• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಅಟಲ್ ಎಂದರೆ ಅಜಾತಶತ್ರು

cknewsnow desk by cknewsnow desk
December 25, 2023
in GUEST COLUMN, NATION, STATE
Reading Time: 3 mins read
0
ಅಖಂಡ ಭಾರತದ ಅಷ್ಟದಿಕ್ಕುಗಳ ಆಮೂಲಾಗ್ರ ಅಭಿವೃದ್ಧಿಗೆ ಸುವರ್ಣ ಅಧ್ಯಾಯ ಬರೆದವರೇ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ

ವಾಜಪೇಯಿ

934
VIEWS
FacebookTwitterWhatsuplinkedinEmail

ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ, ಉತ್ತಮ ಆಡಳಿತ ದಿನ

by Dr.Gurupeasad Hawaldar

ಜಾಗತಿಕ ಮಟ್ಟದ ಶ್ರೇಷ್ಠ ನಾಯಕರ ಸಾಲಿನಲ್ಲಿ ಗೌರವಿಸಲ್ಪಡುವ  ನಿಸ್ವಾರ್ಥ ರಾಜಕಾರಣಿ, ಕವಿ, ಪತ್ರಕರ್ತ, ವಾಗ್ಮಿ, ಚಿಂತಕ, ದಾರ್ಶನಿಕ, ಸಹೃದಯಿ, ನುಡಿದಂತೆ ನಡೆದ ಮಾನವತಾವಾದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಇಂದು.

ಅವರ ಜನ್ಮದಿನವನ್ನು  ಕೇಂದ್ರ ಸರ್ಕಾರ ‘ಉತ್ತಮ ಆಡಳಿತ ದಿವಸ’ (Good Governance Day) ಎಂದು ಭಾರತಾದ್ಯಂತ 2014ರಿಂದ ಆಚರಿಸಲಾಗುತಿದೆ.

ವಾಜಪೇಯಿ ಅವರು 1924 ಡಿಸೆಂಬರ್ 25ರಂದು ಮಧ್ಯಪ್ರದೇಶದ ಗ್ವಾಲಿಯರ್ ಹತ್ತಿರದ ‘ಶಿಂದೆ ಕಿ ಚವ್ವಾಣಿ’ ಗ್ರಾಮದಲ್ಲಿ ಶ್ರೀ ಕೃಷ್ಣಬಿಹಾರಿ ವಾಜಪೇಯಿ ಮತ್ತು ಶ್ರೀಮತಿ ಕೃಷ್ಣದೇವಿ ದಂಪತಿಯ ಮಗನಾಗಿ ಜನಿಸಿದರು.

ಅವರ ತಂದೆಯವರು ಶಾಲಾ ಶಿಕ್ಷಕರು ಹಾಗೂ ಕವಿಯಾಗಿದ್ದರು. ಪ್ರೌಢ ವಿದ್ಯಾಭ್ಯಾಸದ ನಂತರ ಗ್ವಾಲಿಯರ್ ವಿಕ್ಟೊರಿಯಾ ಕಾಲೇಜ್ (ಈಗ ಲಕ್ಷ್ಮೀಬಾಯಿ ಕಾಲೇಜು) ನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪದವಿಯನ್ನು ಪಡೆದರು. ಕಾನ್ಪುರದ ದಯಾನಂದ್ ಆಂಗ್ಲೋ ವೇದಿಕ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಸ್ನಾತಕೋತರ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಗಳಿಸಿದರು.

1939ರಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸ್ವಯಂ ಸೇವಕನಾಗಿ ಪಡೆದ ಅವರು, 1940-44ರ ಅವಧಿಯಲ್ಲಿ ಪ್ರರ್ಣಾವಧಿಯ ಕಾರ್ಯಕರ್ತರಾದರು. ನಂತರ ವಿಸ್ತಾರಕ್ (ಪ್ರಾಚಾರಕ) ರಾಗಿ ಬಡ್ತಿ ಪಡೆದರು. ಜೊತೆಯಲ್ಲಿ ದೀನ್ ದಯಾಳ್ ಉಪಾದ್ಯಾಯರವರ ಹಿಂದಿ ಮಾಸಿಕ ‘ಪಾಂಚಜನ್ಯ’ ಹಿಂದಿ ವಾರಪತ್ರಿಕೆ ‘ಸ್ವದೇಶ್’ ವೀರ ಅರ್ಜುನ್ ದಿನಪತ್ರಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಡರು.

ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂದು ದೇಶದಾದ್ಯಂತ 1942ರಲ್ಲಿ ಆರಂಭವಾಗಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಅಟಲ್ ಅವರು ತಮ್ಮ ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಬ್ರಿಟೀಷರ ವಿರುದ್ದದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ 23 ದಿನಗಳ ಕಾಲ ಜೈಲುವಾಸವನ್ನು ಅನುಭವಿಸಬೇಕಾಯಿತು.

1951ರಲ್ಲಿ ಜನಸಂಘ ಹಿಂದೂ ಬಲಪಂಕ್ತಿಯ ರಾಜಕೀಯ ಪಕ್ಷದಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ನಂತರ 1953ರಲ್ಲಿ ಭಾರತೀಯ ಜನಸಂಘದ ಮೂಲಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪರಿಚಯವಾಯಿತು.

ಸಂಸತ್ ಪ್ರವೇಶ

1957ರಲ್ಲಿ ಮೊದಲ ಬಾರಿಗೆ ವಾಜಪೇಯಿ ಅವರು ಲೋಕಸಭೆಯ ಸದಸ್ಯರಾಗಿ ಆಯ್ಕೆಯಾದರು. ನಂತರದ ದಿನಗಳಲ್ಲಿ ಇವರ ಚತುರತೆಯನ್ನು ಕಂಡು ನೆಹರೂ ಒಮ್ಮೆ  ಹೇಳಿದ್ದರಂತೆ, ಈ ವ್ಯಕ್ತಿ ಮುಂದೆ ದೇಶದ ಪ್ರಧಾನಿ ಆಗುತ್ತಾರೆ ಎಂದು.

