• About
  • Advertise
  • Careers
  • Contact
Saturday, November 21, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಸಿಂಪ್ಲಿ ಸೋನಿಯಾ, ಒಮ್ಮೆ ಓದಿಬಿಡಿ

cknewsnow desk by cknewsnow desk
November 20, 2026
in CKPLUS, CKPRESS, EDITORS'S PICKS, EXCLUSIVE, NEWS & VIEWS, POLITICS
Reading Time: 2 mins read
0
ಸೋನಿಯಾ ಗಾಂಧಿ ಪುಸ್ತಕ ಖರೀದಿಗೆ ರಾಜಕೀಯ ಆಸಕ್ತರು
918
VIEWS
FacebookTwitterWhatsuplinkedinEmail

ಬಿಲಾಂಗಿಂಗ್ : ಎ ಜರ್ನಿ ಆಫ್ ಲವ್ (Belonging: A Journey of Love) ಕೃತಿ ವಿಮರ್ಶೆ

ಪುಸ್ತಕ ವಿಮರ್ಶೆ:

ಬಿಲಾಂಗಿಂಗ್ : ಎ ಜರ್ನಿ ಆಫ್ ಲವ್ (Belonging: A Journey of Love)

ಲೇಖಕರು: ಸೋನಿಯಾ ಗಾಂಧಿ; ಪ್ರಕಾಶಕರು: ಹಾರ್ಪರ್ ಕಾಲಿನ್ಸ್ ಇಂಡಿಯಾ (HarperCollins India) ಪ್ರಕಾರ: ಆತ್ಮಚರಿತ್ರೆ (Memoir)

*

ವಿಶೇಷವಾಗಿ ಈ ಕೃತಿಯಲ್ಲಿ ಗಮನ ಸೆಳೆಯುವುದು ಎಂದರೆ ಮೌನಕ್ಕೆ ಅನ್ವರ್ಥವಾದ ಸೋನಿಯಾ ಗಾಂಧಿ ಅವರು ಇಲ್ಲಿ ಮಾತನಾಡಿದ್ದಾರೆ. ಆ ಪೈಕಿ ಎಷ್ಟು ಮುಕ್ತವಾಗಿ ಮಾತನಾಡಿದ್ದಾರೆ ಎಂಬುದು ಮುಖ್ಯವೋ ಅಮುಖ್ಯವೋ ಚರ್ಚಿಸಲು ಸ್ವಲ್ಪ ಕಷ್ಟವಾಗಬಹುದು. ಇದು ಬಿಲಾಂಗಿಂಗ್ ಕೃತಿಯ ಪ್ಲಸ್ ಅಥವಾ ಮೈನಸ್ ಎನ್ನುವ ಯಾವುದೇ ಅಭಿಪ್ರಾಯಕ್ಕೆ ಬರಲಾಗದು.

*

ಮೌನ ಮತ್ತು ಗೌಪ್ಯತೆಗೆ ಹೆಸರಾಗಿದ್ದ ಸೋನಿಯಾ ಗಾಂಧಿ ಅವರು Belonging: A Journey of Love ಪುಸ್ತಕದ ಮೂಲಕ ತಮ್ಮ ಸುಮಾರು ಆರು ದಶಕಗಳ ಜೀವನ ಪಯಣವನ್ನು ಮೊದಲ ಬಾರಿಗೆ ತಮ್ಮದೇ ಸೌಮ್ಯಭಾಷೆಯಲ್ಲಿ ತೆರೆದಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪುಸ್ತಕ ಭಾರತೀಯರ ಗಮನ ಸೆಳೆದಿದೆ, ಮುಖ್ಯವಾಗಿ ರಾಜಕೀಯ ಆಸಕ್ತರು ಹೆಚ್ಚು ಕುತೂಹಲದಿಂದ ಕೃತಿಯನ್ನು ಓದುತ್ತಿದ್ದಾರೆ.

