ಚಾಲಕನ ಅತಿ ವೇಗದಿಂದ ಅಪಘಾತ; ಪ್ರಯಾಣಿಕರ ದೂರು
by G.S.Bharath Gudibande
ಗುಡಿಬಂಡೆ: ಪಟ್ಟಣದ ಹೊರವಲಯದ ಉಪ್ಪಾರಹಳ್ಳಿ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಅಪಘಾತಕ್ಕೆ ಈಡಾಗಿದ್ದು, 15 ಜನರಿಗೆ ತೀವ್ರ ಗಾಯಗಳಾಗಿವೆ.
ಮೂರ್ನಾಲ್ಕು ಪ್ರಯಾಣಿಕರಿಗೆ ತಲೆ ಹಾಗೂ ಕೈ ಕಾಲುಗಳುಗೆ ಗಾಯಗಳಾಗಿವೆ.
ಬಾಗೇಪಲ್ಲಿಯಿಂದ ಗುಡಿಬಂಡೆ ಕಡೆಗೆ ಬಸ್ ಸಾಗುತ್ತಿದ್ದಾಗ ಈ ಘಟನೆಗ ನಡೆದಿದ್ದು, ಬಸ್ ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರಯಾಣಿಕರು ದೂರಿದ್ದಾರೆ.
ಅಪಘಾತ ಸಂಭವಿಸುವ ಮುನ್ನ ಉಪ್ಪಾರಹಳ್ಳಿಯಲ್ಲಿ ಜನರು ಬಸ್ ಗಾಗಿ ಕಾಯುತ್ತಿದ್ದರು. ಆದರೆ, ಬಸ್ ಚಾಲಕ ಅಲ್ಲಿ ಬಸ್ಸಿನ ನಿಲುಗಡೆ ಕೊಡದೆ ವೇಗವಾಗಿ ಚಾಲನೆ ಮಾಡಿಕೊಂಡು ಹೋದರು. ಮುಂದಿನ ತಿರುವಿನಲ್ಲಿ ಅಪಘಾತ ಸಂಭವಿಸಿದೆ ಎಂದು ಅಲ್ಲಿನ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಆಸ್ಪತ್ರೆಯ ಸಿಬ್ಬಂದಿ ದೌಡಾಯಿಸಿ ಗಾಯಾಳುಗಳನ್ನು ಗುಡಿಬಂಡೆ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.