• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home KOLAR

ಅಳಿದುಳಿದ ಚಿನ್ನಕ್ಕಾಗಿ ಡ್ರಿಲ್ಲಿಂಗ್; ಕೆಜಿಎಫ್ ನಿರೀಕ್ಷೆಗೆ ಮತ್ತೆ ನೀರು, ಮಾಜಿ ಮಿನಿ ಇಂಗ್ಲೆಂಡ್‌ ಮುಖದಲ್ಲಿ ಮಂದಹಾಸ

P K Channakrishna by P K Channakrishna
December 7, 2020
in KOLAR, STATE
Reading Time: 2 mins read
0
ಅಳಿದುಳಿದ ಚಿನ್ನಕ್ಕಾಗಿ ಡ್ರಿಲ್ಲಿಂಗ್; ಕೆಜಿಎಫ್ ನಿರೀಕ್ಷೆಗೆ ಮತ್ತೆ ನೀರು, ಮಾಜಿ ಮಿನಿ ಇಂಗ್ಲೆಂಡ್‌ ಮುಖದಲ್ಲಿ ಮಂದಹಾಸ
915
VIEWS
FacebookTwitterWhatsuplinkedinEmail

ದೊಡ್ಡಕರಪ್ಪನಹಳ್ಳಿ ಸಮೀಪದ ಬ್ಯಾಟರಾಯನಹಳ್ಳಿ ಬ್ಲಾಕ್‌ನಲ್ಲಿ ಡ್ರಿಲ್ಲಿಂಗ್ ಆರಂಭ.

***

ground report

ಕೆಜಿಎಫ್:‌ ಗಣಿಗಳು ಮುಚ್ಚಿಕೊಂಡ ಮೇಲೆ ಬದುಕಿಗಾಗಿ ಬೆಂಗಳೂರನ್ನೇ ನೆಚ್ಚಿಕೊಂಡಿದ್ದ ಈ ಪಟ್ಟಣಕ್ಕೆ ಪುನಾ ಗತವೈಭವ ಮರಳುವ ಕಾಲ ಸನ್ನಿಹಿತವಾಗಿದೆ. ಆದರೆ; ಇದರಲ್ಲಿ ಎರಡು ಆಯ್ಕೆಗಳನ್ನು ಮಾಡಿಕೊಂಡಿರುವ ಕೇಂದ್ರ-ರಾಜ್ಯ ಸರಕಾರಗಳು ಜನರಲ್ಲಿ ಸಣ್ಣಗೆ, ನಿಧಾನಗತಿಯಲ್ಲಿ ನಿರೀಕ್ಷೆಗಳನ್ನು ಹುಟ್ಟುಹಾಕುತ್ತಿವೆ.

ಆಯ್ಕೆ ಒಂದು: ಕೆಜಿಎಫ್‌ನಲ್ಲಿ ಈವರೆಗೆ ಚಿನ್ನದ ಗಣಿಗಾರಿಕೆ ಮಾಡದೆ ಉಳಿದುಕೊಂಡಿರುವ ಸುಮಾರು 3,200 ಎಕರೆ ಅಥವಾ ಅದಕ್ಕಿಂತ ಹೆಚ್ಚು ಭೂ ಭಾಗದಲ್ಲಿ ಕೈಗಾರಿಕಾ ಕಾರಿಡಾರ್‌ ಇಲ್ಲವೇ ಕೈಗಾರಿಕಾ ಪಾರ್ಕ್‌ ಸ್ಥಾಪನೆ ಮಾಡುವುದು.

ಆಯ್ಕೆ ಎರಡು: ಒಂದು ವೇಳೆ ಈ 3,200 ಎಕರೆ ಪ್ರದೇಶದ ಭೂಗರ್ಭದಲ್ಲಿ ಚಿನ್ನದ ನಿಕ್ಷೇಪವೇನಾದರೂ ಇದ್ದರೆ ಮತ್ತೆ ಗಣಿಗಾರಿಕೆ ಆರಂಭಿಸುವುದು.