ಪುಸ್ತಕದಲ್ಲಿ ಸೋನಿಯಾ ಗಾಂಧಿ ಅವರ ಕುರಿತಾದ ಅನೇಕ ಗೊತ್ತಿಲ್ಲದ ಅಂಶಗಳಿವೆ. ಬಹುಶಃ ಅವುಗಳನ್ನು ಸೋನಿಯಾ ಎಂದಾದರೂ ಹೇಳಲೇಬೇಕಾಗುತ್ತದೆ ಎನ್ನುವ ಹಂಬಲದಿಂದ ಹೇಳಿರಬೇಕು ಅನಿಸುತ್ತದೆ. ಹಾಗೆಯೇ, ಅನೇಕ ವಿಷಯಗಳನ್ನು ಅವರು ಈಗಲೂ ಬಹಿರಂಗಪಡಿಸಿಲ್ಲ. ಅವರ ಕೌಟುಂಬಿಕ ಹಿನ್ನೆಲೆ, ರಾಜಕೀಯ ಸೂಕ್ಷ್ಮತೆಯ ದೃಷ್ಟಿಯಿಂದ ಅವರು ಅವೆಲ್ಲವನ್ನು ಗೌಪ್ಯವಾಗಿ ಇರಿಸಿರಬಹುದು.

ಇಟಲಿಯ ಸಣ್ಣ ಪಟ್ಟಣ ಓರ್ಬಸ್ಸಾನೊದಲ್ಲಿ ಸೋನಿಯಾ ಅವರು ಕಳೆದ ಬಾಲ್ಯ, ಕೇಂಬ್ರಿಡ್ಜ್‌ನಲ್ಲಿ ರಾಜೀವ್ ಗಾಂಧಿ ಅವರೊಂದಿಗಿನ ಭೇಟಿ ಮತ್ತು ಪ್ರೇಮ, ಆ ಸಂದರ್ಭದಲ್ಲಿ ಕೆಲ ಆಪ್ತ ಘಟನೆಗಳನ್ನು ಅವರು ಬಹಳ ಪ್ರೀತಿಯಿಂದ ಬರೆದಿದ್ದಾರೆ. ಆಮೇಲೆ ರಾಜೀವ್ ಅವರನ್ನು ಮದುವೆಯಾಗಿ ಭಾರತಕ್ಕೆ ಬಂದು ಭಾರತೀಯ ಸಂಸ್ಕೃತಿಗೆ ಒಗ್ಗಿಕೊಂಡ ರೀತಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಗಳ ಆಘಾತ, ಹಾಗೂ ಅನಿವಾರ್ಯವಾಗಿ ರಾಜಕೀಯ ಪ್ರವೇಶಿಸಿ 2004ರಲ್ಲಿ ಪ್ರಧಾನಿ ಹುದ್ದೆಯನ್ನು ನಿರಾಕರಿಸಿದ ಘಟನೆಗಳವರೆಗೆ ಈ ಕೃತಿ ಬೆಳೆದುಕೊಂಡು ಹೋಗಿದೆ. ಕೆಲ ಸೂಕ್ಷ್ಮ ಸಂಗತಿಗಳನ್ನು ಹೇಳಿದಂತೆಯೇ ಹೇಳಿ, ಇನ್ನಷ್ಟು ಮಹತ್ವದ ಸಂಗತಿಗಳನ್ನು ಮುಚ್ಚಿಟ್ಟ ಹಾಗೆಯೂ ಕಾಣುತ್ತದೆ. ಯಾಕೆ ಎಂದು ಪ್ರಶ್ನೆ ಇಲ್ಲಿ ನಗಣ್ಯ. ಅದು ಲೇಖಕರ ಇಚ್ಛೆಗೆ ಬಿಟ್ಟದ್ದು.

