• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಕುಟುಂಬದ ಹಿನ್ನೆಲೆಯಲ್ಲಿ ದೇಶವನ್ನು ನೋಡಿದ ಅಮೆರಿಕ ಕವಯತ್ರಿ ಲೂಯೀಸ್‌ ಗ್ಲುಕ್ಸ್ ಅವರಿಗೆ ಸಾಹಿತ್ಯ ನೊಬೆಲ್

cknewsnow desk by cknewsnow desk
June 27, 2021
in CKPLUS, WORLD
Reading Time: 2 mins read
0
ಕುಟುಂಬದ ಹಿನ್ನೆಲೆಯಲ್ಲಿ ದೇಶವನ್ನು ನೋಡಿದ ಅಮೆರಿಕ ಕವಯತ್ರಿ ಲೂಯೀಸ್‌ ಗ್ಲುಕ್ಸ್ ಅವರಿಗೆ ಸಾಹಿತ್ಯ ನೊಬೆಲ್
914
VIEWS
FacebookTwitterWhatsuplinkedinEmail
1977ರಲ್ಲಿ ತೆಗೆದಿರುವ ಲೂಯಿಸ್‌ ಗ್ಲುಕ್ಸ್‌ ಅವರ ಚಿತ್ರ./ courtesy: wikipidia

ಸ್ಟಾಕ್ಹೋಮ್:‌ ಇವತ್ತು ಕೂಡ ಸ್ವೀಡನ್‌ ದೇಶದ ಸ್ಟಾಕ್ಹೋಮ್‌ನಿಂದ ಒಳ್ಳೆಯ ಸುದ್ದಿಯೇ ಬಂದಿದೆ. ನಿನ್ನೆ (ಬುಧವಾರ) ಇಬ್ಬರು ಮಹಿಳೆಯರು ರಾಸಾಯನಿಕ ನೊಬೆಲ್‌ ಪ್ರಶಸ್ತಿಯನ್ನು ಹಂಚಿಕೊಂಡ ಬೆನ್ನಲ್ಲೇ ಅಮೆರಿಕಕ್ಕೆ ಸೇರಿದ ಭಾರತೀಯ ಸಾಹಿತ್ಯಾಸಕ್ತರಿಗೆ ಕಡಿಮೆ ಪರಿಚಯವಿರುವ ಕವಯತ್ರಿ ಲೂಯೀಸ್‌ ಗ್ಲುಕ್ಸ್‌ ಅವರು ಪ್ರತಿಷ್ಠಿತ ಸಾಹಿತ್ಯ ನೊಬೆಲ್‌ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಗುರುವಾರ ಸ್ಟಾಕ್ಹೋಮ್ ನಲ್ಲಿರುವ ಸ್ವಿಡಿಷ್‌ ಅಕಾಡೆಮಿ ಈ ಪ್ರಕಟಣೆ ಮಾಡಿದೆ. 2020ನೇ ಸಾಲಿನ ನೊಬೆಲ್‌ ಪ್ರಶಸ್ತಿ ಲೂಯೀಸ್‌ ಗ್ಲುಕ್ಸ್‌ ಅವರಿಗೆ ಸಂದಿದ್ದು, ಪ್ರಶಸ್ತಿಯು 10 ದಶಲಕ್ಷ ಸ್ವೀಡಿಷ್‌ ಕ್ರೋನಾ; ಅಂದರೆ 121.12 ಮಿನಿಯನ್‌ ಡಾಲರ್‌ನಷ್ಟು ನಗದು ಹಾಗೂ ಮೆಡಲ್‌ ಅನ್ನು ಒಳಗೊಂಡಿದೆ ಎಂದು ಅದು ತಿಳಿಸಿದೆ.