ಈ ಎರಡೂ ಆಯ್ಕೆಗಳನ್ನು ಮುಂದಿಟ್ಟುಕೊಂಡು ಕೆಜಿಎಫ್‌ನಲ್ಲಿ ಕೆಲ ಕೆಲಸಗಳು ಆಗುತ್ತಿದ್ದು, ಅದಕ್ಕೆ ರಾಜ್ಯದವರೇ ಆದ ಕೇಂದ್ರ ಗಣಿ ಸಚಿವ ಪ್ರಹ್ಲಾದ ಜೋಶಿ ಹಾಗೂ ಕೋಲಾರದ ಲೋಕಸಭೆ ಸದಸ್ಯ ಮುನಿಸ್ವಾಮಿ ಉತ್ಸಾಹದಿಂದ ಓಡಾಡುತ್ತಿದ್ದಾರೆ. ಅದೃಷ್ಟಕ್ಕೇನಾದರೂ ಚಿನ್ನದ ನಿಕ್ಷೇಪ ಸಿಕ್ಕರೆ ಆ ಪ್ರದೇಶದಲ್ಲಿ ಪುನಾ ಗಣಿಗಾರಿಕೆ ಆರಂಭವಾಗಬಹುದು. ಈ ನಿರೀಕ್ಷೆಯಲ್ಲಿ ಜನರ ಜತೆಗೆ ಹಳೆಗಣಿಗಳ ಕಾರ್ಮಿಕರಿದ್ದರೆ, ಮುನಿಸ್ವಾಮಿ ಅವರೂ ಸೇರಿ ಅನೇಕ ರಾಜಕೀಯ ಮುಖಂಡರು ಗಣಿಗಾರಿಕೆ ಮತ್ತೆ ಶುರುವೇ ಆಗಲಿದೆ ಎನ್ನುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಲ ಮಾಧ್ಯಮಗಳಲ್ಲೂ ಅವರು ಹೇಳಿರುವ ವಿಷಯಗಳಷ್ಟೇ ವರದಿಯಾಗುತ್ತಿವೆ. ಹೀಗಾಗಿ ಆ ಮಾಜಿ ʼಮಿನಿ ಇಂಗ್ಲೆಂಡ್ʼ‌ ಮೊಗದಲ್ಲಿ ಮಂದಹಾಸ ಮೂಡಿದೆ.

ಹಾಗಾದರೆ, ಕೆಜಿಎಫ್‌ನಲ್ಲಿ ನಡೆಯುತ್ತಿರವ ನೈಜ ಪ್ರಕ್ರಿಯೆಗಳಾದರೂ ಏನು? ವಸ್ತುನಿಷ್ಠವಾಗಿ ಅಲ್ಲಿ ಏನೇನು ನಡೆಯುತ್ತಿದೆ? ಅಲ್ಲಿ ಮತ್ತೆ ಗಣಿಗಾರಿಕೆ ಶುರುವಾಗುತ್ತಾ? ಇಲ್ಲವಾ? ಅಥವಾ ಇಂಡಸ್ಟ್ರಿಯಲ್‌ ಪಾರ್ಕ್‌ ಬರುತ್ತಾ? ಅಥವಾ ಅದೂ ಇಲ್ಲವಾ? ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ಎಲ್ಲ ಅಂತೆ-ಕಂತೆಗಳ ಬೆನ್ಹತ್ತಿದ ಸಿಕೆನ್ಯೂಸ್‌ ನೌ ಕೆಲ ಮಹತ್ತ್ವದ ಅಂಶಗಳನ್ನು ಸಂಗ್ರಹ ಮಾಡಿದ್ದು, ತಜ್ಞರ ಅಭಿಪ್ರಾಯಗಳ ಸಮೇತ ಅವುಗಳನ್ನು ಇಲ್ಲಿ ವಿವರಿಸಿದೆ.

