ ಮಾತನಾಡಿದ ಜಿಲ್ಲೆಗಳ ಕೆಲ ಮುಖಂಡರು, ಚಿಕ್ಕಬಳ್ಳಾಪುರ ಜಿಲ್ಲೆಗೆ ಅಧ್ಯಯನ ತಂಡಗಳು ಬರುವುದು ಅನುಮಾನ. ಏಕೆಂದರೆ, ಸಂಸದ ಬಚ್ಚೇಗೌಡರು ಪ್ರಯತ್ನ ಮಾಡಬೇಕು, ಇಲ್ಲವೇ ಜಿಲ್ಲೆಯ ಎಲ್ಲಾ ಶಾಸಕರು ಯತ್ನಿಸಬೇಕು. ಸದ್ಯಕ್ಕೆ ಅಂತಹ ವಾತಾವರಣ ಇಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಆದರೆ, ಕೋಲಾರಕ್ಕೆ ಅಧ್ಯಯನ ತಂಡ ಬಂದು ಹೋಗುವ ನಿರೀಕ್ಷೆ ಇದೆ. ಸಂಸದ ಮುನಿಸ್ವಾಮಿ ಅವರು ಈಗಾಗಲೇ ಜಿಲೆಯಲ್ಲಿ ಉಂಟಾಗಿರುವ ಬರದ ಪರಿಸ್ಥಿತಿಯ ಬಗ್ಗೆ ಕೇಂದ್ರ ಕೃಷಿ ಸಚಿವರಿಗೆ ನೀಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.