ಕೋಚಿಮುಲ್ ಕರ್ಮಕಾಂಡದ ಬಗ್ಗೆ ಸಿದ್ದರಾಮಯ್ಯ ಸರಕಾರದ ಜಾಣಮೌನ
ಬೆಂಗಳೂರು: ಕೋಲಾರ ಹಾಲು ಒಕ್ಕೂಟದ (ಕೋಚಿಮುಲ್ ) ಹುದ್ದೆಗಳನ್ನು ಹಂಚಿಕೊಂಡು ಬಿಕರಿ ಮಾಡಿಕೊಂಡ ಕರ್ಮಕಾಂಡದ ಬಗ್ಗೆ ಸಿದ್ದರಾಮಯ್ಯ ಸರಕಾರ ಜಾಣಮೌನಕ್ಕೆ ಶರಣಾಗಿದೆ. ಇದರ ನಡುವೆಯೇ ಹುದ್ದೆ ಗಿಟ್ಟಿಸಿರುವ ಶಿಫಾರಸು ವೀರರಿಗೆ ಇಂದು ಬೆಳಗ್ಗೆ ತರಾತುರಿಯಲ್ಲಿ 76 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿ, ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಳ್ಳಲಾಗಿದೆ.
ಹುದ್ದೆ ಹಂಚಿಕೆಯಲ್ಲಿ ಕಾಂಗ್ರೆಸ್ ಪಕ್ಷದವರಿಗೇ ಸಿಂಹಪಾಲು ಸಿಕ್ಕಿರುವುದು, ಅದರಲ್ಲಿ ಸ್ವತಃ ಕೆಪಿಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಪಾಲು ಹೊಂದಿರುವುದು ಕಾಂಗ್ರೆಸ್ ಸರಕಾರದ ಜಾಣದ ಕಿವುಡುತನಕ್ಕೆ ಕಾರಣ ಆಗಿದೆ.
ಮಾಜಿ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಪ್ರತಿಪಕ್ಷ ನಾಯಕರು ದನಿಯೆತ್ತಿ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡುತ್ತಿದ್ದರೂ ರಾಜ್ಯ ಸರಕಾರ ಕೇಳಿಸಿಕೊಳ್ಳುತ್ತಿಲ್ಲ. ಹುದ್ದೆಗಳ ಹಂಚಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೇ ಭರ್ಜರಿ ಫಸಲು ಸಿಕ್ಕಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಈ ಬಗ್ಗೆ ಸಹಕಾರ ಇಲಾಖೆಯ ಉನ್ನತ ಮೂಲವೊಂದರ ಪ್ರಕಾರ; ನೇಮಕಾತಿ ಅಕ್ರಮದ ತನಿಖೆಗೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಾಲಿ, ಮಾಜಿ ಶಾಸಕರೇ ಅಡ್ಡಗಾಲು ಹಾಕುತ್ತಿದ್ದು, ಆ ಪಕ್ಷದ ಪ್ರಭಾವಿಗಳೆಲ್ಲ ಒಂದೇ ಸ್ವರದಲ್ಲಿ, ಯಾವುದೇ ಕಾರಣಕ್ಕೂ ತನಿಖೆ ಬೇಡವೇ ಬೇಡ ಎಂದು ರಾಗ ಎಳೆಯುತ್ತಿದ್ದಾರೆಂದು ಗೊತ್ತಾಗಿದೆ.
ಲಭ್ಯವಾಗಿರುವ ದಾಖಲೆಗಳ ಪ್ರಕಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಕೆಎಂಎಫ್ ಅಧಿಕಾರಿಗಳು ಕೋಚಿಮುಲ್ ಹುದ್ದೆಗಳನ್ನು ಹಂಚಿಕೆ ಮಾಡಿಕೊಂಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಡೆದಿರುವ ಅತಿದೊಡ್ಡ ನೇಮಕಾತಿ ಹಗರಣ ಇದಾಗಿದೆ.
ಪ್ರಕಟವಾಗುವುದಕ್ಕೆ ಮೊದಲೇ ಸೋರಿಕೆ ಆಗಿರುವ ಆಯ್ಕೆ ಪಟ್ಟಿ ಪ್ರಕಾರ ಸಹಾಯಕ ವ್ಯವಸ್ಥಾಪಕ (1 ಹುದ್ದೆ) ಹಾಗೂ ವಿಸ್ತರಣಾಧಿಕಾರಿ-ದರ್ಜೆ 3 (1 ಹುದ್ದೆ) ಒಂದು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರಿನ ಪಕ್ಕದಲ್ಲಿ ಶಿಫಾರಸು ಮಾಡಿದವರ ಹೆಸರನ್ನು ಉಲ್ಲೇಖ ಮಾಡಲಾಗಿದೆ. ಅಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಕೈಬರಹದಲ್ಲಿ ಬರೆಯಲಾಗಿದೆ.
ತಾಂತ್ರಿಕ ಅಧಿಕಾರಿಯ ಒಂದು ಹುದ್ದೆ, ವ್ಯವಸ್ಥಾಪಕರ ಒಂದು ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿ ಹೆಸರಿನ ಮುಂದೆ ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕರ ಹೆಸರನ್ನು ಬರೆಯಲಾಗಿದೆ. ಅಲ್ಲಿಗೆ ಈ ಹುದ್ದೆಗಳೆರಡೂ ಇವರ ಪಾಲಾಗಿವೆ ಎಂದರ್ಥ.
ಸಿಕೆನ್ಯೂಸ್ ನೌ ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಎಲ್ಲಾ ಹುದ್ದೆಗಳನ್ನು ಹಂಚಿಕೊಳ್ಳುವ ಬಗ್ಗೆ ಹಾಗೂ ಕಾಂಗ್ರೆಸ್ ಪಕ್ಷದ ಪ್ರಭಾವೀ ಕುಳಗಳ ಡಿಮಾಂಡುಗಳ ಬಗ್ಗೆ, ಅವರು ಕೊಟ್ಟಿರುವ ಶಿಫಾರಸು ಪತ್ರಗಳ ಬಗ್ಗೆ ಕೋಚಿಮುಲ್ ಆಡಳಿತ ಮಂಡಳಿ ಸಭೆಗಳಲ್ಲಿ ವಿಸ್ತೃತವಾಗಿ ಚರ್ಚೆ ನಡೆದಿದೆ. ಈ ಅಕ್ರಮ ನಡೆಸುವ ಬಗ್ಗೆ ಯಾವುದೇ ಎಗ್ಗು, ಲಜ್ಜೆ ಇಲ್ಲದೆ ಸಮಾಲೋಚನೆ ನಡೆಸಲಾಯಿತು ಎಂದು ಕೋಚಿಮುಲ್ ಮೂಲವೊಂದು ಮಾಹಿತಿ ನೀಡಿದೆ.