ಅವರು ತಮ್ಮ ಅಸಾಮಾನ್ಯ ಬುದ್ದಿವಂತಿಕೆಯಿಂದಾಗಿ ಜನ ಸಾಮಾನ್ಯರಲ್ಲಿ ಭಾರತೀಯ ಜನಸಂಘ ಎನ್ನುವ ಹೆಸರನ್ನೇ ಕೇಳದ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಿ ಬೆಳೆಸಿದರು. ಅದಕ್ಕೆ ಹೆಗಲು ಕೊಟ್ಟವರು ಲಾಲ್ ಕೃಷ್ಣ ಅಡ್ವಾಣಿ, ನಾನಾಜಿ ದೇಶಮುಖ್ ಹಾಗೂ ಬಾಲರಾಜ್ ಮಧೋ.. ನಂತರ ದೀನದಯಾಳ್ ಉಪಾದ್ಯಾಯರವರ ನಿಧನದ ನಂತರ ಜನಸಂಘದ ನಾಯಕತ್ವ ವಾಜಪೇಯಿಯವರ ಹೆಗಲಿಗೆ ಬಂತು.

1968ರ ಸಮಯದಲ್ಲಿ ಎಲ್.ಕೆ.ಅದ್ವಾನಿಯವರು ಇವರ ಜತೆಗೂಡಿದರು.1975-77ರ ಅವಧಿಯ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸೆರೆವಾಸ ಅನಿಭವಿಸಿದರು ವಾಜಪೇಯಿ.1977ರಲ್ಲಿ ಜಯಪ್ರಕಾಶ್ ನಾರಾಯಣ ಅವರ ಮಾರ್ಗದರ್ಶನದಲ್ಲಿ ಜನಸಂಘ ಮತ್ತು ಇನ್ನಿತರ ಪಕ್ಷಗಳು ವಿಲೀನವಾಗಿ ‘ಜನತಾ ಪಕ್ಷ’ ಉದಯವಾಯಿತು. ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಗಳಿಸಿದ ಜನತಾಪಕ್ಷ ಅಧಿಕಾರಕ್ಕೆ ಬಂದು ಮೋರಾರ್ಜಿ ದೇಸಾಯಿ ಪ್ರಧಾನಮಂತ್ರಿಯಾದರು. ವಾಜಪೇಯಿಯವರು ವಿದೇಶಾಂಗ ಸಚಿವರಾದರು.

ವಿಶ್ವಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಹಿಂದಿಯಲ್ಲಿ ಭಾಷಣ ಮಾಡಿದ ನಂತರ ಭಾರತದ ವಿದೇಶಾಂಗ ನೀತಿಯಲ್ಲಿ ಹೆಚ್ಚಿನ ಬಲ ಪಡೆದು ಭಾರತದ ಹೆಸರಿಗೆ ಗೌರವ ದೊರೆಯುವಂತಾಯಿತು.1980ರಲ್ಲಿ ಜನತಾ ಪಕ್ಷ ಭಾರತೀಯ ಜನತಾಪಕ್ಷವಾಗಿ ರೂಪುಗೊಂಡಿತು. ಭಾರತೀಯ ಜನತಾಪಕ್ಷದ ಪ್ರಥಮ ರಾಷ್ಟ್ರೀಯ ಅಧ್ಯಕ್ಷರಾಗಿ ಜವಬ್ದಾರಿ ವಹಿಸಿಕೊಂಡರು.

ಇಂದಿರಾ ಗಾಂಧಿ ಮತ್ತು ನಂತರದ ಪ್ರಧಾನಮಂತ್ರಿಗಳ ಅವಧಿಯಲ್ಲಿ ವಿರೋಧಪಕ್ಷದ ನಾಯಕರಾಗಿ ಪಾರ್ಲಿಮೆಂಟಿನಲ್ಲಿ ಪ್ರಜಾಪ್ರಭುತ್ವದ ಘನತೆ ಗೌರವವನ್ನು ಎತ್ತಿಹಿಡಿದರು. ಇವರ ಕಾರ್ಯವೈಖರಿಗೆ ಆಡಳಿತ ಪಕ್ಷವು ತಲೆಬಾಗಿ ಗೌರವಿಸುತ್ತಿದ್ದದ್ದು ಅಂದಿನ ದಿನಗಳಲ್ಲಿ ಎದ್ದು ಕಾಣುತ್ತಿತ್ತು.

ಪ್ರಧಾನಿಯಾಗಿ ವಾಜಪೇಯಿ

ಅಕ್ಟೋಬರ್ 13, 1999ರಲ್ಲಿ ಹೊಸ ಸಮ್ಮಿಶ್ರ ಸರ್ಕಾರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‍ಡಿಎ) ಮುಖ್ಯಸ್ಥರಾಗಿ ಎರಡನೇ ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು ವಾಜಪೇಯಿ. 1996ರಲ್ಲಿ ಅವರು ಅಲ್ಪಾವಧಿಗೆ ಪ್ರಧಾನಮಂತ್ರಿಯಾಗಿದ್ದರು. ಪಂಡಿತ್ ಜವಾಹರ್ ಲಾಲ್ ನೆಹರು ಅವರ ನಂತರ ಸತತ ಎರಡು ಬಾರಿ ಸೇವೆ ಸಲ್ಲಿಸಿದ ಪ್ರಥಮ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಭಾರತದ 11ನೇ ಪ್ರಧಾನಮಂತ್ರಿಯಾದರು.

ಲೋಕಸಭೆಯಲ್ಲಿ ಬಹುಮತ ಸಾಬಿತುಪಡಿಸುವಲ್ಲಿ ವಿಫಲರಾಗಿ ಕೇವಲ ಹದಿಮೂರು ದಿನದಲ್ಲೇ ರಾಜಿನಾಮೆ ನೀಡಬೇಕಾಯಿತು.1998ರಲ್ಲಿ ನಡೆದ ಸಾರ್ವರ್ತಿಕ ಚುನಾವಣೆಯಲ್ಲಿ ಮತ್ತೊಮ್ಮೆ ಎನ್.ಡಿ.ಎ. ಪಕ್ಷಗಳ ಸಹಕಾರದೊಂದಿಗೆ ದ್ವಿತೀಯ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 1999ರಲ್ಲಿ ಮತ್ತೊಮ್ಮೆ ರಾಜಕೀಯ ಚದುರಂಗದಾಟದಲ್ಲಿ ಎ.ಐ.ಡಿ.ಎಂ.ಕೆ. ತನ್ನ ಬೆಂಬಲ ಹಿಂಪಡೆದ ಪರಿಣಾಮವಾಗಿ ಲೋಕಸಭೆ ವಿಸರ್ಜನೆಯಾಯಿತು.

