• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS CRIME

ಬೇಟೆಗೆ ಸಿಗದ ದಾವೂದ್‌; ಕೇಂದ್ರದ ಬಗ್ಗೆ ನೂರೆಂಟು ಪ್ರಶ್ನೆ

cknewsnow desk by cknewsnow desk
December 19, 2023
in CRIME, NATION, STATE, WORLD
Reading Time: 1 min read
0
ಬೇಟೆಗೆ ಸಿಗದ ದಾವೂದ್‌; ಕೇಂದ್ರದ ಬಗ್ಗೆ ನೂರೆಂಟು ಪ್ರಶ್ನೆ
917
VIEWS
FacebookTwitterWhatsuplinkedinEmail

ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಷಪ್ರಾಶನ ಶಂಕೆ ಹಿನ್ನೆಲೆಯಲ್ಲಿ ಹೊಸ ಚರ್ಚೆಗೆ ನಾಂದಿ

ನವದೆಹಲಿ: ಅಕ್ಸಯ್‌ ಚಿನ್‌ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತನಾಡುತ್ತಿರುವ ಕೇಂದ್ರ ಸರಕಾರಕ್ಕೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಡೆಮುರಿ ಕಟ್ಟಲಾಗದ ಅಸಹಾಯತೆ ಬಗ್ಗೆ ಈಗ ಭಾರೀ ಚರ್ಚೆ ಆಗುತ್ತಿದೆ.

ಕೆಲ ದಿನಗಳಿಂದ ಜಗತ್ತಿನ ವಿವಿಧ ದೇಶಗಳಲ್ಲಿ ಅಡಗಿರುವ ಭಾರತ ವಿರೋಧಿಗಳಲ್ಲಿ ಸಾಕಷ್ಟು ಜನ ಖಲಾಸ್‌ ಆಗಿದ್ದರು. ಆದರೆ, ಭಾರತಕ್ಕೆ ಅಷ್ಟೇನೂ ದೂರದಲ್ಲಿ ಇಲ್ಲದ ಪಾಕಿಸ್ತಾನದ ಕರಾಚಿಯಲ್ಲಿ ಅಡಗಿರುವ ದಾವೂದ್‌ ಹುಟ್ಟಡಗಿಸುವ ಕೆಲಸವನ್ನು ಕೇಂದ್ರ ಏಕೆ ಮಾಡುತ್ತಿಲ್ಲ? ಅಥವಾ ಮಾಡುತ್ತಿದೆ ಎಂದಿಟ್ಟುಕೊಂಡರೂ ಆ ನಿಟ್ಟಿನಲ್ಲಿ ಯಶಸ್ಸು ಸಾಧಿಸಿಲ್ಲ ಏಕೆ ಎಂದು ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

ಹಿರಿಯ ಪತ್ರಕರ್ತ ರಾಜದೀಪ್‌ ಸರ್‌ ದೇಸಾಯಿ ಅವರು ಅವರು ಎಕ್ಸ್‌ ಜಾಲತಾಣದಲ್ಲಿ ಹಾಕಿರುವ ಪೋಸ್ಟ್‌ ಹೆಚ್ಚು ಗಮನ ಸೆಳೆದಿದೆ. ಅವರ ಪೋಸ್ಟ್‌ ಹೀಗಿದೆ.