ಆದರೆ, ವಿಶೇಷವಾಗಿ ಈ ಕೃತಿಯಲ್ಲಿ ಗಮನ ಸೆಳೆಯುವುದು ಎಂದರೆ ಮೌನಕ್ಕೆ ಅನ್ವರ್ಥವಾದ ಸೋನಿಯಾ ಗಾಂಧಿ ಅವರು ಇಲ್ಲಿ ಮಾತನಾಡಿದ್ದಾರೆ. ಆ ಪೈಕಿ ಎಷ್ಟು ಮುಕ್ತವಾಗಿ ಮಾತನಾಡಿದ್ದಾರೆ ಎಂಬುದು ಮುಖ್ಯವೋ ಅಮುಖ್ಯವೋ ಚರ್ಚಿಸಲು ಸ್ವಲ್ಪ ಕಷ್ಟವಾಗಬಹುದು. ಇದು ಬಿಲಾಂಗಿಂಗ್ ಕೃತಿಯ ಪ್ಲಸ್ ಅಥವಾ ಮೈನಸ್ ಎನ್ನುವ ಯಾವುದೇ ಅಭಿಪ್ರಾಯಕ್ಕೆ ಬರಲಾಗದು.

ಹೀಗಿದ್ದರೂ ಭಾರತದ ಓರ್ವ ಪ್ರಭಾವಿ ನಾಯಕಿಯಾಗಿ, ಅತ್ಯಂತ ಹಳೆಯ ರಾಜಕೀಯ ಪಕ್ಷದ ಮಾಜಿ ಅಧ್ಯಕ್ಷೆಯಾಗಿ ಅವರು ಬರೆದಿರುವ ಎಲ್ಲಾ ವಿಷಯಗಳಿಗೆ ಭಾರತದಲ್ಲಿ ಎಲ್ಲಿಲ್ಲದ ಮಹತ್ವ ಒದಗಿಬಂದಿದೆ. ಆದರೆ, ರಾಜಕೀಯ ವಿಚಾರಗಳಿಗಿಂತ ಅವರ ವೈಯಕ್ತಿಕ ಸಂಗತಿಗಳ ಕುರಿತಂತೆ ಹೆಚ್ಚು ಚರ್ಚೆಗೆ ಈ ಪುಸ್ತಕ ಒಳಗಾಗಿದೆ.

ಮುಖಪುಟದಿಂದಲೇ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಪುಸ್ತಕ ಸಾಮಾಜ್ಯ ಓದುಗನನ್ನು ಕಟ್ಟಿಹಾಕಿಬಿಡುತ್ತದೆ. ಈ ಮುಖಪುಟ ಚಿತ್ರವೂ ಬಹಳ ಕಾಲದಿಂದ ಗೌಪ್ಯವಾಗಿಯೇ ಉಳಿದು ಈಗ ಬೆಳಕು ಕಂಡಿದೆ. ಹೀಗಾಗಿ ಪುಸ್ತಕಕ್ಕೆ ಒಂದು ರೀತಿಯ ಹೊಳಪು ಬಂದು, ಓದಿನತ್ತ ಎಳೆಯುತ್ತದೆ. ಓದುತ್ತಾ ಹೋದಂತೆಲ್ಲ ಭಾವನಾತ್ಮಕ ಮತ್ತು ಆತ್ಮೀಯ ನಿರೂಪಣೆ ಬಹಳ ಇಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಪುಸ್ತಕ ಅವರ ಕುಟುಂಬದ ಅಥವಾ ಅವರ ಪಕ್ಷದ ಇತಿಹಾಸವಾಗಿ ಅಷ್ಟೇ ಸೀಮಿತವಾಗದೆ ಅತ್ಯಂತ ಸಾಮಾನ್ಯ ವಿದೇಶಿ ಹೆಣ್ಣುಮಗಳೊಬ್ಬಳು ತನ್ನದಲ್ಲದ ದೇಶವನ್ನು ತಾಯ್ನಾಡನ್ನಾಗಿ, ಕರ್ಮಬುನಿಯನ್ನಾಗಿ ಸ್ವೀಕರಿಸಿದ ಭಾವನಾತ್ಮಕ ಚಿತ್ರಣದ, ಪಯಣದ ಕತೆಯಾಗಿದೆ. ಹೀಗಾಗಿ ಈ ಪುಸ್ತಕಕ್ಕೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಎಂಬ ಹೆಸರನ್ನು ಸೋನಿಯಾ ಅವರು ಇಟ್ಟಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಉಳಿದಂತೆ ರಾಜೀವ್ ಗಾಂಧಿ ಅವರೊಂದಿಗಿನ ಪ್ರೇಮ, ಸಂಸಾರ ಮತ್ತು ಇಂದಿರಾ ಗಾಂಧಿ ಅವರೊಂದಿಗಿನ ಬಾಂಧವ್ಯವನ್ನು ಅತ್ಯಂತ ಆಪ್ತವಾಗಿ ಸೋನಿಯಾ ಅವರು ಚಿತ್ರಿಸಿದ್ದಾರೆ.