ಯಾರ ಯಾರ ಹೆಸರಿದೆ?
ಸಹಾಯಕ ಹುದ್ದೆಗೆ ಆಯ್ಕೆ ಆಗಿರುವ ಚೆನ್ನಕೇಶವ ರೆಡ್ಡಿ ಹೆಸರಿನ ಹಿಂದೆ ಬಾಬು, JK ಎಂದು ಕೈ ಬರಹದಲ್ಲಿ ಬರೆಯಲಾಗಿದೆ. ಇದೇ ಹುದ್ದೆಯ ಪಟ್ಟಿಯಲ್ಲಿ ರವಿಶಂಕರ್ ವೈ.ವಿ., ಅದರ ಮುಂದಿನ ಕಾಲಂನಲ್ಲಿರುವ ಶ್ರೀ ಜೈಸಿಂಹಕೃಷ್ಣಪ್ಪ ಹೆಸರುಗಳನ್ನು ಪೆನ್ನಿನಿಂದ ಗೀಚಿ ಅಳಿಸಲಾಗಿದೆ. ಅದರ ಕೆಳಗೆ ಶರತ್ ಕುಮಾರ್ ಎನ್ನುವ ಹೆಸರಿನ ಮೇಲೆ ಪೆನ್ನಿನಿಂದ ಗೀಚಿ ಆದಿನಾರಾಯಣ ರೆಡ್ಡಿ ಎಂದು ಬರೆಯಲಾಗಿದೆ.
ಅದರ ಮುಂದಿನ ಪುಟದಲ್ಲಿ ಆದರ್ಶ ರಾಮಪ್ಪ ಬಂಡಾಯಿ-122 ಹೆಸರಿನ ಪಕ್ಷದಲ್ಲಿ ಇಂಗ್ಲೀಷ್ ನಲ್ಲಿDK ಎಂದು ಕೈ ಬರಹದಲ್ಲಿ ಬರೆದು ಬ್ರ್ಯಾಕೆಟ್ ನಲ್ಲಿ (ಡಿ.ಕೆ.ಸಿ) ಶ್ರೀ ಜೈಸಿಂಹಕೃಷ್ಣಪ್ಪ ಎಂದು ಟೈಪ್ ಮಾಡಲಾಗಿದೆ.
ಮುಂದಿನ ಪುಟದಲ್ಲಿರುವ ತಾಂತ್ರಿಕ ಅಧಿಕಾರಿ (ಡಿ.ಟಿ.) ಸಿಂಧು -122 ಹೆಸರಿನ ಹಿಂದೆ ಮುಂದೆ ಇಂಗ್ಲೀಷ್ ನಲ್ಲಿ SN ಎಂದು ಕೈ ಬರಹದಲ್ಲಿ ಬರೆಲಾಗಿದೆ. ಇಲ್ಲಿ SN ಎಂದರೆ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಎಂದು ಹೇಳಲಾಗಿದೆ.
ಅದೇ ಪಟ್ಟಿಯಲ್ಲಿ ಇನ್ನು ಸ್ಪಲ್ಪ ಕೆಳಕ್ಕೆ ಬಂದರೆ ಮೌನಿಕಾ-90 ಎನ್ನುವ ಹೆಸರಿನ ಮುಂದೆ ಇಂಗ್ಲೀಷ್ ನಲ್ಲಿ Ramesh kumar sir ಎಂದು ಕೈ ಬರಹದಲ್ಲಿ ಬರೆಯಲಾಗಿದೆ.
ಮುಂದುವರೆದು; ವಿಸ್ತರಣಾಧಿಕಾರಿ ದರ್ಜೆ-3 ಪಟ್ಟಿಗೆ ಬಂದರೆ ವಿನೋದ್ ಕುಮಾರ್ ಜಿ. ಎನ್ನುವ ಹೆಸರಿನ ಮುಂದೆ ಸ್ಪಷ್ಟವಾಗಿ Dy CM ಎಂದು ಕೈ ಬರಹದಲ್ಲಿ ಬರೆದು ಶ್ರೀ ಜೈಸಿಂಹಕೃಷ್ಣಪ್ಪ ಹೆಸರನ್ನು ಟೈಪಿಸಲಾಗಿದೆ.
ಇನ್ನು ಸ್ವಲ್ಪ ಕೆಳಕ್ಕೆ ಹೋದರೆ, ಇದೇ ಹುದ್ದೆ ಮಂಜುನಾಥ ವಿ. ಎನ್ನುವ ಹೆಸರನ್ನು ಸೇರಿಸಲಾಗಿದ್ದು, ಅದರ ಹಿಂದೆ JK ಎಂದು ಕೈಯ್ಯಲ್ಲಿ ಬರೆದು ಮುಂದೆ ಶ್ರೀ ಜೈಸಿಂಹಕೃಷ್ಣಪ್ಪ ಎಂದು ಟೈಪ್ ಮಾಡಲಾಗಿದೆ.
ಹುದ್ದೆಯ ಹಂಚಿಕೆ, ಬಿಕರಿ ಹೇಗೆ?
ಕೋಚಿಮುಲ್ ಹುದ್ದೆಗಳನ್ನು ಹಂಚಿಕೊಳ್ಳುವ ಹಾಗೂ ಬಿಕರಿ ಮಾಡಿಕೊಳ್ಳುವ ಬಗ್ಗೆ ಕೋಚಿಮುಲ್ ಮಹಾನ್ ಕಳ್ಳಾಟ ನಡೆಸಿದೆ. ಹುದ್ದೆಯ ಮೂಲ ವೇತನ (ಬೇಸಿಕ್) ಆಧಾರವಾಗಿ ಇಟ್ಟುಕೊಂಡು ಹುದ್ದೆಗಳನ್ನು ಮಾರಾಟ ಮಾಡಲಾಗಿದೆ. ಪ್ರತೀ ಹುದ್ದೆಯನ್ನು ಬರೋಬ್ಬರಿ 40 ಲಕ್ಷ ರೂಪಾಯಿಗೆ ಬಿಕರಿ ಮಾಡಲಾಗಿದೆ ಎನ್ನುವ ಮಾಹಿತಿಯೂ ಕೋಲಾರದಲ್ಲಿ ಹರಿದಾಡುತ್ತಿದೆ.
