ಜಗತ್ತಿನ ಯಾವ ದೇಶಕ್ಕಿಂತ ನಾವು ಕಡಿಮೆಯಿಲ್ಲ ಎಂದ ಪ್ರಧಾನಿ
ಬೆಂಗಳೂರು:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಲ್ಲಿನ ಹಿಂದೂಸ್ತಾನ್ ಏರೊನ್ಯಾಟಿಕ್ಸ್ ಲಿಮಿಟೆಡ್ (HAL)ನ ವಾಯುನೆಲೆಯಲ್ಲಿ ತೇಜಸ್ ಸಮರ ವಿಮಾನದಲ್ಲಿ ಹಾರಾಟ ನಡೆಸಿದರು.
ನವದೆಹಲಿಯಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ ಮೋದಿ, ತೇಜಸ್ ಜೆಟ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ನಂತರ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಭಾರತ ಈ ಕ್ಷೇತ್ರದಲ್ಲಿನ ಸ್ವಾವಲಂಬನೆಯಲ್ಲಿ ಜಗತ್ತಿನಲ್ಲಿ ಯಾರಿಗಿಂತಲೂ ಕಡಿಮೆ ಇಲ್ಲ ಎಂದರು. ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಚಿತ್ರಗಳನ್ನು ಪ್ರಧಾನಿ ಅವರು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
HAL ಉತ್ಪಾದನಾ ಕಾರ್ಯಾಗಾರದಲ್ಲಿ ನಡೆಯುತ್ತಿರುವ ಕೆಲಸಗಳನ್ನು ಪರಿಶೀಲಿಸಲು ಬೆಂಗಳೂರಿಗೆ ಆಗಮಿಸಿದ್ದ ಮೋದಿ ಅವರು; ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನ ಸೇರಿ ಅಲ್ಲಿನ ಎಲ್ಲಾ ಉತ್ಪಾದನಾ ಸೌಲಭ್ಯಗಳನ್ನು ವೀಕ್ಷಿಸಿದರು.
ಜಗತ್ತಿನ ಯಾವ ದೇಶಕ್ಕಿಂತ ನಾವು ಕಡಿಮೆಯಿಲ್ಲ
ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ನಂತರ ಪ್ರಧಾನಿಗಳು ಎಕ್ಸ್ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
“ಈ ದಿನ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದೆ. ನಮ್ಮ ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವದಿಂದಾಗಿ ಸ್ವಾವಲಂಬನೆಯತ್ತ ಸಾಗುತ್ತಾ, ಜಗತ್ತಿನ ಯಾವ ದೇಶಕ್ಕಿಂತ ನಾವು ಕಡಿಮೆಯಿಲ್ಲ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ. ಭಾರತೀಯ ವಾಯುಪಡೆ, ಡಿಆರ್ʼಡಿಒ, ಹೆಚ್ʼಎಎಲ್ ಹಾಗೂ ಸಮಸ್ತ ಭಾರತೀಯರಿಗೆ ಮನದಾಳದ ಅಭಿನಂದನೆಗಳು.”