• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಅಪ್ಪು ಆದರ್ಶಗಳನ್ನು ನಮ್ಮದಾಗಿಸಿಕೊಳ್ಳೋಣ

cknewsnow desk by cknewsnow desk
October 29, 2023
in EDITORS'S PICKS, ET CINEMA, GUEST COLUMN, NATION, NEWS & VIEWS, STATE
Reading Time: 2 mins read
0
ಪುನೀತ್‌ ಈಗ ಕರ್ನಾಟಕ ರತ್ನ
935
VIEWS
FacebookTwitterWhatsuplinkedinEmail

ಇದೇ ನಾವು ಪುನೀತ್‌ ಅವರಿಗೆ ಸಲ್ಲಿಸುವ ನಿಜ ಶ್ರದ್ಧಾಂಜಲಿ


by Dr.Guruprasad Hawaldar


ಕರ್ನಾಟಕದ ಮುತ್ತು, ಅಭಿಮಾನಿಗಳ ಪಾಲಿನ ಅಪ್ಪು, ಸ್ಯಾಂಡಲ್​ವುಡ್​ನ ಪವರ್​ ಸ್ಟಾರ್‌ ಎಲ್ಲರನ್ನೂ ಬಿಟ್ಟು ಬಾರದ ಊರಿನತ್ತ ಪಯಣ ಬೆಳಸಿ ಇಂದಿಗೆ ಎರಡು ವರ್ಷ.

ಹೌದು, ಅಭಿಮಾನಿಗಳ ಪಾಲಿನ ಅಪ್ಪು ನಮ್ಮೆಲ್ಲರ ಪ್ರೀತಿಯ ಅಪ್ಪು ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೂ ಅವರ ನೆನಪುಗಳು ಎಂದೆಂದಿಗೂ ಎಲ್ಲರ ಮನದಲ್ಲಿ ಹಾಗೆಯೇ ಇವೆ, ಇರುತ್ತವೆ ಕೂಡ.

ಇಂದಿಗೂ ತಮ್ಮ ಮೆಚ್ಚಿನ ನಟನ ದರ್ಶನ ಪಡೆದು ಹೋಗುತ್ತಿದ್ದಾರೆ. ಅದರಲ್ಲೂ ಅವರ ಅಭಿಮಾನಿಗಳು ಒಂದೇ ಒಂದು ಕ್ಷಣ ಅವರನ್ನು ಮರೆತಿಲ್ಲ, ಕನ್ನಡಿಗರ ಎದೆಯಲ್ಲಿ ಅಪ್ಪು ಎಂದಿಗೂ ಜೀವಂತ. ದೊಡ್ಮನೆ ರಾಜಕುಮಾರ ದೈಹಿಕವಾಗಿ ಇಲ್ಲದಿದ್ದರೂ, ಅವರ ನೆನಪುಗಳ ಜೊತೆ ಫ್ಯಾನ್ಸ್ ಹೇಗೋ ಜೀವನ ಮಾಡ್ತಿದ್ದಾರೆ.

ಕರ್ನಾಟಕದ ಯಾವುದೇ ಮೂಲೆಮೂಲೆಗಳಲ್ಲಿ ನೋಡಿದರೂ ಅಪ್ಪು ಪ್ರತಿಮೆ, ಬ್ಯಾನರ್ ಗಳನ್ನು ಕಾಣಬಹುದು, ಅವರು ನಮ್ಮೊಡನಿಲ್ಲ ಅಂತ ಅಭಿಮಾನಿಗಳು ಅಂದುಕೊಂಡೇ ಇಲ್ಲ. ಹೀಗೆ ಪ್ರತಿ ದಿನ ಪ್ರತಿ ಕ್ಷಣ ಅಭಿಮಾನಿಗಳಿಗೆ, ಅದೆಷ್ಟೋ ಯುವಜನರಿಗೆ ಯುವ ನಟ-ನಟಿಯರಿಗೆ ಯುವರತ್ನನೇ ಸ್ಫೂರ್ತಿಯಾಗಿದ್ದಾರೆ.

