• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

cknewsnow desk by cknewsnow desk
January 27, 2024
in GUEST COLUMN
Reading Time: 3 mins read
0
ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!
967
VIEWS
FacebookTwitterWhatsuplinkedinEmail

“ಒಬ್ಬರ ಜನನವು ಅವರ ಹಣೆಬರಹವನ್ನು ನಿಶ್ಚಯಿಸುವುದಿಲ್ಲ” ಎಂದ ಜನ ನಾಯಕ; ಅಪ್ಪಟ ಭಾರತರತ್ನ, ಮೀಸಲು ಕೊಟ್ಟು ಬದುಕು ಕಟ್ಟಿಕೊಟ್ಟ ಭಾರತದ ಭಾಗ್ಯವಿದಾತ

ಬಿಹಾರದಲ್ಲಿ ನಡೆಯುತ್ತಿರುವುದನ್ನು ಗಮನಿಸಲು ಈಗ ಕರ್ಪೂರಿ ಠಾಕೂರ್‌ ಅವರು ಇದ್ದಿದ್ದರೆ..?? ಅವರ ಜೀವ ತಡೆದುಕೊಳ್ಳುತ್ತಿತ್ತೇ..? ವಿದೇಶ ನಿಯೋಗದಲ್ಲಿ ಹರಿದ ಕೋಟು ಧರಿಸಿದ್ದ, ಎರಡು ಸಲ ಸಿಎಂ ಆಗಿದ್ದರೂ ಸ್ವಂತ ಕಾರು, ಮನೆ ಇಲ್ಲದ ವಿರಳಾತಿ ಸರಳ ಜೀವಿಗೆ ದೇಶ ರಾಜಕಾರಣ ಇನ್ನಿಲ್ಲದ ಪಲ್ಲಟಗಳನ್ನು ಕಾಣುತ್ತಿರುವ ಹೊತ್ತಿನಲ್ಲಿ, ಅವರು ಜನಿಸಿದ ಬಿಹಾರದಲ್ಲಿಯೇ ರಾಜಕೀಯ ಮೌಲ್ಯಗಳು ಜಾರುಹಾದಿಯಲ್ಲಿರುವ ಸಮಯದಲ್ಲಿ ಭಾರತರತ್ನ ಸಂದಿದೆ.. ಅವರ ಬದುಕು, ಬವಣೆ, ಬದ್ಧತೆ, ಅಚಲತೆ ಇವತ್ತಿನ ರಾಜಕಾರಣಕ್ಕೆ ಮುಂಬೆಳಕು.

by Dr. Guruprasad Hawaladar

ಈ

ವರ್ಷ ನಮ್ಮ ದೇಶವು ತನ್ನ 75ನೇ ಗಣರಾಜ್ಯೋತ್ಸವ ಆಚರಿಸಿಕೊಂಡಿದೆ. ಈ ಸಂದರ್ಭದಲ್ಲಿ ಒಬ್ಬರ ಜನನವು ಅವರ ಹಣೆಬರಹವನ್ನು ನಿಶ್ಚಯಿಸುವುದಿಲ್ಲ ಎಂದು ಪ್ರತಿಪಾದಿಸಿ, ಹಿಂದುಳಿದ ವರ್ಗಗಳಿಗೆ ಅರ್ಹ ಪ್ರಾತಿನಿಧ್ಯ ಮತ್ತು ಅವಕಾಶಗಳನ್ನು ಒದಗಿಸಿ, ಎಲ್ಲರನ್ನೂ ಒಳಗೊಂಡ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಿದ, ಸರಳತೆ ಮತ್ತು ಸಾಮಾಜಿಕ ನ್ಯಾಯದ ಆಧಾರ ಸ್ತಂಭವಾಗಿದ್ದಂತಹವರು, ಸ್ವಾತಂತ್ರ್ಯ ಹೋರಾಟ ಮತ್ತು ಸಮಾಜವಾದಿ ಆಂದೋಲನಕ್ಕೆ ಅನನ್ಯ ಕೊಡುಗೆ ನೀಡಿದಂತಹ ಹಿಂದುಳಿದ ವರ್ಗದ ನಾಯಕರಾಗಿ ಗುರುತಿಸಿಕೊಂಡಿದ್ದ ‘ಜನ ನಾಯಕ’ ನಿಗೆ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಕೇಂದ್ರ ಸರ್ಕಾರ. ಅವರೇ ಬಿಹಾರ ಮಾಜಿ ಮುಖ್ಯಮಂತ್ರಿ ದಿ. ಕರ್ಪೂರಿ ಠಾಕೂರ್ ಅವರು.

ಕೇಂದ್ರ ಸರ್ಕಾರ 2023-24ನೇ ವರ್ಷದ ಭಾರತರತ್ನ ಗೌರವವನ್ನು ದಿವಂಗತ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಘೋಷಣೆ ಮಾಡಿದ್ದು, ಅವರ ಜನ್ಮಶತಮಾನೋತ್ಸಕ್ಕೆ ಅತ್ತ್ಯುತ್ತಮ ಕೊಡುಗೆಯಾಗಿದೆ. ಈ ಅತ್ಯುನ್ನತ ಗೌರವವು ದಲಿತರು, ವಂಚಿತ ಮತ್ತು ನಿರ್ಲಕ್ಷಿತ ವರ್ಗಗಳಿಗೆ ಸಂದ ಗೌರವ.