ಈ ಮೊದಲು ಪೆಂಗ್ವಿನ್ ನವರು ಪುಸ್ತಕವನ್ನು ಪ್ರಕಾಶಿಸಬೇಕಿತ್ತು. ಅವರು ಹಿಂದಕೆ ಹೋದ ಮೇಲೆ ಹಾರ್ಪರ್ ಕಾಲಿನ್ಸ್ ನವರು ಮುಂದೆ ಬಂದು ಪ್ರಕಟಿಸಿದ್ದಾರೆ. ಅದಕ್ಕೂ ಮಿಗಿಲಾಗಿ ಸೋನಿಯಾ ಗಾಂಧಿ ಅವರು ಸರಳವಾಗಿ ನಿರೂಪಿಸಿದ್ದಾರೆ. ಭಾಷೆಯಲ್ಲಿ ಎಲ್ಲಿಯೂ ಅಬ್ಬರ, ಆಡಂಬರ ಕಾಣುವುದಿಲ್ಲ. ಸಾಧ್ಯವಾದಷ್ಟು ಓದುಗರಿಗೆ ನೇರವಾಗಿ ಸಂವಾದಿಯಾಗುವ ರೀತಿಯಲ್ಲಿ ಸರಳವಾಗಿ ಬರೆದಿದ್ದಾರೆ. ಜತೆಗೆ, ಪುಸ್ತಕದಲ್ಲಿ ಅಡಕವಾಗಿರುವ ಛಾಯಾಚಿತ್ರಗಳು ಹೆಚ್ಚು ಗಮನ ಸೆಳೆಯುತ್ತವೆ.

ತಮ್ಮ ಪತಿ ರಾಜೀವ್ ಗಾಂಧಿ ಮತ್ತು ತಮ್ಮ ಅತ್ತೆ ಇಂದಿರಾ ಗಾಂಧಿ ಅವರ ಮರಣಗಳ ಕುರಿತ ಬರವಣಿಗೆಯ ವಿಷಯದಲ್ಲಿ ಅವರು ಬಹಳ ಎಚ್ಚರಿಕೆ ವಹಿಸಿದ್ದಾರೆ. ಅವರ ನೋವು, ತಲ್ಲಣಗಳು ಸ್ಪಷ್ಟವಾಗಿ ಅನಾವರಣಗೊಂಡಿವೆ. ಅದಾದ ಮೇಲೆ ಮಕ್ಕಳನ್ನು ಬೆಳೆಸುವ ರೀತಿ, ಸವಾಲುಗಳು, ರಾಜಕೀಯ ಏಳುಬೀಳು ಇತ್ಯಾದಿ ಅಂಶಗಳು ಗಮನಸೆಳೆಯುವ ರೀತಿಯಲ್ಲಿ ಚಿತ್ರತವಾಗಿದೆ. ವಿಲ್ಲಾ ಸಂಗತಿಗಳಲ್ಲಿ ಸೋನಿಯಾ ಅವರು ಎದುರಿಸಿದ ಕಷ್ಟ ಕೂಡ ಪುಸ್ತಕದಲ್ಲಿ ಉಲ್ಲೇಖವಾಗಿವೆ. ಬದುಕಿನಲ್ಲಿ ಅವರು ಎದುರಿಸಿದ ನೋವುಗಳೆಲ್ಲವೂ ಹಾಗೆಯೇ ಬೆಂದು ಬೆಂದು ಈಗ ಹೊರಗೆ ಬಂದಷ್ಟು ಉತ್ಕಟತೆಯಿಂದ ಓದಿಸಿಕೊಂಡು ಹೋಗುತ್ತವೆ.

