ಓಲೈಕೆ ಅಥವಾ ತುಷ್ಠೀಕರಣ ರಾಜಕೀಯದ ವಿಷಯವನ್ನೇ ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಕೂಗಾಡಿ ಬೇಳೆ ಬೇಯಿಸಿಕೊಂಡ ಬಿಜೆಪಿ; ಇದೀಗ ಕಾಂಗ್ರೆಸ್ ಇಟ್ಟ ಹಜ್ಜೆಗಳಲ್ಲೇ ನಡೆಯುತ್ತಿದೆ. ಅಧಿಕಾರ ಇಲ್ಲದಿದ್ದಾಗ ಒಂದು ಮಾತು, ಇದ್ದಾಗ ಒಂದು ಮಾತು ಎಂಬ ನೀತಿಯನ್ನು ಕಮಲ ಪಕ್ಷ ವೈನಾಗಿ ಅಳವಡಿಸಿಕೊಂಡಿದೆ ಎಂದು ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಬರೆದಿದ್ದಾರೆ.
***
ಕೇರಳ ರಾಜ್ಯದ ಒಂದು ಊರಿನಲ್ಲಿ ಖಾಲಿ ಮನೆಯ ಮೇಲೊಂದು ಬೋರ್ಡ್ House for sale only for muslim. Contac: 90xxxxxx28 ಖಾಲಿ ಇರುವ ಮನೆ ಮಾರಾಟಕ್ಕಿದೆ. ಆದರೆ ಮುಸ್ಲಿಮರಿಗೆ ಮಾತ್ರ ಖರೀದಿಗೆ ಅವಕಾಶ ಎನ್ನುವುದು ಈ ಬೋರ್ಡಿನ ಸಾರಾಂಶ. ನಾವು ಮಾರಾಟ ಮಾಡುವ ಮನೆಯನ್ನು ಇಂಥ ಸಮುದಾಯದವರಿಗೇ ಮಾರಬೇಕೆಂಬ ಕಾನೂನಿಲ್ಲ. ನಮಗೆ ಇಷ್ಟಬಂದವರಿಗೆ ಮಾರಾಟ ಮಾಡಲು ಅವಕಾಶವಿದೆ. ಆದರೆ ಮೇಲ್ನೋಟಕ್ಕೆ ಈ ಬೋರ್ಡ್ ರವಾನಿಸುವ ಸಂದೇಶವೇನು? ಕೇರಳದಲ್ಲಿ ಮುಸ್ಲಿಮರಿಗೆ ಸೇರಿದ ಆಸ್ತಿಯನ್ನು ಬೇರೆ ಧರ್ಮದವರಿಗೆ ಎಂದಿಗೂ ಮಾರಾಟ ಮಾಡುವುದಿಲ್ಲ. ಮುಸ್ಲಿಮರಿಗೆ ಮಾತ್ರ ಆ ಆಸ್ತಿಯನ್ನು ಖರೀದಿಸುವ ಹಕ್ಕಿದೆ ಎಂದಲ್ಲವೆ?
ಒಂದು ವೇಳೆ ಹಿಂದುಗಳೇನಾದರೂ ತಾವು ಮಾಡಬೇಕೆಂದಿರುವ ಖಾಲಿ ಮನೆಯ ಮೇಲೆ Only for Hindus ಎಂಬ ಬೋರ್ಡ್ ಲಗತ್ತಿಸಿದ್ದರೆ ಮನೆಯ ಮಾಲೀಕನ ಮೇಲೆ ಎಫ್‌ಐಆರ್ ದಾಖಲಾಗುತ್ತಿದ್ದುದರಲ್ಲಿ ಸಂಶಯವೇ ಇಲ್ಲ. ಕೋಮು ಸಾಮರಸ್ಯ ಹದಗೆಡಿಸುವ, ಕೋಮು ಭಾವನೆಗೆ ಪ್ರಚೋದನೆ ನೀಡುವ ಫಲಕ ಹಾಕಿದ್ದು, ಜಾತ್ಯತೀತ ನೀತಿಗೇ ಎಸಗಿದ ದ್ರೋಹವೆಂದು ಎಡಪಂಥೀಯ ಬುದ್ಧಿಜೀವಿಗಳು, ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಪ್ರತಿಭಟನೆ ಮಾಡಿ, ಬೋರ್ಡ್ ಹಾಕಿದವನ ಗ್ರಹಚಾರ ಬಿಡಿಸುತ್ತಿದ್ದರು. ಆದರೆ ಮುಸ್ಲಿಮರು ಹಾಕಿರುವ ಬೋರ್ಡ್ ಇದು. ಹಾಗಾಗಿ ಅದು ಜಾತ್ಯತೀತ ನೀತಿಗೆ ಧಕ್ಕೆಯಾಗುವುದಿಲ್ಲ! ಆ ಬಗ್ಗೆ ಗಟ್ಟಿಯಾಗಿ ಯಾರೂ ಪ್ರಶ್ನಿಸುವ ಗೋಜಿಗೇ ಹೋಗುವುದಿಲ್ಲ.
