ನಿಜಕ್ಕೂ ಗಲಭೆಯಿಂದ ಕಂಗೆಟ್ಟಿರುವ ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಏನು ನಡೆಯುತ್ತಿದೆ. ಅಲ್ಲಿ ಮಡುಗಟ್ಟಿರುವ ಸಮಸ್ಯೆ ಏನು? ಆ ಮತಾಂಧತೆಯ ಪರಾಕಾಷ್ಠೆಗೆ ಕೊನೆಯೇ ಇಲ್ಲವೇ? ಇದು ಕಾಂಗ್ರೆಸ್‌ನ ಕಳೆದ 73 ವರ್ಷಗಳ ತುಷ್ಟೀಕರಣ ನೀತಿಯ ಫಲವೇ? ಹಿರಿಯ ಪತ್ರಕರ್ತ ದು.ಗು. ಲಕ್ಷ್ಮಣ ಬರೆದಿದ್ದಾರೆ..
ಇಲ್ಲಿನ ಪೊಲೀಸ್ ಠಾಣೆಗೆ ಹೋಗಿ ನೋಡಿ. ಮಾದಕ ವಸ್ತು ಸಾಗಣೆಯಲ್ಲಿ ಡಜನ್‌ಗಟ್ಟಲೇ ಮೊಕದ್ದಮೆಗಳನ್ನು ಎದುರಿಸುತ್ತಿರುವ ಯುವಕರು ಯಾರು ಗೊತ್ತೆ? ಖಾಲಿದ್, ಸಜ್ಜಾದ್, ಅಜೀಂ, ಶಕೀಲ್, ವಸೀಂ ಸುಭಾನ್…. ಇಂಥದ್ದೇ ಹೆಸರುಗಳು.
ಇದೇ ರೀತಿ ಬಾಡಿಗೆ ಅಂಗಡಿಗಳನ್ನು ಖಾಲಿ ಮಾಡಿಸುವ ಮಾಲೀಕರು ಪುಂಡರ ಗುಂಪನ್ನೇ ಇಟ್ಟುಕೊಂಡಿದ್ದಾರೆ. ಇವರೆಲ್ಲ ನಿರುದ್ಯೋಗಿಗಳು. ಅಬ್ಯಾಸದ್, ಆಲಿ, ರಫೀಕ್…ಇಂಥವರೇ ಕೆಜಿ ಹಳ್ಳಿಯಲ್ಲಿ ತರಬೇತಿಯಾಗುತ್ತಿದ್ದಂತೆ ಮುಂಬಯಿಗೆ ಹೋಗಿಬಿಡುತ್ತಾರೆ!
ಮುಸ್ಲಿಂ ಕಾಲೋನಿಯಲ್ಲಿ ಹೆಜ್ಜೆ ಹೆಜ್ಜೆಗೂ ಗಾಂಜಾ, ಅಫೀಮು ಮಾರುವ ಪುಟ್ಟ ಹುಡುಗರು ಕಾಣಸಿಗುತ್ತಾರೆ. ಇತ್ತೀಚೆಗೆ ಕೆಜಿ ಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಮುಸ್ಲಿಂ ಕಾಲೋನಿ ಒಂದು ರೀತಿಯಲ್ಲಿ ಭೂಗತ ಚಟುವಟಿಕೆಗಳ ರಾಜಧಾನಿ! ಇಲ್ಲಿ ವೇಶ್ಯಾವಾಟಿಕೆ ಇದೆ. ಕಳ್ಳಭಟ್ಟಿ ಇದೆ. ಪೋಲಿ ನೃತ್ಯಗಳಿವೆ. ಗಾಂಜಾ ಇದೆ. ರೌಡಿಗಳಿದ್ದಾರೆ. ಇಂಥ ಇಲ್ಲಿ ’ಮೈ’ ದಾನ ಮಾಡುವ ವ್ಯವಹಾರ ಇದೆಯೇ ಹೊರತು ಮಕ್ಕಳಿಗೆ ಮೈದಾನ ಇಲ್ಲ.