ಲೋಹಿಯಾ ಚಿಂತನೆಯಿಂದ ಪ್ರೇರಿತರಾಗಿದ್ದ ಕರ್ಪೂರಿ ಠಾಕೂರ್ ಅವರು ಬಿಹಾರದ ರಾಜಕಾರಣದಲ್ಲಿ ಅಗ್ರಮಾನ್ಯರಾಗಿದ್ದರು. ಅತ್ಯಂತ ಹಿಂದುಳಿದ ಸಮುದಾಯ
ನಾಯ್ (ಕ್ಷೌರಿಕ) ದ ಗೋಕುಲ್ ಠಾಕೂರ್ ಮತ್ತು ರಾಮ್ದುಲಾರಿ ದೇವಿ ದಂಪತಿಗೆ ಪುತ್ರರು. ಈಗ ಕರ್ಪೂರಿ ಗ್ರಾಮ ಎಂದು ಕರೆಯಲಾಗುವ ಪಿತೌಂಜಿಯಾ ಹಳ್ಳಿ ಯಲ್ಲಿ ಜನಿಸಿದರು.

ವಿದ್ಯಾರ್ಥಿ ದೆಸೆಯಿಂದಲೇ ಗಾಂಧೀಜಿ ಹಾಗೂ ಕಾಂಗ್ರೆಸ್ ನ ಸತ್ಯನಾರಾಯಣ ಸಿನ್ಹಾ ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದವರು ಠಾಕೂರ್‌ ಅವರು. ಸ್ವಾತಂತ್ರಕ್ಕಾಗಿ ಹೋರಾಡಿದ ಅವರು, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪಾಲ್ಗೊಂಡು ಬ್ರಿಟಿಷ್ ಸರ್ಕಾರದಿಂದ 26 ತಿಂಗಳ ಕಾಲ ಸೆರೆವಾಸ ಅನುಭವಿಸಿದ್ದವರು. ದೇಶ ಸ್ವತಂತ್ರವಾದ ನಂತರ ತಮ್ಮ ಹಳ್ಳಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ಅವರಲ್ಲಿನ ಸಾಮಾಜಿಕ ಸಮಾನತೆಯ ಕಿಚ್ಚು ಅವರನ್ನು ಹಲವಾರು ಪ್ರತಿಭಟನೆಗಳಲ್ಲಿ ಮಂಚೂಣಿಯಲ್ಲಿ ನಿಲ್ಲುವಂತೆ ಮಾಡಿತು. ಹಲವಾರು ಚಳವಳಿಗಳ ನೇತೃತ್ವ ವಹಿಸಿದ್ದಕ್ಕಾಗಿ ಅವರು ಅನೇಕ ಸಲ ಜೈಲುಶಿಕ್ಷೆಗೆ ಗುರಿಯಾಗಿದ್ದುಂಟು.

ಖ್ಯಾತ ಸಮಾಜವಾದಿ ನಾಯಕರಾದ ಜಯಪ್ರಕಾಶ್ ನಾರಾಯಣ್ ಅವರ ನಿಕಟವರ್ತಿಯಾಗಿದ್ದ ಅವರು, 1977ರಲ್ಲಿ ಜಯಪ್ರಕಾಶ್ ಅವರು ಕೈಗೊಂಡಿದ್ದ ಸಂಪೂರ್ಣ ಕ್ರಾಂತಿ ಚಳವಳಿಯಲ್ಲಿ ಜೇಪಿ ಅವರ ನೆರಳಿನಂತೆ ಕೆಲಸ ಮಾಡಿದರು.

ಜನತಾಪಕ್ಷವೇ ಅವರ ಹೋರಾಟಗಳಿಗೆ ವೇದಿಕೆ, ಆಗ ಅಟಲ್ ಬಿಹಾರಿ ವಾಜಪೇಯಿ, ಜಾರ್ಜ್ ಫರ್ನಾಂಡೀಸ್ ಸಹಿತ ಅನೇಕ ನಾಯಕರ ಸಾಂಗತ್ಯ ಠಾಕೂರ್ ಅವರಿಗೆ ದೊರೆಯಿತು.
1952ರ ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ತಾಜ್ಪುರ್ ಕ್ಷೇತ್ರದಿಂದ ಸೋಷಲಿಸ್ಟ್ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಗಳಿಸಿದರು. ಶಾಸಕರಾಗಿದ್ದಾಗಲೂ ಅನೇಕ ರೀತಿಯ ಜನಪರ ಹಾಗೂ ಕಾರ್ಮಿಕ ಪರ ಪ್ರತಿಭಟನೆಗಳಲ್ಲಿ ಅವರು ಗುರುತಿಸಿಕೊಂಡಿದ್ದರು.

ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ

1967ರಲ್ಲಿ ಬಿಹಾರದಲ್ಲಿ ಮೊತ್ತ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂತು. ಆಗ ಮುಖ್ಯಮಂತ್ರಿಯಾಗಿದ್ದವರು ಮಹಾಮಾಯ ಪ್ರಸಾದ್ ಸಿನ್ಹಾ. ಅವರ ಸಂಪುಟದಲ್ಲಿ ಕರ್ಪೂರಿ ಠಾಕೂರ್ ಅವರು ಶಿಕ್ಷಣ ಸಚಿವರಾಗಿದ್ದರು. 1967ರಲ್ಲಿ ಅವರು ಆ ರಾಜ್ಯದ ಉಪ ಮುಖ್ಯಮಂತ್ರಿಯಾದರು. 1970ರ ಡಿಸೆಂಬರ್ ನಿಂದ 1971ರ ಜೂನ್ ವವರೆಗೆ ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದರು. 1977ರಲ್ಲಿ ಬಿಹಾರದಲ್ಲಿ ಜನತಾ ಸರ್ಕಾರ ಅಧಿಕಾರಕ್ಕೆ ಬಂದಾಗ 1977ರ ಡಿಸೆಂಬರ್ ನಿಂದ 1979ರ ಏಪ್ರಿಲ್ ವರೆಗೆ ಅವರು 2ನೇ ಬಾರಿ ಮುಖ್ಯಮಂತ್ರಿಯಾಗಿದ್ದರು.

ಅವರ ಚುನಾವಣಾ ಜೀವನವು 1950ರ ದಶಕದ ಆರಂಭದಲ್ಲಿ ಪ್ರಾರಂಭವಾಯಿತು. ಅಂದಿನಿಂದ ಅವರು ಶಾಸಕಾಂಗ ಕೊಠಡಿಗಳ ಶಕ್ತಿಯಾದರು. ಕಾರ್ಮಿಕ ವರ್ಗ, ಸಣ್ಣ ರೈತರು ಮತ್ತು ಯುವಕರ ಹೋರಾಟಗಳಿಗೆ ಶಕ್ತಿಯುತವಾಗಿ ಧ್ವನಿ ನೀಡಿದರು. ಶಿಕ್ಷಣ ಅವರ ಹೃದಯಕ್ಕೆ ಬಹಳ ಹತ್ತಿರವಾದ ವಿಷಯವಾಗಿತ್ತು. ತಮ್ಮ ರಾಜಕೀಯ ಜೀವನದುದ್ದಕ್ಕೂ ಅವರು ಬಡವರಿಗೆ ಶಿಕ್ಷಣ ಸೌಲಭ್ಯಗಳನ್ನು ಒದಗಿಸಲು ಶ್ರಮಿಸಿದರು. ಅವರು ಸ್ಥಳೀಯ ಭಾಷೆಗಳ ಶಿಕ್ಷಣ ನೀಡುವ ವಿಚಾರದ ಪ್ರತಿಪಾದಕರಾಗಿದ್ದರು. ಏಕೆಂದರೆ ಇದರಿಂದ ಸಣ್ಣ ಪಟ್ಟಣಗಳು ​​ಮತ್ತು ಹಳ್ಳಿಗಳ ಜನರು ಮೆಲಕ್ಕೇರಲು ಮತ್ತು ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂಬುದು ಅವರ ಚಿಂತನೆ ಆಗಿತ್ತು. ಅವರು ಮುಖ್ಯಮಂತ್ರಿಯಾಗಿದ್ದಾಗ ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗೆ ಅನೇಕ ಕ್ರಮಗಳನ್ನು ಕೈಗೊಂಡರು.

ಪ್ರಜಾಪ್ರಭುತ್ವ, ಚರ್ಚೆ ಮತ್ತು ಸಮಾಲೋಚನೆ (ಸಂವಾದ) ಕರ್ಪೂರಿ ಅವರ ವ್ಯಕ್ತಿತ್ವದ ಅವಿಭಾಜ್ಯ ಅಂಗವಾಗಿದ್ದವು. ಚಿಕ್ಕವಯಸ್ಸಿನಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಮಗ್ನರಾಗಿದ್ದಾಗ ಕಂಡ ಈ ಚೈತನ್ಯ ಮತ್ತೆ ತುರ್ತು ಪರಿಸ್ಥಿತಿ ವಿರೋಧಿಸಿದಾಗಲೂ ಕಾಣಿಸಿತು. ಅವರ ವಿಶಿಷ್ಟ ದೃಷ್ಟಿಕೋನಗಳು ಜೇಪಿ, ಡಾ. ಲೋಹಿಯಾ ಮತ್ತು ಚರಣ್ ಸಿಂಗ್‌ ಮುಂತಾದವರಿಂದ ಪ್ರಭಾವಿತಗೊಂಡಿದ್ದವು.

1970 ರ ದಶಕದಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿ ಅವರ ಆಡಳಿತವು ವಿಶೇಷವಾಗಿ ಸಮಾಜದ ವಂಚಿತ ವರ್ಗಗಳಿಗೆ ನ್ಯಾಯ ಕಲ್ಪಿಸಲು ನಾಂದಿ ಹಾಡಿತು. ಹೃದಯವಂತ ಸಮಾಜವಾದಿ ನಾಯಕ ಠಾಕೂರ್ ಅವರು, ತಮ್ಮ ವಿದ್ಯಾರ್ಥಿ ದಿನಗಳಲ್ಲಿ ರಾಷ್ಟ್ರೀಯವಾದಿ ವಿಚಾರಗಳಿಂದ ಆಳವಾಗಿ ಪ್ರಭಾವಿತರಾಗಿದ್ದರು ಮತ್ತು ನಂತರ ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟವನ್ನು ಸೇರಿದರು. ಅವರ ರಾಜಕೀಯ ಸಿದ್ಧಾಂತವು ‘ಲೋಹಿಯಾ’ ಚಿಂತನೆಯ ಆಧಾರಿತವಾಗಿದ್ದು, ಇದು ಕೆಳಜಾತಿಗಳ ಸಬಲೀಕರಣಕ್ಕೆ ಒತ್ತು ನೀಡಿತು.