ಹುದ್ದೆ ಹಂಚಿಕೆ, ಮಾರಾಟದಲ್ಲಿ ಕೋಚಿಮುಲ್ ನಿರ್ದೇಶಕರು, ಅಧಿಕಾರಿಗಳ ನಡುವೆ ದೊಡ್ಡ ಯುದ್ಧವೇ ನಡೆದಿದೆ ಎನ್ನಲಾಗಿದೆ. ಯಾರಿಗೆ ಹಂಚಿಕೆಭಾಗ್ಯ ಸಿಕ್ಕಿಲ್ಲವೋ ಅವರು ಈ ಹಗರಣವನ್ನು ಬಯಲು ಮಾಡಿದ್ದಾರೆ. ಈ ಒಳಜಗಳದ ಪರಿಣಾಮವಾಗಿಯೇ ಆಯ್ಕೆ ಪಟ್ಟಿ ಪ್ರಕಟಕ್ಕೆ ಮೊದಲೇ ಲೀಕ್ ಆಗಿರುವುದು ಕೋಚಿಮುಲ್ ಭ್ರಷ್ಟಕಾಂಡವನ್ನು ಬಯಲು ಮಾಡಿದೆ. ಇದು ಸರಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.
ಅಧಿಕಾರಿಗಳು ಶಾಮೀಲು
ಕೋಚಿಮುಲ್ ಅಕ್ರಮ ನೇಮಕಾತಿ ಹಗರಣದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿರುವ ಅಂಶ. ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ಇನ್ನೊರ್ವ ವ್ಯವಸ್ಥಾಪಕ ಹುದ್ದೆಯಲ್ಲಿರುವ ಆಸಾಮಿ ಹುದ್ದೆ ಹಂಚಿಕೆ ಹಾಗೂ ವಸೂಲಿ, ಬಟವಾಡೆಯ ಪ್ರಮುಖ ಪಾತ್ರಧಾರಿಗಳು ಎಂದು ಹೇಳಲಾಗಿದೆ. ಇತರೆ ಅತೃಪ್ತ ಅಧಿಕಾರಿಗಳು ಆಯ್ಕೆ ಪಟ್ಟಿ ಸೋರಿಕೆ ಹಿಂದೆ ಇದ್ದಾರೆ ಎನ್ನುವುದು ಮತ್ತೊಂದು ಗಮನಾರ್ಹ ಅಂಶ.
ನೇಮಕಾತಿ ಆಳ ಅಗಲ
ಕೋಚಿಮುಲ್ ಗೆ ಮಂಜೂರಾಗಿದ್ದ 273 ಹುದ್ದೆಗಳಿಗೆ ಕಳೆದ ಸೆಪ್ಟೆಂಬರ್ ನಲ್ಲಿ ಮೂರು ಹಂತದಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಎರಡು ಅಧಿಸೂಚನೆಗಳ ಹುದ್ದೆಗಳ ನೇಮಕಾತಿಗೆ ರಾಜ್ಯ ಹೈಕೋರ್ಟ್ ತಡೆ ನೀಡಿತ್ತು. ತಡೆ ಇಲ್ಲದ ಉಳಿದ 81 ಹುದ್ದೆಗಳಿಗೆ ನವೆಂಬರ್ 11ರಂದು ಕೋಲಾರದಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ವಿಚಿತ್ರ ಎಂದರೆ, ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಕೋಚಿಮುಲ್ ಈವರೆಗೂ ತನ್ನ ನಾಮಫಲಕದಲ್ಲಿ ಪ್ರಕಟ ಮಾಡಿಲ್ಲ. ಬದಲಿಗೆ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಆಯಾ ಅಭ್ಯರ್ಥಿಯ ಇ-ಮೇಲ್ ಗೆ ಕಳಿಸಲಾಗಿದೆ.
ಹೀಗೆ ಇ-ಮೇಲ್ ಕಳಿಸಿದ ಮೇಲೆ ಡಿಸೆಂಬರ್ 15, 16, 17, 18ರಂದು ಕೋಚಿಮುಲ್ 81 ಹುದ್ದೆಗಳಿಗೂ ನೇರ ನೇಮಕಾತಿ ಮಾಡಿಕೊಳ್ಳಲು ಸಂದರ್ಶನ ನಡೆಸಿದೆ. ಆದರೆ, ಲಿಖಿತ ಪರೀಕ್ಷೆ ಫಲಿತಾಂಶ, ಸಂದರ್ಶನ ಮುಗಿಯುವುದಕ್ಕೆ ಮುನ್ನವೇ ಕೋಚಿಮುಲ್ ಆಯ್ಕೆಪಟ್ಟಿ ಸಿದ್ಧ ಮಾಡಿಟ್ಟುಕೊಂಡಿದೆ. ಆಯ್ಕೆ ಪಟ್ಟಿಯಲ್ಲಿರುವ ಎಲ್ಲಾ 81 ಅಭ್ಯರ್ಥಿಗಳ ಹೆಸರು, ಅವರನ್ನು ಶಿಫಾರಸು ಮಾಡಿದವರ ಹೆಸರುಗಳೆಲ್ಲವೂ ಸೋರಿಕೆ ಆಗಿರುವ ಆಯ್ಕೆ ಪಟ್ಟಿಯಲ್ಲಿ ನಮೂದಿಸಲಾಗಿದೆ.