ಕ್ರಿಮಿನಲ್ ಗಳನ್ನು ಪ್ರೋತ್ಸಾಹಿಸುತ್ತಿರುವ ಪೊಲೀಸರು, ಇಡೀ ಏರಿಯಾವನ್ನು ನಿರ್ಲಕ್ಷಿಸಿರುವ ರಾಜಕಾರಣಿಗಳು, ಮುಸ್ಲಿಂ ಸಮಾಜವನ್ನು ಅಂಧಕಾರದಲ್ಲಿಟ್ಟಿರುವ ಮೌಲ್ವಿಗಳನ್ನು ಕಂಡು ಬೇಸತ್ತಿರುವ ನಿರುದ್ಯೋಗಿ ಯುವ ಸಮುದಾಯ, ಬಡತನ ಬದುಕಾದ ದುರ್ಬಲರು, ವರದಕ್ಷಿಣೆ ಕೇಸಿನ ನೆಪದಲ್ಲಿ ಪೊಲೀಸರಿಂದಲೂ ದೈಹಿಕ ಹಿಂಸೆಗೆ ಒಳಗಾಗುತ್ತಿರುವ ಮಹಿಳೆಯರು ಯಾವುದೇ ಕ್ಷಣದಲ್ಲಿ ಸ್ಟೋಟವಾದಾರು.
ಕಾಡುಗೊಂಡನಹಳ್ಳಿ ಕಾಶ್ಮೀರವಾಗುವ ಮೊದಲು ಸಂಬಂಧಪಟ್ಟ ಎಲ್ಲರೂ ಎಚ್ಚರವಹಿಸುವುದು ಒಳಿತು.. (19.08.1998 ಲಂಕೇಶ್ ಪತ್ರಿಕೆ)
ಬರೋಬ್ಬರಿ 22 ವರ್ಷಗಳ ಹಿಂದೆಯೇ ಹಿರಿಯ ಪತ್ರಕರ್ತ ಟಿ.ಕೆ. ತ್ಯಾಗರಾಜ್ ಲಂಕೇಶ್ ಪತ್ರಿಕೆಯಲ್ಲಿ ಬರೆದ ವರದಿಯ ಕೆಲವು ಪ್ಯಾರಾಗಳು ಇವು. ಅದೊಂದು ಪ್ರತ್ಯಕ್ಷ ವರದಿ. ಈಗ ಭಾರೀ ಸದ್ದು ಮಾಡಿರುವ ಬೆಂಗಳೂರಿನ ಡಿಜೆ ಹಳ್ಳಿ (ದೇವರಜೀವನಹಳ್ಳಿ),ಕೆಜಿ ಹಳ್ಳಿ (ಕಾಡುಗೊಂಡನಹಳ್ಳಿ), ಕಾವಲ್ ಬೈರಸಂದ್ರ 22 ವರ್ಷಗಳ ಹಿಂದೆಯೇ ಭೂಗತ ಚಟುವಟಿಕೆಗಳ ರಾಜಧಾನಿಯಾಗಿತ್ತು. ಆ ಪ್ರದೇಶಗಳು ಹೀಗಾಗಲು ಕಾರಣ: ಅಲ್ಲಿಂದ ಗೆದ್ದುಬಂದ ಶಾಸಕರು, ಮುಸ್ಲಿಂ ಮೌಲ್ವಿಗಳು, ಪೊಲೀಸರು ಹಾಗೂ ಸರ್ಕಾರ. ರಾಜಕಾರಣಿಗಳಿಗೆ ಆ ಪ್ರದೇಶಗಳ ಜನರ ಓಟುಗಳು ಬೇಕಿತ್ತೋ ಹೊರತು ಆ ಜನರ ಉದ್ದಾರವಾಗಿರಲಿಲ್ಲ. ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಾದ ಅಲ್ಲಿನ ಮುಸ್ಲಿಂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕಾಳಜಿಯೇ ಯಾರಿಗೂ ಇರಲಿಲ್ಲ. ಅಸಲಿಗೆ ಅಲ್ಲಿ ಶಾಲೆಗಳನ್ನೇ ಸರ್ಕಾರ ತೆರೆಯಲಿಲ್ಲ. ಆದರೆ ಸಾರಾಯಿ ಅಂಗಡಿ ತೆರೆಯಲು ಸರ್ಕಾರ ಧಾರಾಳ ಅನುಮತಿ ನೀಡಿತ್ತು. ವೇಶ್ಯಾವಾಟಿಕೆಗೆ ಪೊಲೀಸರೇ ಕುಮ್ಮಕ್ಕು ನೀಡಿದರೆಂಬ ಆರೋಪವೂ ಇದೆ. ಅಲ್ಲಿಂದ ಗೆದ್ದುಬಂದ ಶಾಸಕರಿಗೆ ನರಕಸದೃಶವಾಗಿರುವ ಆ ಪ್ರದೇಶಗಳು ನಾಗರಿಕತೆಗೆ ಹೊರಳುವುದು ಬೇಕಿರಲಿಲ್ಲ. ಅದರ ಪರಿಣಾಮವೇ ಇತ್ತೀಚೆಗೆ ಸ್ಪೋಟಗೊಂಡ ಹಿಂಸಾಕಾಂಡ.
