• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಕಾಲಾತೀತ ದಿವ್ಯಸ್ಮರಣೆ

cknewsnow desk by cknewsnow desk
November 23, 2023
in GUEST COLUMN, NATION, STATE
Reading Time: 2 mins read
0
ಕಾಲಾತೀತ ದಿವ್ಯಸ್ಮರಣೆ
930
VIEWS
FacebookTwitterWhatsuplinkedinEmail

ಇಂದು ಪುಟ್ಟಪರ್ತಿ ಶ್ರೀ ಶ್ರೀ ಶ್ರೀ ಸತ್ಯ ಸಾಯಿಬಾಬಾ ಅವರ ಜಯಂತಿ

by Dr. Guruprasad Hawaladar

ಜಗತ್ತಿನಾದ್ಯಂತ ಅಸಂಖ್ಯಾತ ಭಕ್ತರನ್ನು ಹೊಂದಿರುವ, ತಮ್ಮ ಸಮಾಜ ಸೇವೆಯ ಮೂಲಕ ಜನಮಾನಸದಲ್ಲಿ ನೆಲೆ ನಿಂತಿರುವ ಪುಟ್ಟಪರ್ತಿಯ ಶ್ರೀ ಸತ್ಯಸಾಯಿಬಾಬಾ ಅವರ 97ನೇ ಜನ್ಮದಿನವಿಂದು.

ಈಗಿನ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಕುಗ್ರಾಮ ಪುಟ್ಟಪರ್ತಿಯಲ್ಲಿ 1926ರ ನವೆಂಬರ್ 23ರಂದು ಬಡ ಕುಟುಂಬವೊಂದರಲ್ಲಿ ಜನಿಸಿದ ಸತ್ಯ ಸಾಯಿಬಾಬಾ ಅವರ ಮೂಲ ಹೆಸರು ಸತ್ಯನಾರಾಯಣ ರಾಜು. ತಂದೆ ಪೆದ್ದ ವೆಂಕಪರಾಜು ಹಾಗೂ ತಾಯಿ ಈಶ್ವರಮ್ಮನವರು. ಅಸಾಮಾನ್ಯ ಪ್ರತಿಭಾವಂತರಾಗಿದ್ದ ಇವರು ಬಾಲ್ಯದಲ್ಲೇ ನಾಟಕ, ಸಂಗೀತ, ನೃತ್ಯ ಹಾಗೂ ಬರವಣಿಗೆಗಳಲ್ಲಿ ಅಪಾರವಾದ ಆಸಕ್ತಿ ತಳೆದು, ಹಲವು ಕವಿತೆಗಳನ್ನೂ, ನಾಟಕಗಳನ್ನೂ ರಚಿಸಿದ್ದರು.

ಈ ಮೊದಲು ಬಾಲಕ ಸತ್ಯನಾರಾಯಣ ರಾಜುವಿಗೆ ಸಂಸ್ಕೃತ ಶ್ಲೋಕ, ಸಾಹಿತ್ಯದ ಗಂಧಗಾಳಿಯೇ ಇರಲಿಲ್ಲವಂತೆ. ಆದರೆ 1940ರಲ್ಲಿ ಆ ಬಾಲಕನಿಗೆ ಚೇಳೊಂದು ಕಚ್ಚಿದ ಬಳಿಕ ಆತ ಇದ್ದಕ್ಕಿದ್ದಂತೆ ಲೀಲಾಜಾಲವಾಗಿ ಸಂಸ್ಕೃತ ಶ್ಲೋಕಗಳನ್ನು ಹೇಳತೊಡಗಿದ ಎಂಬ ದಂತಕತೆ ವ್ಯಾಪಕವಾಗಿ ಪ್ರಚಲಿತದಲ್ಲಿತ್ತು.