1999ರಲ್ಲಿ ನಡೆದ ಚುನಾವಣೆಯಲ್ಲಿ ವಾಜಪೇಯಿ ಅವರು ಮೂರನೆಯ ಬಾರಿಗೆ ಪ್ರಧಾನಮಂತ್ರಿಯಾಗಿ 2004ರ ವರೆಗೆ ಪೂರ್ಣ ಅವಧಿಯ ಆಡಳಿತವನ್ನು ನಡೆಸಿದರು.

ವಾಜಪೇಯಿಯವರ ಕೊಡುಗೆ

ಬಹುದೂರದರ್ಶಿತ್ವ ಹೊಂದಿದ ವಾಜಪೇಯಿಯವರು ತಮ್ಮ ಆಡಳಿತದ ಅವಧಿಯಲ್ಲಿ ಹಾಕಿಕೊಂಡ ಬೃಹತ್ ಯೋಜನೆಗಳು ಅನುಷ್ಠಾನಗೊಂಡು ವಿಶ್ವ ದಾಖಲೆಯನ್ನು ನಿರ್ಮಿಸಿದೆ.1998 ಮೇ ತಿಂಗಳಿನಲ್ಲಿ ರಾಜಸ್ಥಾನ್ – ಪೊಕ್ರಾನ್ ನಲ್ಲಿ ಭೂಮಿಯ ಅಡಿಯಲ್ಲಿ ನಡೆಸಿದ ಅಣ್ವಸ್ತ್ರ ಪರೀಕ್ಷೆ,ಗೂಢಚಾರಿಕೆ ನಡೆಸುತ್ತಿದ್ದ ಅಮೆರಿಕದ ಸ್ಯಾಟಲೈಟ್ ಕ್ಯಾಮೆರಾಗಳ ಕಣ್ತಪ್ಪಿಸಿ ಪೋಖ್ರಾನ್ ನೆಲದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಲು ಭಾರತದ ವಿಜ್ಞಾನಿಗಳು, ಯೋಧರು ಹಗಲಿರುಳು ಶ್ರಮಿಸುತ್ತಿದ್ದರು.

ಈ ಮಹಾನ್ ಕಾರ್ಯಕ್ಕೆ ರಾಜಕೀಯ ಇಚ್ಛಾಶಕ್ತಿ ಅತ್ಯಗತ್ಯವಾಗಿತ್ತು. ಅತ್ಯಂತ ರಹಸ್ಯವಾಗಿ ನಡೆದ ಪೋಖ್ರಾನ್ ಕಾರ್ಯಾಚರಣೆಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪ್ರೇರಕ ಶಕ್ತಿಯಾಗಿ ನಿಂತರು.

ರಾಜಸ್ಥಾನದ ಮರಳುಗಾಡಿನ ಬೇಸಿಗೆಯ ಅತ್ಯಂತ ಕಠಿಣ ಸಮಯ, 1998ರ ಮೇ 11ರಂದು ಮಧ್ಯಾಹ್ನ 3:45ಕ್ಕೆ ಅಣ್ವಸ್ತ್ರ ಸಾಧನ ಪರೀಕ್ಷೆ ಪೋಖ್ರಾನ್ ಭೂಗರ್ಭದಲ್ಲಿ ಯಶಸ್ವಿಯಾಗಿತ್ತು. 24 ವರ್ಷಗಳ ನಂತರ ಭಾರತ ಪೋಕ್ರಾನ್- 1, ಪೋಕ್ರಾನ್-2 ಪರೀಕ್ಷೆಯಲ್ಲಿ ಗಳಿಸಿದ ಯಶಸ್ಸು ಕಂಡು ರಷ್ಯ, ಫ್ರಾನ್ಸ್, ಅಮೆರಿಕ, ಕೆನಡಾ, ಜಪಾನ್, ಬ್ರಿಟನ್, ಯೂರೋಪ್ ರಾಷ್ಟ್ರಗಳು ಬೆಕ್ಕಸ ಬೆರಗಾಗಿ ನೋಡುವಂತೆ ಮಾಡಿತ್ತು.

ಐತಿಹಾಸಿಕ ಲಾಹೋರ್ ಒಪ್ಪಂದ

ಆಕಸ್ಮಿಕ ಮತ್ತು ಅನಧಿಕೃತ ಅಣ್ವಸ್ತ್ರ ಬಳಕೆ ತಡೆಗೆ ಎರಡೂ ರಾಷ್ಟ್ರಗಳು ಮಾಡಿಕೊಂಡ ಮಹತ್ವದ ಒಪ್ಪಂದ ಇದು. 1999ರ ಫೆಬ್ರುವರಿ 21ರಂದು ಲಾಹೋರ್ ನಲ್ಲಿ ನಡೆದಿದ್ದ ಶೃಂಗಸಭೆಯಲ್ಲಿ ವಾಜಪೇಯಿ ಮತ್ತು ನವಾಜ್ ಶರೀಫ್ ಈ ಒಪ್ಪಂದಕ್ಕೆ ಸಹಿ ಹಾಕಿದರು. ಜತೆಗೆ, 1998ರಲ್ಲಿ ಉಭಯ ರಾಷ್ಟ್ರಗಳು ಮಾಡಿಕೊಂಡಿದ್ದ ಅಣ್ವಸ್ತ್ರ ಅತಿಕ್ರಮಣ ತಡೆ ಒಪ್ಪಂದವನ್ನು (ಎನ್ಎನ್ಎಎ) ಮುಂದುವರಿಸಿಕೊಂಡು ಹೋಗಲೂ ನಿರ್ಧರಿಸಲಾಯಿತು. ಈ ಒಪ್ಪಂದಕ್ಕೆ ಅಂತಾರಾಷ್ಟ್ರೀಯ ಸಮುದಾಯದಿಂದ ಶ್ಲಾಘನೆ ವ್ಯಕ್ತವಾಯಿತು.

