ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿದ 10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ
ಬೆಂಗಳೂರು: ರಾಜ್ಯೋತ್ಸವ ದಿನಕ್ಕೆ ಹಿಂದಿನ ದಿನವಾದ ಇಂದು ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದವರಾದ ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿ ಜಸ್ಟಿಸ್ ವಿ.ಗೋಪಾಲಗೌಡರು ಹಾಗೂ ಹೆಸರಾಂತ ಚಿಂತಕ, ಕವಿ ಹಾಗೂ ಪತ್ರಕರ್ತ ಲಕ್ಷ್ಮೀಪತಿ ಕೋಲಾರ ಅವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಯ ಗೌರವ ಅರಸಿ ಬಂದಿದೆ.
ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, 25 ಗ್ರಾಂ ಚಿನ್ನದ ಪದಕ, ಅಭಿನಂದನಾ ಪತ್ರವನ್ನು ಒಳಗೊಂಡಿದೆ. ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡುವರು.
ಪ್ರಶಸ್ತಿಗೆ ಪಾತ್ರರಾದ ಕ್ಷೇತ್ರವಾರು ಗಣ್ಯರ ವಿವರ
ಸಮಾಜ ಸೇವೆ
ಹುಚ್ಚಮ್ಮ ಬಸಪ್ಪ ಚೌದ್ರಿ, ಚಾರ್ಮಾಡಿ ಹಸನಬ್ಬ, ಕೆ.ರೂಪ್ಲಾ ನಾಯಕ, ಪೂಜ್ಯ ನಿಜಗುಣಾನಂದ ಮಹಾಸ್ವಾಮಿ-ನಿಷ್ಕಲ ಮಂಟಪ, ನಾಗರಾಜು.ಜಿ
ಆಡಳಿತ
ಜಿ.ವಿ.ಬಲರಾಮ್
ವೈದ್ಯಕೀಯ
ಡಾ.ಜಿ.ರಾಮಚಂದ್ರ, ಡಾ. ಪ್ರಶಾಂತ್ ಶೆಟ್ಟಿ
ಸಾಹಿತ್ಯ
ಪ್ರೊ.ಸಿ.ನಾಗಣ್ಣ, ಹೆಚ್.ಕೆ. ಸುಬ್ಬಯ್ಯ, ಸತೀಶ್ ಕುಲಕರ್ಣಿ, ಲಕ್ಷ್ಮೀಪತಿ ಕೋಲಾರ, ಪರಪ್ಪ ಗುರುಪಾದಪ್ಪ ಸಿದ್ದಾಪುರ, ಡಾ. ಕೆ.ಷರೀಫಾ
ಶಿಕ್ಷಣ
ರಾಮಪ್ಪ ಹವಳೆ, ಕೆ. ಚಂದ್ರಶೇಖರ್, ಕೆ.ಟಿ. ಚಂದ್ರು
ಕ್ರೀಡೆ
ಟಿ.ಎಸ್. ದಿವ್ಯಾ, ಅದಿತಿ ಅಶೋಕ್, ಅಶೋಕ್ ಗದಿಗೆಪ್ಪ ಏಣಗಿ
ಚಲನಚಿತ್ರ
ಡಿಂಗ್ರಿ ನಾಗರಾಜ್, ಜನಾರ್ಧನ್ (ಬ್ಯಾಂಕ್ ಜನಾರ್ಧನ್)
ರಂಗಭೂಮಿ
ಎ.ಜಿ. ಚಿದಂಬರ ರಾವ್ ಜಂಬೆ, ಪಿ.ಗಂಗಾಧರಸ್ವಾಮಿ, ಹೆಚ್.ಬಿ.ಸರೋಜಮ್ಮ, ತಯ್ಯಬಖಾನ್ ಎಂ.ಇನಾಮದಾರ, ಡಾ.ವಿಶ್ವನಾಥ್ ವಂಶಾಕೃತ ಮಠ, ಪಿ.ತಿಪ್ಪೇಸ್ವಾಮಿ
ಸಂಗೀತ
ಡಾ.ನಯನಾ ಎಸ್.ಮೋರೆ, ಲೀಲಾ ಎಂ ಕೊಡ್ಲಿ, ಶಬ್ಬೀರ್ ಅಹಮದ್, ಎಸ್ ಬಾಳೇಶ ಭಜಂತ್ರಿ