1940ರ ಅಕ್ಟೋಬರ್ 20ರಂದು ಸತ್ಯನಾರಾಯಣ ರಾಜು ತಮ್ಮನ್ನು ಶಿರಡಿ ಸಾಯಿಬಾಬಾ ಅವರ ಅವತಾರವೆಂದು ಘೋಷಿಸಿಕೊಂಡರು. ಅಂದಹಾಗೆ ಭಾರತೀಯ ಅಧ್ಯಾತ್ಮಿಕ ಮತ್ತು ಸಾಮಾಜಿಕ ಪುನರುತ್ಥಾನದಲ್ಲಿ ಮಹಾನ್ ಹೆಸರಾದ ಶಿರಡಿ ಸಾಯಿಬಾಬಾ ಅವರು ದೇಹ ತ್ಯಾಗ ಮಾಡಿದ ವರ್ಷ 1918.

ಮುಂದೆ ಕೆಲ ವರ್ಷಗಳಲ್ಲಿ ಬಾಲಕ ಸತ್ಯನಾರಾಯಣರ ಜನಪ್ರಿಯತೆ ಸುತ್ತಮುತ್ತಲಿನ ಊರುಗಳಲ್ಲಿ ಹರಡಿತು. ಜನರು ತಂಡತಂಡವಾಗಿ ಬಂದು ಅವರ ಪ್ರವಚನಗಳನ್ನು ಆಲಿಸತೊಡಗಿದರು. ಬರುಬರುತ್ತಾ ಈ ಪ್ರವಚನಗಳಲ್ಲಿ ಹಲವಾರು ಚಮತ್ಕಾರಗಳೂ ಸೇರ್ಪಡೆಯಾಗತೊಡಗಿದವು. ಗಾಳಿಯಲ್ಲಿ ಕೈಯಾಡಿಸಿ ಶಿವಲಿಂಗವನ್ನು ತೋರುವುದು, ಭಸ್ಮವನ್ನು ಸೃಷ್ಟಿಸುವುದು ಮುಂತಾದ ಪವಾಡ ಚಮತ್ಕಾರಗಳು ಜನರನ್ನು ವಿಸ್ಮಿತಗೊಳಿಸತೊಡಗಿದವು. ಸತ್ಯನಾರಾಯಣ ರಾಜು ಅವರು ಶೂನ್ಯದಲ್ಲಿ ಆಹಾರ ಮತ್ತು ಸಿಹಿತಿಂಡಿಗಳನ್ನು ಕೂಡ ಸೃಷ್ಟಿಸಬಲ್ಲರೆಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬತೊಡಗಿತು. ಹೀಗೆ ಅವರ ಅನುಯಾಯಿಗಳ ಸಂಖ್ಯೆ ನಿರಂತರವಾಗಿ ಏರತೊಡಗಿತ್ತು.

ದಿನ ವರುಷಗಳು ಉರುಳುತ್ತಿದ್ದಂತೆ ಸತ್ಯನಾರಾಯಣ ರಾಜು ಅವರು ತಮ್ಮ ದೀರ್ಘಕೇಶ ಹಾಗೂ ಕೇಸರಿ ನಿಲುವಂಗಿಯೊಂದಿಗೆ ಪುಟ್ಟಪರ್ತಿಯ ಸತ್ಯ ಸಾಯಿಬಾಬಾ ಎಂದು ಪ್ರಖ್ಯಾತರಾಗತೊಡಗಿದರು. ಸಾಯಿಬಾಬಾ ಪ್ರಸಿದ್ಧಿಯ ಏರುಮುಖದ ಜೊತೆ ಜೊತೆಗೇ ಕುಗ್ರಾಮವಾಗಿದ್ದ ಪುಟ್ಟಪರ್ತಿ ಗ್ರಾಮವು ಒಂದು ಬೃಹತ್ ಯಾತ್ರಾಸ್ಥಳವಾಗಿ ರೂಪುಗೊಂಡಿತು.

