ನವದೆಹಲಿ: ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅತಿದೊಡ್ಡ ಕೋಲಾಹಲಕ್ಕೆ ಕಾರಣವಾಗಿದ್ದ ರಫೆಲ್ ಯುದ್ಧ ವಿಮಾನಗಳ ಗಲಾಟೆಯ ಸದ್ದಡಗಿ ಬಹಳ ದಿನಗಳೇ ಆಗಿದ್ದು, ಸಂಸತ್ತಿನ ಹೊರಗೆ ಮತ್ತು ಒಳಗೆ ಭಾರೀ ತಿಕ್ಕಾಟಕ್ಕೆ ಈಗ ಎಂಡ್ ಕರ‍್ಡು ಬಿದ್ದಿದೆ. ಏಕೆಂದರೆ, ಮೊದಲ ಕಂತನ ಭಾಗವಾಗಿ ಫ್ರಾನ್ಸ್ʼನಿಂದ ಐದು ರಫೆಲ್ ವಿಮಾನಗಳು ಭಾರತವನ್ನು ಸೇರಿಕೊಂಡಿವೆ. ಅವು ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ನಿಂತಿವೆ.
ಜುಲೈ 29ರ ಬುಧವಾರ ಭಾರತದ ಮಟ್ಟಿಗೆ ಬಹುದೊಡ್ಡ ಸುದ್ದಿಯಾಗಿದ್ದ ರಫೆಲ್ ವಿಮಾನಗಳ ಆಗಮನ, ಸಂಜೆಯಾದರೂ ಅದರ ಅಬ್ಬರ ತಗ್ಗಿರಲಿಲ್ಲ. ಎಲ್ಲ ನ್ಯೂಸ್ ಚಾನೆಲ್ʼಗಳಲ್ಲಿ ಅವುಗಳ ಬಗ್ಗೆಯೇ ರ‍್ಚೆ ಹಾಗೂ ಚೀನಾ ಆಕ್ರಮಣಕಾರಿತನಕ್ಕೆ ಇದೊಂದು ದಿಟ್ಟ ಉತ್ತರ ಎಂದು ಅನೇಕರು ತಮ್ಮತಮ್ಮ ಅಭಿಪ್ರಾಯಗಳನ್ನು ತಮ್ಮದೇ ಶೈಲಿಯಲ್ಲಿ ಹೇಳುತ್ತಿದ್ದರು, ಇನ್ನು ಕೆಲವರು ವಾದಿಸುತ್ತಿದ್ದರು. ಇದೆಲ್ಲದರ ನಡುವೆ ರಫೆಲ್ ಬಗ್ಗೆ ದೇಶಾದ್ಯಂತ ರಾಡಿ ಎಬ್ಬಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತ್ರ ದನಿ ಎತ್ತಲಿಲ್ಲ. ಅವರ ಪಕ್ಷದ ನಾಯಕರಾರೂ ದೂಸರಾ ಮಾತಾಡಲೇ ಇಲ್ಲ. ಬಹುತೇಕ ಟೀವಿ ನಿರೂಪಕರ ವಾಗ್ಬಾಣಗಳು ಹಾಗೂ ಬಿಜೆಪಿ ಕಡೆಯಿಂದ ಬಂದ ಸರಣಿ ಟ್ವೀಟುಗಳು ಅವರನ್ನು ಸೈಲಂಟ್ ಮಾಡಿಬಿಟ್ಟಿದ್ದವು. ರಫೆಲ್ ವಿಮಾನಗಳ ರೋಚಕ ಆಗಮನ, ಅದಕ್ಕಿಂತ ಮೊದಲು ಲಡಾಕಿನಲ್ಲಿ ಚೀನಾದೊಂದಿಗೆ ನಡೆದಿದ್ದ ಲಡಾಯಿ ಕಾಂಗ್ರೆಸ್ಸಿನ ದನಿಯನ್ನು ಮತ್ತಷ್ಟು ಅಡಗಿಸಿಬಿಟ್ಟಿತ್ತು.
