• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ನನ್ನನ್ನು ಒಂದು ಬಾರಿ ನಿನ್ನವನೆಂದು ಕರೆದು ಬಿಡು, ಇದಕ್ಕಿಂತ ಮಿಗಿಲಾದ ಆಸೆ ಮತ್ತೊಂದು ಇಲ್ಲ…

cknewsnow desk by cknewsnow desk
October 7, 2023
in CKPLUS, CKPRESS, EDITORS'S PICKS, GUEST COLUMN
Reading Time: 3 mins read
0
ನನ್ನನ್ನು ಒಂದು ಬಾರಿ ನಿನ್ನವನೆಂದು ಕರೆದು ಬಿಡು, ಇದಕ್ಕಿಂತ ಮಿಗಿಲಾದ ಆಸೆ ಮತ್ತೊಂದು ಇಲ್ಲ…

Photo by Ahmad Odeh on Unsplash

1.1k
VIEWS
FacebookTwitterWhatsuplinkedinEmail

ಸೂಫಿ; ಮನುಷ್ಯತ್ವದ ಪರಾಕಾಷ್ಠೆ ಮತ್ತು ಅನನ್ಯ ಪ್ರೀತಿಯ ಪ್ರತೀಕ

 

by Dr. KM Nayaz Ahmed             .

ಸೂಫಿ ಹಾಗೂ ಅದರ ಸಾಂಸ್ಕೃತಿಕ ಪರಂಪರೆಯೇ ಪ್ರೀತಿಯ ಹುಡುಕಾಟ. ಮನುಷ್ಯ ಮನುಷ್ಯನಲ್ಲಿ ನಿಜವಾದ ಪ್ರೀತಿಯ ಹುಡುಕಾಟ. ಸೂಫಿ ಎಂಬುದು ಮನುಷ್ಯನ ಮನಸ್ಸಿಗೆ ಸಂಬಂಧಿಸಿದ್ದು, ಮಾನವತ್ವಕ್ಕೆ, ಮನುಷ್ಯತ್ವಕ್ಕೆ ಒಳಪಟ್ಟಿದ್ದು.

ನಾನು ಎಂಬುದಕ್ಕೆ ಇಲ್ಲಿ ಸ್ಥಳವೇ ಇಲ್ಲ. ಎಲ್ಲವೂ ನೀನೇ. ಎಲ್ಲವೂ ನಿನ್ನದೆ ಎನ್ನುವ ಸಮರ್ಪಣಾಭಾವ. ಜಾತಿ, ಮತ, ಧರ್ಮ, ಗಡಿಗಳನ್ನು ಹೊರತಾದ ಒಂದು ನಿಷ್ಕಲ್ಮಷವಾದ ಮನುಷ್ಯ ಪ್ರೀತಿ, ಮಾನವತ್ವ, ಮಾನವ ಧರ್ಮಗಳ ಸಮ್ಮಿಳನವಾಗಿ ಈ ಸೂಫಿ ಪರಂಪರೆ ರೂಪ ಪಡೆದುಕೊಂಡಿದೆ.

ಇಸ್ಲಾಂ ಧರ್ಮದಲ್ಲಿನ ಒಂದು ಅಂಗವೇ ಸೂಫಿ. ಇಸ್ಲಾಂ ಧರ್ಮದ ಉದಯದ ನಂತರದಲ್ಲಿ ತಣ್ಣಗೆ ತೆರೆದುಕೊಂಡು ಇಡೀ ವಿಶ್ವವ್ಯಾಪಿಯಾಗಿ ಬೆಳೆದು ಬಂದುದುದೇ ಈ ಸೂಫಿ. ಇಸ್ಲಾಂ ಧರ್ಮದಲ್ಲಿನ ಹಾಗೆ ನಿಯಮಬದ್ಧ ಮತ್ತು ಕಟ್ಟಪ್ಪಣೆಯ ಆರಾಧನೆಯಿಲ್ಲದೆ ನಿಜದ ಪ್ರೇಮಿಯ ಅನನ್ಯ ಪ್ರೀತಿಯೇ ಇಲ್ಲಿ ಮೈಗೂಡಿಸಿ ನಿಂತಿದೆ. ತಾನು ನಂಬಿದ ಆ ಈಶ್ವರನ ಬಗೆಗಿನ ಅನನ್ಯವಾದ ಪ್ರೀತಿ ಇಲ್ಲಿ ಅನುರಣನವಾಗುತ್ತದೆ. ಇಲ್ಲಿ ಆಚರಣೆಗೆ ಅವಕಾಶಗಳಿರದೆ ಕೇವಲ ಮತ್ತು ಕೇವಲ ಅಲ್ಲಾಹನ ಬಗೆಗೆ ನಿಷ್ಕಲ್ಮಶ ಮತ್ತು ಏಕನಿಷ್ಠ ಪ್ರೇಮ ಮಾತ್ರ ಕಾಣಿಸಿಕೊಳ್ಳುತ್ತದೆ.

