• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ಬರ ಪರಿಹಾರ;‌ ಕೇಂದ್ರದ ಬಿಜೆಪಿ-ಕಾಂಗ್ರೆಸ್‌ ಸರಕಾರಗಳು ಕರ್ನಾಟಕಕ್ಕೆ ಕೊಟ್ಟಿದ್ದೆಷ್ಟು?

cknewsnow desk by cknewsnow desk
May 1, 2024
in NATION, POLITICS, STATE
Reading Time: 2 mins read
0
ಬರ ಪರಿಹಾರ;‌ ಕೇಂದ್ರದ ಬಿಜೆಪಿ-ಕಾಂಗ್ರೆಸ್‌ ಸರಕಾರಗಳು ಕರ್ನಾಟಕಕ್ಕೆ ಕೊಟ್ಟಿದ್ದೆಷ್ಟು?
986
VIEWS
FacebookTwitterWhatsuplinkedinEmail

ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ನಾಯಕರು ಹೇಳುತ್ತಿರುವುದು ಸತ್ಯವೋ? ಸುಳ್ಳೋ??; ಅಂಕಿ ಅಂಶಗಳ ಸಮೇತ ವಿಶೇಷ ವರದಿ

ಬೆಂಗಳೂರು: ಹಾಸನ ಪ್ರಕರಣದ ಅಬ್ಬರದ ನಡುವೆ ಬರ ಪರಿಹಾರ ಕಾರ್ಯಗಳು ನೆನೆಗುದಿಗೆ ಬಿದ್ದಿವೆ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಅಬ್ಬರಿಸಿ ಬೊಬ್ಬಿರಿದ ರಾಜ್ಯ ಕಾಂಗ್ರೆಸ್‌ ಸರಕಾರ, ಈಗ ಕೇಂದ್ರದ ಹಣದ ಬಗ್ಗೆ ಚಕಾರವನ್ನೂ ಎತ್ತುತ್ತಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ಕೇಂದ್ರದಿಂದ ಬರ ಅನ್ಯಾಯ ಎನ್ನುವ ಮಾತು ಎಲ್ಲಿಯೂ ಕೇಳಿ ಬರುತ್ತಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪದೇಪದೆ ಹೇಳುತ್ತಿದ್ದ ಬರ ಪರಿಹಾರ ಹಣ ಅನ್ಯಾಯದ ಆರೋಪ ಚುನಾವಣಾ ಪ್ರಚಾರ ಭಾಷಣಗಳಲ್ಲಿ ದೊಡ್ಡದಾಗಿ ಸದ್ದಾಗುತ್ತಿತ್ತು. ಯಾವಾಗ ಹಾಸನದ ಪೆನ್‌ ಡ್ರೈವ್‌ ಪ್ರಕರಣ ಮುನ್ನಲೆಗೆ ಬಂದಿತೋ ಸಿಎಂ, ಡಿಸಿಎಂ ಸೇರಿದಂತೆ ಯಾವೊಬ್ಬ ಕಾಂಗ್ರೆಸ್‌ ನಾಯಕನ ಬಾಯಲ್ಲೂ ಬರದ ಬಗ್ಗೆ ಒಂದೇ ಒಂದು ಮಾತೂ ಹೊರಬರುತ್ತಿಲ್ಲ.

ಹಾಗಾದರೆ; ಬರ ಪರಿಹಾರ ನೀಡಿಕೆಯಲ್ಲಿ ಕೇಂದ್ರದ ನರೇಂದ್ರ ಮೋದಿ ಅವರ ಸರಕಾರದಿಂದ ರಾಜ್ಯಕ್ಕೆ ಘೋರ ಅನ್ಯಾಯ ಆಗಿದೆಯೇ? ಅಥವಾ ಕಾಂಗ್ರೆಸ್‌ ನಾಯಕರು ಸುಳ್ಳು ಆರೋಪ ಮಾಡಿದ್ದಾರೆಯೇ? ಆ ವಿವರಗಳನ್ನು ಅಂಕಿ ಅಂಶಗಳ ಸಮೇತ ಈ ಕೆಳಕಂಡಂತೆ ನೋಡೋಣ.

ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರದ ಸರಕಾರ ಕಳೆದ ಏಪ್ರಿಲ್‌ ರಂದು ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿತ್ತು. ಅದು ಸಾಲದು, ನಾವು ₹18,500 ಕೋಟಿ ಕೇಳಿದ್ದೆವು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದರು.

ಸತ್ಯ ಏನು?