ಫ್ರಾನ್ಸ್ ಮೂಲದ ಡಸಾಲ್ಟ್ ಕಂಪನಿ ಪೂರೈಕೆ ಮಾಡಿರುವ ಈ ವಿಮಾನಗಳ ಬಗ್ಗೆ, ಅವುಗಳ ಸಾರ‍್ಥ್ಯದ ಬಗ್ಗೆ ಇಡೀ ಜಗತ್ತಿನಲ್ಲಿ ಯಾರೂ ಚಕಾರ ಎತ್ತುತ್ತಿಲ್ಲ. ರಷ್ಯದ ಸುಖೋಯ್ ಮತ್ತು ಅಮೆರಿಕದ ಮಿಗ್ ಸರಣಿ ವಿಮಾನಗಳಿಗಿಂತ ರಫೆಲ್ ಫೈಟರ್ ವಿಮಾನಗಳು ಬಲಶಾಲಿ ಎಂದು ಹೇಳಲಾಗುತ್ತಿದೆ. ಬೆಳಗ್ಗೆಯಿಂದ ಸುದ್ದಿವಾಹಿನಿಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದ ತಜ್ಞರೆಲ್ಲರೂ ಮಿಗ್ ಮತ್ತು ಸುಖೋಯ್ʼಗಿಂತಲೂ ರಫೆಲ್ ಹೆಚ್ಚು ಬಲಿಷ್ಠ ಎಂದು ಹೇಳುತ್ತಲೇ ಇದ್ದರು. ಇದರ ಮಧ್ಯೆ ವಾಯುಪಡೆಯ ನಿವೃತ್ತ ಸೇನಾಧಿಕಾರಿಯೊಬ್ಬರು, ರಫೆಲ್ ಬಲದ ಬಗ್ಗೆ ಶಂಕೆ ಇಲ್ಲ ಎನಿಸುತ್ತಿದೆ. ಅದು ಇದುವೆರೆಗೂ ಯಾವ ಯುದ್ಧದಲ್ಲಿ ತನ್ನ ತಾಕತ್ತು ತೋರಿದ ಬಗ್ಗೆ ಮಾಹತಿ ಇಲ್ಲ. ಹಾಗಂತ ಮಿಗ್ ಮತ್ತು ಸುಕೋಯ್ ವಿಮಾನಗಳ ಶಕ್ತಿಯನ್ನು ಅಲ್ಲಗಳೆಯುವಂತಿಲ್ಲ ಎಂದು ತಮ್ಮ ವಾದ ಮಂಡಿಸಿದ್ದರು. ಯಾವುದೇ ತಾಂತ್ರಿಕ ಮಾಹಿತಿ ಇಲ್ಲದೇ ಸಿಕ್ಕಿದ ಹಳೆಯ ರಫೆಲ್ ಫೂಟೇಜುಗಳನ್ನೇ ತಿರುಗಿಸಿ ತಿರುಗಿಸಿ ತೆರೆಯ ಮೇಲೆ ಹಾಕುತ್ತಿದ್ದ ಆ ಸುದ್ದಿ ನಿರೂಪಕ ತದ ನಂತರ ಸುಮ್ಮನಾಗಿದ್ದರು.
ಲ್ಯಾಂಡಿಂಗ್ ಆಗುವುದರ ಮೇಲೆ ನಿಗಾ:
ರಫೆಲ್ ಫೈಟರ್ ಜೆಟ್‌ಗಳು ಅದೆಷ್ಟು ಬಲಶಾಲಿ ಹಾಗೂ ಅವುಗಳನ್ನು ಅದೆಷ್ಟು ಸೂಕ್ಷ್ಮವಾಗಿ ತನ್ನ ವಾಯುನೆಲೆಗೆ ಬರಮಾಡಿಕೊಳ್ಳಬೇಕು ಎಂಬ ಬಗ್ಗೆ ವಾಯುಪಡೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿತ್ತು. ಅದರ ಭಾಗವಾಗಿ ಅಂಬಾಲ ವಾಯುನೆಲೆಯ ಸುತ್ತಮುತ್ತಲ ಪ್ರದೇಶವನ್ನು ತೀವ್ರ ನಿಗಾದಲ್ಲಿಟ್ಟಿತ್ತು. ವಿದೇಶಿ ಬೇಹುಗಾರಿಕೆ ಬಗ್ಗೆ ಎಚ್ಚರ ವಹಿಸಿತ್ತು. ಭದ್ರತೆಯನ್ನು ಕೂಡ ಬಿಗಿ ಮಾಡಿತ್ತು. ಹೆಚ್ಚೂಕಮ್ಮಿ ವಾಯುನೆಲೆ ಸುತ್ತ 3 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋಣ್ʼಗಳನ್ನು ಹಾರಿಸುವುದನ್ನು ನರ‍್ಬಂಧಿಸಿತ್ತು. ಅಕ್ಕಪಕ್ಕದ 4 ಗ್ರಾಮಗಳಲ್ಲಿ 144 ಪ್ರಕಾರ ನಿಷೇಧಾಜ್ಞೆ ವಿಧಿಸಲಾಗಿತ್ತು. ಅಷ್ಟೇ ಅಲ್ಲದೆ, ರಫೆಲ್ʼಗಳು ಲ್ಯಾಂಡ್ ಆಗುವ ವೇಳೆ ಮನೆಯ ಮೇಲೆ ಅಥವಾ ಮರಗಳ ಮೇಲೆ ಹತ್ತಿ ವಿಡಿಯೋ ಮಾಡಿ ಜಾಲತಾಣಗಳಿಗೆ ಹರಿಯಬಿಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿತ್ತು.