ಸೂಫಿಗಳ ನೃತ್ಯ / photo courtesy: Wikipedia

ಸೂಫಿ ಪಂಥವು ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಗಂಭೀರ ಪರಿಣಾಮವನ್ನು ಉಂಟು ಮಾಡಿದೆ. ಈ ಪಂಥದ ಮೂಲ ದೃಷ್ಟಿಕೋನ ದೇಹದಂಡನೆ. ಆ ಮೂಲಕ ತಾನು ತಲುಪುವ ಗಮ್ಯವನ್ನು ಪಡೆಯುವುದು. ಅಂದರೆ ಅಲ್ಲಾಹನಲ್ಲಿ ಐಕ್ಯವಾಗುವುದು. ಆತನು ಸಿಗುವವರೆಗೆ ನಿರಂತರವಾಗಿ ಹುಡುಕಾಡುವುದು. ಆರಾಧಿಸುವುದು, ಆತನಿಗಾಗಿ ಪರಿತಪಿಸುವುದು, ಬದುಕಿದ ಸಮಯದಲ್ಲಿಯೇ ಎಲ್ಲವನ್ನೂ ತ್ಯಜಿಸಿ ಬಿಡುವುದು, ಮೋಹ ಮಾಯೆಗಳಿಂದ ಹೊರಗೆ ಬಂದು ಬಿಡುವುದು, ಜಗತ್ತಿನ ಎಲ್ಲಾ ಸುಖಗಳನ್ನು ತ್ಯಜಿಸಿ ಎಲ್ಲಾ ಸಂಬಂಧಗಳನ್ನು ಹರಿದುಕೊಂಡು, ಬಡತನವನ್ನು ಸ್ವೀಕರಿಸಿ ಏಕಾಂತದಲ್ಲಿ ಕಠೋರ ತಪಶ್ಚರ್ಯವನ್ನು ಪಾಲಿಸುವುದು ಸೂಫಿಗಳಿಗೆ ಬಹು ಇಷ್ಟವಾದಂತೆ ಕಾಣುತ್ತದೆ.

“ರಾತ್ ಕೆ ಅಂಧೇರೋ ಮೆ ಅಕೇಲಾ ಬೈಠ್ ಕರ್ ಆಪ್ ಕಿ ಯಾದ್ ಮೆ ರೋಲೆನಾ ಮೇರಿ ಇಬಾದತ್ ಹೈ” (ಸೂಫಿ ಕಾವ್ಯ) ..ಅಂದರೆ “ರಾತ್ರಿಯ ಕಾರ್ಗತ್ತಲಿನಲ್ಲಿ ಏಕಾಂಗಿಯಾಗಿ ಕುಳಿತುಕೊಂಡು ನಿನ್ನನ್ನು ನೆನಪಿಸಿಕೊಂಡು ಅಳುವುದೇ ನನ್ನ ಪ್ರಾರ್ಥನೆ” ಎನ್ನುವ ಈ ಸಾಲುಗಳು ಒಟ್ಟಾರೆಯಾಗಿ ನಿಜದ ಸೂಫಿ ಏಕಾಂತವನ್ನು, ಏಕತಾನತೆಯನ್ನು ಬಯಸುತ್ತಾನೆ ಎಂದಾಯಿತು.

“ಜಾಮ್ ಪೆ ಜಾಮ್ ಪೀನೆ ಸೆ ಕ್ಯಾ ಫಾಯಿದಾ
ಸುಬಹ್‌ತಕ್ ಏ ಸಾರಿ ಉತರ್ ಜಾಯೆಗಿ
ತೇರಿ ನಝರೋಂ ಸೆ ಪೀ ಹೈ ಖುದಾ ಕಿ ಖಸಂ
ಉಮರ್ ಸಾರಿ ನಶೆಮೆ ಗುಝರ್ ಜಾಯೆಗಿ……
ಸಾಖಿ ತೇರಿ ನಝರೇ ಸಲಾಮತ್ ರಹೆ…”

(ಉಸ್ತಾದ್ ನುಸ್ರತ್ ಫತೇ ಅಲಿ ಖಾನ್ ಸಾಹೇಬರ ಸೂಫಿ ಸಂಗೀತದ ಒಂದು ತುಣುಕು)

(“ಮತ್ತೆ ಮತ್ತೆ ಕುಡಿಯುವುದರಿಂದ ಉಪಯೋಗವಾದರೂ ಏನಿದೆ?
ಮುಂಜಾನೆಯವರೆಗೆ ಎಲ್ಲವೂ ಇಳಿದು ಹೋಗಲಿದೆ
ನಿನ್ನ ನೋಟಗಳಿಂದ ಪಾನ ಮಾಡಿದ್ದೇನೆ ಆ ದೇವರಾಣೆಗೂ
ಇಡೀ ಜೀವನ ನಶೆಯಲ್ಲಿ ಕಳೆದು ಹೋಗಲಿದೆ…
ಸಖಿ ನಿನ್ನ ನೋಟಗಳು ಕ್ಷೇಮವಾಗಿರಲಿ…”)