ತಮ್ಮ ಸಂಖ್ಯೆಯನ್ನು, ತಮ್ಮ ಮತಾವಲಂಬಿಗಳನ್ನು ಕ್ರಮೇಣ ಹೆಚ್ಚಿಸಿಕೊಳ್ಳಲು ಮುಸ್ಲಿಮರು ಏನೇನೆಲ್ಲ ಷಡ್ಯಂತ್ರಗಳನ್ನು ಹೊಸೆಯುತ್ತಿದ್ದಾರೆಂಬುದು ರಹಸ್ಯವಾಗಿರಲು ಸಾಧ್ಯವಿಲ್ಲ. ಕಾಲೇಜುಗಳಲ್ಲಿ ಅಧ್ಯಯನ ಮಾಡುವ ಶ್ರೀಮಂತ ಕುಟುಂಬದ, ಅದರಲ್ಲೂ ಮೇಲ್ವರ್ಗದ ಕುಟುಂಬದ ಮುಗ್ಧ ಹೆಣ್ಣುಮಕ್ಕಳಿಗೆ ಲವ್ ಜಿಹಾದ್ ಹೆಸರಿನಲ್ಲಿ ಗಾಳ ಹಾಕಿ, ಪ್ರೇಮದಾಟದ ನಾಟಕವಾಡಿ, ಅನಂತರ ಬಲಾತ್ಕಾರವಾಗಿ ಮತಾಂತರಿಸಿ ಮುಸ್ಲಿಂ ಧರ್ಮಕ್ಕೆ ಸೇರಿಸಿಕೊಳ್ಳುವ ವಿದ್ಯಮಾನ ಈಗಲೂ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಹಲವು ಹೆಣ್ಣುಮಕ್ಕಳು ಮುಸ್ಲಿಂ ಹುಡುಗರು ಬೀಸುವ ಈ ಮೋಸದ ಬಲೆಗೆ ಬಿದ್ದು ತಮ್ಮ ಸುಂದರ ಭವಿಷ್ಯವನ್ನು ನರಕಸದೃಶರಾಗಿ ಮಾಡಿಕೊಂಡಿದ್ದೂ ಆಗಿದೆ. ಆದರೂ ನಮ್ಮ ಹಿಂದು ಹೆಣ್ಣುಮಕ್ಕಳಿಗೆ ಬುದ್ಧಿ ಬಂದಿಲ್ಲ. ಮುಸ್ಲಿಂ ಹುಡುಗರದ್ದು ಬರಿದೇ ಪ್ರೇಮದ ಆಟ. ಮದುವೆಯಾದ ಬಳಿಕ ತಮ್ಮ ಕಾಮದ ಚಟ ತೀರಿಸಿಕೊಂಡು ಒಂದೆರಡು ಮಕ್ಕಳನ್ನು ಹುಟ್ಟಿಸಿ, ಅನಂತರ ಆ ಹೆಣ್ಣು ಮಕ್ಕಳನ್ನು ನೀಡಿ ಬೀದಿಪಾಲು ಮಾಡುತ್ತಾರೆ ಎಂಬ ಕಟು ಸತ್ಯ ಎದುರಿಗಿದ್ದರೂ ಅದನ್ನೊಪ್ಪಲು ತಯಾರಿಲ್ಲ.