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದು ಸತ್ಯವಾ ಅಥವಾ ಸುಳ್ಳಾ ಎನ್ನುವುದನ್ನು ಅಂಕಿ ಅಂಶಗಳ ಸಮೇತ ನೋಡೋಣ.

2004ರಿಂದ 2014 ನಡುವಿನ ಹತ್ತು ವರ್ಷಗಳಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಡಾ.ಮನಮೋಹನ್ ಸಿಂಗ್ ಅವರ ನೇತೃತ್ವದ UPA ಸರಕಾರಕ್ಕೆ ಕರ್ನಾಟಕದಲ್ಲಿದ್ದ ಸರಕಾರಗಳು ಬೇರೆ ಬೇರೆ ಸಂದರ್ಭಗಳಲ್ಲಿ ₹19,500 ಕೋಟಿ ಬರ ಮತ್ತು ನೆರೆ (ಪ್ರವಾಹ) ಪರಿಹಾರ ಕೊಡಬೇಕು ಎಂದು ಬೇಡಿಕೆ ಇಟ್ಟಿತ್ತು. ಆದರೆ, ಆ ಸರಕಾರ ರಾಜ್ಯಕ್ಕೆ ಕೊಟ್ಟಿದ್ದು ಕೇವಲ ₹1,500 ಕೋಟಿ ಮಾತ್ರ!! ಅಂದರೆ; ರಾಜ್ಯದ ಬೇಡಿಕೆ ಇಟ್ಟ ಪ್ರಮಾಣದಲ್ಲಿ ನಮಗೆ ಬಂದಿದ್ದು ಕೇವಲ 8% ಮಾತ್ರ!

2014-2022 ಈವರೆಗೆ ನರೇಂದ್ರ ಮೋದಿ ಅವರ ಸರಕಾರದ 8 ವರ್ಷಗಳ ಅವಧಿಯಲ್ಲಿ ವಿವಿಧ ಸಂದರ್ಭದಲ್ಲಿ ಬರ ಮತ್ತು ನೆರೆ ಪರಿಹಾರಕ್ಕಾಗಿ ₹18,500 ಕೋಟಿ ಪರಿಹಾರ ನೀಡಿವಂತೆ ರಾಜ್ಯ ಸರಕಾರ ಬೇಡಿಕೆ ಇಟ್ಟಿತ್ತು. ಈ ಬೇಡಿಕೆಗೆ ಪ್ರತಿಯಾಗಿ ಮೋದಿ ಸರಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದ ಪರಿಹಾರ ₹7,000 ಕೋಟಿ. ಅಂದರೆ; ರಾಜ್ಯ ಕೇಳಿದ್ದ ಒಟ್ಟಾರೆ ಪ್ರಮಾಣದಲ್ಲಿ 38% ಹಣ ಕೇಂದ್ರದಿಂದ ಬಂದ ಹಾಗಾಯಿತು.

ಈಗ, ಅಂದರೆ; 2023-2024ರಲ್ಲಿ; 26-4-2024ರಂದು ಕೇಂದ್ರ ಸರಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದ ಬರ ಪರಿಹಾರ ಹಣ ₹3454 ಕೋಟಿ! ಇತಿಹಾಸದಲ್ಲಿಯೇ ಕೇಂದ್ರ ಸರಕಾರ ರಾಜ್ಯಕ್ಕೆ ಕೊಟ್ಟಿರುವ ಅತಿ ಹೆಚ್ಚು ಬರ ಪರಿಹಾರದ ಮೊತ್ತ ಇದಾಗಿದೆ. ಅಂಕಿ-ಅಂಶಗಳ ಕಡೆ ಗಮನ ಕೊಡಬಹುದು. ಅಲ್ಲಿಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಕಂದಾಯ ಸಚಿವ ಕೃಷ್ಣಭೈರೇಗೌಡ ಸೇರಿದಂತೆ ಸೇರಿದಂತೆ ಕಾಂಗ್ರೆಸ್‌ ನಾಯಕರೆಲ್ಲಾ ಹೇಳಿದ್ದು ಸುಳ್ಳು ಎಂದಾಯಿತು.

ಸಿದ್ದರಾಮಯ್ಯ ಅವರು ಎಷ್ಟು ಕೇಳಿದ್ದರು?