ಠಾಕೂರ್ ಅವರು ಮಾರ್ಚ್ 5, 1967 ರಿಂದ ಜನವರಿ 28, 1968ರವರೆಗೆ ಬಿಹಾರದ ಶಿಕ್ಷಣ ಸಚಿವರಾಗಿದ್ದರು. ಅವರು ಡಿಸೆಂಬರ್ 1970ರಲ್ಲಿ ಸಂಯುಕ್ತ ಸಮಾಜವಾದಿ ಪಕ್ಷದ ಸರಕಾರದಲ್ಲಿ ರಾಜ್ಯದ ಮುಖ್ಯಮಂತ್ರಿಯಾದರು. ಆದರೆ ಅವರ ಸರಕಾರವು ಆರು ತಿಂಗಳು ಕಳೆಯುತ್ತಿದ್ದಂತೆಯೇ ಪತನವಾಯಿತು. ಅವರು ಜೂನ್ 1977ರಲ್ಲಿ ಮತ್ತೆ ಮುಖ್ಯಮಂತ್ರಿ ಹುದ್ದೆಗೆ ಬಂದರು. ಆದರೆ ಪೂರ್ಣ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಸುಮಾರು ಎರಡು ವರ್ಷಗಳಲ್ಲಿ ಅಧಿಕಾರವನ್ನು ಕಳೆದುಕೊಂಡರು. ಅವರು ಜಾರಿಗೆ ತಂದ ಮೀಸಲಾತಿ ನೀತಿಯೇ ಅವರಿಗೆ ಅಧಿಕಾರ ಕಳೆದುಕೊಳ್ಳಲು ಕಾರಣವಾಯಿತು.

ಸರಕಾರಿ ಸೇವೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಸಮಾನ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದ್ದ ಮೀಸಲಾತಿಗಾಗಿ ʼಕರ್ಪೂರಿ ಠಾಕೂರ್ ಫಾರ್ಮುಲಾʼವನ್ನು ಪರಿಚಯಿಸಿದ್ದು ಠಾಕೂರ್ ಅವರ ಅತ್ಯಂತ ಮಹತ್ವದ ಕೊಡುಗೆಗಳಲ್ಲಿ ಒಂದಾಗಿದೆ.

1978ರ ನವೆಂಬರ್ ತಿಂಗಳಲ್ಲಿ ಅವರು ಬಿಹಾರದಲ್ಲಿ ಹಿಂದುಳಿದ ವರ್ಗಗಳಿಗೆ 26% ಮೀಸಲಾತಿಯನ್ನು ಜಾರಿಗೆ ತಂದರು. ಇದು 1990 ರ ದಶಕದಲ್ಲಿ ಮಂಡಲ್ ಆಯೋಗದ ಶಿಫಾರಸುಗಳಿಗೆ ವೇದಿಕೆಯನ್ನು ಸಿದ್ಧಪಡಿಸಿತು. ಈ ನೀತಿಯು ಹಿಂದುಳಿದ ವರ್ಗಗಳಿಗೆ ಅಧಿಕಾರ ನೀಡುವುದಲ್ಲದೆ, ಹಿಂದಿಯ ಹೃದಯಭೂಮಿಯಲ್ಲಿ (ಉತ್ತರ ಭಾರತ) ರಾಜಕೀಯದ ಚಹರೆಯನ್ನು ಬದಲಿಸಿ, ಪ್ರಾದೇಶಿಕ ಪಕ್ಷಗಳ ಉದಯಕ್ಕೂ ಕಾರಣವಾಯಿತು.

ಜೂನ್ 1970ರಲ್ಲಿ ಬಿಹಾರ ಸರಕಾರವು ಮುಂಗೇರಿ ಲಾಲ್ ಆಯೋಗವನ್ನು ನೇಮಿಸಿತು. ಇದು ಫೆಬ್ರವರಿ 1976ರ ತನ್ನ ವರದಿಯಲ್ಲಿ 128 ಹಿಂದುಳಿದ ಸಮುದಾಯಗಳನ್ನು ಹೆಸರಿಸಿತು. ಅದರಲ್ಲಿ 94 ಅತ್ಯಂತ ಹಿಂದುಳಿದ ಜಾತಿಗಳು ಎಂದು ಗುರುತಿಸಲಾಗಿದೆ. ಠಾಕೂರ್ ಅವರ ಜನತಾ ಪಕ್ಷದ ಸರಕಾರವು ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿತು. ‘ಕರ್ಪೂರಿ ಠಾಕೂರ್ ನೀತಿ’ 26% ಮೀಸಲಾತಿಯನ್ನು ಒದಗಿಸಿತು. ಅದರಲ್ಲಿ OBC ಗಳು 12% ಪಾಲನ್ನು ಪಡೆದರು, OBC ಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳು 8%, ಮಹಿಳೆಯರಿಗೆ 3% ಮತ್ತು ಮೇಲ್ಜಾತಿಯಿಂದ ಬಡವರು 3% ಮೀಸಲಾತಿ ಪಡೆದರು. ಈ ಮೀಸಲಾತಿ ವ್ಯವಸ್ಥೆಯ ಜಾರಿಗೊಳಿಸಿದ್ದ ಪರಿಣಾಮ ಅವರ ಸರಕಾರ ಪತನವಾಯಿತು. ಅವರು ಮೇಲ್ಜಾತಿಗಳಿಂದ ದೊಡ್ಡ ವಿರೋಧ ಎದುರಿಸಿದರು.

