ಲಿಖಿತ ಆದೇಶ ಹೊರಡಿಸಿದ ರಾಜ್ಯ ಸಾರಿಗೆ ನಿಗಮ
ಬೆಂಗಳೂರು: ಶಕ್ತಿ ಯೋಜನೆ ಅಡಿಯಲ್ಲಿ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಮಹಿಳೆಯರು ಮೂಲ ಆಧಾರ್ ಕಾರ್ಡ್ ಬದಲಿಗೆ ಡಿಜಿಟಲ್ ಆಧಾರ್, ಅಂದರೆ; ಮೊಬೈಲ್ ನಲ್ಲಿ ಆಧಾರ್ ತೋರಿಸಿದರೂ ಪರಿಗಣಿಸಬೇಕು ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ.
11/11/2023ರಂದು ರಾಜ್ಯ ರಸ್ತೆ ಸಾರಿಗೆ ನಿಗಮ ಈ ಬಗ್ಗೆ ಲಿಖಿತ ಆದೇಶ ಹೊರಡಿಸಿದ್ದು, ಮಹಿಳಾ ಪ್ರಯಾಣಿಕರು ಆಧಾರ್ ನ ಮೂಲ ಪ್ರತಿ ಬದಲಾಗಿ ನಕಲು, ಡಿಜಿ ಲಾಕರ್ ನಲ್ಲಿರುವ ಪ್ರತಿ ತೋರಿಸಿದರೂ ಪರಿಗಣಿಸಬೇಕು ಎಂದು ತಿಳಿಸಿದೆ.
ಆಧಾರ್ ನ ಮೂಲ ಪ್ರತಿಗೆ ಬದಲಾಗಿ ಡಿಜಿ ಲಾಕರ್ ಇಲ್ಲವೇ ಜೆರಾಕ್ಸ್ ಪ್ರತಿ ತೋರಿಸಿದರೂ ನಿರ್ವಾಹಕರು ತಗಾದೆ ತೆಗೆದು ಮಹಿಳೆಯರ ಪ್ರಯಾಣಕ್ಕೆ ಅಡ್ಡಿ ಉಂಟು ಮಾಡುತ್ತಿರುವ ಬಗ್ಗೆ ರಾಜ್ಯವ್ಯಾಪಿ ವ್ಯಾಪಕ ದೂರುಗಳು ಬಂದಿದ್ದವು.
ಈ ಹಿನ್ನೆಲೆಯಲ್ಲಿ ಸರಕಾರದ ಸೂಚನೆ ಮೇರೆಗೆ ನಿಗಮ ಆದೇಶ ಹೊರಡಿಸಿದೆ.