ಇಲ್ಲಿ ಸೀಸೆಯಲ್ಲಿನ ನಶೆ ಹೆಚ್ಚುಕಮ್ಮಿ ಸ್ವಲ್ಪ ಹೊತ್ತಿನಲ್ಲಿಯೇ ಇಳಿದುಹೋಗಲಿದೆ. ಆದರೆ ನಿನ್ನನ್ನು (ಅಲ್ಲಾಹನನ್ನು) ಕುಡಿದಿದ್ದೇನೆ. ಒಮ್ಮೆ ಮಾತ್ರ ನಿನ್ನನ್ನು ದರ್ಶನ ಮಾಡಿದ್ದೇನೆ. ಆ ಸೌಂದರ್ಯದ ನಶೆಯಲ್ಲಿಯೇ ಜೀವನವೆಲ್ಲವೂ ನಾನು ಕಳೆದುಬಿಡುತ್ತೇನೆ ಎನ್ನುವ ಉತ್ಕಟ ಉನ್ಮಾದತೆ ಇಲ್ಲಿ ಪ್ರಮುಖವಾಗಿ ನಿಲ್ಲುತ್ತದೆ. ಇಲ್ಲಿ ನಮಾಜ್, ರೋಜಾ, ಜಿಕ್ರ್ ಮೊದಲಾದವುಗಳ ಉಲ್ಲೇಖವಿಲ್ಲ, ಅದನ್ನು ಮಾಡಿ ನಾನು ಸ್ವರ್ಗ ಸಾಧಿಸುತ್ತೇನೆ ಎಂಬ ಭಾವವಿಲ್ಲ, ನರಕಕ್ಕೆ ಹೆದರಿ ನಾನು ನಮಾಜು ಮಾಡುತ್ತೇನೆ ಎನ್ನುವ ಪ್ರಾರ್ಥನೆಯೂ ಇಲ್ಲ, ಇಲ್ಲಿ ಇರುವುದು ಕೇವಲ ಮತ್ತು ಕೇವಲ ಅಲ್ಲಾಹನ ಬಗೆಗಿನ ಪ್ರೀತಿ ಮಾತ್ರ. ಆ ಪ್ರೀತಿಯನ್ನು ಪಡೆದುಕೊಳ್ಳಲು ಆತ ತನ್ನ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಏಕಾಂಗಿತನವನ್ನು ಅಪ್ಪಿಕೊಳ್ಳುತ್ತಾನೆ. ಇಹ ಮತ್ತು ಪರ ಎರಡರಲ್ಲಿಯೂ ನಂಬಿಕೆ ಮತ್ತು ವಿಶ್ವಾಸವಿರುವುದಿಲ್ಲ, ಆತನಿಗೆ ಕಾಣಿಸುವುದು ಕೇವಲ ಕಾಣಿಸುವುದು ಅಲ್ಲಾಹನು ಮಾತ್ರ. ಅದಕ್ಕಾಗಿಯೇ ಆತನು ಆತನ ಅನನ್ಯ ಪ್ರೇಮವನ್ನು ಪಡೆಯಲು ಸುತ್ತಾಡುತ್ತಲೇ ಇರುತ್ತಾನೆ, ಅಲೆದಾಡುತ್ತಲೇ ಇರುತ್ತಾನೆ. ಹುಡುಕುತ್ತಲೇ ಇರುತ್ತಾನೆ.

“ಅಗರ್ ತುಮ್ ಕಹೋ ತೊ ಮೈ ಖುದ್ ಕು ಭುಲಾದು
ತುಮ್ಹೆ ಭೂಲ್ ಜಾನೆ ಕಿ ತಾಖತ್ ನಹಿ” (ನುಸ್ರತ್ ಫತೇ ಅಲಿ ಖಾನ್ ಅವರ ಘಝಲ್)

ನೀನು ನುಡಿದರೆ ನನ್ನನ್ನೇ ನಾನು ಮರೆತುಬಿಡುತ್ತೇನೆ
ಆದರೆ ನಿನ್ನ ಮರೆತು ಹೋಗುವ ಶಕ್ತಿ ನನಗಿಲ್ಲ…

ಇದು ಸೂಫಿಯ ನಿಜ ತತ್ವವಾಗಿದೆ. ಆತನು ತನ್ನನನ್ನು ತಾನು ಸಂಪೂರ್ಣವಾಗಿ ತನ್ನನ್ನು ತಾನು ಮರೆತು ಹೋಗಲು ಸಿದ್ಧವಾಗುತ್ತಾನೆ. ಸಿದ್ಧವಾಗುವುದು ಇರಲಿ ಮರತೇ ಹೋಗುತ್ತಾನೆ. ತನ್ನನ್ನು ಸಂಪೂರ್ಣವಾಗಿ ತಾನು ಯಾರೆಂದು ಕರೆದುಕೊಳ್ಳುವಷ್ಟರ ಮಟ್ಟಿಗೆ ಮರೆತು ಹೋಗುತ್ತಾನೆ. ತನ್ನಲ್ಲೇ ತನ್ನನ್ನು ಹುಡುಕುವಷ್ಟರ ಮಟ್ಟಿಗೆ ಮರೆತು ಹೋಗುತ್ತಾನೆ.