ಕಟುವಾದ ವಿಮರ್ಶಾತ್ಮಕ ದೃಷ್ಟಿಯಿಂದ ನೋಡಿದರೆ ಸೋನಿಯಾ ಗಾಂಧಿ ಅವರ ಕೃತಿಯ ಇತಿಮಿತಿಗಳು ಗೋಚರವಾಗುತ್ತವೆ. ಅವರು ಮನಸ್ಸು ಮಾಡಿದ್ದರೆ ರಾಜಕೀಯ ವಿಚಾರಗಳನ್ನು ಇನ್ನಷ್ಟು ಗಾಢವಾಗಿ ಹೇಳಬಹುದಿತ್ತು. ಏಕೆಂದರೆ, ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷಕ್ಕೆ ಪ್ರವೇಶ ಆದಮೇಲೆ ಭಾರತ ಅನೇಕ ಪಲ್ಲಟಗಳನ್ನು ಕಂಡಿದೆ. ಕಾಂಗ್ರೆಸ್ ಪಕ್ಷವು ಆ ಪಲ್ಲಟಗಳ ಭಾಗವಾಗಿತ್ತು ಎಂಬುದು ನಿರ್ವಿವಾದ.

ಅಟಲ್ ಬಿಹಾರಿ ವಾಜಪೇಯಿ ಹಾಗೂ ಲಾಲ್ ಕೃಷ್ಣ ಆಡ್ವಾಣಿ ಅವರು ಬಿಜೆಪಿಯ ಪ್ರಶ್ನಾತೀತ ನಾಯಕರಾಗಿದ್ದ ಕಾಲದಲ್ಲಿ ಸೋನಿಯಾ ಗಾಂಧಿ ಅವರು ರಾಜಕೀಯವಾಗಿ ಅಷ್ಟೇನೂ ಸಬಲರಾಗಿರಲಿಲ್ಲ. ಅವರ ಪಕ್ಷವು ಸತತ ಸತತ ಸೋಲುಗಳು, ಪ್ರಮುಖ ನಾಯಕರ ನಿರಂತರ ನಿರ್ಗಮನದಿಂದ ಹೈರಾಣವಾಗಿತ್ತು. ಅಂತಹ ಸಂದರ್ಭದಲ್ಲಿ ಇಂಡಿಯಾ ಶೈನಿಂಗ್ ಎಂದು ಸರಿಸಾಟಿ ಇಲ್ಲದ ನಾಯಕರಾಗಿ ಮೆರೆದಿದ್ದ ವಾಜಪೇಯಿ ಯುಗವನ್ನು ಸದ್ದಿಲ್ಲದೆ ಅಂತ್ಯಗೊಳಿಸಿದ್ದರು ಸೋನಿಯಾ ಅವರು. ಆ ನಂತರ ಅವರು ಡಾ.ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ಸತತ ಎರಡು ಅವಧಿಗಳಿಗೆ ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ, ಇನ್ನೂ ಹಲವಾರು ಪಕ್ಷಗಳಿಗೆ ಅಧಿಕಾರ ಸಿಗುವಂತೆ ಮಾಡಿದ್ದರು. ಆ ಬಗ್ಗೆ ಅವರು ಬರೆಯಬೇಕಿತ್ತು. ಮುಖ್ಯವಾಗಿ ಕಾಂಗ್ರೆಸ್ ನಲ್ಲಿಯೇ ಇದ್ದುಕೊಂಡು ಇನ್ನೊಂದು ಪಕ್ಷಕ್ಕೆ ಹೆಗಲು ಕೊಟ್ಟ ಪಕ್ಷದ್ರೋಹಿಗಳ ಕುರಿತು ಕೊಂಚವಾದರೂ ಬೆಳಕು ಚೆಲ್ಲಬೇಕಿತ್ತೇನೋ.. ಬಹುಶಃ ಅವರು ಇನ್ನೊಂದು ಆವೃತ್ತಿ ಬರೆದರೆ ಅದನೆಲ್ಲಾ ಬರೆಯುತ್ತಾರೆ ಎಂದು ನಾವು ನಿರೀಕ್ಷೆ ಮಾಡಬಹುದಷ್ಟೇ.

