ಶ್ರೀ ಯೋಗಿನಾರೇಯಣ ಬಲಿಜ ಟ್ರಸ್ಟ್ ವತಿಯಿಂದ ಆಚರಣೆ
ಬಾಗೇಪಲ್ಲಿ: ಯಾರಿಂದಲೂ ಅಪಹರಿಸಲಾಗದ ಸಂಪತ್ತಾದ ವಿದ್ಯೆಯನ್ನು ಧಾರೆ ಎರೆಯುವ ಸಮಾಜಕ್ಕೆ ಮಾದರಿ ವ್ಯಕ್ತಿಗಳನ್ನು ರೂಪಿಸುವ ಕಿಂಗ್ ಮೇಕರ್ ಗಳಾದ ಗುರುಗಳ ನೆನಪಿನಲ್ಲಿ ಆಚರಣೆ ಮಾಡುತ್ತಿದ್ದೇವೆ ಎಂದು ಶ್ರೀ ಯೋಗಿನಾರೇಯಣ ಬಲಿಜ ಟ್ರಸ್ಟ್ ನ ಉಪಾಧ್ಯಕ್ಷ ಹಾಗೂ ಬಾಗೇಪಲ್ಲಿ ಪುರಸಭೆಯ ಮಾಜಿ ಉಪಾಧ್ಯಕ್ಷ ಭಾಸ್ಕರ್ ಅವರು ಹೇಳಿದರು.
ಬಾಗೇಪಲ್ಲಿ ಪಟ್ಟಣದ ಗಂಗಮ್ಮ ದೇವಸ್ಥಾನದಲ್ಲಿ ಗುರುಪೂರ್ಣಿಮ ಪ್ರಯುಕ್ತ ಶ್ರೀ ಯೋಗಿನಾರೇಯಣ ಬಲಿಜ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದರು.
ಗುರು ಪೂರ್ಣಿಮಾ ದಿನದಂದು ಸನ್ಮಾರ್ಗ ತೋರಿದ ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಗುರುಗಳನ್ನು ವಂದಿಸಲಾಗುತ್ತದೆ. ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುವವನು ಗುರು ಎನಿಸಿಕೊಳ್ಳುತ್ತಾನೆ. ನಾವು ಪ್ರತೀ ವರ್ಷ ಗುರುಪೂರ್ಣಿಮ ದಿನದಂದು ನಮ್ಮ ಟ್ರಸ್ಟ್ ವತಿಯಿಂದ ಎಲ್ಲರ ಸಹಕಾರದಿಂದ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಯೋಗಿನಾರೇಯಣ ಬಲಿಜ ಟ್ರಸ್ಟ್ ಅಧ್ಯಕ್ಷರು ಹಾಗೂ ವಕೀಲರಾದ ನಾರಾಯಣ, ಗೌರವಾಧ್ಯಕ್ಷ ಎ.ಜಿ ಸುಧಾಕರ್, ಉಪಾಧ್ಯಕ್ಷರು ಹಾಗೂ ಬಾಗೇಪಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷರಾದ ಭಾಸ್ಕರ್, ಖಜಾಂಚಿ ಗುರು ನಾನಕ್, ಮುಖಂಡರಾದ ಅಂಜಿನಪ್ಪ,ಬಾಲಾಜಿ, ಶ್ರೀನಿವಾಸ್, ಪರಗೋಡು ನರೇಶ್, ಮಂಜುಳಾ, ರೂಪ ಸೇರಿದಂತೆ ಮುಂತಾದವರು ಉಪಸ್ಥಿತಿರಿದ್ದರು.