ಹಮ್ ಸೆ ಪೂಛೋ ಮೊಹೊಬ್ಬತ್ ಕಿ ದೀವಾನಗಿ
ಓ ಪತಾ ಪೂಛ್ ತೆ ಥೇ ಪತಾ ಕಿಸಿ ಕಾ ಕಭಿ

ಲಾ ಪತಾ ಹೋಗಯೆ ದೇSತೆ ದೇಖತೆ
ಏ ಹಯ್ ದುನಿಯಾ ಯಹಾ ಕಿತನೆ ಹೈ ಎಹ್ ವಫಾ
ಬೇ ವಫಾ ಹೋಗಯೆ ದೇಖತೆ ದೇಖತೆ”

“ನನ್ನನ್ನು ಕೇಳು ಪ್ರೀತಿಯ ಹುಚ್ಚು ಏನೆಂದು
ಹಿಂದೆ ಅವರು ಕಾಣೆಯಾದವರ ಬಗ್ಗೆ ಕೇಳುತ್ತಿದ್ದರು
ಆದರೆ ಅವರೇ ಕಾಣೆಯಾಗಿ ಹೋದರು ನೋಡುತ್ತಾ ನೋಡುತ್ತಾ.
ಇದು ಪ್ರಪಂಚ ಇಲ್ಲಿ ಎಲ್ಲರೂ ವಿಧೇಯರೆ
ಆದರೆ ಅವಿಧೇಯರಾಗಿ ಹೋದರು ನೋಡುತ್ತಾ ನೋಡುತ್ತಾ..”

ಆಧ್ಯಾತ್ಮಿಕ ಜೀವನ ಪ್ರಗತಿಯನ್ನು ಸೂಫಿ ಪಂಥದಲ್ಲಿ ‘ಮಾರ್ಗ’ ಎನ್ನುತ್ತಾರೆ. ಹಾಗೆಯೇ ಆ ಪ್ರಯಾಣಿಕನನ್ನು ‘ಸಾಲಿಖ್’ ಎನ್ನುತ್ತಾರೆ. ‘ಸಾಲಿಖ್’ಗೆ ಪರಮೇಶ್ವರನ ಜ್ಞಾನ ಅಂದರೆ ‘ಮಾರಿಫತ್’ ಮುಖ್ಯವಾಗುತ್ತದೆ. ಆ ಮಾರಿಫತ್ ಪಡೆಯಲು ಸೂಫಿಯಾದವನು ಬೇರೆ ಬೇರೆ ಆಧ್ಯಾತ್ಮಿಕ ಸ್ಥಾನಗಳಿಂದ ಮುನ್ನಡೆಯಬೇಕಾಗುತ್ತದೆ. ಆ ಬೇರೆ ಬೇರೆ ಸ್ಥಾನಗಳೇ ‘ಮುಖಾಮಾತ್’. ಈ ‘ಮುಖಾಮಾತ್’ಗಳಿಂದ ಸೂಫಿ ಸಾಗುತ್ತಾ ಸಾಗುತ್ತಾ ಅಲ್ಲಾಹನ ನಿಷ್ಕಲ್ಮಶ ಪ್ರೀತಿಯ ಗಳಿಕೆಯಲ್ಲಿ ಕಡೆಗೆ ತನ್ನನ್ನೇ ತಾನು ಮರೆತು ಹೋಗಿ, ಸೊರಗಿ ಹೋಗಿ ಕಡೆಗೆ ಆತನಲ್ಲಿ ಕರಗಿ ಹೋಗುವ ಅನನ್ಯ ಪ್ರಕ್ರಿಯೆಯನ್ನು ‘ಫನಾಫಿಲಾ’ ಎಂದು ಕರೆಯಲಾಗುತ್ತದೆ.

