ಪುರಸ್ಕಾರ ಹಂಚಿಕೊಂಡ ಮೌಂಗಿ ಜಿ ಬವೆಂಡಿ, ಲೂಯಿಸ್ ಇ ಬ್ರಸ್ & ಅಲೆಕ್ಸಿ ಐ ಎಕಿಮೊವ್
ಸ್ಟಾಕ್‌ಹೋಮ್ (ಸ್ವೀಡನ್): 2023ನೇ ಸಾಲಿನ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಅಮೆರಿಕದ ಮೂವರು ವಿಜ್ಞಾನಿಗಳು ಹಂಚಿಕೊಂಡಿದ್ದಾರೆ.
ಫ್ರಾನ್ಸ್ ಮೂಲದ ಮೌಂಗಿ ಬಾವೆಂಡಿ, ಅಮೆರಿಕ ಮೂಲದ ಲೂಯಿಸ್ ಬ್ರೂಸ್ ಹಾಗೂ ರಷ್ಯಾ ಮೂಲದ ಅಲೆಕ್ಸಿ ಎಕಿಮೊವ್ ಅವರಿಗೆ ನೊಬೆಲ್ ಗರಿ ಸಿಕ್ಕಿದೆ.
“ಎಲೆಕ್ಟ್ರಾನಿಕ್ಸ್ ಮತ್ತೂ ವೈದ್ಯ ಕ್ಷೇತ್ರದಲ್ಲಿ ಬಳಕೆ ಮಾಡಲಾಗುವ ಅತಿ ಪ್ರಕರ ಬೆಳಕು ಉತ್ಪಾದಿಸುವ ಕ್ವಾಂಟಮ್ ಡಾಟ್‌ಗಳನ್ನು ಈ ಮೂವರು ವಿಜ್ಞಾನಿಗಳು ಸಂಶೋಧಿಸಿದ್ದು, ಟಿವಿ ಪರದೆ ಮತ್ತು ಎಲ್‌ಇಡಿ ದೀಪಗಳಲ್ಲೂ ಈ ಕ್ವಾಂಟಮ್ ಡಾಟ್‌ಗಳನ್ನು ಬಳಸಲಾಗುತ್ತದೆ” ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ತಿಳಿಸಿದೆ.
ರಸಾಯನಶಾಸ್ತ್ರದಲ್ಲಿ ಬಹುದೊಡ್ಡ ಹೆಸರುಗಳಾಗಿರುವ ಈ ಮೂವರು ವಿಜ್ಞಾನಿಗಳು ತಲಾ ಒಂದು ದಶಲಕ್ಷ ಡಾಲರ್ ಮೊತ್ತದ ಪ್ರಶಸ್ತಿಯನ್ನು ಹಂಚಿಕೊಳ್ಳಲಿದ್ದಾರೆ.