ಲ್ಯಾಂಡ್ ಜಿಹಾದ್
ಕೇರಳದಲ್ಲಿ ಮುಸ್ಲಿಮರೇ ಹೆಚ್ಚಾಗಿರುವ ಪ್ರದೇಶದಲ್ಲಿ ಹಿಂದುಗಳ ಒಂದೆರಡು ಮನೆಗಳು ಅಥವಾ ಆಸ್ತಿ ಇದ್ದರಂತೂ ಕೇಳುವುದೇ ಬೇಡ. ಅದನ್ನು ಒತ್ತಾಯಪೂರ್ವಕವಾಗಿ ಮುಸ್ಲಿಮರಿಗೇ ಮಾರಾಟ ಮಾಡಿಸಲಾಗುತ್ತದೆ. ಮಾರಾಟ ಮಾಡಲು ಆ ಕುಟುಂಬಗಳು ಒಂದು ವೇಳೆ ಒಪ್ಪದಿದ್ದರೆ ಬೆದರಿಕೆ ಹಾಕಲಾಗುತ್ತದೆ. ಮನೆಯ ದನಕರುಗಳನ್ನು ಅಪಹರಿಸಲಾಗುತ್ತದೆ. ಮನೆಯ ಹೆಣ್ಣುಮಕ್ಕಳ ಅಪಹರಣವೂ ನಡೆದರೆ ಆಶ್ಚರ್ಯವಿಲ್ಲ. ಇಂಥವರ ಸಹವಾಸವಾದರೂ ಯಾಕೆಂದು ಆ ಹಿಂದು ಕುಟುಂಬಗಳೇ ಸಿಕ್ಕಿದ ರೇಟಿಗೆ ಜಮೀನು ಮಾರಿ ಅಲ್ಲಿಂದ ಕಾಲ್ಕೀಳುವ ಪರಿಸ್ಥಿತಿ ಎಂದೋ ಬಂದೊದಗಿದೆ. ಇದು ಒಂದು ರೀತಿಯ ಲ್ಯಾಂಡ್ ಜಿಹಾದ್. ಹಿಂದುಗಳ ಆಸ್ತಿ, ಜಮೀನನ್ನು ಒತ್ತಡ ಹೇರಿ ವಶಪಡಿಸಿಕೊಳ್ಳುವ ತಂತ್ರಗಾರಿಕೆ.
ಇದೀಗ ಕೇರಳದಲ್ಲಿ ಶುರುವಾಗಿರುವುದು ಬಿಲ್ಡಿಂಗ್ ಜಿಹಾದ್. ಮುಸ್ಲಿಮರಿಗೆ ಸೇರಿದ ಬಿಲ್ಡಿಂಗ್‌ಗಳನ್ನು ಹಿಂದುಗಳು ಖರೀದಿಸುವಂತೆಯೇ ಇಲ್ಲ. ಹೀಗಾದರೆ ಪಾಕಿಸ್ತಾನದಲ್ಲಿರುವ ಹಿಂದುಗಳಿಗೂ ಇಲ್ಲಿರುವ ಹಿಂದುಗಳಿಗೂ ಇರುವ ವ್ಯತ್ಯಾಸವಾದರೂ ಏನು? ಅಲ್ಲೂ ಬಲಾತ್ಕಾರದ ಮತಾಂತರ, ಜಮೀನು, ಆಸ್ತಿ, ಬಿಲ್ಡಿಂಗ್ ವಶ. ಇಲ್ಲೂ ಅದೇ ಕಥೆ. ಹಿಂದುಗಳಿಗೆ ರಕ್ಷಣೆ ಕೊಡಬೇಕಾದ ಸರ್ಕಾರಗಳು ಇವನ್ನೆಲ್ಲ ನೋಡಿಯೂ ನೋಡದಂತೆ ಮೌನಕ್ಕೆ ಶರಣಾಗಿವೆ. ಅಂತಹ ಮೌನಕ್ಕೆ ʼಜಾತ್ಯತೀತತೆʼ ಎಂದು ಬೇರೆ ವ್ಯಾಖ್ಯಾನಿಸಲಾಗುತ್ತದೆ!