Photo by Ahmad Odeh on Unsplash

ಹೀಗೆ ‘ಸಾಲಿಖ್’ ವಿವಿಧ ‘ಮುಖಾಮಾತ್’ಗಳ ಮೂಲಕ ಸಾಗಿ ‘ಮಾರಿಫತ್’ ಪಡೆದು ಕಡೆಗೆ ಆ ಪರಮೇಶ್ವರನ್ನಲಿ ಲೀನವಾಗುವ ‘ಫನಾಫಿಲಾ’ ಆಗುವವರೆಗಿನ ಏಳು ಅವಸ್ಥೆಗಳಲ್ಲಿ ಬಹಳ ಮುಖ್ಯವಾದುದು ‘ಇಷ್ಕ್’ ಎಂದರೆ ಪ್ರೀತಿ. ಇಲ್ಲಿ ಪರಮೇಶ್ವರನ ಕೃಪೆಯಿಂದ ಆತ್ಮಕ್ಕೆ ಪರಮೇಶ್ವರನ ವಿಷಯದಲ್ಲಿ ಬಹಳವಾಗಿ ಆಕರ್ಷಣೆಯು ಉಂಟಾಗುತ್ತಿರುತ್ತದೆ. ಈ ಆಕರ್ಷಣೆಯನ್ನು ಆ ಸೂಫಿಯು ಮತ್ತೆ ಮತ್ತೆ ನೋಡಲು ಬಯಸುತ್ತಿರುತ್ತಾನೆ. ಆತನ ಆ ಪ್ರಕಾಶಮಾನವನ್ನು ನೋಡುವ ತವಕ, ನೋಡುವ ಹಂಬಲ ದಿನದಿಂದ ದಿನಕ್ಕೆ ಆತನಲ್ಲಿ ಉನ್ಮಾದದ ಸ್ಥಿತಿಯತ್ತ ಕೊಂಡೊಯುತ್ತದೆ. ಆತನ ಆ ಪ್ರಕಾಶಮಾನವನ್ನು ಪದೇ ಪದೇ ನೋಡಲು ಹಂಬಲಿಸುವ ಆ ಸೂಫಿಯು ಅದಕ್ಕಾಗಿ ನಿರಂತರ ಹುಡುಕಾಟವನ್ನು ಮಡುತ್ತಾನೆ. ನಿರಂತರವಾಗಿ ನಡೆಯುತ್ತಲೇ ಇರುತ್ತಾನೆ. ಆ ಪ್ರೀತಿಯನ್ನು ಪಡೆಯಲು ಕಡೆಗೆ ತನ್ನನ್ನೇ ತಾನು ಮರೆತುಬಿಡುತ್ತಾನೆ, ದೈಹಿಕ ವ್ಯಮೋಹ, ದೇಹದ ಮೇಲಿನ ವ್ಯಾಮೋಹ, ದೈಹಿಕ ಸೌಂದರ್ಯ, ತನ್ನನ್ನು ಸುಂದರವಾಗಿಸಿಕೊಳ್ಳುವ ಪ್ರಕ್ರಿಯೆ, ಉತ್ತಮನಾಗಿ ಕಾಣಿಸಿಕೊಳ್ಳುವ ಸ್ಥಿತಿ ಎಲ್ಲವನ್ನೂ ಮರೆಯುತ್ತಾನೆ. ಹುಚ್ಚನಂತಾಗುತ್ತಾನೆ, ಅಲೆದಾಡುತ್ತಾನೆ, ಹುಡುಕುತ್ತಾನೆ. ಆತನಿಗೆ ಬೇಕಿರುವುದು, ನೋಡಬೇಕಿರುವುದು, ಕಾಣಬೇಕಿರುವುದು ಕೇವಲ ಮತ್ತು ಕೇವಲ ಆ ಪರಮೇಶ್ವರನ ದಿವ್ಯ ಸ್ವರೂಪ ಮಾತ್ರ. ಅದಕ್ಕಾಗಿಯೇ ಈ ಹೋರಾಟ, ಈ ಓಡಾಟ. ಇದರ ಹಿಂದೆಯೇ ಆತ ನಡೆಯುತ್ತಾ ನಡೆಯುತ್ತಾ ಕಡೆಗೆ ತನ್ನನ್ನೇ ಇಲ್ಲವಾಗಿಸುತ್ತಾನೆ.

“ಉನ್ ಕಿ ನಝರೋನೆ ಕುಛ್ ಐಸಾ ಜಾದೂ ಕಿಯಾ
ಲುಟ್‌ಗಯೆ ಹಮ್ ತೊ ಪೆಹಲಿ ಮುಲಾಖಾತ್ ಮೆ”

ಅವರ ನೋಟಗಳು ಎಂತಹಾ ಜಾದು ಮಾಡಿದವು
ನಾನು ಬರಿದಾಗಿ ಹೋದೆ ಮೊದಲ ಭೇಟಿಯಲ್ಲಿಯೇ…

ಪರಮೇಶ್ವರನ ಆ ಒಂದೇ ಒಂದು ನೋಟ ಅದರಲ್ಲಿಯೂ ಮೊದಲ ನೋಟ ಸೂಫಿಯನ್ನು ಇನ್ನಿಲ್ಲವಾಗಿಸುತ್ತದೆ. ಆತ ಎಲ್ಲವನ್ನು ಆ ಮೊದಲ ನೋಟಕ್ಕೆ ಕಳೆದುಕೊಳ್ಳುತ್ತಾನೆ. ‘ಇಷ್ಕ್’ ನಿಂದ ತುಸು ಮುಂದೆ ಹೋಗಿ ‘ವಜದ್’ ಅಂದರೆ ಉನ್ಮಾನವಸ್ಥೆಗೆ ತಲುಪುತ್ತಾನೆ. ಇಲ್ಲಿ ಪರಮಾತ್ಮನ ಧ್ಯಾನದಿಂದ ಭಕ್ತನಲ್ಲಿ ಉನ್ಮಾದದ ಅವಸ್ಥೆಯು ಪ್ರಾಪ್ತವಾಗುತ್ತದೆ. ಈ ನೆಲೆಯಲ್ಲಿ ಇಂತಹಾ ಅವಸ್ಥೆಯನ್ನು ಪ್ರಾಪ್ತಗೊಳಿಸಿಕೊಳ್ಳುವುದಕ್ಕಾಗಿ ಸೂಫಿಯು ಧ್ಯಾನ ಧಾರಣೆ ಮೊದಲಾದವುಗಳನ್ನು ಮಾಡುತ್ತಿರುತ್ತಾನೆ. ಪ್ರೊ.ನಿಕೋಲ್ಸನ್‌ರ ಅಭಿಪ್ರಾಯದಂತೆ ಸೂಫಿಸಂನ ಮೂಲ ಇರುವುದು ಒಂದು ತತ್ವದ ಮೇಲೆಯೇ. ಅದೆಂದರೆ ಆತ್ಮದ ಅರಿವು ಇಲ್ಲವಾಗುವುದು ಮತ್ತು ಅನಂತರ ಪರಮೇಶ್ವರನ ಸಾಕ್ಷಾತ್ಕಾರವಾಗುವುದು. ಉನ್ಮವಾಸ್ಥೆಯಿಂದ ಆತ್ಮಕ್ಕೆ ಪರಮಾತ್ಮನ ಸಂಬಂಧವು ಸಾಧ್ಯವಾಗುತ್ತದೆ.