ಇತ್ತ ಭಾರತದಲ್ಲಿ ವಾಜಪೇಯಿ ಸರಕಾರದ ಜನಪ್ರಿಯತೆ ಹೆಚ್ಚಾಯಿತು. ರಾಜಕೀಯವಾಗಿ ತಾನೊಬ್ಬ ಗಟ್ಟಿ ನಿಲುವಿನ ವ್ಯಕ್ತಿ ಎಂಬುದನ್ನೂ ಈ ಒಪ್ಪಂದದ ಮೂಲಕ ವಾಜಪೇಯಿ ತೋರಿಸಿಕೊಟ್ಟರು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿತ್ತು. ಕಾರ್ಗಿಲ್ ಕದನ1999ರಲ್ಲಿ ಅನೀರಿಕ್ಷಿತ ಕಾರ್ಗಿಲ್ ಯುದ್ಧ ಘೋಷಣೆಯಾದಾಗ ‘ಅಪರೇಶನ್ ವಿಜಯ್’ ಮೂಲಕ ಶತ್ರುಪಡೆಗಳನ್ನು ಹಿಮ್ಮೆಟಿಸಿ, ಆಕ್ರಮಿತ ನೆಲವನ್ನು ಸ್ವಾದೀನಪಡಿಸಿಕೊಂಡು ಜಯ ಸಾಧಿಸಿದ್ದು. ಭಾರತೀಯರಲ್ಲಿ ಸೇನೆಯ ಬಗ್ಗೆ ಅಭಿಮಾನ, ಗೌರವ ಹಿಮ್ಮಡಿಯಾಗಿ ಮೂಡಿಸಿ, ದೇಶ ಭಕ್ತಿ ಜಾಗೃತಿ ಗೊಳಿಸಿದ್ದು ವಾಜಪೇಯಿಯವರ ಸಾಧನೆಯನ್ನು ಭಾರತೀಯರು ಎಂದೆಂದಿಗೂ ಮರೆಯಲಾರರು.

1999ರಲ್ಲಿ ಇಂಡಿಯನ್ ಏರ್ ಲೈನ್ಸ್ ವಿಮಾನ ಅಪಹರಿಸಿದ ಸಂದರ್ಭದಲ್ಲಿ, ಬೇಡಿಕೆಗೆ ಒಪ್ಪಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ತಾಯಿನಾಡಿಗೆ ಕರೆತಂದ ಸಾಹಸ ಇವರದ್ದು. 2000ರಲ್ಲಿ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದ್ದು, 22 ವರ್ಷಗಳ ನಂತರ ಅಮೇರಿಕಾ ಅಧ್ಯಕ್ಷರ ಭೇಟಿಯು ಭಾರತ, ಅಮೆರಿಕ, ಸ್ನೇಹ ಭಾಂದವ್ಯ ವೃದ್ಧಿಗೊಂಡಿದು ಭಾರತದ ಗೌರವಕ್ಕೆ ಇನ್ನಷ್ಟು ಹೆಚ್ಚಿನ ಮಾನ್ಯತೆ ದೊರೆಯುವಂತಾಗಿದ್ದು ಇಡಿ ವಿಶ್ವ ಗೌರವ ನೀಡುವಂತಾಯಿತು.

ದೇಶದ ನಾಲ್ಕು ಮೂಲೆಗಳಿಗೂ ಸಂಪರ್ಕ ಕಲ್ಪಿಸುವ 15ಸಾವಿರ ಕಿ.ಮಿ. ಉದ್ದದ ‘ಸುವರ್ಣ ಚತುಷ್ಪತ’ ಹೆದ್ದಾರಿಯನ್ನು ದಾಖಲೆಯ ಸಮಯದಲ್ಲೇ ಪೂರ್ತಿಗೊಳಿಸಿದ ಸಾಧನೆ ವಾಜಪೇಯಿಯವರದ್ದು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಳ್ಳಿ ಹಳ್ಳಿಗೂ ರಸ್ತೆಯನ್ನು ಒದಗಿಸಿದ್ದು ಇನ್ನೊಂದು ಸಾಧನೆ.2001ರಲ್ಲಿ ‘ಸರ್ವ ಶಿಕ್ಷಣ ಅಭಿಯಾನ’ ಪ್ರಾರಂಭಿಸಿ ಪ್ರಾಥಮಿಕ, ಪ್ರೌಢಶಾಲಾ ಮಟ್ಟದ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸುವ ಯೋಜನೆಯನ್ನು ಹಾಕಿ ಕಾರ್ಯರೂಪಕ್ಕೆ ತಂದಿರುವುದು. ‘ಸರ್ವಶಿಕ್ಷಣ ಅಭಿಯಾನ’ ದೇಶದ ಎಲ್ಲಾ ಭಾಗದಲ್ಲಿರುವ ಶಾಲೆಗಳಿಗೆ ಹೋಗಲಾಗದ ಮಕ್ಕಳನ್ನು ‘ಸರ್ವ ಶಿಕ್ಷಣ ಅಭಿಯಾನ’ ಮೂಲಕ ಕಡ್ಡಾಯವಾಗಿ ಶಾಲೆಗೆ ಹೋಗಿ ಕಲಿಯುವ ಮೂಲಕ ಎಲ್ಲರೂ ಸಾಕ್ಷರರನ್ನಾಗಿ ಮಾಡುವ ಯೋಜನೆ ವಾಜಪೇಯಿಯವರು ದೂರದೃಷ್ಠಿ ಹೊಂದಿದ ನಾಯಕರಾಗಿದ್ದಾರೆ.

1951ರಿಂದ 2005 ರವರೆಗೆ ಹಲವಾರು ಪ್ರತಿಷ್ಠಿತ ಸಮಿತಿಗಳಿಗೆ ನಾಯಕತ್ವದ ಜವಬ್ಧಾರಿಯನ್ನು ವಹಿಸಿಕೊಂಡು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಸಾಧನೆ ಇವರದ್ದು.

ಸೋಲಿನಲ್ಲೂ ವಾಜಪೇಯಿ ಇತರರಿಗೆ ಮಾದರಿ .1984ರ ಲೋಕಸಭೆಯ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಅಟಲ್ ಅವರು ಗ್ವಾಲಿಯರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಮಾಧವರಾಯ್ ಸಿಂಧಿಯಾ ಅವರೊಂದಿಗೆ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಅಟಲ್ ಸೋತರೂ ಸೋತ ದುಃಖ ಅವರಲ್ಲಿ ಒಂದಿನಿತೂ ಇಲ್ಲದಂತೆ ಬಾಯ್ತುಂಬಾ ನಕ್ಕರು.

