5000 ಏರಿಕೆ ಮಾಡಿದ ಸರಕಾರದ ನಿರ್ಧಾರ ತಿರಸ್ಕರಿಸಿದ ಅತಿಥಿ ಉಪನ್ಯಾಸಕರು; ಮಾತಿಗೆ ತಪ್ಪಿದ ಮುಖ್ಯಮಂತ್ರಿ ಎಂದು ಕಿಡಿ
8 ಅಂಶಗಳನ್ನಿಟ್ಟು ಸರಕಾರದ ವಿರುದ್ಧ ಆಕ್ರೋಶ
ಬೆಂಗಳೂರು: ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಲು ಆಗ್ರಹಿಸಿ 37ದಿನಗಳಿಂದ ನಡೆಸುತ್ತಿರುವ ಮುಷ್ಕರಕ್ಕೆ ಮಣಿಯದ ರಾಜ್ಯ ಸರಕಾರ, ತಮ್ಮ ಬಾಳಿಗೆ ವಿಷವುಣಿಸಿದೆ ಎಂದು ಅತಿಥಿ ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ; ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
IAS ಅಧಿಕಾರಿಗಳ ಮಾಹಿತಿಯಂತೆ ಗಿಳಿಪಾಠ ಒಪ್ಪಿಸಿದ ಉನ್ನತ ಶಿಕ್ಷಣ ಸಚಿವ ಸುಧಾಕರ್ ಹಿರಿಯ ಅತಿಥಿ ಉಪನ್ಯಾಸಕರ ಬಾಳಿಗೆ ವಿಷವುಣಿಸಿದ್ದಾರೆ. ಬೆಂಗಳೂರು ವಿಕಾಸ ಸೌಧದಲ್ಲಿ ಶುಕ್ರವಾರ ನಡೆಸಿದ ಸಭೆಯಲ್ಲಿ ಸರಕಾರ ಮಾಡಿದ ಘೋಷಣೆಗೆ ಅತಿಥಿ ಉಪನ್ಯಾಸಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಅತಿಥಿ ಉಪನ್ಯಾಸಕರಿಗೆ 5,000 ರೂ. ಹೆಚ್ಚಳ
ಎಂಟು ಅಂಶಗಳನ್ನು ಉಲ್ಲೇಖ ಮಾಡುವ ಮೂಲಕ ಸರ್ಕಾರ ತಮಗೆ ಎಸಗಿರುವ ಅನ್ಯಾಯದ ಬಗ್ಗೆ ಅತಿಥಿ ಉಪನ್ಯಾಸಕರು ತಿಳಿಸಿದ್ದಾರೆ.
1.
ನಿವೃತ್ತಿ ಅಂಚಿನಲ್ಲಿ ಇರುವ, ವಯೋಮಿತಿ ಮೀರಿರುವ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ನೀಡದೆ ಭಾರೀ ಮೋಸ ಮಾಡಿದೆ.ಇದರಿಂದಾಗಿ ಅವರ ಸೇವೆಗೆ ಕವಡೆ ಕಾಸಿನ ಬೆಲೆಯಿಲ್ಲದಂತಾಗಿದೆ.ಕಾಯಂಮಾತಿ ಕನಸಿನಲ್ಲಿ 2 ದಶಕಗಳ ಕಾಲ ಸರ್ಕಾರಕ್ಕೆ ಸಲ್ಲಿಸಿದ ಸೇವೆಯು ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ.
2.
ಹಿಂದೆ ಬೆಳಗಾವಿ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ಧರಾಮಯ್ಯ ನಾಗರೀಕ ಸೇವಾ ನಿಯಮಗಳಿಗೆ ತಿದ್ದುಪಡಿ ತಂದು ಅತಿಥಿ ಉಪನ್ಯಾಸಕರ ಖಾಯಂಗೊಳಿಸಲು ಹೇಳಿದ್ದರು.ಆದರೆ ಅವರೆ ಮುಖ್ಯಮಂತ್ರಿ ಆಗಿದ್ದರೂ ಖಾಯಂ ಇರಲಿ,ಸೇವಾಭದ್ರತೆ ನೀಡದೆ, ಕನಿಷ್ಠ 12 ತಿಂಗಳ ಸಂಬಳ ನೀಡದೆ 10ತಿಂಗಳ ಗೌರವಧನಕ್ಕೆ ಸೀಮಿತಗೊಳಿಸಿ ನಿರಾಸೆ ಮಾಡಿದೆ.
3.
