5 ರಾಜ್ಯ ಚುನಾವಣೆಗೂ ನಮಗೂ ಏನು ಸಂಬಂಧ; ನಾವು ತನಿಖೆ ಮಾಡಲ್ಲ ಎಂದ ಸಿಎಂ
ಮೈಸೂರು: ಇದುವರೆಗೂ ನಮ್ಮ ಹೈಕಮಾಂಡ್ ನಮ್ಮಿಂದ ನಯಾಪೈಸೆ ಹಣವನ್ನೂ ಕೇಳಿಲ್ಲ. ಬಿಜೆಪಿ ಮಾಡುತ್ತಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಆರೋಪಗಳೆಲ್ಲ ನಿರಾಧಾರ ಎಂದರು.
ಗುತ್ತಿಗೆದಾರನನ್ನ ಬಿಜೆಪಿ, ಕಾಂಗ್ರೆಸ್ ನೋರು ಅಂತ ಹೇಳೊದಕ್ಕೆ ಆಗುತ್ತಾ? ಈಗ ನಾನು ಅವನು ಬಿಜೆಪಿ ಗುತ್ತಿಗೆದಾರ ಅಂತಾ ಹೇಳುತ್ತೇನೆ, ಅದನ್ನ ಯಾರಾದರೂ ಒಪ್ಪಿಕೊಳ್ಳುತ್ತಾರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
5 ರಾಜ್ಯ ಚುನಾವಣೆಗೂ ನಮಗೂ ಏನೂ ಸಂಬಂಧ? ನಾವೆನಾದರೂ ನಮ್ಮ ಚುನಾವಣೆಗೆ ಹೋಗಿ ಯಾರನ್ನಾದರೂ ಕೇಳಿದ್ದೀವಾ? ಈಗ ಅವರಿಗೆ ಕೊಡಬೇಕು, ಇವರಿಗೆ ಕೊಡಬೇಕು ಎಂಬುದರಲ್ಲಿ ಅರ್ಥವೇ ಇಲ್ಲ. ಬಿಜೆಪಿಯವರು ಸುಖಾಸುಮ್ಮನೇ ಆರೋಪ ಮಾಡುತ್ತಿದ್ದಾರೆ ಎಂದು ಗರಂ ಆದದರು.
ಇದು ಸರಕಾರದ ದುಡ್ಡುಎಂದು ಐಟಿ ಇಲಾಖೆ ಏನಾದರೂ ಹೇಳಿದಿಯಾ? ಐಟಿ ಏನಾದರೂ ಸರಕಾರದ ಮೇಲೆ ಆರೋಪ ಮಾಡಿದಿಯಾ? ಇದರ ಬಗ್ಗೆ ನಾವೇಕೆ ತನಿಖೆ ಮಾಡಬೇಕು ಎಂದು ಅವರು ಪ್ರಶ್ನಿಸಿದರು.