ಸಿಎಂ ಸಿದ್ದರಾಮಯ್ಯ ಅವರೇ ಸ್ವತಃ ಚಿತ್ರದುರ್ಗ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಮಾಡುವಾಗ, ಕೇಂದ್ರ ಸರಕಾರ ರಾಜ್ಯಕ್ಕೆ NDRF ((ರಾಷ್ಟ್ರೀಯ ಬರ ಪರಿಹಾರ ನಿಧಿ) ) ನಿಯಮದ ಪ್ರಕಾರ ₹4860 ಕೋಟಿ ಬರ ಪರಿಹಾರ ಕೊಟ್ಟರೆ ಸಾಕು ಎಂದಿದ್ದರು. ಆ ಬೇಡಿಕೆಯ ಅನುಸಾರ ಕೇಂದ್ರವು ₹3454 ಕೋಟಿ ಬರ ಪರಿಹಾರ ನೀಡಿದೆ. ಆದರೆ ಈಗ ಅವರು ಮಾತು ಬದಲಿಸಿ, ನಾವು ₹18171 ಕೋಟಿ ಕೇಳಿದ್ದೆವು ಎಂದು ಹೇಳಿದ್ದರು.

ಸಿದ್ದರಾಮಯ್ಯ ಅವರ ಲೆಕ್ಕದ ಪ್ರಕಾರವೇ ಹೇಳಿದರೆ; ₹4860 ಕೋಟಿ ಸಾಕು ಎಂದ ಸಿದ್ದರಾಮಯ್ಯ ಅವರ ಮನವಿಯಂತೆ ₹3454 ಬಿಡುಗಡೆ ಆಗಿದೆ. ಅವರ ಪ್ರಕಾರ ಇನ್ನು ಬರಬೇಕಿರುವುದು ₹1,406 ಕೋಟಿ. ಕೇಂದ್ರಕ್ಕೆ, ಪ್ರಧಾನಿಗಳಿಗೆ ಮತ್ತೆ ಮನವಿ ಕೊಟ್ಟರೆ ಆ ಮೊತ್ತವೂ ಬರುವ ಸಾಧ್ಯತೆ ಇದೆ ಎಂದು ವಿಶ್ರಾಂತ ಹಿರಿಯ ಅಧಿಕಾರಿಯೊಬ್ಬರು ಹೇಳುವ ಮಾತು.

NDRF ಮಾರ್ಗಸೂಚಿ ಪ್ರಕಾರ ಬರ ಪರಿಹಾರ ಕೇಳಿದ್ದೆಷ್ಟು?
ಅಸಲಿಗೆ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದೇನು?#droughtrelieffund #Karnataka #Siddaramaiah pic.twitter.com/JZ99h4Ue2F

— cknewsnow.com (@cknewsnow) May 1, 2024

ಅದನ್ನು ಬಿಟ್ಟು ಎಲ್ಲವನ್ನೂ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. UPA ಸರಕಾರದ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಹಣ ಬಂತು? NDA ಸರ್ಕಾರದಲ್ಲಿ ಎಷ್ಟು ಹಣ ಬಂದಿದೆ? ಜನರ ಮುಂದೆ ಲೆಕ್ಕ ಇಡಲಿ ಎಂದು ಅವರು ಹೇಳುತ್ತಾರೆ.

ರಾಜ್ಯ ಬರ ಪರಿಹಾರದಲ್ಲೂ ಕೇಂದ್ರದ ಪಾಲಿದೆ!

*SDRF (ರಾಜ್ಯ ಬರ ಪರಿಹಾರ ನಿಧಿ) ನಲ್ಲಿ ಕೇಂದ್ರದ ಪಾಲು 75%, ರಾಜ್ಯದ ಪಾಲು 25% ರಷ್ಟಿದೆ. ಈಗ ರೈತರಿಗೆ ತಲಾ ₹2,000 ಕೊಡುತ್ತೇವೆ ಎಂದು ರಾಜ್ಯ ಸರಕಾರ ಭರವಸೆ ನೀಡಿರುವ ಮೊತ್ತದಲ್ಲಿ ₹1500 ಕೇಂದ್ರದ್ದು, ರಾಜ್ಯದ್ದು ಕೇವಲ ₹500.

ಪ್ರತಿ ರೈತರಿಗೆ ಕೊಡಲಾಗುತ್ತಿರುವ ಈ ₹2,000 ಪರಿಹಾರದಲ್ಲಿ ರಾಜ್ಯ ಸರಕಾರ ಖರ್ಚು ಮಾಡಿರುವ ಮೊತ್ತ ₹600. ಇದರಲ್ಲಿ ₹400 ಕೋಟಿ ಕೇಂದ್ರದ್ದೇ ಇದೆ. ₹200 ಕೋಟಿಯನ್ನಷ್ಟೇ ರಾಜ್ಯ ಭರಿಸಿದೆ.