ಶಿಕ್ಷಣ ಸಚಿವರಾಗಿದ್ದಾಗ ಅವರು, ಬಿಹಾರದ ಶಾಲೆಗಳಲ್ಲಿ ಇಂಗ್ಲೀಷ್ ಕಡ್ಡಾಯ ಎಂಬ ನಿಯಮವನ್ನು ಸಡಿಲಗೊಳಿಸಿದರು. ಇದು ಅಂದಿನ ಬಿಹಾರದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಇಂಗ್ಲೀಷ್ ಪಾಸ್ ಆಗಲು ತುಂಬಾ ಕಷ್ಟಪಡುತ್ತಿದ್ದ ವಿದ್ಯಾರ್ಥಿಗಳಿಗೆ ವರದಾನವಾಯಿತು. ಇಂಥ ಅನೇಕ ಕೆಲಸಗಳಿಂದಾಗಿ ಅವರ ಜನಪ್ರಿಯತೆ ಎಷ್ಟಿತ್ತೆಂದರೆ, ಜನರು ಅವರ ಹೆಸರಿನಲ್ಲಿ ಸ್ವಯಂ ಪ್ರೇರಿತವಾಗಿ ಶಾಲೆ, ಕಾಲೇಜುಗಳನ್ನು ತೆರೆದರು. ವಿಶೇಷವಾಗಿ ಹಿಂದುಳಿದ ಪ್ರದೇಶಗಳಲ್ಲಿ ಮತ್ತು 8ನೇ ತರಗತಿಯವರೆಗಿನ ಶಿಕ್ಷಣವನ್ನು ಉಚಿತವಾಗಿ ನೀಡಿದರು. ಇದರಿಂದ ಶಾಲೆಯನ್ನು ತೊರೆಯುವ ಮಕ್ಕಳ ಸಂಖ್ಯೆಯಲ್ಲಿ ಸಾಕಷ್ಟು ಕಡಿಮೆಯಾಯಿತು.

ನಿರುದ್ಯೋಗಿ ನಿತೀಶ್!

ಕರ್ಪೂರಿ ಠಾಕೂರ್ ಅವರಿಗೆ ಗೌರವ ಸಲ್ಲಿಸಲು ಬಿಹಾರ ಸರಕಾರ ಅವರು ಜನಿಸಿದ್ದ ಪಿತೌಂಝಿಯಾ ಹೆಸರನ್ನು ಬದಲಾಯಿಸಿ, ಕರ್ಪೂರಿ ಗ್ರಾಮ್ ಎಂದು ಬದಲಾಯಿಸಿದೆ. ರಾಜ್ಯ ಸಂಪುಟದಲ್ಲಿ ಅವರು ಜಾರಿಗೆ ತಂದ ಹಲವಾರು ಸುಧಾರಣೆಗಳು ಬಿಹಾರದಲ್ಲಿ ಅವರನ್ನು ಜನಮೆಚ್ಚುಗೆಯ ಉತ್ತುಂಗಕ್ಕೇರಿಸಿತ್ತು. ಅವರು ಮುಖ್ಯಮಂತ್ರಿಯಾಗಿದ್ದಾಗ ದೇಶದಲ್ಲೇ ಮೊದಲ ಬಾರಿಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಗೆ ತಂದು ಆ ವರ್ಗಗಳ ಜನರ ಕಣ್ಮಣಿಯಾದರು. ಇದಲ್ಲದೆ, ಬಿಹಾರದಲ್ಲಿ ಸಾರಾಯಿಯನ್ನು ನಿಷೇಧಿಸಿದ್ದರು.

ಸರ್ಕಾರಿ ಗುತ್ತಿಗೆಗಳಲ್ಲಿ ನಿರುದ್ಯೋಗಿ ಎಂಜಿನಿಯರ್ಗಳಿಗೆ ಆದ್ಯತೆ. ಅವರ ಈ ನೀತಿಗಳ ಮೂಲಕ ಸುಮಾರು 8,000 ಜನರು ಉದ್ಯೋಗವನ್ನು ಪಡೆದರು. ಬಿಹಾರದ ಇಂದಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಉದ್ಯೋಗಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದ ನಿರುದ್ಯೋಗಿ ಎಂಜಿನಿಯರ್ ಆಗಿದ್ದರು ಎನ್ನುವುದು ವಿಶೇಷ. ಅದರ ಜತೆಗೆ ಅವರು ಜಾರಿಗೆ ತಂದ ಒಳ ಮೀಸಲಾತಿ ವ್ಯವ‌ಸ್ಥೆಯು ಬಿಹಾರ ಮಾತ್ರವಲ್ಲದೇ ದೇಶದ ಮೇಲೆ ಬಹಳಷ್ಟು ಪರಿಣಾಮ ಬೀರಿತು.