1944ರಲ್ಲಿ ಪುಟ್ಟಪರ್ತಿಯಲ್ಲಿ ದೇಗುಲವೊಂದನ್ನು ನಿರ್ಮಿಸಿದ ಸಾಯಿಬಾಬಾ, ನಾಲ್ಕು ವರ್ಷಗಳ ಬಳಿಕ ‘ಪ್ರಶಾಂತಿ ನಿಲಯಂ’ ಅನ್ನು ಸ್ಥಾಪಿಸಿ ಅಲ್ಲಿಯೇ ನೆಲೆಸಿದರು. ಈ “ಪ್ರಸಂತಿ ನಿಲಯ” ಅಥವಾ “ಅತಿ ಹೆಚ್ಚು ವಿಶ್ರಾಂತಿ ಸ್ಥಳ” ಎಂಬ ಹೆಸರನ್ನು ಹೊಂದಿದೆ. ಇದು ಬೆಂಗಳೂರಿನ ಉತ್ತರಕ್ಕೆ 160 ಕಿ.ಮೀ ದೂರದಲ್ಲಿರುವ ಪುಟ್ಟಪರ್ತಿಯಲ್ಲಿದೆ. ಅದರ ಭೂಪ್ರದೇಶದಲ್ಲಿ “ಸಾಯಿ ಕುಲ್ವಂತ್” ಸಭಾಂಗಣವಿದೆ. ಅಲ್ಲಿ ಶಿಕ್ಷಕರೊಂದಿಗೆ ಸಭೆಗಳು ಮತ್ತು ಹಲವಾರು ದೇವಾಲಯಗಳು, ಹೋಟೆಲ್ ಸಂಕೀರ್ಣಗಳು ಮತ್ತು ಕ್ಯಾಂಟೀನ್‌ಗಳು, ಎಲ್ಲಾ ಧರ್ಮಗಳ ವಸ್ತು ಸಂಗ್ರಹಾಲಯ ಮತ್ತು ಕನ್ಸರ್ಟ್ ಹಾಲ್, ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಕ್ಲಿನಿಕ್ ಇವೆ. ಆಶ್ರಮದ ಹತ್ತಿರ ವಿಶ್ವವಿದ್ಯಾಲಯ, ಸಾಯಿ ಸಂಸ್ಥೆಗಳು ಮತ್ತು ಶಾಲೆಗಳು, ಕ್ರೀಡಾಂಗಣ, ಜ್ಯೋತಿ ಚೈತನ್ಯ ವಸ್ತು ಸಂಗ್ರಹಾಲಯ, ತಾರಾಲಯ, ಧ್ಯಾನ ಮರ, ಜೊತೆಗೆ ಬೃಹತ್ ಆಧುನಿಕ ಆಸ್ಪತ್ರೆ ಮತ್ತು ವಿಮಾನ ನಿಲ್ದಾಣವಿದೆ. ಅದೇ ರೀತಿ ಬಾಬಾವರು ಬೆಂಗಳೂರಿನ ಹೊರವಲಯದಲ್ಲಿರುವ ವೈಟ್‌ಫೀಲ್ಡಿನಲ್ಲಿ ಹಾಗೂ ತಮಿಳುನಾಡಿನ ಕೊಡೈಕೆನಾಲ್‌ನಲ್ಲೂ ತಮ್ಮ ಆಶ್ರಮಗಳನ್ನು ಸ್ಥಾಪಿಸಿದರು.

ಸತ್ಯ ಸಾಯಿಬಾಬಾ ಪ್ರತಿಪಾದಿಸುತ್ತಿದ್ದ ಮನುಕುಲದ ಶಾಂತಿ ಹಾಗೂ ಜಾತ್ಯತೀತ ನಿಲುವು ಅವರಿಗೆ ಎಲ್ಲ ಧರ್ಮಗಳಿಂದಲೂ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಟ್ಟಿತ್ತು. ವಿಶ್ವದ ಎಲ್ಲ ಧರ್ಮಗಳ ಸ್ಥಾಪಕರು ಪ್ರತಿಪಾದಿಸಿರುವ ಏಕದೇವತ್ವ ವಾದದಲ್ಲಿ ತಾವು ನಂಬಿಕೆಯಿರಿಸಿರುವುದಾಗಿ ಸಾಯಿಬಾಬಾ ತಮ್ಮ ಪ್ರವಚನಗಳಲ್ಲಿ ನುಡಿಯುತ್ತಿದ್ದರು.