ಕಾಂಗ್ರೆಸ್ ಹಾದಿಯಲ್ಲೇ ಬಿಜೆಪಿ
ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಯಾವುದೇ ಸರ್ಕಾರವಿರಲಿ ಅಲ್ಪಸಂಖ್ಯಾತರಿಗೇ ಆದ್ಯತೆ. ಅಲ್ಪಸಂಖ್ಯಾತರಿಗಾಗಿ ಜಿಲ್ಲೆಗೊಂದು ಐಟಿಐ ಹಾಗೂ ಕಂದಾಯ ವಿಭಾಗಕ್ಕೊಂದು ಪಾಲಿಟೆಕ್ನಿಕ್ ಕಾಲೇಜು ತೆರೆಯಲು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ನಿರ್ಧರಿಸುವುದು ಇದಕ್ಕೆ ನಿದರ್ಶನ. ಅಂದ ಹಾಗೆ ಇಂತಹ ನಿರ್ಧಾರ ಕೈಗೊಂಡಿರುವುದು ಕೇರಳದ ಕಮ್ಯುನಿಸ್ಟ್ ಸರ್ಕಾರವಲ್ಲ. ಆದರೆ ಕರ್ನಾಟಕದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ! ರಾಜ್ಯದ 30 ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರಿಗಾಗಿಯೇ ಐಟಿಐ ಕಾಲೇಜುಗಳನ್ನು ತೆರೆಯಲು ಪ್ರಸ್ತಾಪವನ್ನು ಸಿದ್ಧಪಡಿಸಿ, ಈಗಾಗಲೇ ಕೇಂದ್ರದಿಂದ ಶೇ.60 ಹಾಗೂ ರಾಜ್ಯದಿಂದ ಶೇ.40 ಅನುದಾನ ಸಿಗಲಿದೆಯಂತೆ. ಇಂತಹ ಐಟಿಐ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಶೇ.75 ಸೀಟುಗಳು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿಯೇ ಮೀಸಲಿರಿಸಲಾಗಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಆರ್ಥಿಕವಾಗಿ ಸಬಲೀಕರಣ ಮಾಡುವ ದೃಷ್ಟಿಯಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರವೇ ಸ್ಪಷ್ಟಪಡಿಸಿದೆ.
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಆರ್ಥಿಕ ಸಬಲೀಕರಣ ಮಾಡುವುದು ತಪ್ಪಲ್ಲ. ಆದರೆ ಅವರಿಗಾಗಿಯೇ ಪ್ರತ್ಯೇಕ ಐಟಿಐ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳನ್ನು ತೆರೆಯುವುದು ಎಷ್ಟರಮಟ್ಟಿಗೆ ಸಮಂಜಸ? ಈಗಿರುವ ಸಾಮಾಜಿಕ ಕೋಮು ಸಾಮರಸ್ಯ ಕೆಡುವುದಕ್ಕೆ ಈ ಯೋಜನೆ ದಾರಿ ಮಾಡಿಕೊಟ್ಟಂತಾಗುವುದಿಲ್ಲವೆ? ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಎಲ್ಲ ವಿದ್ಯಾರ್ಥಿಗಳ ಜೊತೆ ಸರ್ಕಾರ ಸಾರ್ವಜನಿಕ ಐಟಿಐ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಓದಿದರೆ ಆಗುವ ತೊಂದರೆಯಾದರೂ ಏನು? ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದ ಮುಸ್ಲಿಂ ವಿದ್ಯಾರ್ಥಿ ಭಯೋತ್ಪಾದಕನಾಗಿ, ಅನಂತರ ಸಿರಿಯಾಕ್ಕೆ ತೆರಳಿ ಐಸಿಸ್ ಉಗ್ರರಿಗೆ ವೈದ್ಯಕೀಯ ನೆರವು ನೀಡಿ ಈಗ ಬಂಧಿತನಾಗಿರುವ ವಿಷಯ ನಮ್ಮ ಕಣ್ಣಮುಂದೆ ಹಸಿರಾಗಿಯೇ ಇದೆ. ಹೀಗಿರುವಾಗ, ಇನ್ನು ಮುಸ್ಲಿಮರಿಗಾಗಿ ಪ್ರತ್ಯೇಕ ಐಟಿಐ, ಪಾಲಿಟೆಕ್ನಿಕ್ ಕಾಲೇಜುಗಳನ್ನು ತೆರೆದರೆ ಅಲ್ಲಿಗೆ ಬರುವ ಮುಸ್ಲಿಂ ವಿದ್ಯಾರ್ಥಿಗಳಲ್ಲಿ ಕೋಮುದ್ವೇಷ ಬೆಳೆಯದೆ ಇರುತ್ತದೆಯೆ? ಉಗ್ರರನ್ನು ತಯಾರಿಸುವ ಕಾರ್ಖಾನೆಗಳು ಆ ಕಾಲೇಜುಗಳು ಆಗದೆ ಇರಲು ಸಾಧ್ಯವೆ?