ಕೆರಳಿದ ಅಲ್ಲಿನ ಪುಂಡರು ಹೊರಗಿನ ಗೂಂಡಾಗಳ ನೆರವಿನೊಂದಿಗೆ ಪೊಲೀಸ್ ಠಾಣೆಯನ್ನೇ ಸುಟ್ಟರು. ತಾವೇ ಓಟು ಹಾಕಿ ಗೆಲ್ಲಿಸಿದ ಶಾಸಕರ ಮನೆಯನ್ನು ಭಸ್ಮ ಮಾಡಿದರು. ಪ್ರವಾದಿಗಳಿಗೆ ಅವಮಾನವೆಂಬುದು ಕೇವಲ ನೆಪ ಅಷ್ಟೆ. ಅಷ್ಟಕ್ಕೂ ದೊಂಬಿ, ಗಲಾಟೆ ಮಾಡಿದವರಿಗೆ ಪೈಗಂಬರ್ ಯಾರೆಂಬುದೇ ತಿಳಿದಿರಲಿಕ್ಕಿಲ್ಲವೇನೋ!
ಕೆಜಿ ಹಳ್ಳಿ ಡಿಜೆ ಹಳ್ಳಿ ಪ್ರದೇಶದ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿದ್ದರೆ, ಅಲ್ಲಿನ ನಿರುದ್ಯೋಗಿಗಳಿಗೆ ಕೆಲಸ ಒದಗಿಸಿದ್ದರೆ ಅದು ಭೂಗತ ಚಟುವಟಿಕೆಗಳ ಕೇಂದ್ರವಾಗುತ್ತಿರಲಿಲ್ಲ. ಹಾಗೆ ಮಾಡದೇ ಇದ್ದಿದ್ದರಿಂದಾಗಿ ಈಗ ಎಸ್ ಡಿ ಪಿ ಐ, ಪಿ ಎಫ್ ಐ, ಅಲ್ ಹಿಂದ ಮೊದಲಾದ ಉಗ್ರ ಸಂಘಟನೆಗಳು ಆ ಪ್ರದೇಶವನ್ನು ತಮ್ಮ ಆಡುಂಬೊಲವನ್ನಾಗಿ ಮಾಡಿಕೊಂಡಿವೆ. ಮೊನ್ನೆ ದೊಂಬಿ ನಡೆಸಿದ ರೌಡಿಗಳನ್ನು ಹುಡುಕಿ ಹುಡುಕಿ ಪೊಲೀಸರು ಬಂಧಿಸುತ್ತಿದ್ದರೆ, ಅಲ್ಲಿನ ಕೆಲವು ಮತಾಂಧ ಮುಸ್ಲಿಂ ಮುಖಂಡರು `ಅವರೆಲ್ಲ ಅವಿದ್ಯಾವಂತರು, ಅಮಾಯಕರು, ಬಿಟ್ಟುಬಿಡಿ’ ಎನ್ನುತ್ತಿದ್ದಾರೆ. ಅವಿದ್ಯಾವಂತರಾದ ಮಾತ್ರಕ್ಕೆ ಸಮಾಜಘಾತುಕ ಕೃತ್ಯಗಳನ್ನೆಸಗಲು ಅನುಮತಿ ಇದೆ ಎಂದರ್ಥವೇ? ಅಥವಾ ಅವಿದ್ಯಾವಂತರಿಗೆ ಯಾವುದೇ ಕಾನೂನು, ನಿಯಮಗಳೂ ಅನ್ವಯವಾಗುವುದಿಲ್ಲವೆಂದೆ ಅರ್ಥವೇ?