ಅಭ್ಯರ್ಥಿಗಳ ನೇರ ನೇಮಕಾತಿ ಆಯ್ಕೆ ಸಮಿತಿಗೆ (ಮೌಖಿಕ ಸಂದರ್ಶನ ಸಮಿತಿ) ಕೋಚಿಮುಲ್ ನಿರ್ದೇಶಕ ಕೆ,ಎನ್.ನಾಗರಾಜ್ (ಕಾಡೇನಹಳ್ಳಿ ನಾಗರಾಜ್) ಅಧ್ಯಕ್ಷ. ಅಲ್ಲದೆ, ಕೋಚಿಮುಲ್ ಅಧ್ಯಕ್ಷ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ಕೆಎಂಎಫ್ ನಿರ್ದೇಶಕ ಸುರೇಶ್ ಹಾಗೂ ಸಹಕಾರ ಇಲಾಖೆಯ ಜಂಟಿ ನಿರ್ದೇಶಕ ಲಿಂಗರಾಜು ಸದಸ್ಯರಾಗಿರುತ್ತಾರೆ.
ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿ ಐವರು ಅಭ್ಯರ್ಥಿಗಳನ್ನು ಮೌಖಿಕ ಸಂದರ್ಶನಕ್ಕೆ ಕರೆಯಲಾಗಿದೆ. ಆದರೆ, ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳ ಸಂದರ್ಶನ ಹಾಗೂ ಅವರು ಗಳಿಸಿದ ಅಂಕಗಳ ಪರೀಕ್ಷೆಯ ವ್ಯವಹಾರದ ಬಗ್ಗೆ ನಾನಾ ಸಂಶಯಗಳು ವ್ಯಕ್ತವಾಗಿವೆ. ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳು ಹತ್ತು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.
ಮೌಖಿಕ ಸಂದರ್ಶನದ ಅವಕಾಶವನ್ನೇ ಮಹಾ ಅವಕಾಶ ಮಾಡಿಕೊಂಡಿರುವ ಸದಸ್ಯರು, ತಮ್ಮ ವಿವೇಚನಾ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಮೊದಲೇ ಆಗಿದ್ದ ಹುದ್ದೆ ಹಂಚಿಕೆ, ಬಿಕರಿ ಒಪ್ಪಂದಕ್ಕೆ ಕಟ್ಟುಬಿದ್ದು ಅರ್ಹ ಅಭ್ಯರ್ಥಿಗಳಿಗೆ ಮೋಸ ಮಾಡಿದ್ದಾರೆ ಎಂದು ಅನೇಕ ಅಭ್ಯರ್ಥಿಗಳು ಆರೋಪ ಮಾಡಿದ್ದಾರೆ.
ಸಿಕೆನ್ಯೂಸ್ ನೌ ಗೆ ಸಿಕ್ಕಿರುವ ಮಾಹಿತಿ ಪ್ರಕಾರ; ಲಿಖಿತ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಅಭ್ಯರ್ಥಿಗಳಿಗೆ ಕೊಚಿಮುಲ್ ನೇರ ಸಂದರ್ಶನಕ್ಕೆ ಕರೆದಿಲ್ಲ. ಕೋಟ್ಯಂತರ ರೂಪಾಯಿ ವ್ಯವಹಾರ ಕುದುರಿಸಿಕೊಂಡು ಅನರ್ಹ ಅಭ್ಯರ್ಥಿಗಳಿಗೆ ಫೇವರ್ ಮಾಡಲಾಗಿದೆ ಎಂದು ಅರ್ಹ ಅಭ್ಯರ್ಥಿಗಳು ನೇರ ಆರೋಪ ಮಾಡುತ್ತಿದ್ದಾರೆ.
ತರಾತುರಿಯಲ್ಲಿ ನೇಮಕಾತಿ ಆದೇಶ
ಅಕ್ರಮ ನೇಮಕಾತಿ ಬಯಲಿಗೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಕೋಚಿಮುಲ್ ಮತ್ತು ಸಹಕಾರ ಇಲಾಖೆ ಇಂದು ಬೆಳಗ್ಗೆಯೇ 81 ಶಿಫಾರಸು ವೀರರಿಗೆ ನೇಮಕಾತಿ ಪತ್ರಗಳನ್ನು ನೀಡಿ ಕೆಲಸಕ್ಕೆ ನಿಯೋಜಿಸಿದೆ.
ಅರ್ಹ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಬಹುದು ಎಂದು ಆತಂಕಗೊಂಡಿರುವ ಕೋಚಿಮುಲ್ ಮತ್ತು ಸಹಕಾರ ಇಲಾಖೆಗಳೆರಡೂ ಈ ಅಕ್ರಮದಲ್ಲಿ ನೇರ ಶಾಮೀಲಾಗಿವೆ. ನಿನ್ನೆ (ಮಂಗಳವಾರ) ರಾತ್ರಿ ತರಾತುರಿಯಲ್ಲಿ ಸಹಕಾರ ಇಲಾಖದೆಯ ಜಂಟಿ ನಿರ್ದೇಶಕ ಲಿಂಗರಾಜು ನೇಮಕಾತಿ ಪತ್ರಗಳಿಗೆ ಸಹಿ ಹಾಕಿದ್ದಾರೆ. ನೇಮಕಾತಿ ಆದೇಶ ಪಡೆದುಕೊಂಡಿರುವ ಅಭ್ಯರ್ಥಿಗಳೆಲ್ಲರೂ ಎದ್ದೆವೋ ಬಿದ್ದೆವೋ ಎಂದು ಬೆಳಗ್ಗೆಯಿಂದಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರು: ಕೋಲಾರ ಹಾಲು ಒಕ್ಕೂಟದ (ಕೋಚಿಮುಲ್ ) ಹುದ್ದೆಗಳನ್ನು ಹಂಚಿಕೊಂಡು ಬಿಕರಿ ಮಾಡಿಕೊಂಡ ಕರ್ಮಕಾಂಡದ ಬಗ್ಗೆ ಸಿದ್ದರಾಮಯ್ಯ ಸರಕಾರ ಜಾಣಮೌನಕ್ಕೆ ಶರಣಾಗಿದೆ. ಇದರ ನಡುವೆಯೇ ಹುದ್ದೆ ಗಿಟ್ಟಿಸಿರುವ ಶಿಫಾರಸು ವೀರರಿಗೆ ಇಂದು ಬೆಳಗ್ಗೆ ತರಾತುರಿಯಲ್ಲಿ ನೇಮಕಾತಿ ಪತ್ರ ನೀಡಿ, ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಳ್ಳಲಾಗಿದೆ.