ಸ್ವಾತಂತ್ರ್ಯ ಬಂದಾಗಿನಿಂದ ಅಲ್ಪಸಂಖ್ಯಾತರನ್ನು ಎಲ್ಲ ಸರ್ಕಾರಗಳೂ ತಲೆಯ ಮೇಲೆ ಹೊತ್ತು ಮೆರೆದಿವೆ. ಈಗ ಬಿಜೆಪಿ ಕೂಡ ಅದೇ ಹಾದಿ ತುಳಿದಿರುವುದು ವಿಷಾದನೀಯ. ರಾಷ್ಟ್ರೀಯ ಪ್ರವಾಹದಿಂದ ಮುಸ್ಲಿಮರನ್ನು ಪ್ರತ್ಯೇಕಿಸಿ ಬೆಳೆಸಿದಷ್ಟೂ ಆ ಜನಾಂಗ ಅಪಾಯಕಾರಿಯೇ. ರಾಷ್ಟ್ರೀಯ ಪ್ರವಾಹದಲ್ಲಿ ಒಂದುಗೂಡಿಸಿದಾಗಲೇ ಪ್ರತ್ಯೇಕತೆಯ ವಿಷ ಭಾವನೆಯಿಂದ ಆ ಜನಾಂಗವನ್ನು ಮುಕ್ತಗೊಳಿಸಲು ಸಾಧ್ಯ.
ಮುಸ್ಲಿಮರು ಈ ದೇಶದಲ್ಲಿ ಇರಬಾರದೆಂದು ಇದರರ್ಥವಲ್ಲ. ಆದರೆ ಇಲ್ಲಿರುವ ಮುಸ್ಲಿಮರು ಈ ದೇಶಕ್ಕೆ, ಇಲ್ಲಿನ ಸಂವಿಧಾನಕ್ಕೆ, ಇಲ್ಲಿನ ಸಂಸ್ಕೃತಿ ಪರಂಪರೆಗೆ ಬದ್ಧತೆ ಪ್ರದರ್ಶಿಸುವ ಕರ್ತವ್ಯ ಅವರೆಲ್ಲರದು. ಆ ಕರ್ತವ್ಯಪ್ರಜ್ಞೆಯನ್ನು ಬೆಳೆಸುವುದು ಹೇಗೆಂದು ಅಧಿಕಾರಸೂತ್ರ ಹಿಡಿದ ಪ್ರಭುಗಳು ಯೋಚಿಸಬೇಕು. ಹಾಗೆ ಯೋಚಿಸದೆ ಅಲ್ಪಸಂಖ್ಯಾತರನ್ನು ಕೇಲವ ಓಟ್‌ಬ್ಯಾಂಕ್ ರಾಜಕಾರಣದ ದಾಳಗಳನ್ನಾಗಿ ಬಳಸುವುದು, ಬೆಳೆಸುವುದು ಅತ್ಯಂತ ಅಪಾಯಕಾರಿ. ಈಗಾಗಲೇ ಅಂತಹ ದುಷ್ಪರಿಣಾಮಗಳಿಗೆ ದೇಶ ಮೂಕ ಸಾಕ್ಷಿಯಾಗಿದೆ.
***
ದು.ಗು. ಲಕ್ಷ್ಮಣ
ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.