ಗಲಭೆಯ ತನಿಖೆಗಿಳಿದಿರುವ ಪೊಲೀಸರ ಬಳಿ ಅಲ್ಲಿನ ಮುಸ್ಲಿಂ ಮಹಿಳೆಯರು ನೀಡುವ ಪ್ರತಿಕ್ರಿಯೆಗಳನ್ನು ಕೇಳಿದರೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಒಬ್ಬಾಕೆ ಹೇಳುತ್ತಾಳೆ: `ನನ್ನ ಮಗನನ್ನು ಬಿಟ್ಟುಬಿಡಿ. ಆತ ತಪ್ಪು ಮಾಡಿಲ್ಲ. ರಾತ್ರಿ 12 ಗಂಟೆಗೆ ಆತ ಕೊತ್ತಿಮಿರಿ ಸೊಪ್ಪು ತರಲು ಹೋಗಿದ್ದ!’ ಇನ್ನೊಬ್ಬ ಮುಸ್ಲಿಂ ಮಹಿಳೆ ಹೇಳುತ್ತಾಳೆ; `ನನಗೆ ಇಬ್ಬರು ಹೆಣ್ಣುಮಕ್ಕಳು. ಒಬ್ಬಳಿಗೆ 2 ತಿಂಗಳು. ಇನ್ನೊಬ್ಬಳಿಗೆ 3 ತಿಂಗಳು’. ಇದು ಹೇಗೆ ಸಾಧ್ಯ? ಕೊತ್ತಿಮಿರಿ ಸೊಪ್ಪು ತರಲು ರಾತ್ರಿ ಯಾರಾದರೂ ಹೋಗ್ತಾರಾ? ಒಟ್ಟಾರೆ ತನಿಖೆಯ ಹಾದಿ ತಪ್ಪಿಸುವ ಎಲ್ಲ ಹುನ್ನಾರಗಳೂ ಈಗ ಅಲ್ಲಿ ನಡೆಯತೊಡಗಿದೆ. ಪೊಲೀಸರು ಮುನ್ನೂರಕ್ಕೂ ಹೆಚ್ಚು ಗಲಭೆಗೆ ಕಾರಣರಾದ ಹಿಂಡು ಹಿಂಡು ಪುಂಡರನ್ನು ಬಂಧಿಸುತ್ತಿದ್ದರೂ ಅವರೆಲ್ಲರನ್ನೂ ಬಿಡುಗಡೆಗೊಳಿಸಲು ಮತಾಂಧ ಮುಸ್ಲಿಂ ಮುಖಂಡರು ಒಳಗೊಳಗೇ ಸ್ಕೆಚ್ ಹಾಕಿದ್ದಾರೆ. ತನಿಖೆಯ ದಿಕ್ಕು ತಪ್ಪಿಸುವ ಎಲ್ಲ ಹುನ್ನಾರಗಳೂ ಅಲ್ಲಿ ನಡೆದಿವೆ.
ಇತ್ತ ತಮ್ಮದೇ ಪಕ್ಷದ ದಲಿತ ಶಾಸಕನ ಮನೆ ಸಂಪೂರ್ಣ ಭಸ್ಮವಾಗಿದ್ದರೂ ಇದುವರೆಗೂ ಘಟನೆಯ ಹಿಂದಿರುವ ಮುಸ್ಲಿಂ ಗೂಂಡಾಗಳನ್ನು ಖಂಡಿಸುವ ಗೋಜಿಗೇ ಕಾಂಗ್ರೆಸ್ ನಾಯಕರು ಹೋಗಿಲ್ಲ. ಮುಸ್ಲಿಮರ ಮತಾಂಧತೆಯನ್ನು, ಗೂಂಡಾಗಿರಿಯನ್ನು, ಮುಸ್ಲಿಮರು ನಡೆಸುವ ಭೂಗತ ಚಟುವಟಿಕೆಗಳನ್ನು ಕಾಂಗ್ರೆಸ್ ಅಪ್ಪಿತಪ್ಪಿ ಕೂಡ ಖಂಡಿಸುವುದಿಲ್ಲ. ಹಾಗಂತ ಮತಾಂಧ ಮುಸ್ಲಿಮರ ಕ್ರಿಮಿನಲ್ ಮನಸ್ಸುಗಳನ್ನು ಬದಲಾಯಿಸಿ ಅವರನ್ನೆಲ್ಲ ಸತ್ಪ್ರಜೆಗಳನ್ನಾಗಿ ಮಾಡುವ ಇರಾದೆಯೂ ಕಾಂಗ್ರೆಸ್‌ಗೆ ಸುತಾರಾಂ ಇಲ್ಲ. ಅವರೆಲ್ಲ ಹಾಗೆಯೇ ಇರಬೇಕು. ಕಾಂಗ್ರೆಸ್ ಗೇ ಸದಾ ಓಟು ಹಾಕುತ್ತಿರಬೇಕು, ಅಷ್ಟೆ. ಅವರ ಬದುಕು ಕಟ್ಟಿಕೊಂಡು ಕಾಂಗ್ರೆಸ್ ಗೆ ಆಗಬೇಕಾದ್ದಾದರೂ ಏನು?
ಇಂತಹ ತುಷ್ಟೀಕರಣ ನೀತಿಯೇ ಇವತ್ತು ಬೆಂಗಳೂರಿನಲ್ಲಿ ಮಾತ್ರವಲ್ಲ, ರಾಜ್ಯದ, ರಾಷ್ಟ್ರದ ಪ್ರತಿಯೊಂದು ಪಟ್ಟಣ, ನಗರಗಳಲ್ಲೂ ಮುಸ್ಲಿಂ ಸಮಾಜಘಾತುಕ ಪಡೆಯ ಸೃಷ್ಟಿಗೆ ಕಾರಣವಾಗಿದೆ. ಶೃಂಗೇರಿಯಂತಹ ಪವಿತ್ರ ಹಿಂದು ಯಾತ್ರಾಸ್ಥಳದಲ್ಲೂ ಶಂಕರಾಚಾರ್ಯರ ಪ್ರತಿಮೆಗೆ ಹಾನಿ ಮತ್ತು ಅವಮಾನವೆಸಗುವಷ್ಟು ಭಂಡ ಧೈರ್ಯ ಮತಾಂಧ ಮುಸ್ಲಿಂ ಗೂಂಡಾಗಳಿಗೆ ಇದೆಯೆಂದರೆ ಪರಿಸ್ಥಿತಿ ನಾವೆಲ್ಲರೂ ತಿಳಿದಷ್ಟು ಉತ್ತಮವಾಗಿಲ್ಲ. ಹಿಂದು ಸಮಾಜಕ್ಕೆ ಅಪಾರ ಹಾನಿಯೆಸಗುವ ಮಸಲತ್ತು ಪ್ರತಿಯೊಂದು ಕಡೆಯೂ ರೂಪುಗೊಳ್ಳುತ್ತಿದೆಯೆಂದೇ ಅರ್ಥ.
ಕಾಂಗ್ರೆಸ್‌ನ ಕಳೆದ 73 ವರ್ಷಗಳ ತುಷ್ಟೀಕರಣ ನೀತಿಯ ವಿಷ ಫಲವನ್ನು ಇವತ್ತು ಇಡೀ ದೇಶ ಉಣ್ಣಬೇಕಾಗಿಬಂದಿರುವುದು ದೊಡ್ಡ ದುರಂತ. ಬೆಂಗಳೂರಲ್ಲಿ ಕೆಜಿ ಹಳ್ಳಿ, ಡಿಜಿ ಹಳ್ಳಿ, ಪಾದರಾಯನಪುರ, ಶಿವಾಜಿನಗರದಂತಹ ಮಿನಿ ಪಾಕಿಸ್ತಾನಗಳು ಸೃಷ್ಟಿಯಾಗಿರುವಂತೆ ಉಳಿದ ಕಡೆಗಳಲ್ಲೂ ಇಂತಹುದೇ ’ನರಕಗಳು’ ನಿಧಾನವಾಗಿ ಸೃಷ್ಟಿಯಾಗತೊಡಗಿವೆ. ಮೊಳಕೆಯಲ್ಲೇ ಅಂತಹ ನರಕಗಳನ್ನು ಚಿವುಟಿಹಾಕಬೇಕಾದ ಅಗತ್ಯ ಜರೂರಾಗಿದೆ. ಆದರೆ ನಮ್ಮ ರಾಜ್ಯ ಸರ್ಕಾರಕ್ಕೆ ಪರಿಸ್ಥಿತಿಯ ಗಂಭೀರತೆ ಇನ್ನೂ ಅರ್ಥವಾಗದಿರುವುದು ವಿಷಾದನೀಯ. ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿಬಿಟ್ಟರೆ ಏನನ್ನೂ ಸಾಧಿಸಿದಂತಾಗುವುದಿಲ್ಲ. ರಾಜಕೀಯ ಲೆಕ್ಕಾಚಾರ, ಓಲೈಕೆ ನೀತಿ ಇತ್ಯಾದಿ ಎಲ್ಲ ಬದಿಗಿಟ್ಟು, ಸಾಮಾಜಿಕ ಹಿತದೃಷ್ಟಿಯಿಂದ ದಿಟ್ಟ ಕ್ರಮಕ್ಕೆ ಮುಂದಾಗಲೇಬೇಕು. ಮುಸ್ಲಿಂ ಮತಾಂಧತೆಗೆ ಬಿಜೆಪಿ ಸರ್ಕಾರವೂ ಮದ್ದರೆಯದಿದ್ದರೆ ಉಳಿದವರು ಏನು ತಾನೆ ಮಾಡಲು ಸಾಧ್ಯ?
Photo: BNMK Photographs