ಹೊರಟಿದ್ದು, ಬಂದು ಸೇರಿದ್ದು:
ಸೋಮವಾರ (ಜುಲೈ 28) ಫ್ರಾನ್ಸ್‌ನಿಂದ ಸುಖೋಯ್ ವಿಮಾನಗಳೆರಡರ ಎಸ್ಕರ‍್ಟಿನಲ್ಲಿ ಹೊರಟ ರಫೆಲ್ ವಿಮಾನಗಳು ದಾರಿಯ ನಡುವೆಯೇ ಯುಎಇ ವಾಯುನೆಲೆಯಲ್ಲಿ ಮಂಗಳವಾರ ಇಳಿಸಲಾಗಿತ್ತು. ಬುಧವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ಅಲ್ಲಿಂದ ಹೊರಟು ೩,೩೦ರ ಸುಮಾರಿಗೆ ಅಂಬಾಲ ವಾಯುನೆಲೆಯಲ್ಲಿ ಭೂಸ್ರ‍್ಶ ಮಾಡಿದವು. ವಿಮಾನಗಳ ಇಡೀ ಪ್ರಯಾಣದ ಮೇಲೆ ಫ್ರಾನ್ಸ್ ಮತ್ತು ಭಾರತೀಯ ವಾಯುಪಡೆಗಳು ತೀವ್ರ ನಿಗಾ ಇರಿದ್ದವು ಎಂದು ಅಧಿಕಾರಿಳು ಹೇಳಿದ್ದಾರೆ. ಇದೆಲ್ಲ ಹಿನ್ನೆಲೆಯನ್ನು ಗಮನಿಸಿದರೆ, ರಫೆಲ್ ಫೈಟರುಗಳು ಎಷ್ಟು ಮಹತ್ವದವು ಎಂಬುದು ಗೊತ್ತಾಗುತ್ತದೆ. ಇನ್ನು ಅಂಬಾಲಾ ವಾಯುನೆಲೆಯಲ್ಲಿ ಈ ವಿಮಾನಗಳಿಗೆ ವಾಯುಪಡೆ ಮುಖ್ಯಸ್ಥ ಏರ್ʼಚೀಫ್ ಮಾರ‍್ಷಲ್ ಆರ್.ಕೆ.ಎಸ್ ಭದೌರಿಯಾ ಸ್ವಾಗತ ಕೋರಿದ್ದಾರೆ.
ಈ ವಿಮಾನಗಳ ತಾಕತ್ತಿಗೆ ಇಲ್ಲೊಂದು ಉದಾಹರಣೆ ಇದೆ. ಸೋಮವಾರ ಫ್ರಾನ್ಸ್‌ನಿಂದ ಹೊರಟ ವಿಮಾನಗಳು ಬರೋಬ್ಬರಿ 7,000 ಕಿ.ಮೀ ದೂರವನ್ನು ಒಂದೇ ದಿನದಲ್ಲಿ ಕ್ರಮಿಸಿ ಮಂಗಳವಾರ ಯುಎಇ ವಾಯುನೆಲೆಯಲ್ಲಿ ಕೆಳಗಿಳಿದವು. ರಫೆಲ್ ಫೈಟರ್ ವಿಮಾನದಲ್ಲಿ 3 ಸಿಂಗಲ್-ಸೀಟರ್, ಎರಡು ಅವಳಿ ಆಸನಗಳ ವ್ಯವಸ್ಥೆ ಇದೆಯಂತೆ.
ಈಗ ಬಂದಿರುವ ರಫೆಲ್ʼಗಳು ಅಂಬಾಲದಲ್ಲಿಯೇ ಬೀಡುಬಿಡಲಿವೆ. ಮತ್ತೆ ಬರುವ ಉಳಿದ ವಿಮಾನಗಳಿಗೂ ಇಲ್ಲಿಯೇ ಜಾಗ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ರಕ್ಷಣಾ ವ್ಯೂಹದ ಕಾರಣಕ್ಕೆ ಅಷ್ಟೂ ವಿಮಾನಗಳನ್ನು ಒಂದೆಡೆ ಇರಿಸುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಲಾಗುತ್ತಿದೆ.
ರಾಜನಾಥ್ ಸಂಭ್ರಮ:
ರಫೆಲ್ ವಿಮಾನಗಳು ಫ್ರಾನ್ಸ್ʼನಿಂದ ಹೊರಟಾಗಿನಿಂದ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಫೆಲ್ ಫೈಟರುಗಳು ಭಾರತಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಸಂತೋಷದೊಂದ ಸರಣಿ ಟ್ವೀಟುಗಳನ್ನು ಮಾಡಿದ್ದಾರೆ.
ರಫೇಲ್ ವಿಮಾನಗಳು ನಮ್ಮ ನೆಲಕ್ಕೆ ಬಂದಿಳಿದಿವೆ. ಇನ್ನು ರಫೇಲ್ ಕುರಿತಂತೆ ಸುಳ್ಳು ಆರೋಪಗಳಿಗೆ ಅವಕಾಶವಿಲ್ಲ. ಅವಕ್ಕೆಲ್ಲ ಈಗಾಗಲೇ ಉತ್ತರ ನೀಡಿದ್ದೇವೆ. ಮುಂದೆಯೂ ಯಾರಿಗಾದರೂ ಈ ಬಗ್ಗೆ ಅನುಮಾನ, ವಿರೋಧ, ಅಸಮಾಧಾನ ಇದ್ದರೆ ನಾವು ಅವರಿಗೆ ಸೂಕ್ತ ಉತ್ತರ ನೀಡಲು ತಯಾರಿದ್ದೇವೆ. ಈ ಸಂದರ್ಭದಲ್ಲಿ ನಾನು ನಮ್ಮ ಹೆಮ್ಮಯ ವಾಯುಪಡೆಯನ್ನು ಹೃತ್ಪರ‍್ವಕವಾಗಿ ಅಭಿನಂದಿಸುತ್ತೇನೆ. ರಫೇಲ್ ಸೇರ‍್ಪಡೆ ಮೂಲಕ ವಾಯುಪಡೆಯ ಶಕ್ತಿ ಹೆಚ್ಚಾಗಿದೆ. ನನಗೆ ಬಹಳ ಸಂತೋಷವಾಗಿದೆ ಎಂದು ರಾಜನಾಥ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.
ಈಗ ನಿರ್ಣಾಯಕ:
ಯಾರೂ ಏನೇ ತೆಗೆದರೂ ರಫೆಲ್ ವಿಮಾನಗಳು ಮುಂದಿನ ದಿನಗಳಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎನ್ನಲಾಗಿದೆ. ಮುಖ್ಯವಾಗಿ ಭಾರತ-ಚೀನಾ ಬಿಕ್ಕಟ್ಟಿ ಹೊತ್ತಿನಲ್ಲಿ ಅವುಗಳನ್ನು ಚೀನಾ ಗಡಿ ಸಮೀಪ ನಿಯೋಜಿಸಬಹುದು ಎಂದು ಅಂದಾಜಿಸಲಾಗಿದೆ. ಅಷ್ಟೇ ಅಲ್ಲದೆ, ಹಿಂದೂ ಮಹಾಸಾಗರವೂ ಸೇರಿ ಕೆಲ ಆಯಕಟ್ಟಿನ ಪ್ರದೇಶಗಳಲ್ಲಿ ಇವುಗನ್ನು ನಿಲ್ಲಿಸಬಹುದು. ಬಹುತೇಕ ರಕ್ಷಣಾ ಪಂಡಿತರು ಹೇಳುವ ಪ್ರಕಾರ ಯುದ್ಧ ಸನ್ನಿವೇಶದಲ್ಲಿ ರಫೆಲ್ ಗೇಮ್ ಚೇಂಜರ್ ಆಗಲಿದೆ. ಅತ್ಯಂತ ಬಲಶಾಲಿಯಾದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಲಿರುವ ಈ ಫೈಟರ್, ಇಡೀ ಜಗತ್ತಿನಲ್ಲಿಯೇ ಅತೈಾಧುನಿಕ ಯುದ್ಧ ವಿಮಾನವೆಂಬ ಹೆಗ್ಗಳಿಕೆ ಹೊಂದಿದೆ. ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ದು ಏಕಕಾಲದಲ್ಲಿಯೇ ಹಲವು ಗುರಿಗಳನ್ನು ಉಡಾಯಿಸಲಿದೆ. ರಫೆಲ್ʼಗೆ ಸಮನಾದ ಮತ್ತೊಂದು ಯದ್ಧ ವಿಮಾನ ಮತ್ತೊಂದಿಲ್ಲ.
