ಉಪ ಕಣದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷೆ
ಗುಡಿಬಂಡೆ: ಪಟ್ಟಣದ 2ನೇ ವಾರ್ಡಿನ ಉಪ ಚುನಾವಣೆಗೆ ನಾಮಪತ್ರಿ ಸಲ್ಲಿಕೆ ಅವಧಿ ಮುಕ್ತಾಯವಾಗಿದ್ದ ಒಂದು ಸ್ಥಾನಕ್ಕೆ ಆರು ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಬುಲೆಟ್ ಶ್ರೀನಿವಾಸ್, ಬಿಜೆಪಿಯಿಂದ ಶ್ರೀಧರ್, ಜೆಡಿಎಸ್’ನಲ್ಲಿ ಗಾಂಧಿ ಶ್ರೀನಿವಾಸ್, ಪಕ್ಷೇತರರಾಗಿ ಗೋಪಿ ಜಿ.ವಿ, ರಾಜೇಶ್ ಹಾಗೂ ಲಕ್ಷ್ಮೀ ಕಾಂತಮ್ಮ ಅವರು ನಾಮ ಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ಚುನಾವಣೆ ಅಧಿಕಾರಿ ತಿಳಿಸಿದರು.
ರೋಚಕ ಹಂತದಲ್ಲಿ ಚುನಾವಣೆ
ಗುಡಿಬಂಡೆ ಪಟ್ಟಣದ 2ನೇವಾರ್ಡಿನಲ್ಲಿ ಈ ಹಿಂದೆ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ವಕೀಲ ಅನಿಲ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಯ ನಡುವೆ ತೀವ್ರ ಪೈಪೋಟಿ ಬಿದ್ದು ಪಕ್ಷೇತರ ಅಭ್ಯರ್ಥಿ ವಕೀಲ ಅನಿಲ್ ಅವರು ವಿಜಯವನ್ನು ಸಾಧಿಸಿದ್ದರು.
ಈ ಬಾರಿಯೂ ಸದಸ್ಯರ ಸ್ಥಾನಕ್ಕೆ ಪೈಪೋಟಿ ಜೋರಾಗಿದ್ದು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಹಾಗೂ ಪಕ್ಷೇತರರ ನಡುವೆ ಪೈಪೋಟಿ ಜೋರಾಗಿದೆ ಆದರೆ ಜನರು ಯಾರ ಕಡೆ ಒಲವು ತೋರಲಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ.