ಲಾಕರ್ ಒಡೆಯಲು ವಿಫಲ ಯತ್ನ
ಮೈಸೂರು: ಬ್ಯಾಂಕ್ ಶೌಚಾಲಯದ ಗೋಡೆಗೆ ಕನ್ನ ಕೊರೆದು ದರೋಡೆಗೆ ಯತ್ನಿಸಿದ ಘಟನೆ ಮೈಸೂರು ಜಿಲ್ಲೆಯ ಟೀ.ನರಸೀಪುರದಲ್ಲಿ ನಡೆದಿದೆ.
ಟಿ.ನರಸೀಪುರ ತಾಲೂಕಿನ ದೊಡ್ಡೇಬಾಗಿಲು ಗ್ರಾಮದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಡಿಯಾ (ಎಸ್.ಬಿ.ಐ) ಬ್ಯಾಂಕ್ ಗೆ ಖದೀಮರು ಕನ್ನ ಕೊರೆದು ಏನನ್ನೂ ದೋಚಲಾಗದೆ ಪರಾರಿಯಾಗಿದ್ದಾರೆ.
ಬ್ಯಾಂಕ್ ನ ಶೌಚಾಲಯದ ಗೋಡೆಗೆ ಕನ್ನ ಹಾಕಿ ಒಳ ಪ್ರವೇಶಿಸಿರುವ ಖದೀಮರು, ಸಿ.ಸಿ.ಕ್ಯಾಮರಾವನ್ನು ಹಾನಿಗೊಳಿಸಿ ಲಾಕರ್ ತೆರೆಯಲು ವಿಫಲ ಪ್ರಯತ್ನ ನಡೆಸಿ ಬರಿಗೈಲಿ ಹೋಗಿದ್ದಾರೆ. ಇಡೀ ಬ್ಯಾಂಕ್ ಅನ್ನು ತಡಕಾಡಿದ್ದು, ಆ ಖದೀಮರಿಗೆ ಏನೂ ಸಿಕ್ಕಿಲ್ಲ.
ಬ್ಯಾಂಕ್ ಶಾಖೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಾಬು ಅವರು ಭೇಟಿ ನೀಡಿ ಪರಿಶೀಲಿಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬ್ಯಾಂಕ್ ನಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾದಲ್ಲಿ ದುಷ್ಕರ್ಮಿಗಳ ಚಲನವಲನ ಸೆರೆಯಾಗಿದೆ. ಟಿ.ನರಸೀಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.