“ಪ್ರಸಕ್ತ ವರ್ಷದ ಸಾಹಿತ್ಯ ವಿಭಾಗದ ನೊಬೆಲ್ ಪುರಸ್ಕಾರವನ್ನು ಅಮೆರಿಕದ ಕವಯತ್ರಿ ಲೂಯಿಸ್ ಗ್ಲುಕ್ಸ್ ಅವರಿಗೆ ಘೋಷಿಸಲಾಗಿದ್ದು, “ಅವರ ನಿಖರ, ಸ್ಪಷ್ಟವಾದ, ನಿಸ್ಸಂದಿಗ್ಧವಾದ ಕಾವ್ಯಾತ್ಮಕ ದನಿ ಹಾಗೂ ಕಠಿಣತೆಯು ಅವರ ವೈಯಕ್ತಿಕ ಅಸ್ತಿತ್ವವನ್ನು ಸಾರ್ವತ್ರಿಕರಣಗೊಳಿಸಿದೆ. ಇದುವೇ ಅವರ ಕಾವ್ಯದಲ್ಲಿನ ನಿಜವಾದ ಸೌಂದರ್ಯ” ಎಂಬುದಾಗಿ ಪ್ರಶಸ್ತಿ ಆಯ್ಕೆ ಸಮಿತಿ ಅಭಿಪ್ರಾಯಪಟ್ಟಿದೆ.

BREAKING NEWS:
The 2020 Nobel Prize in Literature is awarded to the American poet Louise Glück “for her unmistakable poetic voice that with austere beauty makes individual existence universal.”#NobelPrize pic.twitter.com/Wbgz5Gkv8C

— The Nobel Prize (@NobelPrize) October 8, 2020

1943 ಏಪ್ರಿಲ್‌ 22ರಂದು ಜನಿಸಿದ ಗ್ಲುಕ್ಸ್‌ ಅವರು, ಅಮೆರಿಕದ ಸಮಕಾಲೀನ ಕಾವ್ಯಕಾಲದ ಬಹಮುಖ್ಯ ಕವಯತ್ರಿ. ಅಮೆರಿಕದಲ್ಲಿ ಅವರ ಕಾವ್ಯಕ್ಕೆ ಅಪಾರ ಓದುಗ ಬಳಗವಿದೆಯಲ್ಲದೆ, ನೊಬೆಲ್‌ಗೂ ಮೊದಲು ಅನೇಕ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.

ಹತ್ತುಹಲವು ಸವಾಲುಗಳನ್ನು ಎದುರಿಸುತ್ತಲೇ ಬೆಳೆದ ಅವರು, ಪ್ರೌಢಶಿಕ್ಷಣದ ಹಂತದಲ್ಲಿ ಇರುವಾಗಲೇ ಅನೋರೆಕ್ಸಿಯಾ ನರ್ವೋಸಾ (ಹಸಿವಿಲ್ಲದಿರುವಿಕೆ) ಕಾಯಿಲೆಯಿಂದ ಬಳಲುತ್ತಿದ್ದರು. ಹೀಗೆ ತಮ್ಮ ಅನಾರೋಗ್ಯವನ್ನೇ ಮೆಟ್ಟಿ ನಿಂತ ಗ್ಲುಕ್ಸ್‌ ಅವರು, ಪದವಿ ವ್ಯಾಸಂಗದ ವೇಳೆಯಲ್ಲೂ ಸಮಸ್ಯೆಗೆ ಸಿಲುಕಿದ್ದರು. ಹೀಗಿದ್ದರೂ ಕಾವ್ಯದ ಮೇಲಿನ ಅವರ ಉತ್ಕಟತೆಯೇ ಇಡೀ ಅಮೆರಿಕದಲ್ಲಿ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಬಳಿಕ ಕಾವ್ಯವನ್ನೇ ಕಾವ್ಯಾಸಕ್ತರಿಗೆ ಬೋಧಿಸುತ್ತಾ ಹೋದ ಅವರು ತಮ್ಮ ಅಭಿವ್ಯಕ್ತಿಯ ತುಂಬಾ ಕಾವ್ಯವನ್ನಷ್ಟೇ ತುಂಬಿಕೊಂಡರು. ಅದುವೇ ಇವತ್ತು ಅವರನ್ನು ನೊಬೆಲ್‌ವರೆಗೂ ಕರೆತಂದು ನಿಲ್ಲಿಸಿದೆ.

ಇದುವರೆಗೂ ಗ್ಲುಕ್‌ ಅವರು ಹನ್ನೆರಡು ಕಾವ್ಯಗುಚ್ಛಗಳನ್ನು ಪ್ರಕಟಿಸಿದ್ದಾರೆ. ಕಾವ್ಯದ ಬಗ್ಗೆ ಅವರು ಬರೆದಿರುವ ಅನೇಕ ಪ್ರಬಂಧಗಳು ಪಾಶ್ಚಾತ್ಯ ಸಾಹಿತ್ಯಾಸಕ್ತರ ಗಮನ ಸೆಳೆದಿವೆ.