ಒಟ್ಟಾರೆಯಾಗಿ ರಫೆಲ್ʼಗಳನ್ನು ತಡೆಯಲು ಕಾಂಗ್ರೆಸ್ಸಿಗೆ ಸಾಧ್ಯವಾಗಲಿಲ್ಲ. ಮೋದಿ ಯಾರ ಮಾತೂ ಕೇಳಲಿಲ್ಲ. ಚೀನಾ ಸಮಸ್ಯೆಯೂ ಧುತ್ತೆಂದು ಬಂದು ಕೂತಿರುವ ಕಾರಣ, ಈಗ ಬಂದಿರುವ 5 ರಫೆಲ್ʼಗಳ ಜತೆಗೆ, ಈಗಾಗಲೇ ಒಪ್ಪಂದವಾಗಿ ಬುಕ್ ಆಗಿರುವ ಇನ್ನೂ 31 ವಿಮಾನಗಳು ಕೆಲವೇ ದಿನಗಳಲ್ಲಿ ಭಾರತಕ್ಕೆ ಬರಲಿವೆ. ಅದಾದ ಮೇಲೆ ಮತ್ತಷ್ಟು ರಫೆಲ್ ಫೈಟರುಗಳಿಗೆ ಬೇಡಿಕೆ ಹೋದರೂ ಅಚ್ಚರಿ ಇಲ್ಲ.
ಕಾಂಗ್ರೆಸ್’ಗೆ ಖುಷಿಯಾಗಿಲ್ಲ:
ರಫೆಲ್ ರಫೆಲ್ʼಗಳು ದೇಶಕ್ಕೆ ಬರುತ್ತಿದ್ದಂತೆಯೇ ಮೂವತ್ತೂ ರಾಜ್ಯದಲ್ಲಿ ಅದರ ಬಗ್ಗೆಯೇ ಮಾತಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ರಫೆಲ್ ಎಂಬ ಶಬ್ದ ಟ್ರೆಂಡಿಂಗ್’ನಲ್ಲಿತ್ತು. ಹೀಗಿದ್ದರೂ ಟ್ವೀಟ್ ಮಾಡಿದ ರಾಹುಲ್ ಗಾಂಧಿ ಅವರು, ಹಿಂದೆ ಎತ್ತಿದ್ದ ಪ್ರಶ್ನೆಗಳನ್ನೇ ಮತ್ತೆ ಎತ್ತಿದರು.
ವಾಯುಪಡೆಗೆ ರಫೆಲ್ ಸೇರಿದ್ದಕ್ಕೆ ಶುಭಾಶಯಗಳು. 526 ಕೋಟಿ ರೂ. ಬೆಲೆ ಒಂದು ರಫೆಲ್ ಒಂದರ ಬೆಲೆ 1670 ಕೋಟಿ ರೂ. ಆಗಿದ್ದೇಕೆ? 1670 ವಿಮಾನಗಳ ಪೈಕಿ ಕೇವಲ 36 ಬರುತ್ತಿವೆ ಏಕೆ? ಎಚ್’ಎಎಲ್ ಅನ್ನು ಬಿಟ್ಟು ದಿವಾಳಿಯಾಗಿರುವ ಅನಿಲ್ ಅಂಬಾನಿಗೆ 30,000 ಕೋಟಿ ರೂ. ಕಾಂಟ್ಯ್ರಾಕ್ಟ್ ಕೊಟ್ಟಿದ್ದೇಕೆ?
ರಾಹುಲ್ ಎತ್ತಿರುವ ಪ್ರಶ್ನೆಗಳು ಹಳೆಯವಾದರೂ, ಅವುಗಳಿಗೆ ಸರಕಾರದಿಂದ ಯಾರೂ ಉತ್ತರ ಕೊಡಲು ಹೋಗಿಲ್ಲ. ಆದರೆ, ರಾಜನಾಥ್ ಸಿಂಗ್ ಮಾತ್ರ ಅನುಮಾನ ಇದ್ದವರಿಗೆ ಉತ್ತರ ನೀಡಲು ಸಿದ್ಧ ಎಂದು ಹೇಳಿದ್ದಾರೆ. ಹಾಗಾದರೆ, ರಫೆಲ್ ರಗಳೆಯನ್ನು ಕೈಬಿಡಲು ರಾಹುಲ್ ತಯಾರಿಲ್ಲ ಎಂದಾಯಿತು.
Rafael photos courtesy: twitter/Indian Air Force