ಪಟ್ಟಣ ಪಂಚಾಯಿತಿ ಉಪ ಚುನಾವಣೆ; 2ನೇ ವಾರ್ಡಿನಲ್ಲಿ ಗೆದ್ದ ಪಕ್ಷೇತರ ಅಭ್ಯರ್ಥಿ ಜಿ.ರಾಜೇಶ್
by GS Bharath Gudibande
ಗುಡಿಬಂಡೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ 2ನೇ ವಾರ್ಡ್ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ರಾಜೇಶ್ 17 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಅಮರನಾರಾಯಣರೆಡ್ಡಿ ಘೋಷಿಸಿದ್ದಾರೆ.
ಪಟ್ಟಣದ 2ನೇ ವಾರ್ಡ್ ಸದಸ್ಯ ಹಾಗೂ ಉಪಾಧ್ಯಕ್ಷರಾಗಿದ್ದ ಜಿ.ಎನ್.ಅನಿಲ್ ಕುಮಾರ್ ಅವರ ನಿಧನದಿಂದ ತೆರುವಾಗಿದ್ದ ಸದಸ್ಯ ಸ್ಥಾನಕ್ಕೆ ಡಿ-27 ರಂದು ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲಾ ಆವರಣದಲ್ಲಿ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಎಲ್ಲಾ ಒಂದೇ ಸಮುದಾಯದ 5 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಬಿಜೆಪಿ ಅಭ್ಯರ್ಥಿ ಮಮತ-18, ಕಾಂಗ್ರೆಸ್ ಅಭ್ಯರ್ಥಿ ಬುಲೆಟ್ ಶ್ರೀನಿವಾಸ-251, ಜೆಡಿಎಸ್ ಅಭ್ಯರ್ಥಿ ಗಾಂಧಿ ಆರ್.ಶ್ರೀನಿವಾಸ್-50, ಪಕ್ಷೇತರ ಅಭ್ಯರ್ಥಿ ಲಕ್ಷ್ಮೀಕಾಂತಮ್ಮ-112 ಹಾಗೂ ಜಿ.ರಾಜೇಶ್-268 ಮತಗಳು ಮತ್ತು ನೋಟಾಗೆ-5 ಮತಗಳು ಸೇರಿ ಒಟ್ಟು 704 ಮತಗಳು ಚಲಾವಣೆ ಆಗಿದ್ದವು.
ಇವರಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ರಾಜೇಶ್ 268 ಮತಗಳು ಪಡೆಯುವ ಮೂಲಕ ಜಯಗಳಿಸಿದ್ದಾರೆಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಮುಖಬಂಗ
ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ಕಾಂಗ್ರೆಸ್ ಪಕ್ಷ ಈ ಬಾರಿಯೂ ಉಪ ಚುನಾವಣೆಯಲ್ಲಿ ಎರಡು ಭಾರಿಯೂ ಸಹ ಪಕ್ಷಕ್ಕಾಗಿ ದುಡಿದ ಅಭ್ಯರ್ಥಿಗೆ ಬಿ ಫಾರಂ ನೀಡದೇ ನಿರ್ಲಕ್ಷ ತೊರಿ ಬೇರೆ ಪಕ್ಷದ ಅಭ್ಯರ್ಥಿಗೆ ಬಿ ಫಾರಂ ನೀಡಿದ್ದು ಇದರಿಂದ ಅಸಮಧಾನಗೊಂಡ ಮತದಾರರು, ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲೇ ಬೇಕು ಎಂದು ಪಣತೊಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಪಕ್ಷೇತರ ಅಭ್ಯರ್ಥಿಯಾದ ಯುವಕ ಜಿ.ರಾಜೇಶ್ ಅವರನ್ನು ಗೆಲ್ಲಿಸಿಕೊಂಡಿದ್ದಾರೆ.