ಈ ನಗುವಿಗೆ ಕಾರಣವೇನು ಎಂದು ಅಟಲ್ ಅವರನ್ನು ಪ್ರಶ್ನಿಸಿದಾಗ, ನನ್ನ ಸೋಲಿಗೆ ನಾನು ಪಶ್ಚತ್ತಾಪಪಡುತ್ತಿಲ್ಲ. ಏಕೆಂದರೆ, ತಾಯಿ-ಮಗನ ಬಂಡಾಯವು ಬೀದಿಗೆ ಬರುವುದನ್ನು ತಪ್ಪಿಸಿದ್ದೇನೆ. ಗ್ವಾಲಿಯರ್ ನಿಂದ ನಾನು ಸ್ಪರ್ಧಿಸದೇ ಇದ್ದಿದ್ದರೆ ಮಾಧವರಾವ್ ಸಿಂಧಿಯಾ ವಿರುದ್ಧ ಅವರ ತಾಯಿ ರಾಜಮಾತೆ ಸ್ಪರ್ಧಿಸುತ್ತಿದ್ದರು. ಹಾಗಾಗುವುದು ನನಗೆ ಇಷ್ಟವಿರಲಿಲ್ಲ ಎಂದು ಅಟಲ್ ತಿಳಿಸಿದರು.

ಪಕ್ಷಾತೀತ ಗೌರವವಾಜಪೇಯಿ ಅವರನ್ನು ಎಲ್ಲ ಪಕ್ಷಗಳ ನಾಯಕರೂ ಗೌರವಿಸುತ್ತಿದ್ದರು. ‘ಅಜಾತಶತ್ರು’ ಎಂಬುದು ಅವರ ಬಗ್ಗೆ ಪಕ್ಷಾತೀತವಾಗಿ ಚಾಲ್ತಿಯಲ್ಲಿರುವ ಗೌರವ ಸೂಚಕ ಶಬ್ದ. ಇದು ಭಾರತಕ್ಕಷ್ಟೇ ಸೀಮಿತವಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಅವರು ಅಜಾತಶತ್ರುವೇ.

ದೇಶದ ಗಡಿಯಾಚೆಗೂ ಅವರು ಚಾಚಿದ್ದ ಸ್ನೇಹಹಸ್ತವೇ ಅದಕ್ಕೆ ಸಾಕ್ಷಿ. ಭಾರತದ ಬದ್ಧ ವೈರಿ ಎಂದೇ ಗುರುತಿಸಿಕೊಂಡು ಬಂದಿರುವ ಪಾಕಿಸ್ತಾನದ ಜತೆಗೂ ಬಾಂಧವ್ಯ ವೃದ್ಧಿಗೆ ಸಿಕ್ಕ ಸಣ್ಣ ಅವಕಾಶವನ್ನೂ ವಾಜಪೇಯಿ ಅವರು ನಿರ್ಲಕ್ಷಿಸುತ್ತಿರಲಿಲ್ಲ. ಇದಕ್ಕೆ ಹಲವು ನಿದರ್ಶನಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.

ತಮ್ಮ ನೇತೃತ್ವದಲ್ಲಿ ಆರಂಭಿಸಲಾಗಿದ್ದ ದೆಹಲಿ–ಲಾಹೋರ್ ಬಸ್ ಸಂಪರ್ಕವನ್ನು ಕಾರ್ಗಿಲ್ ಕದನ ನಡೆದಾಗಲೂ ಕಡಿದುಕೊಳ್ಳಲು ಅವರು ಮುಂದಾಗಿರಲಿಲ್ಲ. ಹೇಗಾದರೂ ಸರಿ, ನೆರೆ ರಾಷ್ಟ್ರದ ಜತೆ ಸ್ನೇಹದಿಂದ ಇರಬೇಕು ಎಂಬುದೇ ಅವರ ಆಶಯವಾಗಿತ್ತು.

‘ಭಾರತೀಯ ರಾಜಕೀಯಾ ರಂಗದ ಭೀಷ್ಮ ಪಿತಾಮಹ’ ಎಂದೇ ಕರೆಯಲ್ಪಡುತಿದ್ದರು. ವಾಜಪೇಯಿ 1957ರಿಂದಲೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರು. ಆದರೆ ಅವರು ಎಂದಿಗೂ ಸೋಲಲಿಲ್ಲ. ಅವರು ರಾಜಕೀಯದಲ್ಲಿ ಮಾನವ ಮೌಲ್ಯಗಳಿಗೆ ಒಲವು ತೋರಿದ್ದರು.

ಸ್ವಾತಂತ್ರ್ಯದ ನಂತರ ದೀರ್ಘಾವಧಿ ಆಳ್ವಿಕೆ ನಡೆಸಿದ್ದ ನೆಹರು-ಗಾಂಧಿ ಕುಟುಂಬದೊಂದಿಗೆ ಅಟಲ್ ಬಿಹಾರಿ ವಾಜಪೇಯಿ ಅವರ ಸಂಬಂಧ ಸಹಜವಾಗಿತ್ತು.ನೆಹರೂ ಅವರೊಂದಿಗಿನ ಸಂಬಂಧ1957ರಲ್ಲಿ ವಾಜಪೇಯಿ ಅವರು ಬಲರಾಂಪುರದ ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಬಂದಾಗ, ಅವರ ಭಾಷಣಗಳು ಆಗಿನ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರುಗೆ ಮೆಚ್ಚುಗೆ ಆಗಿದ್ದವು.

ಪಂಡಿತ್ ನೆಹರು ವಿದೇಶಾಂಗ ವ್ಯವಹಾರಗಳಲ್ಲಿ ವಾಜಪೇಯಿ ಅವರ ಅಪಾರ ಹಿಡಿತವನ್ನು ಮನಗಂಡರು. ಆ ಸಮಯದಲ್ಲಿ ವಾಜಪೇಯಿ ಅವರು ಲೋಕಸಭೆಯಲ್ಲಿ ಕೊನೆಯ ಬೆಂಚುಗಳಲ್ಲಿ ಕುಳಿತುಕೊಳ್ಳುತ್ತಿದ್ದರು. ಅದಾಗ್ಯೂ, ಪಂಡಿತ್ ನೆಹರೂ ಅವರ ಭಾಷಣಗಳಿಗೆ ಹೆಚ್ಚಿನ ಗಮನ ಕೊಡುತ್ತಿದ್ದರು.