ಹರಿದ ಕೋಟು ಮತ್ತು ಮಾರ್ಷಲ್ ಟಿಟೊ

ಠಾಕೂರ್ ಅವರ ಸರಳತೆಯ ಬಗ್ಗೆ ಅನೇಕ ಕಥೆಗಳಿವೆ. 1952ರಲ್ಲಿ ಅವರು ಮೊದಲ ಬಾರಿಗೆ ಶಾಸಕರಾದಾಗ ಅವರು ಆಸ್ಟ್ರಿಯಾಗೆ ಹೋಗುವ ನಿಯೋಗದಲ್ಲಿ ಇದ್ದರು. ಆದರೆ, ಅವರ ಬಳಿ ಧರಿಸಲು ಒಂದು ಕೋಟ್ ಸಹ ಇರಲಿಲ್ಲ. ಗೆಳೆಯನ ಬಳಿ ಕೋಟ್‌ ಅನ್ನು ಕೇಳಿದಾಗ ಅದೂ ಹರಿದದ್ದು ತಂದು ಕೊಟ್ಟಿದ್ದರು. ಕರ್ಪೂರಿ ಅದೇ ಕೋಟ್ ಧರಿಸಿ ಹೊರಟು ಹೋಗಿದ್ದರು. ಅಲ್ಲಿ ಯುಗೊಸ್ಲಾವಿಯಾದ ಮುಖ್ಯಸ್ಥ ಮಾರ್ಷಲ್ ಟಿಟೊ ಅವರು ಹರಿದ ಕೋಟ್ ಅನ್ನು ಗಮನಸಿ ಅವರಿಗೆ ಹೊಸ ಕೋಟ್ ಅನ್ನು ಉಡುಗೊರೆಯಾಗಿ ನೀಡಿದ್ದರು.

ಹಿರಿಯ ಪತ್ರಕರ್ತ ಸುರೇಂದ್ರ ಕಿಶೋರ್ ಅವರು 1977ರ ಒಂದು ಘಟನೆಯ ಬಗ್ಗೆ ಬರೆದಿದ್ದಾರೆ, ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನವನ್ನು ಪಟನಾದ ಕದಮ್ ಕುವಾನ್ನಲ್ಲಿರುವ ಚರಖಾ ಸಮಿತಿ ಕಟ್ಟಡದಲ್ಲಿ ಆಚರಿಸಲಾಯಿತು. ಇದರಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್, ನಾನಾಜಿ ದೇಶಮುಖ್ ಸೇರಿ ದೇಶಾದ್ಯಂತ ಹಲವು ಮುಖಂಡರು ಭಾಗವಹಿಸಿದ್ದರು. ಬಿಹಾರ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರು ಹರಿದ ಕುರ್ತಾ, ಹರಿದ ಚಪ್ಪಲಿಯೊಂದಿಗೆ ಆಗಮಿಸಿದರು. ಇದನ್ನು ಗಮನಿಸಿದ ಚಂದ್ರಶೇಖರ್ ಅವರು “ಒಬ್ಬ ಮುಖ್ಯಮಂತ್ರಿ ಚೆನ್ನಾಗಿ ಬದುಕಲು ಎಷ್ಟು ಸಂಬಳ ಪಡೆಯಬೇಕು?” ಎಂದು ಪ್ರಶ್ನಿಸಿದರು. ಆಗ ಎಲ್ಲರೂ ನಗಲು ಪ್ರಾರಂಭಿಸಿದರು. ಚಂದ್ರಶೇಖರ್ ತಮ್ಮ ಆಸನದಿಂದ ಎದ್ದು ನಿಂತು ತಮ್ಮ ಕುರ್ತಾವನ್ನು ಹರಡಿ, ಕರ್ಪೂರಿ ಅವರ ಕುರ್ತಾ ನಿಧಿಗೆ ದೇಣಿಗೆ ನೀಡಿ ಎಂದು ಹೇಳಲು ಪ್ರಾರಂಭಿಸಿದರು. ನೂರಾರು ರೂಪಾಯಿ ಹಣ ಸಂಗ್ರಹವಾಗಿದ್ದು, “ಈ ಹಣದಿಂದ ನೀವು ಕುರ್ತಾ-ಧೋತಿಯನ್ನು ಮಾತ್ರ ಖರೀದಿಸುತ್ತೀರಾ?” ಎಂದು ಕರ್ಪೂರಿ ಅವರನ್ನು ಕೇಳಿದಾಗ, ಕರ್ಪೂರಿ ಅವರು, “ಈ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತೇನೆ” ಎಂದು ಹೇಳಿದ್ದರು. ಇದು ಅವರ ಸರಳ ವ್ಯಕ್ತಿತ್ವಕ್ಕೊಂದು ಉದಾಹರಣೆ.