“ಸತಾ ತೆ ಹೋ ದಿನ್ ರಾತ್ ಜಿಸ್ ತರಹಾ ಮುಝ್ ಕು
ಕಿಸಿ ಘೈರ್ ಕು ಯೂ ಸತಾಕರ್ ತೊ ದೇಖೋ”

ಕಾಡಿಸುತ್ತೀಯಾ ಹಗಲು ಮತ್ತು ರಾತ್ರಿ ನನಗೆ
ಯಾರಾದರು ಇತರನಿಗೆ ಕಾಡಿಸು ನೋಡು….

ಸೂಫಿ ಮತ್ತು ಅಲ್ಲಾಹುವಿನ ನಡುವಿನ ಆತ್ಮ ಸಂಬಂಧಗಳು ಗಟ್ಟಿಯಾಗುತ್ತಾ ಹೋಗುತ್ತವೆ. ಸೂಫಿ ಅಲ್ಲಾಹುವಿನೊಂದಿಗೆ ಮನಸ್ಸು ಬಿಚ್ಚಿ ಮಾತನಾಡುತ್ತಾನೆ. ತನ್ನೆಲ್ಲವನ್ನೂ ಆತನಿಗಾಗಿ ಸಮರ್ಪಿಸಿಕೊಂಡ ಆತ ಈಗ ತನ್ನ ಈಶ್ವರನೊಂದಿಗೆ ಮುಕ್ತವಾಗಿ ಮಾತನಾಡುತ್ತಾನೆ.  ಆ ಪ್ರಕಾಶ ಮತ್ತೆ ಮತ್ತೆ ನೋಡುವ ತವಕದಲ್ಲಿ ದರ್ಶನ ಪ್ರಕಟಗೊಳ್ಳದ  ಬಗೆಗೆ ಬೇಸರಿಸಿಕೊಳ್ಳುತ್ತಾನೆ, ಮುನಿಸಿಕೊಳ್ಳುತ್ತಾನೆ. ನಾನು ನಿನ್ನವನು. ನನಗೇ ಈ ರೀತಿ ಕಾಡಿಸುತ್ತಿದ್ದೀಯ. ಹೌದು ಬಿಡು, ನಾನು ನಿನ್ನವನಾಗಿದ್ದರಿಂದಲೇ ನೀನು ನನ್ನನ್ನು ಕಾಡಿಸುತ್ತಿದ್ದೀಯ. ಆದರೆ ಪರರಿಗೆ ಹೀಗೆ ಮಾಡುತ್ತೀಯ ಎನ್ನುವುದರ ಮೂಲಕ ತಾನು ಆತನಿಗೆ ಎಷ್ಟು ಹತ್ತಿರ ಎಂದು ತೋರಿಸುತ್ತಾನೆ.

ಮತ್ತೂ ಪ್ರಶ್ನಿಸುತ್ತಾನೆ.

“ಸೋಚ್ ತಾ ಹುಂ ಕಿ ಒ ಕಿತನೆ ಮಾಸೂಮ್ ಥೇ
ಕ್ಯಾಸೆ ಕ್ಯಾ ಹೋಗಯೆ ದೇಖತೆ ದೇಖತೆ”