ಕೃಷಿಗೆ ಅನುದಾನ ಕಡಿತ

ಸಿದ್ದರಾಮಯ್ಯ ಸರಕಾರವು ಗ್ಯಾರಂಟಿಗಳ ನೆಪದಲ್ಲಿ ಕೃಷಿಗೆ ಮೀಸಲಿದ್ದ ಅನುದಾನವನ್ನು ದೊಡ್ಡ ಪ್ರಮಾಣದಲ್ಲಿ ಕಡಿತ ಮಾಡಿದೆ. ಒಂದೆಡೆ ಬರ, ಇನ್ನೊಂದೆಡೆ ಅಕಾಲ ನೆರೆಯಿಂದ ತತ್ತರಿಸಿರುವ ಕೃಷಿ ವಲಯಕ್ಕೆ ಹಿಂದಿನ ಬೊಮ್ಮಾಯಿ ಸರಕಾರ ಮೀಸಲಿಟ್ಟಿದ್ದ ಅನುದಾನದಲ್ಲಿ (ಒಟ್ಟು ₹39,031) ಭಾರೀ ಕಡಿತ ಮಾಡಿ ಕೃಷಿ ತೋಟಗಾರಿಕೆ ಇಲಾಖೆಗಳೆರಡಕ್ಕೂ ₹6,688 ಕೋಟಿಯನ್ನಷ್ಟೇ ಕೊಟ್ಟಿದ್ದಾರೆ.

ಪ್ರತಿಪಕ್ಷ ನಾಯಕರು ಈ ಅಂಶಗಳನ್ನು ಇಟ್ಟುಕೊಂಡು ಸಿದ್ದರಾಮಯ್ಯ ಅವರ ಸರಕಾರದ ಮೇಲೆ ಮುಗಿಬೀಳುತ್ತಿದ್ದಾರೆ. ಆದರೆ, ಕೆಲ ದಿನ ಬರ ಪರಿಹಾರದ ಬೆನ್ಹತ್ತಿ ಭರ್ಜರಿ ಪ್ರಚಾರ ಗಿಟ್ಟಿಸಿದ್ದ ಸರಕಾರ ಕೊನೆಗೆ ಆ ವಿಷಯಕ್ಕೆ ಇತಿಶ್ರೀ ಹಾಡಿ ಹಾಸನ ಪೆನ್‌ ಡ್ರೈವ್‌ ಪ್ರಕರಣದತ್ತ ಹೊರಳಿದೆ. ಅಲ್ಲಿಗೆ ಕಾಂಗ್ರೆಸ್‌ ಪಕ್ಷದ ಮುಖವಾಡ ಈ ರೀತಿಯಾಗಿ ಕಳಚಿಬಿದ್ದಿದೆ ಎನ್ನುತ್ತಾರೆ ಪ್ರತಿಪಕ್ಷ ನಾಯಕ ಆರ್.‌ಅಶೋಕ್.

Tags: bjpckcknewsnowCongressdroughtindiajdskarnatakanarendra modiPoliticssiddaramaiah
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಹಾಸನ ಪೆನ್‍ಡ್ರೈವ್ ಪ್ರಕರಣ; ಅಶ್ಲೀಲ ವಿಡಿಯೋ ಲೀಕ್‌ ಹಿಂದೆ DCM ಡಿಕೆಶಿ ಕೈ ಚಳಕ

ಹಾಸನ ಪೆನ್‍ಡ್ರೈವ್ ಪ್ರಕರಣ; ಅಶ್ಲೀಲ ವಿಡಿಯೋ ಲೀಕ್‌ ಹಿಂದೆ DCM ಡಿಕೆಶಿ ಕೈ ಚಳಕ

Leave a Reply Cancel reply

Your email address will not be published. Required fields are marked *

Recommended

ಬೆಳಗ್ಗೆ 10.15 ಗಂಟೆಗೆ ದ್ವಿತೀಯ PUC ಪರೀಕ್ಷೆ; ಶುಭವಾಗಲಿ ವಿದ್ಯಾರ್ಥಿಗಳೇ

ನಾಳೆ ಬೆಳಗ್ಗೆ 10 ಗಂಟೆಗೆ ದ್ವಿತೀಯ ಪಿಯುಸಿ ಫಲಿತಾಂಶ

2 years ago
ಬೆಲೆ ಏರಿಕೆ: ಕೊನೆಗೂ ದನಿಯೆತ್ತಿದ ಕಾಂಗ್ರೆಸ್‌ ನಾಯಕರು

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ 300 ಕೋಟಿ ರೂ. ವಹಿವಾಟು

4 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