ಕರ್ಪೂರಿ ಠಾಕೂರ್ ಅವರ ಬಳಿ ಕಾರು ಇರಲಿಲ್ಲ. 80ರ ದಶಕದಲ್ಲಿ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು. ಒಮ್ಮೆ ಊಟಕ್ಕೆ ನಿವಾಸಕ್ಕೆ ಹೋಗಬೇಕಿತ್ತು. ಸ್ವಲ್ಪ ಹೊತ್ತು ಅವರದೇ ಪಕ್ಷದ ಶಾಸಕರಿಗೆ ಜೀಪ್ ಕೊಡಿ ಎಂದು ಕೇಳಿದಾಗ ಆ ಶಾಸಕರು, “ನನ್ನ ಜೀಪಿನಲ್ಲಿ ಎಣ್ಣೆ ಇಲ್ಲ. ನೀವು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಿರಿ. ಕಾರು ಏಕೆ ಖರೀದಿಸಬಾರದು?” ಎಂದು ಪ್ರಶ್ನಿಸಿದ್ದರು. ಅವರು ಸದಾ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು.

ಕರ್ಪೂರಿ ಠಾಕೂರ್‌ Photo’s courtesy Wikipedia

ಜನನಾಯಕ ಎಂದೇ ಖ್ಯಾತಿ ಪಡೆದಿದ್ದ ಕರ್ಪೂರಿ ಠಾಕೂರ್ ಅತ್ಯಂತ ಸರಳ ಜೀವಿಯಾಗಿದ್ದರು. ಠಾಕೂರ್ ಅವರು ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿದ್ದರೂ ಅವರ ಬಳಿ ಒಂದು ಸ್ವಂತ ಕಾರು ಸಹ ಇರಲಿಲ್ಲ. ಕಾರು ತೆಗೆದುಕೊಳ್ಳುಲು, ಸ್ವಂತ ಮನೆ ಸಹ ಕಟ್ಟಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.

ಸಾಮಾಜಿಕ ನ್ಯಾಯದ ನಾಯಕರ ತಲೆಮಾರು ಬಿಹಾರದಲ್ಲಿ ಹೆಚ್ಚು ಶಕ್ತಿಶಾಲಿಯಾಗುತ್ತಿದ್ದಂತೆ, ಠಾಕೂರ್ ಅವರು ಅನುಭವಿಸಿದ ಪ್ರಾಧಾನ್ಯತೆಯನ್ನು ನಿಧಾನವಾಗಿ ಕಳೆದುಕೊಂಡರು. ಅವರ ನೀತಿ ನಿರ್ಧಾರಗಳು ಧ್ರುವೀಕರಣಗೊಳ್ಳುತ್ತಿದ್ದರೂ, ಅವರ ಸ್ವಚ್ಛ ವ್ಯಕ್ತಿತ್ವಕ್ಕಾಗಿ ಅವರು ವೈಯಕ್ತಿಕವಾಗಿ ಗೌರವಿಸಲ್ಪಟ್ಟರು.

ಕರ್ಪೂರಿ ಠಾಕೂರ್ ಅವರು 1988ರ ಫೆ. 17ರಂದು 64ನೇ ವಯಸ್ಸಿನಲ್ಲಿ ನಿಧನರಾದರು. ಅವರು ನಿಧನರಾದಾಗ ಹಲವಾರು ನಾಯಕರು ಶ್ರದ್ಧಾಂಜಲಿ ಸಲ್ಲಿಸಲು ಅವರ ಗ್ರಾಮಕ್ಕೆ ತೆರಳಿದ್ದರು. ಅವರ ಮನೆಯ ಸ್ಥಿತಿ ಕಂಡು ಆ ನಾಯಕರು, “ಇಷ್ಟು ಎತ್ತರಕ್ಕೆ ಏರಿದ ವ್ಯಕ್ತಿಯೊಬ್ಬರು ಇಷ್ಟೊಂದು ಸರಳವಾದ ಮನೆ ಹೊಂದಲು ಸಾಧ್ಯವೇ?” ಎಂದು ಕಣ್ಣೀರು ಹಾಕಿದ್ದರು. ಈಗ ಠಾಕೂರ್ ಅವರ ಪುತ್ರರಲ್ಲಿ ಒಬ್ಬರಾದ ರಾಮನಾಥ್ ಠಾಕೂರ್ ಅವರು ಜೆಡಿಯುನಿಂದ ರಾಜ್ಯಸಭೆ ಸದಸ್ಯರಾಗಿದ್ದಾರೆ.

ಹಿಂದುಳಿದ ವರ್ಗಗಳ ಬಲವರ್ಧನೆಗೆ ಕೈಗೊಂಡ ಈ ಕ್ರಮಗಳಿಗೆ ಅವರ ಪಾತ್ರ ದೊಡ್ಡದು. ಅವರ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾದರೂ ಯಾವುದೇ ಒತ್ತಡಕ್ಕೆ ಮಣಿಯಲಿಲ್ಲ. ಒಬ್ಬರ ಜನ್ಮವು ಒಬ್ಬರ ಹಣೆಬರಹವನ್ನು ನಿಶ್ಚಯಿಸುವುದಿಲ್ಲ ಎಂಬುದು ಅವರ ಪ್ರತಿಪಾದನೆಯಾಗಿತ್ತು. ಅವರ ನಾಯಕತ್ವದಲ್ಲಿ, ಎಲ್ಲರನ್ನೂ ಒಳಗೊಂಡ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕುವ ನೀತಿಗಳನ್ನು ಜಾರಿಗೆ ತರಲಾಯಿತು. ಅವರು ಸಮಾಜದ ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರೂ, ಅವರು ಎಲ್ಲ ವರ್ಗದ ಜನರಿಗಾಗಿ ಕೆಲಸ ಮಾಡಿದರು. ಈಗಲೂ ತಮ್ಮ ವಿಚಾರ, ಸಮಾಜಪರ ಆಡಳಿತದ ಮೂಲಕ ಜನ ಮಾನಸದಲ್ಲಿ ಉಳಿದಿದ್ದಾರೆ.