ಪುನೀತ್ ತೆರೆಯ ಮೇಲಿನ ಒಳ್ಳೆಯ ನಟರಷ್ಟೇ ಅಲ್ಲ, ತೆರೆಯ ಹಿಂದಿನ ಹೃದಯವಂತ ಕೂಡ ಎಂಬುದು ಅರಿವಾಗ ಅಪ್ಪು ಅಗಲಿಕೆಯ ನೋವು ಜನರನ್ನು ಇನ್ನೂ ಬಾಧಿಸುತ್ತಲೇ ಇದೆ. ಪುನೀತ್ ರಾಜಕುಮಾರ್ ಎಂಬ ನಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಇಷ್ಟೊಂದು ಹತ್ತಿರವಾಗಿದ್ದು ಹಾಡು, ಫೈಟು, ಡಾನ್ಸ್‌ ಮೂಲಕ ಮಕ್ಕಳಿಗೆ ಸೂಪರ್‌ ಮ್ಯಾನ್, ಹೆಂಗಳೆಯರ ಕಣ್ಣಿಗೆ ಆದರ್ಶ ಪುರುಷ ಮತ್ತು ಪ್ರೀತಿಯ ಸಹೋದರ, ಯುವಕರ ಪಾಲಿನ ಐಕಾನ್, ಯುವತಿಯರ ಕನಸಿನ ರಾಜಕುಮಾರ, ಹಿರಿಯರಿಗೆ ಸ್ವಂತ ಮನೆಮಗನಂತಾಗಿದ್ದರು ,

‘ದೊಡ್ಮನೆ’ ಮೇಲಿನ ಜನರ ನಿರೀಕ್ಷೆಗಳನ್ನು ಸುಳ್ಳಾಗಿಸದೆ ಅತ್ಯುತ್ತಮ ಕಲಾವಿದರಾಗುದ್ದರು ‘ರಾಜಕುಮಾರ’. ‘ಮೈತ್ರಿ’ಯಂಥ ಮೌಲ್ಯಯುತ ಸಿನಿಮಾಗಳು ಕೌಟುಂಬಿಕ ಮೌಲ್ಯ
ಸಾಮಾಜಿಕ ಬದಲಾವಣೆ ತಂದವು, ನಾಟಕೀಯತೆಯೇ ಇಲ್ಲದ ಮಾನವ ಸಹಜ ನಡವಳಿಕೆಯ ಮೂಲಕ ಜನರ ಜತೆಗೆ ಹೆಚ್ಚೆಚ್ಚು ಬೆರೆಯುತ್ತಾ ಎಲ್ಲರನ್ನೂ ಸಮಾನವಾಗಿ ಗೌರವಿಸಿ ಅವರ ನೋವು, ನಲಿವುಗಳಲ್ಲಿ ಭಾಗಿಯಾಗಿದ್ದರು.

ಅಲ್ಲದೇ ಅವರ ಕನ್ನಡ ನಾಡಿನ ಪ್ರಾಕೃತಿಕ ಸೌಂದರ್ಯ, ಪ್ರಕೃತಿಯ ಬಗೆಗಿನ ಆಸಕ್ತಿ , ಪ್ರಾಣಿ ಸಂಪತ್ತಿನ ಬಗ್ಗೆ ಅವರೇ ಮುತುವರ್ಜಿ ವಹಿಸಿ ತಯಾರಿಸಿದ ʼಗಂಧದಗುಡಿʼ ಚಿತ್ರ ಬಿಡುಗಡೆಯಾಗುತ್ತಿದೆ.

ನಾಡು-ನುಡಿ-ಭಾಷೆ-ಇತಿಹಾಸ-ಸಾಹಿತ್ಯ-ಚಿತ್ರರಂಗ- ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ಮಹನೀಯರಿಗೆ ಮಾತ್ರ ಈ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿಯನ್ನು ಹಿಂದಿನ ರಾಜ್ಯ ಸರ್ಕಾರ ಪುನೀತ್ ರಾಜ್‍ಕುಮಾರ್ ಅವರಿಗೆ ನೀಡುವ ಮೂಲಕ ನಾಡಿನ ಜನರ ಅಭಿಲಾಷೆಯನ್ನು ಈಡೇರಿಸಿದೆ, ಕನ್ನಡ ರಾಜ್ಯೋತ್ಸವ ದಿನದಂದು ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈವರೆಗೂ ರಾಷ್ಟ್ರಕವಿ ಕುವೆಂಪು, ವರನಟ ಡಾ.ರಾಜ್‍ಕುಮಾರ್ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಸುಮಾರು ಎರಡು ದಶಕಗಳ ನಂತರ
ಪುನೀತ್ ರಾಜ್‍ಕುಮಾರ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಜತೆಗೆ ಅವರ ಜನ್ಮದಿನವನ್ನು (Bithday) ‘ಸ್ಫೂರ್ತಿ ದಿನ’ವನ್ನಾಗಿ (Inspiration Day) ಆಚರಿಸಲಾಗುತ್ತದೆ.