ಇದರಿಂದಾಗಿ ವಯೋಮಿತಿ ಮೀರಿದ ಉಪನ್ಯಾಸಕರಿಗೆ ನೇಮಕಾತಿಯಲ್ಲಿ ನೀಡುವ ಶೇ5ರಷ್ಟು ಕೃಪಾಂಕದಿಂದ ಯಾವ ಲಾಭವೂ ಇಲ್ಲವಾಗಿದೆ.
4.
5 ಸಾವಿರ ಗೌರವಧನ ಹೆಚ್ಚಳದಿಂದ ಹಿರಿಯರಿಗೆ ಮಾನ್ಯತೆ ಇಲ್ಲವಾಗಿದೆ.ಕಾರಣ ಈಗ ಸ್ನಾತಕೋತ್ತರ ಪದವಿ ಮುಗಿಸಿ ಬಂದವರಿಗೂ ಒಂದೆ ವೇತನ,15/20ವರ್ಷ ಸೇವೆ ಸಲ್ಲಿಸಿದವರಿಗೂ ಒಂದೇ ಆಗಿರುವುದು ಸಂಘಟನೆ ಹೋಳಾಗುವಂತೆ ಮಾಡಿದೆ.
6.
ನಿವೃತ್ತಿಯ ಇಡುಗಂಟಿನ ವಿಚಾರವೂ ಸಹ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. 60ವರ್ಷ ಸೇವೆ ಸಲ್ಲಿಸಿದ ಉಪನ್ಯಾಸಕರಿಗೆ ಇದು ಸಲ್ಲುತ್ತದೆ.ಅಸಲಿ ಸಮಸ್ಯೆಯೆಂದರೆ ಹೆಚ್ಚುವರಿ ಕಾರ್ಯಭಾರದ ಆಧಾರದಲ್ಲಿ ಕೆಲಸ ಮಾಡುವ ಅತಿಥಿಗಳಿಗೆ ಕಾರ್ಯಭಾರ ಅನಿಶ್ಚಿತ.ಹೀಗಿದ್ದಾಗ ನಿವೃತ್ತಿಯ ಸಂದರ್ಭದಲ್ಲಿ ಅವರು ಕೆಲಸ ಮಾಡುವ ಅವಕಾಶ ಇಲ್ಲದಿರುವಾಗ ಹೇಗೆ ಇದು ಅನ್ವಯಿಸುತ್ತದೆ ಎಂಬ ಬಗ್ಗೆ ಗೊಂದಲವಿದೆ.
7.
ಆರೋಗ್ಯವಿಮೆಯೂ ಹೀಗೆಯೇ ಆಗಿದೆ.ಉಪನ್ಯಾಸಕ 400/ಸರ್ಕಾರ 400 ವಂತಿಗೆ ಪಾವತಿಸುವ ಆಧಾರದಲ್ಲಿ ವರ್ಷಕ್ಕೆ 5ಲಕ್ಷದ ಆರೋಗ್ಯ ವಿಮೆ ಘೋಷಣೆ ಮಾಡಿದೆ.
8.
ವಾರದಲ್ಲಿ 15/19ಗಂಟೆ ಕಾರ್ಯಭಾರ ಹೊಂದಿರುವ ಉಪನ್ಯಾಸಕರಿಗೆ ತಿಂಗಳಿಗೆ ಒಂದು ರಜೆ ಘೋಷಣೆ ಕೂಡ ಅಮಾನವೀಯವಾಗಿದೆ.ಇವುಗಳಿಗೆ ಬದ್ದವಾಗಿ ತರಗತಿಗಳಿಗೆ ವಾಪಸಾಗುವ ಅತಿಥಿ ಉಪನ್ಯಾಸಕರಿಗೆ ಜನವರಿಯಿಂದಲೇ ನೂತನ ನೀತಿ ಜಾರಿಯಾಗಲಿದೆ. ಇಲ್ಲದಿದ್ದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸರಕಾರ ಘೋಷಣೆ ಮಾಡಿರುವ ನೂತನ ನೀತಿಯನ್ನು ಮುಷ್ಕರ ನಿರತ ಅತಿಥಿ ಉಪನ್ಯಾಸಕರ ಸಂಘವೂ ವಿರೋಧಿಸಿದ್ದು ಸೇವಾ ಭದ್ರತೆ ನೀಡುವವರಿಗೆ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಅತಿಥಿ ಉಪನ್ಯಾಸಕರ ಸಂಘ ಪುನರುಚ್ಚರಿಸಿದೆ.
ಉನ್ನತ ಶಿಕ್ಷಣ ಸಚಿವರ ತವರು ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಸಗಣಿನೀರು ಮೈ ಮೇಲೆ ಸುರಿದುಕೊಂಡು ಪ್ರತಿಭಟಿಸಿದ ಅತಿಥಿ ಉಪನ್ಯಾಸಕರು
Comments 1