ಹಿರಿಯ ಪತ್ರಕರ್ತ ಕಿಂಗ್ ಶುಕ್ ನಾಗ್, ನಾಯಕರ ಸಂಬಂಧಕ್ಕೆ ಸಂಬಂಧಿಸಿದ ಕೆಲ ವಿಷಯಗಳ ಬಗ್ಗೆ ತಮ್ಮ ಪುಸ್ತಕ ‘ಅಟಲ್ ಬಿಹಾರಿ ವಾಜಪೇಯಿ-ಎ ಮ್ಯಾನ್ ಫಾರ್ ಆಲ್ ಸೀಸನ್’ ನಲ್ಲಿ ಉಲ್ಲೇಖಿಸಿದ್ದಾರೆ. ವಾಸ್ತವವಾಗಿ, ಬ್ರಿಟೀಷ್ ಪ್ರಧಾನಿ ಭಾರತಕ್ಕೆ ಬಂದಾಗ, ಪಂಡಿತ್ ನೆಹರು ಅವರು ವಾಜಪೇಯಿ ಅವರನ್ನು ವಿಶೇಷ ಶೈಲಿಯಲ್ಲಿ ಪರಿಚಯಿಸಿದಾಗ, “ಅವರು ವಿಪಕ್ಷದ ಉದಯೋನ್ಮುಖ ಯುವ ನಾಯಕರು. ಯಾವಾಗಲೂ ನನ್ನನ್ನು ಟೀಕಿಸುತ್ತಾರೆ, ಆದರೆ ಇವರಲ್ಲಿ ನಾನು ಭವಿಷ್ಯದ ಅನೇಕ ಸಾಧ್ಯತೆಗಳನ್ನು ನೋಡುತ್ತಿದ್ದೇನೆ” ಎಂದು ಹೇಳಿದ್ದರು ಎಂಬುದನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಇಂದಿರಾ ಗಾಂಧಿ ಅವರನ್ನು ‘ದುರ್ಗಾ’ ಎಂದು ಕರೆದಿದ್ದ ಅಟಲ್ ಬಿಹಾರಿ ವಾಜಪೇಯಿ 1971ರಲ್ಲಿ ಇಂಡೋ-ಪಾಕ್ ಯುದ್ಧದ ಹಿನ್ನೆಲೆಯಲ್ಲಿ, ವಾಜಪೇಯಿ ಅವರ ಭಾಷಣದಲ್ಲಿ ಇಂದಿರಾ ಗಾಂಧಿಯನ್ನು ಸಂಸತ್ತಿನಲ್ಲಿ “ದುರ್ಗಾ” ಎಂದು ಕರೆದರು. ಆ ಸಮಯದಲ್ಲಿ ಅವರು ವಿರೋಧ ಪಕ್ಷದ ನಾಯಕರಾಗಿದ್ದರೂ, ಯುದ್ಧದಲ್ಲಿ ಭಾರತದ ಗಮನಾರ್ಹ ಯಶಸ್ಸಿನಿಂದಾಗಿ ಅವರು ಇಂದಿರಾ ಗಾಂಧಿಯವರನ್ನು ಹಾಗೆ ಕರೆದರು.ಆ ಯುದ್ಧದಲ್ಲಿ ಬಾಂಗ್ಲಾದೇಶ ಉದಯಿಸಿತು ಮತ್ತು ಪಾಕಿಸ್ತಾನದ 93,000 ಸೈನಿಕರನ್ನು ಭಾರತೀಯ ಸೇನೆ ಬಂಧಿಸಿತು. ಈ ಬಗ್ಗೆ ಹಿರಿಯ ಪತ್ರಕರ್ತ ವಿಜಯ್ ತ್ರಿವೇದಿ ಅವರ ಪುಸ್ತಕ ‘ಹರ್ ನಹಿ ಮಾನೂಂಗ- ಏಕ್ ಅಟಲ್ ಜೀವನ್ ಗಾಥಾ’ ದಲ್ಲಿ ಈ ವಿಷಯದ ಬಗ್ಗೆ ಉಲ್ಲೇಖಿಸಲಾಗಿದೆ.

ರಾಜೀವ್ ಗಾಂಧಿಗೆ ಕೃತಜ್ಞತೆ

1987ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಆ ಸಮಯದಲ್ಲಿ ಅವರ ಚಿಕಿತ್ಸೆ ಅಮೆರಿಕದಲ್ಲಿ ಮಾತ್ರ ಸಾಧ್ಯವಿತ್ತು. ಆದರೆ ಆರ್ಥಿಕ ಪರಿಸ್ಥಿತಿಯಿಂದಾಗಿ, ಅವರು ಯುಎಸ್ ತಲುಪಲು ಸಾಧ್ಯವಿರಲಿಲ್ಲ. ಏತನ್ಮಧ್ಯೆ, ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ವಾಜಪೇಯಿ ಅನಾರೋಗ್ಯದ ಬಗ್ಗೆ ತಿಳಿಯಿತು. ಆವರು ವಾಜಪೇಯಿ ಅವರನ್ನು ತಮ್ಮ ಕಚೇರಿಗೆ ಕರೆಸಿದರು. ಅದರ ನಂತರ ಅವರು ನ್ಯೂಯಾರ್ಕ್ ನಲ್ಲಿ ಭಾರತ ನಿಯೋಗವನ್ನು ಭೇಟಿ ಮಾಡಿ ಎಂದು ರಾಜೀವ್ ಗಾಂಧಿ ತಿಳಿಸಿದರು. ಹಾಗಾಗಿ ಅಟಲ್ ಅವರಿಗೆ ಚಿಕಿತ್ಸೆ ಪಡೆಯಲು ಸಾಧ್ಯವಾಯಿತು.