ಹುದ್ದೆ ಹಂಚಿಕೆಯಲ್ಲಿ ಕಾಂಗ್ರೆಸ್ ಪಕ್ಷದವರಿಗೇ ಸಿಂಹಪಾಲು ಸಿಕ್ಕಿರುವುದು, ಅದರಲ್ಲಿ ಸ್ವತಃ ಕೆಪಿಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಪಾಲು ಹೊಂದಿರುವುದು ಕಾಂಗ್ರೆಸ್ ಸರಕಾರದ ಜಾಣದ ಕಿವುಡುತನಕ್ಕೆ ಕಾರಣ ಆಗಿದೆ.
ಮಾಜಿ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಪ್ರತಿಪಕ್ಷ ನಾಯಕರು ದನಿಯೆತ್ತಿ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡುತ್ತಿದ್ದರೂ ರಾಜ್ಯ ಸರಕಾರ ಕೇಳಿಸಿಕೊಳ್ಳುತ್ತಿಲ್ಲ. ಹುದ್ದೆಗಳ ಹಂಚಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೇ ಭರ್ಜರಿ ಫಸಲು ಸಿಕ್ಕಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಈ ಬಗ್ಗೆ ಸಹಕಾರ ಇಲಾಖೆಯ ಉನ್ನತ ಮೂಲವೊಂದರ ಪ್ರಕಾರ; ನೇಮಕಾತಿ ಅಕ್ರಮದ ತನಿಖೆಗೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಾಲಿ, ಮಾಜಿ ಶಾಸಕರೇ ಅಡ್ಡಗಾಲು ಹಾಕುತ್ತಿದ್ದು, ಆ ಪಕ್ಷದ ಪ್ರಭಾವಿಗಳೆಲ್ಲ ಒಂದೇ ಸ್ವರದಲ್ಲಿ, ಯಾವುದೇ ಕಾರಣಕ್ಕೂ ತನಿಖೆ ಬೇಡವೇ ಬೇಡ ಎಂದು ರಾಗ ಎಳೆಯುತ್ತಿದ್ದಾರೆಂದು ಗೊತ್ತಾಗಿದೆ.
ಲಭ್ಯವಾಗಿರುವ ದಾಖಲೆಗಳ ಪ್ರಕಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಕೆಎಂಎಫ್ ಅಧಿಕಾರಿಗಳು ಕೋಚಿಮುಲ್ ಹುದ್ದೆಗಳನ್ನು ಹಂಚಿಕೆ ಮಾಡಿಕೊಂಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಡೆದಿರುವ ಅತಿದೊಡ್ಡ ನೇಮಕಾತಿ ಹಗರಣ ಇದಾಗಿದೆ.
ಪ್ರಕಟವಾಗುವುದಕ್ಕೆ ಮೊದಲೇ ಸೋರಿಕೆ ಆಗಿರುವ ಆಯ್ಕೆ ಪಟ್ಟಿ ಪ್ರಕಾರ ಸಹಾಯಕ ವ್ಯವಸ್ಥಾಪಕ (1 ಹುದ್ದೆ) ಹಾಗೂ ವಿಸ್ತರಣಾಧಿಕಾರಿ-ದರ್ಜೆ 3 (1 ಹುದ್ದೆ) ಒಂದು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರಿನ ಪಕ್ಕದಲ್ಲಿ ಶಿಫಾರಸು ಮಾಡಿದವರ ಹೆಸರನ್ನು ಉಲ್ಲೇಖ ಮಾಡಲಾಗಿದೆ. ಅಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಕೈಬರಹದಲ್ಲಿ ಬರೆಯಲಾಗಿದೆ.
ತಾಂತ್ರಿಕ ಅಧಿಕಾರಿಯ ಒಂದು ಹುದ್ದೆ, ವ್ಯವಸ್ಥಾಪಕರ ಒಂದು ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿ ಹೆಸರಿನ ಮುಂದೆ ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕರ ಹೆಸರನ್ನು ಬರೆಯಲಾಗಿದೆ. ಅಲ್ಲಿಗೆ ಈ ಹುದ್ದೆಗಳೆರಡೂ ಇವರ ಪಾಲಾಗಿವೆ ಎಂದರ್ಥ.
ಸಿಕೆನ್ಯೂಸ್ ನೌ ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಎಲ್ಲಾ ಹುದ್ದೆಗಳನ್ನು ಹಂಚಿಕೊಳ್ಳುವ ಬಗ್ಗೆ ಹಾಗೂ ಕಾಂಗ್ರೆಸ್ ಪಕ್ಷದ ಪ್ರಭಾವೀ ಕುಳಗಳ ಡಿಮಾಂಡುಗಳ ಬಗ್ಗೆ, ಅವರು ಕೊಟ್ಟಿರುವ ಶಿಫಾರಸು ಪತ್ರಗಳ ಬಗ್ಗೆ ಕೋಚಿಮುಲ್ ಆಡಳಿತ ಮಂಡಳಿ ಸಭೆಗಳಲ್ಲಿ ವಿಸ್ತೃತವಾಗಿ ಚರ್ಚೆ ನಡೆದಿದೆ. ಈ ಅಕ್ರಮ ನಡೆಸುವ ಬಗ್ಗೆ ಯಾವುದೇ ಎಗ್ಗು, ಲಜ್ಜೆ ಇಲ್ಲದೆ ಸಮಾಲೋಚನೆ ನಡೆಲಾಯಿತು ಎಂದು ಕೋಚಿಮುಲ್ ಮೂಲವೊಂದು ಮಾಹಿತಿ ನೀಡಿದೆ.
ಯಾರ ಯಾರ ಹೆಸರಿದೆ?