Dr. Guruprasad Hawaladar

  • ವೃತ್ತಿಯಲ್ಲಿ ಬೋಧಕರು, ಪ್ರವೃತ್ತಿಯಲ್ಲಿ ಲೇಖಕರು. ನಾಡಿನ ವಿವಿಧ ಪತ್ರಿಕೆಗಳು, ಡಿಜಿಟಲ್ ಪೋರ್ಟಲ್ ಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ.
Tags: barath ratnabihar former chief ministerckcknewsnowguest columnkarpuri thakurpoor peoplereservation
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

by cknewsnow desk
January 21, 2024
0

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ಶ್ರೀರಾಮಪ್ರಭುವೇ ಕ್ಷಮಿಸು! ನಿನ್ನ ಹೆಸರಿಟ್ಟುಕೊಂಡವರೆಲ್ಲ ನಿನ್ನವರಲ್ಲ!!

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಮಂದಿರಕ್ಕೆ ಅಂಕುರಾರ್ಪಣೆ ಆಗಿದ್ದು ಹೇಗೆ?

by cknewsnow desk
January 19, 2024
0

ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

by cknewsnow desk
December 28, 2023
0

ನಿಜದ ಜಾಡು ಹಿಡಿದು ಹೊರಟ ನಿಡುಮಾಮಿಡಿ ಶ್ರೀಗಳ ಹೋರಾಟಕ್ಕೆ 33 ವರ್ಷ

ಅಖಂಡ ಭಾರತದ ಅಷ್ಟದಿಕ್ಕುಗಳ ಆಮೂಲಾಗ್ರ ಅಭಿವೃದ್ಧಿಗೆ ಸುವರ್ಣ ಅಧ್ಯಾಯ ಬರೆದವರೇ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ

ಅಟಲ್ ಎಂದರೆ ಅಜಾತಶತ್ರು

by cknewsnow desk
December 25, 2023
0

ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ, ಉತ್ತಮ ಆಡಳಿತ ದಿನ by Dr.Gurupeasad Hawaldar ಜಾಗತಿಕ ಮಟ್ಟದ ಶ್ರೇಷ್ಠ ನಾಯಕರ ಸಾಲಿನಲ್ಲಿ ಗೌರವಿಸಲ್ಪಡುವ  ನಿಸ್ವಾರ್ಥ ರಾಜಕಾರಣಿ,...

ಶಿಕ್ಷಣ, ಶಿಕ್ಷಕ ಮತ್ತು ಬದಲಾವಣೆ; ನೂತನ ಶಿಕ್ಷಣ ನೀತಿಯ ಹೊತ್ತಿನಲ್ಲಿ ಓಶೋ ಜೋಶ್..

ಓಶೋ: ಬೆರಗು, ಬೆಡಗು ಮತ್ತು ವಿಸ್ಮಯ

by cknewsnow desk
December 11, 2023
0

ಇಂದು ಓಶೋ ಜನ್ಮದಿನ

ಕಾಲಾತೀತ ದಿವ್ಯಸ್ಮರಣೆ

ಕಾಲಾತೀತ ದಿವ್ಯಸ್ಮರಣೆ

by cknewsnow desk
November 23, 2023
0

ಇಂದು ಪುಟ್ಟಪರ್ತಿ ಶ್ರೀ ಶ್ರೀ ಶ್ರೀ ಸತ್ಯ ಸಾಯಿಬಾಬಾ ಅವರ ಜಯಂತಿ

Next Post
ಹುಡುಗಿ ಚುಡಾಯಿಸಿದಕ್ಕೆ ಆಟೋ ಡ್ರೈವರ್ ಕೊಲೆ

ಹುಡುಗಿ ಚುಡಾಯಿಸಿದಕ್ಕೆ ಆಟೋ ಡ್ರೈವರ್ ಕೊಲೆ

Leave a Reply Cancel reply

Your email address will not be published. Required fields are marked *

Recommended

ಗುಡಿಬಂಡೆ ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ಮಾಡಿದರೂ ಸಂಬಳವಿಲ್ಲ

ಗುಡಿಬಂಡೆ ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ಮಾಡಿದರೂ ಸಂಬಳವಿಲ್ಲ

4 years ago
ಬಾಗೇಪಲ್ಲಿಯಲ್ಲಿ ತಿರಂಗ ಬೈಕ್ ಜಾಥಾ

ಬಾಗೇಪಲ್ಲಿಯಲ್ಲಿ ತಿರಂಗ ಬೈಕ್ ಜಾಥಾ

3 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