ಯೋಚಿಸುತ್ತೇನೆ ಅವರು ಎಷ್ಟು ಮುಗ್ಧರಾಗಿದ್ದರು
ಹೇಗಿದ್ದವರು ಹೇಗಾದರು ನೋಡುತ್ತಾ ನೋಡುತ್ತಾ…

ನಾನು ನಿನ್ನನ್ನು ತುಂಬಾ ಮುಗ್ಧ ಎಂದುಕೊಂಡಿದ್ದೆ. ಆದರೆ ನೀನು ಹೇಗಿದ್ದವನು ಹೇಗಾಗಿ ಹೋದೆಎನ್ನುವ ಈ ಮಾತುಗಳು ಸೂಫಿಗಳ ಆಂತರ್ಯವನ್ನು ಬಿಚ್ಚಿಡುತ್ತಾ ಹೋಗುತ್ತದೆ. ತನ್ನ ಪ್ರೀತಿ ದಕ್ಕಲಿಲ್ಲ ಎಂದಾಗ ಸಹಜವಾಗಿ ಮೂಡಿ ಬರುವ ಮುನಿಸು ಕಾಣಿಸಿಕೊಳ್ಳುತ್ತದೆ. ಆದರೆ ಆ ಮುನಿಸು ತೀರಾ ಕಡಿಮೆ ಹೊತ್ತು ಮಾತ್ರ. ಮತ್ತೆ ತನ್ನ ಪ್ರೀತಿಯ ಹುಡುಕಾಟದಲ್ಲಿ ಆ ಸೂಫಿ ಮುಳಗುತ್ತಾನೆ. ಕೇವಲ ಮತ್ತು ಕೇವಲ ಪರಮಾತ್ಮನೊಬ್ಬನಿಗೇ ಶರಣಾಗುತ್ತಾನೆ. ಆತನ ಗುಣಗಾನ ಮಾಡುತ್ತಾನೆ. ಅದೊಂದೇ ಏಕ ಮೇವ ಸತ್ಯ ಎನ್ನುತ್ತಾನೆ. ಪರಮಾತ್ಮನಲ್ಲದೆ ಬೇರೊಂದರ ಮೆಲೆ ನಿಷ್ಠೆ ಹೊಂದದಂತಾಗುತ್ತಾನೆ. ಆತನ ಹುಡುಕಾಟ ನಿರಂತರವಾಗುತ್ತದೆ.

ಅಂತಿಮವಾಗಿ ಆತ…

“ಮುಜ್ಹೆ ಏಕ್ ದಫಾ ಅಪನಾ ಕೆಹೆಕೆ ಪುಕಾರೊ
ಬಸ್ ಇಸ್ಕೆ ಸಿವಾ ಕೊಯಿ ಹಸ್ರತ್ ನಹೀ”

ನನ್ನನ್ನು ಒಂದು ಬಾರಿ ನಿನ್ನವನೆಂದು ಕರೆದು ಬಿಡು
ಇದಕ್ಕಿಂತ ಮಿಗಿಲಾದ ಆಸೆ ಮತ್ತೊಂದು ಇಲ್ಲ…”

ಇಲ್ಲಿ ಕೇವಲ ಒಂದು ಆಸೆ ಒಂದೇ ಒಂದು ಆಸೆ ವ್ಯಕ್ತವಾಗುತ್ತದೆ. ಅದೆಂದರೆ ‘ನಾನು ನೀನಾನುಗುವುದು’ ಅಂದರೆ  ‘ನೀನೆಂಬ ನಾನಾಗುವುದು’ ನಿನ್ನಲ್ಲಿ ನಾನಾಗುವುದು. ನಿನ್ನಲ್ಲಿ ಲೀನವಾಗುವುದು. ಅದುವೇ ‘ಫನಾ’. ಅಲ್ಲಾಹುವಿನಲ್ಲಿ ಲೀನವಾಗುವುದು. ಮಿಲನದ ಸ್ಥಿತಿಯಲ್ಲಿ ಭಕ್ತನ ಹೃದಯವು ಸಮಾಧಾನದಿಂದ ಪರಿಪೂರ್ಣತೆಯನ್ನು ಸಾಧಿಸುವುದು. ಪರಿಪೂರ್ಣತ್ವವನ್ನು ಸಾಧಿಸುವುದು. ಆ ಮೂಲಕ ತನ್ನ ಪ್ರೀತಿಯನ್ನು ಸಾಧಿಸಿಕೊಳ್ಳುವುದು.

***

Dr. KM Nayaz Ahmed   
ವೃತ್ತಿಯಲ್ಲಿ ಬೋಧನೆ, ಪ್ರವೃತ್ತಿಯಲ್ಲಿ ಬರವಣಿಗೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಮೂಲತಃ ಬಾಗೇಪಲ್ಲಿಯವರು. ಗಡಿನಾಡಿನಲ್ಲಿ ಕನ್ನಡ ಪರಿಚಾರಿಕೆ ಇವರ ಹೆಗ್ಗುರುತು.
Tags: ckcknewsnowdevotionguest columnlovenewssoofiSufism
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಜೈಲಿನಿಂದ ಹೊರಬಂದ ಕೂಡಲೇ ಮೀಡಿಯಾ ಮುಂದೆ ಕುಳಿತ ಅಲ್ಲು ಅರ್ಜುನ್‌

ಜೈಲಿನಿಂದ ಹೊರಬಂದ ಕೂಡಲೇ ಮೀಡಿಯಾ ಮುಂದೆ ಕುಳಿತ ಅಲ್ಲು ಅರ್ಜುನ್‌

by cknewsnow desk
December 14, 2024
0

ಅರೆಸ್ಟ್ ಆದ 24 ಗಂಟೆಗಳಲ್ಲೇ ಜೈಲಿನಿಂದ ರಿಲೀಸ್; ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ ಪುಷ್ಪಾ - 2