ಡಾ. ರಾಜ್​ಕುಮಾರ್​ ರೀತಿಯೇ ಪುನೀತ್​​ ರಾಜ್​ಕುಮಾರ್​ ಕೂಡ ಕಣ್ಣುಗಳನ್ನು ದಾನ ಮಾಡಿದ್ದರು. ಅಪ್ಪು ಕಣ್ಣಿನಿಂದ ಒಟ್ಟು 10 ಜನರಿಗೆ ದೃಷ್ಟಿ ನೀಡಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಈ ಕಾರ್ಯ ಮಾಡಲಾಗಿದೆ. ನೇತ್ರದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ಕಳೆದ ಎರೆಡು ವರ್ಷಗಳಲ್ಲಿ ನೇತ್ರದಾನ ನೋಂದಣಿ ಶಿಬಿರಗಳ ಸಂಖ್ಯೆ ಹೆಚ್ಚಿದೆ. ಅನೇಕ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು, ಅಭಿಮಾನಿ ಸಂಘಗಳು ನೇತ್ರಾದಾನ ನೋಂದಣಿ ಶಿಬಿರಗಳನ್ನು ಆಯೋಜಿಸುತ್ತಿವೆ. ಲಕ್ಷಾಂತರ ಜನರು ನೇತ್ರದಾನದ ಪ್ರತಿಜ್ಞೆ ಮಾಡಿದ್ದಾರೆ.

ಪುನೀತ್ ರಾಜ್ಕುಮಾರ್ ಅವರು ಕೇವಲ ನಟರಾಗಿರಲಿಲ್ಲ. ಸಮಾಜಮುಖಿ ಕಾರ್ಯಕ್ರಮಗಳು, ಜಾಗೃತಿ ಅಭಿಯಾನಗಳಲ್ಲಿ ಅವರು ತೊಡಗಿಸಿಕೊಂಡಿದ್ದರು. ಅವರನ್ನು ರಾಜಕೀಯಕ್ಕೆ ಸೆಳೆಯಲು ಹಲವು ಪ್ರಯತ್ನಗಳೂ ನಡೆದರೂ. ರಾಜಕೀಯಕ್ಕೆ ಬರಲು ನಿರಾಕರಿಸಿದ್ದರು.

ಶಿಕ್ಷಣದ ಹಕ್ಕು, ಸರ್ವಶಿಕ್ಷಾ ಅಭಿಯಾನ, ನಂದಿನಿ ಹಾಲು, ಮತ ಚಲಾಯಿಸುವ ಹಕ್ಕು ಸೇರಿದಂತೆ ಇತರ ಸರ್ಕಾರಿ ಅಭಿಯಾನಗಳಲ್ಲಿ ಪಾಲ್ಗೊಂಡಿದ್ದರು. ಮಾರ್ಚ್ 2020ರಲ್ಲಿ, ಹಿಂದುಳಿದ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ರಾಯಭಾರಿಯಾಗಿ ಪುನೀತ್ ಅವರನ್ನು ಸರ್ಕಾರ ನೇಮಿಸಿತ್ತು.

ಈ ವರ್ಷದ ಜೂನ್‌ ನಲ್ಲಿ, ಕೋವಿಡ್ -19 ಮುನ್ನೆಚ್ಚರಿಕೆಗಳು ಮತ್ತು ಲಸಿಕೆಗಳ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರವು ಪುನೀತ್‌ ರನ್ನು ಆಯ್ಕೆ ಮಾಡಿತ್ತು. ‘ಸರ್ಕಾರದ ಎಲ್ಲಾ ಜಾಗೃತಿ ಅಭಿಯಾನಗಳಿಗೆ ಅವರು ಯಾವಾಗಲೂ ಲಭ್ಯವಿದ್ದರು. ಅದಕ್ಕಾಗಿ ಅವರು ಒಂದು ಪೈಸೆಯನ್ನೂ ಕೇಳುತ್ತಿರಲಿಲ್ಲ’ ಎಂದು ಐಪಿಎಸ್ ಅಧಿಕಾರಿ ಇಶಾ ಪಂತ್ ಟ್ವೀಟ್‌ ನಲ್ಲಿ ತಿಳಿಸಿದ್ದರು.

2014ರ ಲೋಕಸಭೆ ಮತ್ತು 2018ರ ವಿಧಾನಸಭೆ ಚುನಾವಣೆಗಳಲ್ಲಿ ಮತ ಚಲಾಯಿಸಬೇಕೆಂದು ನಾಗರಿಕರಲ್ಲಿ ಪುನೀತ್ ಮನವಿ ಮಾಡಿಕೊಂಡಿದ್ದರು. ಈ ಜಾಗೃತಿ ಅಭಿಯಾನಕ್ಕಾಗಿ ಅವರನ್ನು ಚುನಾವಣಾ ಆಯೋಗವು ನೇಮಿಸಿತ್ತು.