“ಗ್ಲುಕ್‌ ಅವರ ಕಾವ್ಯವನ್ನು ಓದುತ್ತಿದ್ದರೆ ಬೆಳದಿಂಗಳ ಮುಂದಿನ ನವಿಲುಕಿನ್ನರಿ ಹೆಜ್ಜೆನಾದದಂತೆ, ಹಾಯಾಗಿ ಬೀಸುವ ಗಾಳಿಗೆ ಹೃದಯವನ್ನೊಡ್ಡಿ ನಿಂತಂತೆ ಭಾಸವಾಗುತ್ತದೆ. ಅದರ ಜತೆಗೆ, ವಾಸ್ತವಗಳ ಅಚ್ಚರಿಗಳು, ಬಯಕೆಗಳ ಉತ್ಕಟ ವಿಹಾರ, ಪ್ರಕೃತಿ ವಿಜೃಂಭಣೆಯ ಅನೇಕ ಸಂಗತಿಗಳು ಸೂಜಿಗಲ್ಲಿನಂತೆ ಸೆಳೆಯುತ್ತವೆ” ಎಂದು ವಿಮರ್ಶಕರು ಬರೆದಿದ್ದಾರೆ.

ಕುಟುಂಬದ ಹಿನ್ನೆಲೆಯಲ್ಲಿ ದೇಶವನ್ನು ನೋಡಿದ ಕವಯತ್ರಿ

ಲೂಯೀಸ್‌ ಗ್ಲುಕ್‌ ಅವರಿಗೆ ಈ ವರ್ಷದ ನೊಬೆಲ್‌ ಸಂದ ಬಗ್ಗೆ ಕನ್ನಡದ ಹೆಸರಾಂತ ಕಥೆಗಾರ ಎಸ್‌.ದಿವಾಕರ್‌ ಅವರು ಹೇಳಿದ್ದಿಷ್ಟು;

“ಆಧುನಿಕ ಅಮೆರಿಕ ಸಾಹಿತ್ಯದಲ್ಲಿ ಗ್ಲುಕ್‌ ಅವರದ್ದು ಬಹದೊಡ್ಡ ಹೆಸರು. ನಾನು ಅಮೆರಿಕ ಕಾನ್ಸುಲೇಟ್‌ನಲ್ಲಿ ಕೆಲಸ ಮಾಡುವಾಗ ಅವರ ಕಾವ್ಯವನ್ನು ಓದಿಕೊಂಡಿದ್ದೆ. ಕೌಟುಂಬಿಕ ಹಿನ್ನೆಲೆಯೊಳಗೆ ದೇಶವನ್ನು ತಮ್ಮ ಕಾವ್ಯದ ಮೂಲಕ ಅವರು ನೋಡುತ್ತಿದ್ದರು. ಇದು ಬಹಳ ವಿಶೇಷ ಎನ್ನಿಸಿತು ನನಗೆ. ಅದು ನಮ್ಮ ದೇಶದ ಪರಿಕಲ್ಪನೆಯ ವಸುಧೈವ ಕುಟುಂಬಕಂ ಎನ್ನುವ ಹಾಗೆ. ಹಾಗಿದ್ದರೆ ಪರವಾಗಿಲ್ಲ, ಕೆಲವೊಮ್ಮೆ ಕೌಟುಂಬಿಕವಾಗಿ ನಡೆಯುವ ದುರಂತಗಳ ಹಿನ್ನೆಲೆಯಲ್ಲಿ ದೇಶವನ್ನೂ ನೋಡುವುದು ಆಗುತ್ತದೆ. ಹಾಗೆ ಆಗಬಾರದು. ಆದರೆ ಅವರ ಕಾವ್ಯಕ್ಕೆ ಅಮೆರಿಕದಲ್ಲಿ ಉನ್ನತ ಸ್ಥಾನವಿದೆ. ಇನ್ನು, ಈ ವರ್ಷದ ಸಾಹಿತ್ಯದ ನೊಬೆಲ್‌ ಆಯ್ಕೆ ಅಚ್ಚರಿ ತಂದಿದೆ ನನಗೆ. ಅವರ ಆಯ್ಕೆ ನಿಜಕ್ಕೂ ಅನಿರೀಕ್ಷಿತ.”
photo courtesy: S Diwakar facebook page

ದಿವಾಕರ್‌ ಅವರು ಸಿಕೆನ್ಯೂಸ್‌ ನೌ ಜತೆ ಮಾತನಾಡಿದರು.