ಉದ್ಯೋಗ & ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಸ

ಉದ್ಯೋಗ & ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಸ

by cknewsnow desk
July 23, 2024
0

ಪ್ರಧಾನಿ ಕನಸಿನ 'ವಿಕಸಿತ ಭಾರತ' ನಿರ್ಮಾಣಕ್ಕೆ ಶಕ್ತಿ ತುಂಬುವ ಬಜೆಟ್

ಹಾಸನ ಪೆನ್‍ಡ್ರೈವ್ ಪ್ರಕರಣ; ಅಶ್ಲೀಲ ವಿಡಿಯೋ ಲೀಕ್‌ ಹಿಂದೆ DCM ಡಿಕೆಶಿ ಕೈ ಚಳಕ

ಹಾಸನ ಪೆನ್‍ಡ್ರೈವ್ ಪ್ರಕರಣ; ಅಶ್ಲೀಲ ವಿಡಿಯೋ ಲೀಕ್‌ ಹಿಂದೆ DCM ಡಿಕೆಶಿ ಕೈ ಚಳಕ

by cknewsnow desk
May 6, 2024
0

ನಾಗಮಂಗಲದ ಎಲ್.‌ಆರ್.‌ಶಿವರಾಮೇಗೌಡ ಮಧ್ಯಸ್ಥಿಕೆ; ಮೊಬೈಲ್‌ ಸಂಭಾಷಣೆ ಆಡಿಯೋ ಬಿಡುಗಡೆ

ಶ್ರೀರಾಮ ನವಮಿ ಶುಭಾಶಯಗಳು

ಶ್ರೀರಾಮ ನವಮಿ ಶುಭಾಶಯಗಳು

by cknewsnow desk
April 17, 2024
0

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇದಸೇ | ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ || ಶ್ರೀ ರಾಮ ಜಾನಕೀನಾಥ ತಾಟಕಾಸುರ ಮರ್ದನ | ಇಕ್ಷ್ವಾಕುಕುಲಸಂಭೂತ ರಣಪಂಡಿತ ರಾಘವಃ...

ಪ್ರಕಾಶ್ ರೈ ಸಂಸ್ಥೆಗೆ ಸರಕಾರದ ಹಣ; ದಾರಿ ತಪ್ಪಿದ ಕಲಾವಿದ ಎಂದು ಕುಟುಕಿದ JDS

ಪ್ರಕಾಶ್ ರೈ ಸಂಸ್ಥೆಗೆ ಸರಕಾರದ ಹಣ; ದಾರಿ ತಪ್ಪಿದ ಕಲಾವಿದ ಎಂದು ಕುಟುಕಿದ JDS

by cknewsnow desk
April 16, 2024
0

ಕುಮಾರಸ್ವಾಮಿ ಅವರನ್ನು ದಾರಿ ತಪ್ಪಿದ ಮಗ ಎಂದ ನಟನಿಗೆ ತಿರುಗೇಟು ಕೊಟ್ಟ ದಳ

Next Post
ಹೆಚ್.ಡಿ.ಕುಮಾರಸ್ವಾಮಿ ಬೀಸಿದ ಚಾಟಿಯಿಂದ ಎಚ್ಚೆತ್ತ ಸರಕಾರ

ಜಾತಿ ಗಣತಿಯಿಂದ ಜಾತಿ ದ್ವೇಷ

Leave a Reply Cancel reply

Your email address will not be published. Required fields are marked *

Recommended

ಇಂದಿನ ಹೋರಾಟಗಳು ಪ್ರಚಾರಕ್ಕಾಗಿ, ಸುದ್ದಿಗಾಗಿ ಹಾಗೂ ಮನವಿ ಪತ್ರ ನೀಡುವುದಕ್ಕೆ ಸೀಮಿತ: ಜಿ.ವಿ.ಶ್ರೀರಾಮರೆಡ್ಡಿ

ಇಂದಿನ ಹೋರಾಟಗಳು ಪ್ರಚಾರಕ್ಕಾಗಿ, ಸುದ್ದಿಗಾಗಿ ಹಾಗೂ ಮನವಿ ಪತ್ರ ನೀಡುವುದಕ್ಕೆ ಸೀಮಿತ: ಜಿ.ವಿ.ಶ್ರೀರಾಮರೆಡ್ಡಿ

5 years ago
ತಾಯಿ ಭಾಷೆ ಕಲಿಸುವುದೆಂದರೆ ಅಮ್ಮನ ಮಡಿಲಲ್ಲಿ ಮತ್ತೆ ಆಡಿದಂತೆ, ಇನ್ನೊಮ್ಮೆ ಬಾಲ್ಯ ಬಂದು ಅಪ್ಪನ ಬೆರಳಿಡಿದು ಹೆಜ್ಜೆ ಹಾಕಿದಂತೆ..

ತಾಯಿ ಭಾಷೆ ಕಲಿಸುವುದೆಂದರೆ ಅಮ್ಮನ ಮಡಿಲಲ್ಲಿ ಮತ್ತೆ ಆಡಿದಂತೆ, ಇನ್ನೊಮ್ಮೆ ಬಾಲ್ಯ ಬಂದು ಅಪ್ಪನ ಬೆರಳಿಡಿದು ಹೆಜ್ಜೆ ಹಾಕಿದಂತೆ..

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