ಸಹಾಯಕ ಹುದ್ದೆಗೆ ಆಯ್ಕೆ ಆಗಿರುವ ಚೆನ್ನಕೇಶವ ರೆಡ್ಡಿ ಹೆಸರಿನ ಹಿಂದೆ ಬಾಬು, JK ಎಂದು ಕೈ ಬರಹದಲ್ಲಿ ಬರೆಯಲಾಗಿದೆ. ಇದೇ ಹುದ್ದೆಯ ಪಟ್ಟಿಯಲ್ಲಿ ರವಿಶಂಕರ್ ವೈ.ವಿ., ಅದರ ಮುಂದಿನ ಕಾಲಂನಲ್ಲಿರುವ ಶ್ರೀ ಜೈಸಿಂಹಕೃಷ್ಣಪ್ಪ ಹೆಸರುಗಳನ್ನು ಪೆನ್ನಿನಿಂದ ಗೀಚಿ ಅಳಿಸಲಾಗಿದೆ. ಅದರ ಕೆಳಗೆ ಶರತ್ ಕುಮಾರ್ ಎನ್ನುವ ಹೆಸರಿನ ಮೇಲೆ ಪೆನ್ನಿನಿಂದ ಗೀಚಿ ಆದಿನಾರಾಯಣ ರೆಡ್ಡಿ ಎಂದು ಬರೆಯಲಾಗಿದೆ.
ಅದರ ಮುಂದಿನ ಪುಟದಲ್ಲಿ ಆದರ್ಶ ರಾಮಪ್ಪ ಬಂಡಾಯಿ-122 ಹೆಸರಿನ ಪಕ್ಷದಲ್ಲಿ ಇಂಗ್ಲೀಷ್ ನಲ್ಲಿDK ಎಂದು ಕೈ ಬರಹದಲ್ಲಿ ಬರೆದು ಬ್ರಾಕೆಟ್ ನಲ್ಲಿ (ಡಿ.ಕೆ.ಸಿ) ಶ್ರೀ ಜೈಸಿಂಹಕೃಷ್ಣಪ್ಪ ಎಂದು ಟೈಪ್ ಮಾಡಲಾಗಿದೆ.
ಮುಂದಿನ ಪುಟದಲ್ಲಿರುವ ತಾಂತ್ರಿಕ ಅಧಿಕಾರಿ (ಡಿ.ಟಿ.) ಸಿಂಧು -122 ಹೆಸರಿನ ಹಿಂದೆ ಮುಂದೆ ಇಂಗ್ಲೀಷ್ ನಲ್ಲಿ SN ಎಂದು ಕೈ ಬರಹದಲ್ಲಿ ಬರೆಲಾಗಿದೆ. ಇಲ್ಲಿ SN ಎಂದರೆ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಎಂದು ಹೇಳಲಾಗಿದೆ.
ಅದೇ ಪಟ್ಟಿಯಲ್ಲಿ ಇನ್ನು ಸ್ಪಲ್ಪ ಕೆಳಕ್ಕೆ ಬಂದ ಮೌನಿಕಾ-90 ಎನ್ನುವ ಹೆಸರಿನ ಮುಂದೆ ಇಂಗ್ಲೀಷ್ ನಲ್ಲಿ Ramesh kumar sir ಎಂದು ಕೈ ಬರಹದಲ್ಲಿ ಬರೆಯಲಾಗಿದೆ.
ಮುಂದುವರೆದು; ವಿಸ್ತರಣಾಧಿಕಾರಿ ದರ್ಜೆ-3 ಪಟ್ಟಿಗೆ ಬಂದರೆ ವಿನೋದ್ ಕುಮಾರ್ ಜಿ. ಎನ್ನುವ ಹೆಸರಿನ ಮುಂದೆ ಸ್ಪಷ್ಟವಾಗಿ Dy CM ಎಂದು ಕೈ ಬರಹದಲ್ಲಿ ಬರೆದು ಶ್ರೀ ಜೈಸಿಂಹಕೃಷ್ಣಪ್ಪ ಹೆಸರನ್ನು ಟೈಪಿಸಲಾಗಿದೆ.
ಇನ್ನು ಸ್ವಲ್ಪ ಕೆಳಕ್ಕೆ ಹೋದರೆ, ಇದೇ ಹುದ್ದೆ ಮಂಜುನಾಥ ವಿ. ಎನ್ನುವ ಹೆಸರನ್ನು ಸೇರಿಸಲಾಗಿದ್ದು, ಅದರ ಹಿಂದೆ JK ಎಂದು ಕೈಯ್ಯಲ್ಲಿ ಬರೆದು ಮುಂದೆ ಶ್ರೀ ಜೈಸಿಂಹಕೃಷ್ಣಪ್ಪ ಎಂದು ಟೈಪ್ ಮಾಡಲಾಗಿದೆ.
ಹುದ್ದೆಯ ಹಂಚಿಕೆ, ಬಿಕರಿ ಹೇಗೆ?
ಕೋಚಿಮುಲ್ ಹುದ್ದೆಗಳನ್ನು ಹಂಚಿಕೊಳ್ಳುವ ಹಾಗೂ ಬಿಕರಿ ಮಾಡಿಕೊಳ್ಳುವ ಬಗ್ಗೆ ಕೋಚಿಮುಲ್ ಮಹಾನ್ ಕಳ್ಳಾಟ ನಡೆಸಿದೆ. ಹುದ್ದೆಯ ಮೂಲ ವೇತನ (ಬೇಸಿಕ್) ಆಧಾರವಾಗಿ ಇಟ್ಟುಕೊಂಡು ಹುದ್ದೆಗಳನ್ನು ಮಾರಾಟ ಮಾಡಲಾಗಿದೆ. ಪ್ರತೀ ಹುದ್ದೆಯನ್ನು ಬರೋಬ್ಬರಿ 40 ಲಕ್ಷ ರೂಪಾಯಿಗೆ ಬಿಕರಿ ಮಾಡಲಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.
ಹುದ್ದೆ ಹಂಚಿಕೆ, ಮಾರಾಟದಲ್ಲಿ ಕೋಚಿಮುಲ್ ನಿರ್ದೇಶಕರು, ಅಧಿಕಾರಿಗಳ ನಡುವೆ ದೊಡ್ಡ ಯುದ್ಧವೇ ನಡೆದಿದೆ. ಯಾರಿಗೆ ಹಂಚಿಕೆ ಭಾಗ್ಯ ಸಿಕ್ಕಿಲ್ಲವೋ ಅವರು ಈ ಹಗರಣವನ್ನು ಬಯಲು ಮಾಡಿದ್ದಾರೆ. ಈ ಒಳಜಗಳದ ಪರಿಣಾಮವಾಗಿಯೇ ಆಯ್ಕೆ ಪಟ್ಟಿ ಪ್ರಕಟಕ್ಕೆ ಮೊದಲೇ ಲೀಕ್ ಆಗಿರುವುದು ಕೋಚಿಮುಲ್ ಭ್ರಷ್ಟಕಾಂಡವನ್ನು ಬಯಲು ಮಾಡಿದೆ. ಇದು ಸರಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.