"The butterfly counts not months but moments, and has time enough."

– Rabindranath Tagore, awarded the 1913 #NobelPrize in Literature for his sensitive, fresh and beautiful poetry. He became the first non-European Literature Laureate. pic.twitter.com/FF4sfCFxUN

— The Nobel Prize (@NobelPrize) October 8, 2020

107 ವರ್ಷಗಳ ಹಿಂದೆ; ಅಂದರೆ 1913ರಲ್ಲಿ ಭಾರತದ ರವೀಂದ್ರನಾಥ ಟ್ಯಾಗೋರ್‌ ಅವರ ʼಗೀತಾಂಜಲಿʼ ಕಾವ್ಯಗುಚ್ಛಕ್ಕೆ ನೊಬೆಲ್‌ ಪ್ರಶಸ್ತಿ ಸಂದಿತ್ತು.

ಕೆಳಗಿನ ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ…

ಕೆಮಿಸ್ಟ್ರಿಯಲ್ಲಿ ನಾರಿಯರಿಬ್ಬರು ಗೆದ್ದರು ನೊಬೆಲ್
Tags: literature nobelLouise glucknobel prize 2020
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಶ್ರೀರಾಮ ನವಮಿ ದಿನ ಅಯೋಧ್ಯೆಯ ಬಾಲ ರಾಮನಿಗೆ ಸೂರ್ಯ ತಿಲಕ

ಶ್ರೀರಾಮ ನವಮಿ ದಿನ ಅಯೋಧ್ಯೆಯ ಬಾಲ ರಾಮನಿಗೆ ಸೂರ್ಯ ತಿಲಕ

by cknewsnow desk
April 17, 2024
0

ಭಕ್ತಿ ಪರವಶತೆಯಿಂದ ಈ ದಿವ್ಯಕ್ಷಣವನ್ನು ಕಣ್ತುಂಬಿಕೊಂಡ ಅಸಂಖ್ಯಾತ ಭಕ್ತರು

Next Post
ರಾಮ್ ವಿಲಾಸ್ ಪಾಸ್ವಾನ್ ; ದಲಿತ ಧ್ವನಿ, ಎಲ್ಲರೂ ಅಪ್ಪಿಕೊಂಡಿದ್ದ ಅಪ್ಪಟ ನಾಯಕ

ರಾಮ್ ವಿಲಾಸ್ ಪಾಸ್ವಾನ್ ; ದಲಿತ ಧ್ವನಿ, ಎಲ್ಲರೂ ಅಪ್ಪಿಕೊಂಡಿದ್ದ ಅಪ್ಪಟ ನಾಯಕ

Leave a Reply Cancel reply

Your email address will not be published. Required fields are marked *

Recommended

ಚಿಕ್ಕಬಳ್ಳಾಪುರದಲ್ಲಿ ಶನಿವಾರ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಸತ್ಸಂಗ ಮತ್ತು ಸದ್ವಿಚಾರಗಳ ಶ್ರಾವಣ

ಚಿಕ್ಕಬಳ್ಳಾಪುರದಲ್ಲಿ ಶ್ರೀ ಆದಿಚುಂಚನಗಿರಿ ಮಠದಿಂದ ಕೋವಿಡ್‌ ಕೇರ್;‌ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಂದ ಸೇವೆಗೆ ಮುಕ್ತ

4 years ago
ಸೆ.27ರಂದು ಭಾರತ್ ಬಂದ್: ಪ್ರಗತಿಪರ ಸಂಘಟನೆಗಳ ಬೆಂಬಲ

ಸೆ.27ರಂದು ಭಾರತ್ ಬಂದ್: ಪ್ರಗತಿಪರ ಸಂಘಟನೆಗಳ ಬೆಂಬಲ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