“ದಾವೂದ್‌ ಇಬ್ರಾಹಿಂ ಸಾವಿನ ಕುರಿತ ಕಥೆಯು ಹುಡುಗನೊಬ್ಬ ತೋಳ ಬಂತು ತೋಳ ಎಂದು ಹೇಳಿದ ಕಥೆಯ ರೀತಿಯಲ್ಲಿಯೇ ಇದೆ. ಆತನನ್ನು ಈಗಾಗಲೇ ಹಲವಾರು ಸಲ ಕೊಂದಿದ್ದೇವೆ. ಏಡ್ಸ್‌, ಟೈಫಾಯಿಡ್‌, ಕೋವಿಡ್..‌ ಆದ್ದರಿಂದ ಯಾವುದನ್ನು ನಂಬಬೇಕು ಇಲ್ಲವೇ ನಂಬಬಾರದು ಎಂದು ನಮಗೆ ಗೊತ್ತಾಗುತ್ತಿಲ್ಲ. ಆತ ಪಾಕಿಸ್ತಾನದಲ್ಲಿಯೇ ವಾಸಿಸುತ್ತಿದ್ದಾನೆ ಎಂದು ಎನ್ನುವುದನ್ನು ಒಪ್ಪಿಕೊಳ್ಳದ ಆ ದೇಶವು (ಪಾಕಿಸ್ತಾನ), ಈ ವಿಷಯವನ್ನು ಖಚಿತಪಡಿಸುತ್ತಿಲ್ಲ. ಸೂಕ್ತ, ಅಗತ್ಯ ದಾಖಲೆಗಳು ಇಲ್ಲದೆ ಭಾರತದ ತನಿಖಾ ಸಂಸ್ಥೆಗಳು ಕೂಡ ಅದನ್ನು ಖಚಿತಪಡಿಸುವುದಿಲ್ಲ.ನಿಜವಾಗಿಯೂ ಕೇಳಲೇಬೇಕಾದ ಪ್ರಶ್ನೆ; ಆತನ ಚನಲವಲನದ ಬಗೆಗಿನ ಎಲ್ಲಾ ಮಾಹಿತಿಗಳನ್ನು ನಾವು ಹೊಂದಿದ್ದರೂ ಈ ಮೂವತ್ತು ವರ್ಷಗಳಲ್ಲಿ ಆತನನ್ನು ಭಾರತಕ್ಕೆ ಕರೆತಲಿಕ್ಕಾಗಲಿ, ಮುಗಿಸುವುದಕ್ಕಾಗಲಿ ನಮಗೆ ಸಾಧ್ಯವಾಗಲಿಲ್ಲ.. ಏಕೆ? ಈ ಅವಧಿಯಲ್ಲಿ ಕಾಂಗ್ರೆಸ್‌ ನೇತೃತ್ವದ ಸರಕಾರ 13 ವರ್ಷ, ಬಿಜೆಪಿ ನೇತೃವತ್ವದ ಸರಕಾರದ 15 ವರ್ಷ, ಕಾಂಗ್ರೆಸ್-ಬಿಜೆಪಿಯೇತರ ಸರಕಾರಗಳು ಎರಡು ವರ್ಷ ದೆಹಲಿಯಲ್ಲಿ ಆಡಳಿತ ನಡೆಸಿವೆ. ಯೋಚಿಸಿ.”

The problem with the Dawood Ibrahim ‘dead’ story is its a bit like the boy who cried wolf. We have killed him so many times: AIDS, typhoid, cholera, Covid that we don’t know what to believe/what not to believe. Pakistan won’t confirm it because they won’t even admit Dawood lives…

— Rajdeep Sardesai (@sardesairajdeep) December 18, 2023

ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಯಾರೋ ಅಗಂತುಕರು ವಿಷಪ್ರಾಶನ ಮಾಡಿದ್ದು, ಆತ ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಾಗಿದ್ದಾನೆ, ಆಸ್ಪತ್ರೆ ಸುತ್ತಮುತ್ತ ಭಾರೀ ಭದ್ರತೆ ಮಾಡಲಾಗಿದೆ ಎನ್ನುವ ಸುದ್ದಿ ನಿನ್ನೆ ಬಂದಿತ್ತು..

ಕ್ರಿಮಿನಲ್ ಚಟುವಟಿಕೆಗಳ ರೂವಾರಿ  ದಾವೂದ್ ಇಬ್ರಾಹಿಂಗೆ ವಿಷಪ್ರಾಶನ ಮಾಡಲಾಗಿದೆ. ಇದರಿಂದ ಹಠಾತ್ ಆರೋಗ್ಯ ಕೆಟ್ಟು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ಸುದ್ದಿ ನಿನ್ನೆ ಭಾರೀ ಸಂಚಲನ ಉಂಟು ಮಾಡಿತ್ತು. ಕಳೆದ ಎರಡು ದಿನಗಳಿಂದ ದಾವೂದ್ ಚಿಕಿತ್ಸೆ ಪಡೆಯುತ್ತಿದ್ದು, ವಿಷಪ್ರಾಶನವಾಗಿರಬಹುದು ಎಂಬ ಊಹಾಪೋಹಗಳಿಗೆ ಪುಷ್ಟಿ ನೀಡಿದೆ.‌ ಆದರೆ, ಈ ಬಗ್ಗೆ ಈವರೆಗೆ ಪಾಕಿಸ್ತಾನ ಸರಕಾರ ಬಾಯಿ ಬಿಟ್ಟಿಲ್ಲ. ಆದರೆ, ದಾವೂದ್‌ ಬಲಗೈ ಬಂಟ ಚೋಟಾ ಶಕೀಲ್‌ ಮಾತ್ರ, “ಈ ಸುದ್ದಿ ವದಂತಿ ಮಾತ್ರ” ಎಂದಿದ್ದಾನೆ.