ಒಬ್ಬ ಸಿನಿಮಾ ನಟ ಅಥವಾ ಕಲಾವಿದ ಮರಣಾನಂತರ ಜನರ ಹೃದಯಗಳಲ್ಲಿ ನೆನಪಾಗಿ ಚಿರಸ್ಥಾಯಿಯಾಗಬಹುದೇ ಹೊರತು ಹೊಸ ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳುವ ಸಂಭವಗಳು ತೀರಾ ಕಡಿಮೆ. ಆದರೆ ಪುನೀತ್ ರಾಜಕುಮಾರ್ ವಿಷಯದಲ್ಲಿ ಇದು ಅಪವಾದವಾಗಿ ಪರಿಣಮಿಸಿದೆ. ಅವರ ಆಕಸ್ಮಿಕ ನಿಧನ ಕನ್ನಡ ನಾಡಿನ ಪಾಲಿಗೆ ನುಂಗಲಾರದ ತುತ್ತಾಗಿದೆ.‌

ಆದರೆ, ತಮ್ಮ ಸರಳ ಸಜ್ಜನಿಕೆ, ಹೃದಯ ವೈಶಾಲ್ಯ, ಸಮಾಜ ಸೇವೆ ಹಾಗೂ ಸಿನಿಮಾಗಳ ಮೂಲಕ ಅವರು ನಮ್ಮೊಂದಿಗೆ ಸದಾ ಇರುತ್ತಾರೆ. ಅವರ ಆದರ್ಶಗಳನ್ನು ನಮ್ಮದಾಗಿಸಿಕೊಳ್ಳಲು ಪ್ರಯತ್ನಿಸಬೇಕು. ಅದೇ ನಾವು ಆ ಅಪರೂಪದ ನಟನಿಗೆ ಸಲ್ಲಿಸುವ ಗೌರವದ ಶ್ರದ್ಧಾಂಜಲಿ.

Dr.Guruprasad Hawaldar

ಇವರ ವೃತ್ತಿ ಉಪನ್ಯಾಸ. ಪ್ರವೃತ್ತಿ ಬರವಣಿಗೆ. ಇವರ ಬರಹಗಳು ಈಗಾಗಲೇ ನಾಡಿನ ಅನೇಕ ಪತ್ರಿಕೆಗಳು ಮತ್ತು ಪ್ರಮುಖ ವೆಬ್ ಪೋರ್ಟಲ್ ನಲ್ಲಿ ಪ್ರಕಟವಾಗಿವೆ.

Tags: appuckcknewsnowdeath anniversarykannadakannada cinemakarnatakapuneeth rajkumar
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಗಾಂಧಿ ಜಯಂತಿಗೂ ಮುನ್ನವೇ ಪಬ್ ಒಪೆನ್!

ಕೇರಳದಲ್ಲಿ ಸ್ಫೋಟ; ಬೆಂಗಳೂರಿನಲ್ಲಿ ಕಟ್ಟೆಚ್ಚರ

Leave a Reply Cancel reply

Your email address will not be published. Required fields are marked *

Recommended

ಬಾಗೇಪಲ್ಲಿಯಲ್ಲಿ ಸಾರಿಗೆ ಮುಷ್ಕರ ಸಂಪೂರ್ಣ ಯಶಸ್ವಿ; ರಸ್ತೆಗಿಳಿಯದ ಕೆಎಸ್‌ಆರ್‌ಟಿಸಿ ಬಸ್ಸುಗಳು, ಬೆಂಬಲ ನೀಡಿದ ಪ್ರಜಾಸಂಘರ್ಷ ಸಮಿತಿ & ರೈತ ಸಂಘಟನೆಗಳು

ಬಾಗೇಪಲ್ಲಿಯಲ್ಲಿ ಸಾರಿಗೆ ಮುಷ್ಕರ ಸಂಪೂರ್ಣ ಯಶಸ್ವಿ; ರಸ್ತೆಗಿಳಿಯದ ಕೆಎಸ್‌ಆರ್‌ಟಿಸಿ ಬಸ್ಸುಗಳು, ಬೆಂಬಲ ನೀಡಿದ ಪ್ರಜಾಸಂಘರ್ಷ ಸಮಿತಿ & ರೈತ ಸಂಘಟನೆಗಳು

5 years ago
ಕೆನಡಾದಲ್ಲಿ ಕನ್ನಡ ಕಂಪು; ಹೆಜ್ಜೆ ಗೆಜ್ಜೆಗಳ ನಾದದೊಳಗೆ ಮೊಳಗಿದ ಕನ್ನಡ ಡಿಂಡಿಮ

ಕೆನಡಾದಲ್ಲಿ ಕನ್ನಡ ಕಂಪು; ಹೆಜ್ಜೆ ಗೆಜ್ಜೆಗಳ ನಾದದೊಳಗೆ ಮೊಳಗಿದ ಕನ್ನಡ ಡಿಂಡಿಮ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