ಅಧಿಕಾರಿಗಳು ಶಾಮೀಲು
ಕೋಚಿಮುಲ್ ಅಕ್ರಮ ನೇಮಕಾತಿ ಹಗರಣದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿರುವ ಅಂಶ. ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ಇನ್ನೊರ್ವ ವ್ಯವಸ್ಥಾಪಕ ಹುದ್ದೆಯಲ್ಲಿರುವ ಆಸಾಮಿ ಹುದ್ದೆ ಹಂಚಿಕೆ ಹಾಗೂ ವಸೂಲಿ, ಬಟವಾಡೆಯ ಪ್ರಮುಖ ಪಾತ್ರಧಾರಿಗಳು ಎಂದು ಹೇಳಲಾಗಿದೆ. ಇತರೆ ಅಧಿಕಾರಿಗಳು ಆಯ್ಕೆ ಪಟ್ಟಿ ಸೋರಿಕೆ ಹಿಂದೆ ಇದ್ದಾರೆ ಎನ್ನುವುದು ಮತ್ತೊಂದು ಗಮನಾರ್ಹ ಅಂಶ.
ಕೋಚಿಮುಲ್ ಗೆ ಮಂಜೂರಾಗಿದ್ದ 273 ಹುದ್ದೆಗಳಿಗೆ ಕಳೆದ ಸೆಪ್ಟೆಂಬರ್ ನಲ್ಲಿ ಮೂರು ಹಂತದಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಎರಡು ಅಧಿಸೂಚನೆಗಳ ಹುದ್ದೆಗಳ ನೇಮಕಾತಿಗೆ ರಾಜ್ಯ ಹೈಕೋರ್ಟ್ ತಡೆ ನೀಡಿತ್ತು. ತಡೆ ಇಲ್ಲದ ಉಳಿದ 81 ಹುದ್ದೆಗಳಿಗೆ ನವೆಂಬರ್ 11ರಂದು ಕೋಲಾರದಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ವಿಚಿತ್ರ ಎಂದರೆ, ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಕೋಚಿಮುಲ್ ಈವರೆಗೂ ತನ್ನ ನಾಮಫಲಕದಲ್ಲಿ ಪ್ರಕಟ ಮಾಡಿಲ್ಲ. ಬದಲಿಗೆ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಆಯಾ ಅಭ್ಯರ್ಥಿಯ ಇ-ಮೇಲ್ ಗೆ ಕಳಿಸಲಾಗಿದೆ.
ಹೀಗೆ ಇ-ಮೇಲ್ ಕಳಿಸಿದ ಮೇಲೆ ಡಿಸೆಂಬರ್ 15, 16, 17, 18ರಂದು ಕೋಚಿಮುಲ್ 81 ಹುದ್ದೆಗಳಿಗೂ ನೇರ ನೇಮಕಾತಿ ಮಾಡಿಕೊಳ್ಳಲು ಸಂದರ್ಶನ ನಡೆಸಿದೆ. ಆದರೆ, ಲಿಖಿತ ಪರೀಕ್ಷೆ ಫಲಿತಾಂಶ, ಸಂದರ್ಶನ ಮುಗಿಯುವುದಕ್ಕೆ ಮುನ್ನವೇ ಕೋಚಿಮುಲ್ ಆಯ್ಕೆಪಟ್ಟಿ ಸಿದ್ಧ ಮಾಡಿಟ್ಟುಕೊಂಡಿದೆ. ಆಯ್ಕೆ ಪಟ್ಟಿಯಲ್ಲಿರುವ ಎಲ್ಲಾ 81 ಅಭ್ಯರ್ಥಿಗಳ ಹೆಸರು, ಅವರನ್ನು ಶಿಫಾರಸು ಮಾಡಿದವರ ಹೆಸರುಗಳೆಲ್ಲವೂ ಸೋರಿಕೆ ಆಗಿರುವ ಆಯ್ಕೆ ಪಟ್ಟಿಯಲ್ಲಿ ನಮೂದಿಸಲಾಗಿದೆ.
ಅಭ್ಯರ್ಥಿಗಳ ನೇರ ನೇಮಕಾತಿ ಆಯ್ಕೆ ಸಮಿತಿಗೆ (ಮೌಖಿಕ ಸಂದರ್ಶನ ಸಮಿತಿ) ಕೋಚಿಮುಲ್ ನಿರ್ದೇಶಕ ಕೆ,ಎನ್.ನಾಗರಾಜ್ (ಕಾಡೇನಹಳ್ಳಿ ನಾಗರಾಜ್) ಅಧ್ಯಕ್ಷ. ಅಲ್ಲದೆ, ಕೋಚಿಮುಲ್ ಅಧ್ಯಕ್ಷ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ಕೆಎಂಎಫ್ ನಿರ್ದೇಶಕ ಸುರೇಶ್ ಹಾಗೂ ಸಹಕಾರ ಸಂಘಗಳ ಅಪರ ನಿಬಂಧಕ (ಕೈಗಾರಿಕೆ-ಹೈನುಗಾರಿಕೆ) ಲಿಂಗರಾಜು ಅವರುಗಳು ಸದಸ್ಯರಾಗಿರುತ್ತಾರೆ.
ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿ ಐವರು ಅಭ್ಯರ್ಥಿಗಳನ್ನು ಮೌಖಿಕಸಂದರ್ಶನಕ್ಕೆ ಕರೆಯಲಾಗಿದೆ. ಆದರೆ, ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳ ಸಂದರ್ಶನ ಹಾಗೂ ಅವರು ಗಳಿಸಿದ ಅಂಕಗಳ ಪರೀಕ್ಷೆಯ ವ್ಯವಹಾರದ ಬಗ್ಗೆ ನಾನಾ ಸಂಶಯಗಳು ವ್ಯಕ್ತವಾಗಿವೆ. ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳು ಹತ್ತು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.