ಸಾಯಿಬಾಬಾ ಅವರ ಪವಾಡಗಳ ಕುರಿತಾಗಿ ವಿಚಾರವಾದಿಗಳ ಟೀಕೆ ನಿರಂತರವಾಗಿ ಹರಿದುಬರುತ್ತಿತ್ತು. ಶೂನ್ಯದಿಂದ ನೀವು ವಿಭೂತಿಯನ್ನೂ, ಎಚ್ ಎಮ್ ಟಿ ಕೈ ಗಡಿಯಾರವನ್ನೂ, ಚಿನ್ನದ ಉಂಗುರಗಳನ್ನೂ ಸೃಷ್ಟಿಸುವುದಾದರೆ ಕುಂಬಳಕಾಯಿ ಸೃಷ್ಟಿಸಿ ತೋರಿ, ಜನಪ್ರಿಯ ವ್ಯಕ್ತಿಗಳಿಗೆ ಮಾತ್ರ ಚಿನ್ನದ ಉಂಗುರ ಯಾಕೆ. ವಿಭೂತಿಯ ಬದಲು ಎಲ್ಲರಿಗೂ ಚಿನ್ನದ ಉಂಗುರವನ್ನೇ ನೀಡಿ ಎಂಬ ಹಲವಾರು ಸವಾಲುಗಳೂ ಮೂಡಿಬಂದವು. ಮತ್ತೊಂದೆಡೆ ಅವರ ಭಕ್ತಾಭಿಮಾನಿಗಳ ಸಂಖ್ಯೆ ಮಾತ್ರ ನಿರಂತರವಾಗಿ ಏರುಮುಖದಲ್ಲಿ ಸಾಗುತ್ತಿತ್ತು. ಅವರ ಅಭಿಮಾನಿಗಳ ವಲಯದಲ್ಲಿ ಪ್ರಖ್ಯಾತ ಸಾಹಿತಿಗಳು, ವಿದ್ವಾಂಸರು, ಸಮಾಜದ ಶ್ರೇಷ್ಠ ಚಿಂತಕರೂ ಇದ್ದರೂ ಎಂಬುದು ಮತ್ತೊಂದು ವಿಚಾರ.

ಇವೆಲ್ಲವುಗಳ ಪರಿಧಿಯ ಆಚೆ ಸಾಯಿಬಾಬಾ ತಮಗೆ ಸಂದ ಜನಪ್ರಿಯತೆ ಮತ್ತು ಆ ಜನಪ್ರಿಯತೆ ತಂದ ಐಶ್ವರ್ಯವನ್ನು ಸಮಾಜ ಸೇವಾ ಕಾರ್ಯಗಳಲ್ಲಿ ವಿನಿಯೋಗಿಸತೊಡಗಿದ್ದರು. ಪುಟ್ಟಪರ್ತಿ ಪಟ್ಟಣವಿರುವ ಅನಂತಪುರ ಜಿಲ್ಲೆಯು ಒಂದು ಕಾಲದಲ್ಲಿ ಬರದಿಂದ ತತ್ತರಿಸುತ್ತಿತ್ತು. ಅನಂತಪುರ ಜಿಲ್ಲೆಯ ನಿವಾಸಿಗಳಿಗೆ ಉಚಿತ ಕುಡಿಯುವ ನೀರಿನ ವ್ಯವಸ್ಥೆಯನ್ನು ಏರ್ಪಡಿಸಿದ ಖ್ಯಾತಿ ಬಾಬಾ ಅವರಿಗೆ ಸಂದಿತು. ಪುಟ್ಟಪರ್ತಿ ಆಶ್ರಮದಲ್ಲಿ ಬಡಬಗ್ಗರಿಗೆ ಕಡಿಮೆ ಬೆಲೆಯಲ್ಲಿ ಆಹಾರ ವಿತರಣಾ ವ್ಯವಸ್ಥೆ ಮೊದಲ್ಗೊಂಡಿತು. ಪುಟ್ಟಪರ್ತಿ, ವೈಟ್ ಫೀಲ್ಡ್ ಮಾತ್ರವಲ್ಲದೆ ಹಲವೆಡೆಗಳಲ್ಲಿ ಸುಸಜ್ಜಿತ ಆಸ್ಪತ್ರೆ, ವಿದ್ಯಾಕೇಂದ್ರಗಳು ಮೂಡಿಬರತೊಡಗಿದವು. ಹಿಂದೊಮ್ಮೆ ಭಕ್ತಿಯ ಕೂಟವೆಂದರೆ ವಿಭೂತಿ ಬರುವ ಚಿತ್ರ ಪಟಗಳ ಮುಂದೆ ಭಜನೆ ಎನ್ನುತ್ತಿದ್ದ ಬಾಬಾ ಭಕ್ತ ಬಳಗಗಳು ಸಹಾ ಮುಂದಿನ ದಿನಗಳಲ್ಲಿ ಸಮಾಜದ ಶ್ರೇಯೋಭಿಲಾಶಿ ಕಾಯಕಗಳಲ್ಲಿ ಮುಂದಾಗುವ ಬದಲಾವಣೆ ಕಾಣಬರತೊಡಗಿದವು.