ಶಿಲ್ಪಕಲೆ ಮತ್ತು ಚಿತ್ರಕಲೆ
ಟಿ.ಶಿವಶಂಕರ್, ಕಾಳಪ್ಪ ವಿಶ್ವಕರ್ಮ, ಮಾರ್ಥಾ ಜಾಕಿಮೋವಿಚ್, ಗೌರಯ್ಯ
ಯಕ್ಷಗಾನ & ಬಯಲಾಟ
ಅರ್ಗೋಡು ಮೋಹನದಾಸ ಶೆಣೈ, ಕೆ.ಲೀಲಾವತಿ ಬೈಪಾಡಿತ್ತಾಯ, ಕೇಶಪ್ಪ ಶಿಳ್ಳಿಕ್ಯಾತರ, ದಳವಾಯಿ ಸಿದ್ದಪ್ಪ
ಜಾನಪದ
ಹುಸೇನಾಬಿ ಬುಡೆನ್ ಸಾಬ್ ಸಿದ್ದಿ, ಶಿವಂಗಿ ಶಣ್ಮರಿ, ಮಹದೇವು, ನರಸಪ್ಪ, ಶಕುಂತಲಾ ದೇವಲಾಯಕ, ಎಚ್.ಕೆ.ಕಾರಮಂಚಪ್ಪ, ಶಂಭು ಬಳಿಗಾರ, ವಿಭೂತಿ ಗುಂಡಪ್ಪ, ಚೌಡಮ್ಮ
ನ್ಯಾಯಾಂಗ
ಜಸ್ಟಿಸ್ ವಿ.ಗೋಪಾಲಗೌಡ
ಸಂಕೀರ್ಣ
ಎಂಎಂ ಮದರಿ, ಹಾಜಿ ಅಬ್ದುಲ್ಲಾ ಪರ್ಕಳ, ಮಿಮಿಕ್ರಿ ದಯಾನಂದ್, ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಲೆ.ಜ.ಕೊಡನ ಪೂವಯ್ಯ ಕಾರ್ಯಪ್ಪ
ಮಾಧ್ಯಮ
ದಿನೇಶ ಅಮೀನ್ಮಟ್ಟು, ಜವರಪ್ಪ, ಮಾಯಾ ಶರ್ಮ, ರಫೀ ಭಂಡಾರಿ
ವಿಜ್ಞಾನ ಮತ್ತು ತಂತ್ರಜ್ಞಾನ
ಎಸ್.ಸೋಮನಾಥನ್ ಶ್ರೀಧರ್ ಪನಿಕರ್, .ಗೋಪಾಲನ್ ಜಗದೀಶ್
ಹೊರನಾಡು ಮತ್ತು ಹೊರ ದೇಶ
ಸೀತಾರಾಮ ಅಯ್ಯಂಗಾರ್, ದೀಪಕ್ ಶೆಟ್ಟಿ, ಶಶಿಕಿರಣ್ ಶೆಟ್ಟಿ
ಸ್ವಾತಂತ್ರ್ಯ ಹೋರಾಟ
ಪುಟ್ಟಸ್ವಾಮಿ ಗೌಡ
ಕೃಷಿ & ಪರಿಸರ
ಸೋಮನಾಥ ರೆಡ್ಡಿ ಪೂರ್ಮಾ, ದ್ಯಾವನಗೌಡ ಟಿ ಪಾಟೀಲ, ಶಿವರೆಡ್ಡಿ ಹನುಮರೆಡ್ಡಿ ವಾಸನ
ಸಂಘ ಸಂಸ್ಥೆಗಳು
1.ಕರ್ನಾಟಕ ಸಂಘ-ಶಿವಮೊಗ್ಗ
2.ಬಿ.ಎನ್.ಶ್ರೀರಾಮ ಪುಸ್ತಕ ಪ್ರಕಾಶನ, ಮೈಸೂರು
3.ಮಿಥಿಕ್ ಸೊಸೈಟಿ, ಬೆಂಗಳೂರು
4.ಕರ್ನಾಟಕ ಸಾಹಿತ್ಯ ಸಂಘ, ಯಾದಗಿರಿ
5.ಮೌಲಾನ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ (ರಿ), ದಾವಣಗೆರೆ
6.ಮುಸ್ಲೀಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಎಂ ಇ ಐ ಎಫ್), ದಕ್ಷಿಣ ಕನ್ನಡ
7.ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ, ಬಾಗಲಕೋಟೆ
8.ಚಿಣ್ಣರ ಬಿಂಬ, ಮುಂಬಯಿ
9.ಮಾರುತಿ ಜನಸೇವಾ ಸಂಘ, ದಕ್ಷಿಣ ಕನ್ನಡ
10.ವಿದ್ಯಾದಾನ ಸಮಿತಿ, ಗದಗ