ಸದ್ಯಕ್ಕೆ, ಆಸ್ಪತ್ರೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ದಾವೂದ್ ಇಬ್ರಾಹಿಂನನ್ನು ಆಸ್ಪತ್ರೆಯ ಮಹಡಿಯಲ್ಲಿ ಪ್ರತ್ಯೇಕವಾಗಿ ಇಟ್ಟು ಚಿಕಿತ್ಸೆ ಕೊಡಲಾಗುತ್ತಿದ್ದು, ಆಸ್ಪತ್ರೆಯ ಉನ್ನತ ಅಧಿಕಾರಿಗಳು ಮತ್ತು ಆತನ ಹತ್ತಿರದ ಕುಟುಂಬ ಸದಸ್ಯರನ್ನು ಮಾತ್ರ ಒಳ ಬಿಡಲಾಗಿದೆ ಎನ್ನುವ ವರದಿ ಇಂದೂ ಕೂಡ ಸದ್ದು ಮಾಡುತ್ತಲೇ ಇದೆ.

ಭಾರತಕ್ಕೆ ಮೋಸ್ಟ್ ವಾಂಟೆಡ್ ಭೂಗತ ಪಾತಕಿಯಾಗಿರುವ ದಾವೂದ್ ಇಬ್ರಾಹಿಂಗಾಗಿ ಮುಂಬಯಿ ಪೊಲೀಸರು ಆತನ ಸಂಬಂಧಿಕರಾದ ಅಲಿಶಾ ಪಾರ್ಕರ್ ಮತ್ತು ಸಾಜಿದ್ ವಾಗ್ಲೆ ಅವರಿಂದ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಮುಂಬಯಿನಲ್ಲಿ 1993ರಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಸ್ಫೋಟದಲ್ಲಿ 250 ಕ್ಕೂ ಹೆಚ್ಚು ಅಮಾಯಕ ನಾಗರಿಕರು ಮೃತಪಟ್ಟು, 750ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಭೀಕರ ಮುಂಬಯಿ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ.ಅಲ್ಲಿಂದ ಆತ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಎನಿಸಿಕೊಂಡಿದ್ದಾನೆ.ಆದರೆ ಈವರೆಗೆ ಈತ ಸೆರೆಸಿಕ್ಕಿಲ್ಲ.

ಗಮನಾರ್ಹ ಸಂಗತಿ ಎಂದರೆ, ಈ ಬಗ್ಗೆ ಪಾಕ್‌ ಮಾಧ್ಯಮಗಳು ಕೂಡ ವರದಿ ಮಾಡಿಲ್ಲ! ಭಾರತೀಯ ಮಾಧ್ಯಮಗಳು ಮಾತ್ರ ಕಳೆದ 48 ಗಂಟೆಗಳಿಂದ ಈ ಬಗ್ಗೆ ನಿರಂತರವಾಗಿ ವರದಿ ಮಾಡುತ್ತಿವೆ.

Tags: Chhota ShakeelckcknewsnowcrimeDawood Ibrahimindiamost wanted criminalpakistan
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
kochimul appointment scam: ಕೋಚಿಮುಲ್‌ ನೇಮಕಾತಿ ಕರ್ಮಕಾಂಡ

kochimul appointment scam: ಕೋಚಿಮುಲ್‌ ನೇಮಕಾತಿ ಕರ್ಮಕಾಂಡ

Leave a Reply Cancel reply

Your email address will not be published. Required fields are marked *

Recommended

ವಿಧಾನಮಂಡಲ ಅಧಿವೇಶನ

ದೇಗುಲ ರಕ್ಷಣೆಗೆ ಕಾನೂನು

4 years ago
ಗುಡಿಬಂಡೆಯಲ್ಲೊಬ್ಬರು ಆಮ್‌ಆದ್ಮಿಗಳ ಡಾಕ್ಟರ್!‌ ಸೋಂಕಿತರಿಗೆ ವೈದ್ಯಕೀಯ ಆರೈಕೆ ಜತೆಗೆ ಆತ್ಮಸ್ಥೈರ್ಯದ ಪಾಠ

ಲಸಿಕೆ ಹಾಕಿಸಿಕೊಳ್ಳಿ, ತಪ್ಪಿದರೆ ನಿಮ್ಮ ಹೆಸರು ಡೀಸಿಗೆ ಹೋಗುತ್ತದೆ!!

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