ನಿಷ್ಠಾವಂತರಿಗೆ ಕೈ ಕೊಟ್ಟ ಕಾಂಗ್ರೆಸ್
ಕ್ಷೇತ್ರದಲ್ಲಿ ಹಾಲಿ ಶಾಸಕರು ಕಾಂಗ್ರೆಸ್ ಪಕ್ಷದವರೂ ಆಗಿದ್ದರು ಸಹ ಕನಿಷ್ಟ ಪಕ್ಷ ಒಂದು ಸದಸ್ಯ ಸ್ಥಾನವನ್ನು ಗೆಲ್ಲಿಸಿಕೊಳ್ಳಲು ಆಗಿರುವುದಿಲ್ಲ, ಇನ್ನು ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಹೇಗೆ ಗೆಲ್ಲುತ್ತಾರೆಂಬ ಮಾತುಗಳು ಕೇಳಿಬರುತ್ತಿದ್ದು, ಒಟ್ಟಾರೆ ಸತತ ಎರಡು ಭಾರಿಯೂ ವಾರ್ಡ್‍ನಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯ ಗೆಲ್ಲದೇ ಇರುವುದರಿಂದ ಪಕ್ಷಕ್ಕೆ ಮುಖಬಂಗವಾಗಿದೆ.
ಸಂಭ್ರಮಾಚಾರಣೆ
ಉಪ ಚುನಾವಣೆಯಲ್ಲಿ ಯಾರೇ ಗೆದ್ದರು 20 ಮತಗಳ ಅಂತದಲ್ಲಿ ಗೆಲ್ಲುತ್ತಾರೆಂಬ ಮಾತುಗಳು ಕೇಳಿಬಂದಿದ್ದು, ಅದರಂತೆ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಶ್ರೀನಿವಾಸ ವಿರುದ್ದ ಪಕ್ಷೇತರ ಅಭ್ಯರ್ಥಿ ಜಿ.ರಾಜೇಶ್ 17 ಮತಗಳ ಅಂತದಿಂದ ಜಯಗಳಿಸುತ್ತಿದ್ದಂತೆ 2ನೇ ವಾರ್ಡ್ ಯುವಕರು ಪಟಾಕಿ ಹೊಡೆದು ಸಿಹಿ ಹಂಚಿ ತನ್ನ ಚಿಹ್ನೆಯಾದ ಆಟೋದಲ್ಲಿ 2ನೇ ವಾರ್ಡ್‍ನಲ್ಲಿ ಮೇರವಣಿಗೆ ಮಾಡಿ ಸಂಭ್ರಮಾಚರಣೆ ಮಾಡಿದರು.
ಕಳೆದ ಹಲವು ದಿನಗಳಿಂದ ನಾನು ಮಾಡಿರುವ ಸೇವೆಯನ್ನು ಗುರುತಿಸಿ ನಮ್ಮ ವಾರ್ಡ್ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ, ನಮ್ಮ ಸಹೋದರರಾದ ದಿವಂಗತ ಅನಿಲ್ ಕುಮಾರ್ ಅಣ್ಣ ರವರು ಮಾಡಬೇಕೆಂದು ಅಂದುಕೊಂಡಿದ್ದ ಅಭಿವೃದ್ದಿ ಕೆಲಸಗಳನ್ನು ನಾನು ಮಾಡುತ್ತೇನೆ, ನಾನು ಹೆಚ್ಚು ವಾರ್ಡ್‍ನ ಎಲ್ಲಾ ಮತದಾರರ ಸಹಕಾರದೊಂದಿಗೆ ಇನ್ನಷ್ಟು ವಾರ್ಡ್ ಅಭಿವೃದ್ದಿಗೆ ಶ್ರಮಿಸುತ್ತೇನೆ, ನಾನು ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿದ್ದು ನಾನು ಯಾವುದೇ ಪಕ್ಷಕ್ಕೆ ಸೇರ್ಪಡೆ ಆಗದೇ ಪಕ್ಷೇತರ ಅಭ್ಯಥಿಯಾಗಿಯೇ ಮುಂದುವರೆಯುತ್ತೇನೆ, ನನ್ನ ಗೆಲುವಿಗೆ ಶ್ರಮಿಸಿದ ಯುವಕರಿಗೆ ಮತ್ತು ಮತದಾರರಿಗೆ ಧನ್ಯವಾದಗಳು.
ಜಿ.ರಾಜೇಶ್, 2ನೇ ವಾರ್ಡಿನ ನೂತನ ಸದಸ್ಯ, ಗುಡಿಬಂಡೆ
Comments 1