ಈ ಘಟನೆಯನ್ನು  ‘ದಿ ಡೆವಿಲ್ಸ್ ಅಡ್ವೊಕೇಟ್’ ನಲ್ಲಿ ಪ್ರಖ್ಯಾತ ಪತ್ರಕರ್ತ ಕರಣ್ ಥಾಪರ್ ಅವರು ಉಲ್ಲೇಖಿಸಿದ್ದಾರೆ. 1991 ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆಯ ನಂತರ, ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಇದನ್ನು ಸಾರ್ವಜನಿಕವಾಗಿ ಮೊದಲ ಬಾರಿಗೆ ಹೇಳಿದ್ದಾರೆ ಎಂದು ಥಾಪರ್ ಬರೆದಿದ್ದಾರೆ.

“ನಾನು ನ್ಯೂಯಾರ್ಕ್ ಗೆ ಹೋಗಿ ಚಿಕಿತ್ಸೆ ಪಡೆದು ಇಂದು ಜೀವಂತವಾಗಿರುವುದಕ್ಕೆ ರಾಜೀವ್ ಗಾಂಧಿ ಕಾರಣ” ಎಂದು ಹೇಳಿದ್ದರು.

ಸಾಹಿತಿಯಾಗಿ ವಾಜಪೇಯಿ

ವಾಜಪೇಯಿಯವರು ರಾಜಕಾರಣಿಯಲ್ಲದೆ ಕವಿಯೂ ಆಗಿದ್ದರು. ಅನೇಕ ಕವಿತೆಗಳನ್ನು ರಚಿಸಿದ್ದಾರೆ.ಕಾವ್ಯದ ಮೇಲಿನ ಆಸಕ್ತಿ ವಾಜಪೇಯಿಯವರಿಗೆ ವಂಶಪಾರಂಪರ್ಯವಾಗಿ ಬಂದಿದೆ. ಅವರ ತಂದೆ ಪಂಡಿತ ಕೃಷ್ಣ ಬಿಹಾರಿ ವಾಜಪೇಯಿ ಅವರು ಗ್ವಾಲಿಯರ್ ಸಂಸ್ಥಾನದ ಹೆಸರಾಂತ ಕವಿಗಳಲ್ಲಿ ಒಬ್ಬರಾಗಿದ್ದರು. ಅವರು ಬ್ರಜ ಭಾಷೆ ಹಾಗೂ ಖಡೀಬೋಲಿ (ಇವತ್ತಿನ ಹಿಂದಿ) ಎರಡೂ ಭಾಷೆಗಳಲ್ಲಿ ಬರೆಯುತ್ತಿದ್ದರು.

‘ಈಶ್ವರ’ ಎಂಬ ಅವರ ರಚನೆಯನ್ನು ಸಂಸ್ಥಾನದ ಎಲ್ಲ ಸ್ಕೂಲುಗಳಲ್ಲಿ ಪ್ರಾರ್ಥನೆಯ ರೂಪದಲ್ಲಿ ಪ್ರತಿನಿತ್ಯ ಹಾಡಲಾಗುತ್ತಿತ್ತು.ಸ್ವತಃ ಅಟಲ್ ಬಿಹಾರಿ ವಾಜಪೇಯಿಯವರೇ ಒಂದು ಸಂದರ್ಶನದಲ್ಲಿ ತಮ್ಮ ತಂದೆಯ ಬಗ್ಗೆ ಪ್ರಸ್ತಾಪಿಸುತ್ತ ಹೀಗೆ ಹೇಳಿದ್ದರು, “ಆಗೆಲ್ಲ ಕವಿ ಸಮ್ಮೇಳನಗಳ ಭರಾಟೆಯಿತ್ತು. ಆ ಸಮ್ಮೇಳನಗಳಲ್ಲಿ ಹಾಸ್ಯ–ವಿನೋದಗಳದೇ ಪ್ರಾಬಲ್ಯ. ಒಗಟು ಬಿಡಿಸುವವರಿಗೆ ಅಂತ್ಯದಲ್ಲಿ ಪುರಸ್ಕಾರವಿರುತ್ತಿತ್ತು. ಒಮ್ಮೆ ಕವಿಗಳಿಗೆ ತಿಹರೀ ಬೆಡಗು ಬಿಡಿಸುವ ಸವಾಲು ಎದುರಾಯಿತು. ಆಗ ನಮ್ಮ ತಂದೆ ಕೃಷ್ಣ ಬಿಹಾರಿಯವರು ಒಗಟಿನ ರೂಪದ ಕವಿತೆ ರಚಿಸಿ ಹಾಡಿದರು” ಎಂದು ಹೇಳಿದ್ದರು.

ವಾಜಪೇಯಿಯವರ ರಚನೆಗಳಲ್ಲಿ ಹರಿವಂಶರಾಯ್  ಬಚ್ಚನ್, ಶಿವಮಂಗಲ್ ಸುಮನ್, ಸೂರ್ಯಕಾಂತ ತ್ರಿಪಾಠಿ ನಿರಾಲ ಮತ್ತು ಫೈಜ್ ಅಹಮದ್ ಫೈಜ್ ಅವರ ಪ್ರಭಾವ ಕಾಣಬಹುದು. ಶಿವಮಂಗಲ್ ಸುಮನ್ ಅವರನ್ನು ವಾಜಪೇಯಿ ತಮ್ಮ ಗುರುಗಳೆಂದು ಭಾವಿಸುತ್ತಾರೆ.ತಮ್ಮ ಪ್ರತಿ ಜನ್ಮದಿನದಲ್ಲೂ ಅವರು ಕವಿತೆಯೊಂದನ್ನು ಬರೆದು ಜೀವನ ದರ್ಶನವನ್ನು ಮಾಡುವ ಮತ್ತು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಆದ್ದರಿಂದ ಪ್ರತಿ ವರ್ಷ ಅವರ ಕವಿತೆಯ ರೂಪ, ಮನೋಭಾವ, ಮತ್ತು ದರ್ಶನ ಬದಲಾಗುತ್ತಿತ್ತು.