ಇದು ರಾಜಕೀಯ ಆತ್ಮಕಥೆಯಲ್ಲ; ಕೇವಲ ರಾಜಕೀಯ ಇಲ್ಲಿ ಹಿನ್ನೆಲೆಯಾಗಿ ಬಂದು ಹೋಗುತ್ತದೆ. ಮುನ್ನೆಲೆಯಲ್ಲಿ ಸಾಮಾನ್ಯ ಹೆಣ್ಣೊಬ್ಬಳು ಅಸಾಮಾನ್ಯಳಾಗಿ ಬೆಳೆಯುವ ಸುದೀರ್ಘ ಪಯಣದಲ್ಲಿ ಬರುವ ಸಂತೋಷ, ಸಡಗರ, ನೋವು ನಲಿವು, ತಾಯ್ತನ, ಹುಟ್ಟು ಸಾವುಗಳ ಜತೆಗೆ ತಲ್ಲಣಗಳ ಚಿತ್ರಣ ಸೋನಿಯಾ ಗಾಂಧಿ ಅವರನ್ನು ಬೇರೆ ರೂಪದಲ್ಲಿ ನಮ್ಮ ಮುಂದೆ ನಿಲ್ಲಿಸುತ್ತದೆ. ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕವು ಪ್ರೀತಿ, ತ್ಯಾಗ, ನೋವುಗಳ ಮೂಲಕ ಸಂಬಂಧಗಳ ಮಾಲೆಯನ್ನು ಸೃಷ್ಟಿಸಿ ಭಾರತವನ್ನು ಒಳಗೊಳ್ಳುವ ಪ್ರೇರಣಾತ್ಮಕ ಕಥಾನಕವಾಗಿದೆ. ಈ ಪುಸ್ತಕದ ಓದು ಚಿರಕಾಲ ಮನಸ್ಸಿನಲ್ಲಿ ಉಳಿಯುತ್ತದೆ.

– ಹೆಚ್.ಜಿ. ಕವಿತ, ಸಂಪಾದಕಿ

Photo courtesy: Sonia Gandhi & Harper Collins

Tags: autobiography of Sonia GandhiBelonging: A Journey of Lovebook reviewcongress partyindira gandhiItaly to indiarajiv gandhiSonia Gandhi
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಗ್ರಾಮೀಣ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದೃಢೀಕರಣ

ಗ್ರಾಮೀಣ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದೃಢೀಕರಣ

by cknewsnow desk
November 18, 2026
0

ಇನ್ನು ಮುಂದೆ ಅಂಗೈನಲ್ಲಿ ಆಸ್ತಿ ದಾಖಲೆ

Belonging: A Journey of Love

ಸೋನಿಯಾ ಗಾಂಧಿ ಆತ್ಮಚರಿತ್ರೆ #BelongingA JourneyofLove ಓದಲ್ಲ

by cknewsnow desk
November 18, 2026
0

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿಕೆ

Belonging: A Journey of Love

Belonging: A Journey of Love

by cknewsnow desk
November 18, 2026
0

ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆಯ ಚಿತ್ರಗಳು

ಕಾವೇರಿ ಬಿಕ್ಕಟ್ಟು; ಮೋದಿ ಮಧ್ಯಪ್ರವೇಶಕ್ಕೆ ಹೆಚ್.ಡಿ.ದೇವೇಗೌಡರ ಒತ್ತಾಯ

ಕಾವೇರಿ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ದೇವೇಗೌಡರ ಪತ್ರ

by cknewsnow desk
November 17, 2026
0

ಮೇಕೆದಾಟು ಯೋಜನೆಗೆ ಅನುಮತಿ ನೀಡಿ, ಕಾವೇರಿ ನ್ಯಾಯಮಂಡಳಿ ತೀರ್ಪು ಮರು ಪರಿಶೀಲಿಸಿ ಎಂದು ಆಗ್ರಹ

ರಾಜ್ಯ ರಾಜಕಾರಣಕ್ಕೆ ಬರ್ತೀರಾ ಎಂದರೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಎಂದ HDK