ಮೌಖಿಕ ಸಂದರ್ಶನದ ಅವಕಾಶವನ್ನೇ ಮಹಾ ಅವಕಾಶ ಮಾಡಿಕೊಂಡಿರುವ ಸದಸ್ಯರು, ತಮ್ಮ ವಿವೇಚನಾ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಮೊದಲೇ ಆಗಿದ್ದ ಹುದ್ದೆ ಹಂಚಿಕೆ, ಬಿಕರಿ ಒಪ್ಪಂದಕ್ಕೆ ಕಟ್ಟುಬಿದ್ದು ಅರ್ಹ ಅಭ್ಯರ್ಥಿಗಳಿಗೆ ಮೋಸ ಮಾಡಿದ್ದಾರೆ ಎಂದು ಅನೇಕ ಅಭ್ಯರ್ಥಿಗಳು ಆರೋಪ ಮಾಡಿದ್ದಾರೆ. ಸಿಕೆನ್ಯೂಸ್ ನೌ ಗೆ ಸಿಕ್ಕಿರುವ ಮಾಹಿತಿ ಪ್ರಕಾರ; ಲಿಖಿತ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಅಭ್ಯರ್ಥಿಗಳಿಗೆ ಕೊಚಿಮುಲ್ ನೇರ ಸಂದರ್ಶನಕ್ಕೆ ಕರೆದಿಲ್ಲ. ಕೋಟ್ಯಂತರ ರೂಪಾಯಿ ವ್ಯವಹಾರ ಕುದುರಿಸಿಕೊಂಡು ಅನರ್ಹ ಅಭ್ಯರ್ಥಿಗಳಿಗೆ ಫೇವರ್ ಮಾಡಲಾಗಿದೆ ಎಂದು ಅರ್ಹ ಅಭ್ಯರ್ಥಿಗಳು ನೇರ ಆರೋಪ ಮಾಡುತ್ತಿದ್ದಾರೆ.
ತರಾತುರಿಯಲ್ಲಿ ನೇಮಕಾತಿ ಆದೇಶ
ಅಕ್ರಮ ನೇಮಕಾತಿ ಬಯಲಿಗೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಕೋಚಿಮುಲ್ ಮತ್ತು ಸಹಕಾರ ಇಲಾಖೆ ಇಂದು ಬೆಳಗ್ಗೆಯೇ 76 ಶಿಫಾರಸು ವೀರರಿಗೆ ನೇಮಕಾತಿ ಪತ್ರಗಳನ್ನು ನೀಡಿ ಕೆಲಸಕ್ಕೆ ನಿಯೋಜಿಸಿದೆ.
ಅರ್ಹ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಬಹುದು ಎಂದು ಆತಂಕಗೊಂಡಿರುವ ಕೋಚಿಮುಲ್ ಮತ್ತು ಸಹಕಾರ ಇಲಾಖೆಗಳೆರಡೂ ಈ ಅಕ್ರಮದಲ್ಲಿ ನೇರ ಶಾಮೀಲಾಗಿವೆ. ನಿನ್ನೆ (ಮಂಗಳವಾರ) ರಾತ್ರಿ ತರಾತುರಿಯಲ್ಲಿ ಸಹಕಾರ ಸಂಘಗಳ ಅಪರ ನಿಬಂಧಕ (ಕೈಗಾರಿಕೆ-ಹೈನುಗಾರಿಕೆ) ಲಿಂಗರಾಜು ನೇಮಕಾತಿ ಪತ್ರಗಳಿಗೆ ಸಹಿ ಹಾಕಿದ್ದಾರೆ. ನೇಮಕಾತಿ ಆದೇಶ ಪಡೆದುಕೊಂಡಿರುವ ಅಭ್ಯರ್ಥಿಗಳೆಲ್ಲರೂ ಎದ್ದೆವೋ ಬಿದ್ದೆವೋ ಎಂದು ಬೆಳಗ್ಗೆಯಿಂದಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅನುಮಾನದ ಸಂಗತಿ ಎಂದರೆ, ಇಂದು ಹುದ್ದೆ ಗಿಟ್ಟಿಸಿ ಕರ್ತವ್ಯಕ್ಕೆ ಹಾಜರಾಗಿರುವ 76 ಅಭ್ಯರ್ಥಿಗಳ ಹೆಸರುಗಳನ್ನು ಹಾಗೂ ಅವರು ಗಳಿಸಿರುವ ಅಂಕಗಳನ್ನು ಈವರೆಗೂ ಕೋಚಿಮುಲ್ ಬಹಿರಂಗ ಮಾಡಿಲ್ಲ. ನೇಮಕಾತಿ ನಿಯಮಗಳ ಪ್ರಕಾರ ಆಯ್ಕೆಪಟ್ಟಿ ಜತೆಯಲ್ಲಿಯೇ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಬಹಿರಂಗ ಮಾಡಲೇಬೇಕು. ಆದರೆ, ಈ ಮಾಹಿತಿ ನೋಟೀಸ್ ಬೋರ್ಡ್ ನಲ್ಲಿ ಹಾಕುತ್ತೇವೆ ಎನ್ನುತ್ತಿರುವ ಕೋಚಿಮುಲ್ ಅಧ್ಯಕ್ಷ ಕೈ.ವೈ.ನಂಜೇಗೌಡ; ಇನ್ನೆರಡು ದಿನಗಳಲ್ಲಿ ಎಲ್ಲಾ ಗೊತ್ತಾಗುತ್ತದೆ ನೋಡಿ ಎಂದು ಬಾಯಿಮಾತಿನ್ಲಲಿ ಹೇಳುತ್ತಿದ್ದಾರೆ. ಆದರೆ, ಅಂಕ, ಆಭ್ಯರ್ಥಿಗಳ ಪಟ್ಟಿಯ ಬಗ್ಗೆ ಚಕಾರ ಎತ್ತುತ್ತಿಲ್ಲ.
ಈ ನಡುವೆ ಮಾಧ್ಯಮಗಳ ಜತೆ ಮಾತನಾಡಿರುವ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ; ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪಟ್ಟಿ ನಕಲಿ ಎಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿರುವ ಅವರು; ಸಂಸ್ಥೆಗೆ ಕೆಟ್ಟ ಹೆಸರು ತರುವ ಉದ್ದೇಶದಿಂದಲೇ ಕೆಲವರು ಹೀಗೆ ಮಾಡಿದ್ದಾರೆ ಎಂದು ದೂರಿದ್ದಾರೆ.
Comments 1