ಚಿಕ್ಕಬಳ್ಳಾಪುರ ಜಿಲ್ಲೆಯ ತಲಕಾಯಬೆಟ್ಟದಲ್ಲಿ ಝಿಕಾ ವೈರಸ್ ಪತ್ತೆ ಪ್ರಕರಣ; ಕೊನೆಗೂ ಹೇಳಿಕೆ ಕೊಟ್ಟ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಪತ್ತೆಯಾಗಿರುವ ಝಿಕಾ ವೈರಸ್ ಬಗ್ಗೆ ರಾಜ್ಯ ಸರಕಾರ ಅಧಿಕೃತ ಮಾಹಿತಿ ನೀಡಿದ್ದು, ಮನುಷ್ಯರ ದೇಹದಲ್ಲಿ ಈ ವೈರಸ್ ಪತ್ತೆ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಬಗ್ಗೆ ಎಕ್ಸ್ ಜಾಲತಾಣದಲ್ಲಿ ಮಾಹಿತಿ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು; ರಾಜ್ಯದ 68 ಕಡೆಗಳಲ್ಲಿ ನಡೆಸಲಾದ ಸೊಳ್ಳೆ ಪರೀಕ್ಷೆಗಳಲ್ಲಿ ಚಿಕ್ಕಬಳ್ಳಾಪುರದ ತಲಕಾಯಬೆಟ್ಟದ ಸೊಳ್ಳೆಗಳಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಆರೋಗ್ಯ ಅಧಿಕಾರಿಗಳು ವಿಶೇಷ ಸಭೆ ನಡೆಸಿದ್ದು, ವೈರಸ್ ಹರಡದಂತೆ ತಡೆಯಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದಿದ್ದಾರೆ.
ಇದುವರೆಗೂ ಮನುಷ್ಯರ ದೇಹದಲ್ಲಿ ಝೀಕಾ ವೈರಸ್ ಪತ್ತೆಯಾಗಿಲ್ಲ. ಮುನ್ನೆಚ್ಚರಿಕೆಯ ಕ್ರಮವಾಗಿ ಜ್ವರ ಬಾಧಿಸಿದವರ ರಕ್ತದ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಮೂರು ದಿನಗಳಲ್ಲಿ ವರದಿ ಬರಲಿದೆ.
ನಿಪಾ ವೈರಸ್‌ನಷ್ಟು ಝೀಕಾ ಮಾರಣಾಂತಿಕ ವೈರಸ್ ಅಲ್ಲ. ಹೀಗಾಗಿ ಸಾರ್ವಜನಿಕರು ಆತಂಕ ಪಡಬೇಕಾದ ಅಗತ್ಯವಿಲ್ಲ. ಆದರೆ ಮಕ್ಕಳು ವಿಶೇಷವಾಗಿ ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದ್ದಾರೆ.
ರಾಜ್ಯದ 68 ಕಡೆಗಳಲ್ಲಿ ನಡೆಸಲಾದ ಸೊಳ್ಳೆ ಪರೀಕ್ಷೆಗಳಲ್ಲಿ ಚಿಕ್ಕಬಳ್ಳಾಪುರದ ತಲಕಾಯಬೆಟ್ಟದ ಸೊಳ್ಳೆಗಳಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಆರೋಗ್ಯ ಅಧಿಕಾರಿಗಳು ವಿಶೇಷ ಸಭೆ ನಡೆಸಿದ್ದು, ವೈರಸ್ ಹರಡದಂತೆ ತಡೆಯಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 2, 2023
ಇದುವರೆಗೂ ಮನುಷ್ಯರ ದೇಹದಲ್ಲಿ ಝೀಕಾ ವೈರಸ್…
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಝಿಕಾ ವೈರಸ್ ಪತ್ತೆ; 37 ಜನರ ರಕ್ತದ ಸ್ಯಾಂಪಲ್ ಬೆಂಗಳೂರಿಗೆ ರವಾನೆ