ಸತ್ಯಸಾಯಿಬಾಬಾ ಅವರ ಹೆಸರಿನಲ್ಲಿ ವಿವಿಧ ಊರು, ದೇಶಗಳಲ್ಲಿ ಸುಸಜ್ಜಿತ ಆಧ್ಯಾತ್ಮಿಕ ಕೇಂದ್ರಗಳಿವೆ. ಇಷ್ಟಿದ್ದೂ ಸಾಯಿಬಾಬಾ ಅವರು ಪ್ರವಾಸ ಕೈಗೊಂಡದ್ದು ಅತ್ಯಂತ ವಿರಳ. 1957ರಲ್ಲಿ ಉತ್ತರ ಭಾರತದ ದೇಗುಲಗಳನ್ನು ಸಂದರ್ಶಿಸಿದ್ದು ಮತ್ತು 1968ರ ಜೂನ್‌ನಲ್ಲಿ ಉಗಾಂಡಕ್ಕೆ ಭೇಟಿ ನೀಡಿದ್ದು ಬಿಟ್ಟರೆ ಅವರು ಹೊರಹೋದದ್ದು ತುಂಬಾ ಅಪರೂಪವಂತೆ.

ಮತ್ತೊಂದು ಮನಸೆಳೆಯುವ ವಿಚಾರವೆಂದರೆ ಸಾಯಿಬಾಬಾ ಅವರ ವ್ಯವಸ್ಥೆಯಲ್ಲಿ ನಡೆಯುತ್ತಿದ್ದ ಸಂಗೀತ ಮತ್ತು ಸಾಂಸ್ಕೃತಿಕ ಹಬ್ಬಗಳು. ಈ ಹಬ್ಬಗಳಲ್ಲಿ ನಡೆಯುತ್ತಿದ್ದ ಕಚೇರಿಗಳು, ಪ್ರದರ್ಶನಗಳು ಅತ್ಯಂತ ಮನಮೋಹಕವಾಗಿದ್ದು ಅದು ಆಕರ್ಷಿಸುತ್ತಿದ್ದ ಮತ್ತು ತನ್ನ ಕಾಂತಿಯನ್ನು ಪಸರಿಸುತ್ತಿದ್ದ ಜನಸಾಗರದ ವ್ಯಾಪ್ತಿ ಮತ್ತು ಸುಸಜ್ಜಿತ ವ್ಯವಸ್ಥೆ ಅಚ್ಚರಿ ಹುಟ್ಟಿಸುವಷ್ಟರ ಮಟ್ಟಿನದೆನಿಸಿತ್ತು.