ರಾಜ್ಯ ರಾಜಕಾರಣಕ್ಕೆ ಬರ್ತೀರಾ ಎಂದರೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಎಂದ HDK

by cknewsnow desk
November 15, 2026
0

ರಾಷ್ಟ್ರ ರಾಜಕಾರಣದಲ್ಲಿ ಎಷ್ಟೇ ಬ್ಯುಸಿ ಇದ್ದರೂ ರಾಮನಗರಕ್ಕೆ ಸಮಯ ಕೊಡುತ್ತೇನೆ

ಶ್ರೀ ಹಾಸನಾಂಬೆ ದರ್ಶನೋತ್ಸವ, ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ #live

ಶ್ರೀ ಹಾಸನಾಂಬೆ ದರ್ಶನೋತ್ಸವ, ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ #live

by cknewsnow desk
November 15, 2026
0

ಭಕ್ತರಿಂದ ಕಳೆಗಟ್ಟಿದ ಹಾಸನ ನಗರ

Leave a Reply Cancel reply

Your email address will not be published. Required fields are marked *

Recommended

30 ವರ್ಷಗಳ ಭಾರತ; ಆಡ್ವಾಣಿ ಮತ್ತು ಜೋಷಿ ಅವರ ನಂತರ ಝಗಮಗಿಸುತ್ತಿರುವ ಬಿಜೆಪಿ

ಲಾಲಕೃಷ್ಣ ಆಡ್ವಾಣಿ: ರಾಷ್ಟ್ರವಾದಿ ರಾಜಕಾರಣದ ಮಹಾನ್ ನೇತಾರ

7 days ago
ಶಿಕ್ಷಣ, ಶಿಕ್ಷಕ ಮತ್ತು ಬದಲಾವಣೆ; ನೂತನ ಶಿಕ್ಷಣ ನೀತಿಯ ಹೊತ್ತಿನಲ್ಲಿ ಓಶೋ ಜೋಶ್..

ಓಶೋ: ಬೆರಗು, ಬೆಡಗು ಮತ್ತು ವಿಸ್ಮಯ

3 years ago

Popular News

  • ಸೋನಿಯಾ ಗಾಂಧಿ ಪುಸ್ತಕ ಖರೀದಿಗೆ ರಾಜಕೀಯ ಆಸಕ್ತರು

    ಸಿಂಪ್ಲಿ ಸೋನಿಯಾ, ಒಮ್ಮೆ ಓದಿಬಿಡಿ

    0 shares
    Share 0 Tweet 0
  • ಗ್ರಾಮೀಣ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದೃಢೀಕರಣ

    0 shares
    Share 0 Tweet 0
  • ಸೋನಿಯಾ ಗಾಂಧಿ ಆತ್ಮಚರಿತ್ರೆ #BelongingA JourneyofLove ಓದಲ್ಲ

    0 shares
    Share 0 Tweet 0
  • Belonging: A Journey of Love

    0 shares
    Share 0 Tweet 0
  • ಕಾವೇರಿ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ದೇವೇಗೌಡರ ಪತ್ರ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಸೋನಿಯಾ ಗಾಂಧಿ ಪುಸ್ತಕ ಖರೀದಿಗೆ ರಾಜಕೀಯ ಆಸಕ್ತರು

ಸಿಂಪ್ಲಿ ಸೋನಿಯಾ, ಒಮ್ಮೆ ಓದಿಬಿಡಿ

November 20, 2026
ಗ್ರಾಮೀಣ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದೃಢೀಕರಣ

ಗ್ರಾಮೀಣ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದೃಢೀಕರಣ

November 18, 2026
Belonging: A Journey of Love

ಸೋನಿಯಾ ಗಾಂಧಿ ಆತ್ಮಚರಿತ್ರೆ #BelongingA JourneyofLove ಓದಲ್ಲ

November 18, 2026
Belonging: A Journey of Love

Belonging: A Journey of Love

November 18, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