ಇವರ ಇಪ್ಪತೊಂದು ಕವಿತೆಗಳ ಸಂಕಲನ – ಅಂಗ್ಲ ಭಾಷೆಗೆ ಅನುವಾದ ಗೊಂಡಿದೆ. ಸಾಹಿತಿಯಾಗಿಯೂ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.ದೇಶ ವಿದೇಶಗಳಲ್ಲಿ ಹಲವು ಬಾರಿ ಸನ್ಮಾನ ಗೌರವಗಳನ್ನು ಪಡೆದು ಪ್ರಶಸ್ತಿಗಳ ಸರಮಾಲೆಯನ್ನು ಧರಿಸುವ ವಾಜಪೇಯಿ ಅವರಿಗೆ ಭಾರತ ಸರಕಾರ ನೀಡುವ ಅತ್ಯುನ್ನತ ಗೌರವ 1992ರಲ್ಲಿ ‘ಪದ್ಮ ವಿಭೂಷಣ’, 1994 ರಲ್ಲಿ ‘ಲೋಕಮಾನ್ಯ ತಿಲಕ್ ಪ್ರಶಸ್ತಿ’, ‘ಉತ್ತಮ ರಾಜಕೀಯ ಪಟು’, ‘ಪಂಡಿತ್ ಗೋವಿಂದ್ ವಲ್ಲಭ ಪಂತ್ ಪ್ರಶಸ್ತಿ’ ಭಾರತ ಪರಮೋಚ್ಚ ಗೌರವ 2015ರಲ್ಲಿ ‘ಭಾರತರತ್ನ’ ಮತ್ತು ‘ ಬಾಂಗ್ಲಾ ವಿಮೋಚನ ಪ್ರಶಸ್ತಿ’ ಗಳನ್ನು ನೀಡಿ ಗೌರವಿಸಲಾಗಿದೆ.

ಕೊನೆಯ ದಿನಗಳು

90ರ ಇಳಿವಯಸ್ಸಿನ ವಾಜಪೇಯಿ ದೆಹಲಿಯ ಕೃಷ್ಣಮೆನನ್ ಮಾರ್ಗದ ಆರನೆಯ ಬಂಗಲೆಯಲ್ಲಿ ಎಸ್.ಪಿ.ಜಿ. ಪಹರೆಯ ಏಕಾಂಗಿತನದಲ್ಲಿ ತೀವ್ರ ಅಸ್ವಸ್ಥರಾಗಿ ಹಲವು ವರ್ಷಗಳೇ ಕಳೆದಿದ್ದರು. ನೆನಪು ಅವರಿಗೆ ಕೈ ಕೊಟ್ಟಿತ್ತು. ಬಂದವರನ್ನು ಗುರುತು ಹಿಡಿಯುವ ಪರಿಸ್ಥಿತಿ ಇರಲಿಲ್ಲ. ಭಾರತರತ್ನ ಪ್ರಶಸ್ತಿ ದೊರೆತಾಗ ಸಂಭ್ರಮಿಸುವ ಸ್ಥಿತಿಯಲ್ಲೂ ಅವರು ಇರಲಿಲ್ಲ.

2018ರ ಆಗಸ್ಟ್ 16ರಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಆಸ್ಪತ್ರೆಯಲ್ಲಿ ಅಂದು ಸಂಜೆ 5:05ಕ್ಕೆ ಕೊನೆಯುಸಿರೆಳೆದರು.

ರಾಷ್ಟ್ರ ರಾಜಕೀಯ ರಂಗದಲ್ಲಿ ಅಜಾತಶತ್ರು, ಚಾಣಾಕ್ಷ ರಾಜಕಾರಣಿ, ಅಪ್ರತಿಮ ವಾಗ್ಮಿ ಎಂದೇ ಪ್ರಖ್ಯಾತರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಕಂಡ ಅಪರೂಪದ ಮಹಾ ರಾಜಕೀಯ ನಾಯಕರಲ್ಲಿ ಒಬ್ಬರು. ತಮ್ಮ ಅಸಾಮಾನ್ಯ ವಾಕ್ ಚಾತುರ್ಯ ಮತ್ತು ವಾಕ್ಪಟುತ್ವದ ಈ ಮುತ್ಸದ್ದಿ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ದಿಟ್ಟ ಮತ್ತು ದೂರದೃಷ್ಟಿಯ ಕ್ರಮಗಳಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗಿ ಭಾರತೀಯ ರಾಜಕೀಯ ಇತಿಹಾಸದ ಪುಟಗಳಲ್ಲಿ ಅಜರಾಮರಾಗಿದ್ದಾರೆ.

Dr.Guruprasad Hawaldar

ವೃತ್ತಿಯಲ್ಲಿ ಬೋಧಕರು, ಪ್ರವೃತ್ತಿಯಲ್ಲಿ ಲೇಖಕರು. ನಾಡಿನ ವಿವಿಧ ಪತ್ರಿಕೆಗಳು, ಡಿಜಿಟಲ್ ಪೋರ್ಟಲ್ ಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ.

Tags: AtalAtal Bihari Vajpayeeckcknewsnowprime ministerVajapeyee
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಉನ್ನತ ಶಿಕ್ಷಣ ಸಚಿವರ ತವರು ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಸಗಣಿನೀರು ಮೈ ಮೇಲೆ ಸುರಿದುಕೊಂಡು ಪ್ರತಿಭಟಿಸಿದ ಅತಿಥಿ ಉಪನ್ಯಾಸಕರು

ಉನ್ನತ ಶಿಕ್ಷಣ ಸಚಿವರ ತವರು ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಸಗಣಿನೀರು ಮೈ ಮೇಲೆ ಸುರಿದುಕೊಂಡು ಪ್ರತಿಭಟಿಸಿದ ಅತಿಥಿ ಉಪನ್ಯಾಸಕರು

Leave a Reply Cancel reply

Your email address will not be published. Required fields are marked *

Recommended

ಸಾಲ ಮಾಡಲು ಬಜೆಟ್‌ ಗಾತ್ರ ಹೆಚ್ಚಿಸಿಕೊಂಡ ಸಿಎಂ

ಸಾಲ ಮಾಡಲು ಬಜೆಟ್‌ ಗಾತ್ರ ಹೆಚ್ಚಿಸಿಕೊಂಡ ಸಿಎಂ

3 years ago
ನವರಾತ್ರಿಗೆ ಕತ್ತಲೆಭಾಗ್ಯ ಖಾತರಿ; ಹೊಸ ವರ್ಷಕ್ಕೆ ಕಗ್ಗತ್ತಲೆಭಾಗ್ಯ!!

ಆಕ್ರೋಶಕ್ಕೆ ಮಣಿದ ಸರಕಾರ; ರೈತರಿಗೆ 5 ತಾಸು ನಿರಂತರ ವಿದ್ಯುತ್‌

2 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