ಸತ್ಯಸಾಯಿಬಾಬಾ ಅವರು ಈ ಲೋಕವನ್ನಗಲಿದ್ದು ಏಪ್ರಿಲ್ 24, 2011ರಂದು. ಒಮ್ಮೆ ಕುಗ್ರಾಮಗಳಂತಿದ್ದ ಪುಟ್ಟಪರ್ತಿ, ವೈಟ್ ಫೀಲ್ಡ್ ಅಂತಹ ಪ್ರದೇಶಗಳು, ಸಾಯಿಬಾಬಾ ಅವರ ಜೀವಿತ ಕಾಲದಲ್ಲಿ ಒಂದು ರೀತಿಯ ಸಾಮ್ರಾಜ್ಯದಂತೆ ತುಂಬಿಕೊಂಡಿದ್ದವು. ಇಂದು ಅವರಿಲ್ಲದ ಆ ಊರುಗಳು ಒಂದು ರೀತಿಯ ಮೌನಕ್ಕೆ ಮೊರೆಹೋದಂತಿವೆ. ಅದರೂ ಇಂದಿಗೂ ದೇಶ ವಿದೇಶಗಳಿಂದ ಅವರ ಭಕ್ತರು ಪ್ರಶಾಂತಿ ನಿಲಯ ಭೇಟಿ ನೀಡುತ್ತಾರೆ, ಅವರಿಲ್ಲದಿದ್ದರೂ ಎಂದಿನಂತೆ ಸಾಮಾಜಿಕ ಕಾರ್ಯಗಳನ್ನು ಶ್ರೀ ಸತ್ಯಸಾಯಿ ಟ್ರಸ್ಟ್ ನಡೆಸಿಕೊಂಡು ಹೋಗುತ್ತಿದೆ.

  • ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.
Tags: birth anniversaryckcknewsnowguest columnPuttaparthisatya sai babashri satya sai baba
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಕನ್ನಡಿಗರ ಕಣ್ಣೀರು ಹರಿದರೂ ಚಿಂತೆ ಇಲ್ಲ, ತಮಿಳುನಾಡಿಗೆ ಕಾವೇರಿ ಹರಿಯಲಿ ಎನ್ನುತ್ತಿದೆ ಕಾಂಗ್ರೆಸ್

17 ಟಿಎಂಸಿ ನೀರಿಗೆ ಬೇಡಿಕೆ ಇಟ್ಟಿದ್ದ ತಮಿಳುನಾಡು; ಬಾಕಿ ನೀರು ಚುಕ್ತಾ ಮಾಡುವಂತೆ ಪಟ್ಟು ಹಿಡಿದಿದ್ದ ನೆರೆರಾಜ್ಯ

Leave a Reply Cancel reply

Your email address will not be published. Required fields are marked *

Recommended

ಗುಡಿಬಂಡೆಯಲ್ಲೊಬ್ಬರು ಆಮ್‌ಆದ್ಮಿಗಳ ಡಾಕ್ಟರ್!‌ ಸೋಂಕಿತರಿಗೆ ವೈದ್ಯಕೀಯ ಆರೈಕೆ ಜತೆಗೆ ಆತ್ಮಸ್ಥೈರ್ಯದ ಪಾಠ

ಗುಡಿಬಂಡೆಯಲ್ಲೊಬ್ಬರು ಆಮ್‌ಆದ್ಮಿಗಳ ಡಾಕ್ಟರ್!‌ ಸೋಂಕಿತರಿಗೆ ವೈದ್ಯಕೀಯ ಆರೈಕೆ ಜತೆಗೆ ಆತ್ಮಸ್ಥೈರ್ಯದ ಪಾಠ

4 years ago
ಅನ್‌ಲಾಕ್‌ ಆದ ಮೇಲೆ ಹೆಚ್ಚುತ್ತಿದೆ ಅಪರಾಧ: ಗೃಹ ಸಚಿವ ಬೊಮ್ಮಾಯಿ

ಅನ್‌ಲಾಕ್‌ ಆದ ಮೇಲೆ ಹೆಚ್ಚುತ್ತಿದೆ ಅಪರಾಧ: ಗೃಹ ಸಚಿವ ಬೊಮ್ಮಾಯಿ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