ಆರಂಭವಾಗಿದೆ ಡ್ರಿಲ್ಲಿಂಗ್‌

ಈಗಾಗಲೇ ಕೇಂದ್ರ ಗಣಿ ಇಲಾಖೆಯ ಸೂಚನೆಯ ಮೇರೆಗೆ ಹಿಂದೆ ಗಣಿಗಾರಿಕೆ ನಡೆಯದ ಜಾಗವೊಂದರಲ್ಲಿ ಡ್ರಿಲ್ಲಿಂಗ್‌ ಶುರು ಮಾಡಲಾಗಿದೆ. ದೊಡ್ಡಕರಪ್ಪನಹಳ್ಳಿ ಸಮೀಪದ ಬ್ಯಾಟರಾಯನಹಳ್ಳಿ ಬ್ಲಾಕ್‌ನಲ್ಲಿ ಈ ಕೆಲಸ ಆರಂಭವಾಗಿದೆ. ಮಹಾರಾಷ್ಟ್ರದ ನಾಗಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಂಇಸಿಎಲ್‌ ಸಂಸ್ಥೆಯ ಸೂಚನೆ ಮೇರೆಗೆ ಸುಮಾರು 30ಕ್ಕೂ ಹೆಚ್ಚು ತಜ್ಞರು ಕೆಜಿಎಫ್‌ನಲ್ಲಿ ಡ್ರಿಲ್ಲಿಂಗ್‌ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಜಾರ್ಖಂಡ್‌ನ ಜೆಮ್‌ಷೆಡ್‌ಪುರದಿಂದ ಅತ್ಯಾಧುನಿಕ ಡ್ರಿಲ್ಲಿಂಗ್‌ ಯಂತ್ರವನ್ನು ತರಿಸಲಾಗಿದೆ. ಎಂಇಸಿಎಲ್ʼನ ‌ ನುರಿತ ತಜ್ಞರೇ ಈ ಕೆಲಸದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದು, ಸುಮಾರು 18 ಜಾಗಗಳಲ್ಲಿ ಡ್ರಿಲ್ಲಿಂಗ್‌ ನಡೆಯಲಿದೆ. ಮೂರು ತಿಂಗಳಲ್ಲಿ ಡ್ರಿಲ್ಲಿಂಗ್‌ ಕೆಲಸ ಮುಗಿಸಿ ಅಲ್ಲಿ ಹೊರಬೀಳುವ ಮಣ್ಣು, ಕಲ್ಲು ಮತ್ತಿತರೆ ಅಂಶಗಳನ್ನು ಎಂಇಸಿಎಲ್‌ಗೆ ಕಳಿಸಬೇಕು. ಈ ಎಲ್ಲ ಪ್ರಕ್ರಿಯೆಗಳು ನಡೆದು ಅಂತಿಮ ವರದಿ ಬರಲು ಬಹುಶಃ ಆರು ತಿಂಗಳಾದರೂ ಆಗಬಹುದು ಎಂದು ಗಣಿ ತಜ್ಞರು ಹೇಳುತ್ತಿದ್ದಾರೆ.

ಕೆಜಿಎಫ್‌ನಲ್ಲಿ ಚಿನ್ನದ ನಿಕ್ಷೇಪ ಇನ್ನೂ ಇದೆ. ಮತ್ತೆ ಗಣಿಗಾರಿಕೆ ಆರಂಭಿಸಬಹುದು ಎಂದು ಕಳೆದ ಇಪ್ಪತ್ತು ವರ್ಷಗಳಿಂದ ಹೇಳಲಾಗುತ್ತಿತ್ತು. ಈ ಎಲ್ಲ ಊಹಾಪೋಹಗಳ ನಡುವೆಯೇ ಅಗಸ್ಟ್‌ 28ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು, ರಾಜ್ಯ ಗಣಿ ಮತ್ತು ಕೈಗಾರಿಕೆ ಸಚಿವರು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದ ಪ್ರಹ್ಲಾದ ಜೋಶಿ, ಕೆಜಿಎಫ್‌ನಲ್ಲಿ ನಿಕ್ಷೇಪಗಳಿವೆಯೇ? ಇಲ್ಲವೇ? ಎಂಬುದನ್ನು ಪತ್ತೆ ಹಚ್ಚಲಾಗುವುದು. ಒಂದು ವೇಳೆ ಅಲ್ಲಿ ಖನಿಜ ನಿಕ್ಷೇಪಗಳು ಇಲ್ಲದಿದ್ದರೆ, ಗಣಿಗಾರಿಕೆ ಮಾಡಿಲ್ಲದ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದರು. ಅದರ ಮುಂದುವರಿದ ಭಾಗವಾಗಿ ಈಗ ಅಲ್ಲಿ ಡ್ರಿಲ್ಲಿಂಗ್‌ ಆಗುತ್ತಿದೆ.

*ಕೆಜಿಎಎಫ್: ಕೆಳಗಿನ ವರದಿ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ..

ಸೈನೇಡ್ ದಿಬ್ಬ, ಜಲಾವೃತ ಗಣಿಗಳು ಮತ್ತು 3,200 ಎಕರೆ ಚಿನ್ನದಂಥ ಭೂಮಿ; ಆಸ್ಟ್ರೇಲಿಯಾ ಕಂಪನಿ ಹೋದ ಮೇಲೆ ಇಂಡಸ್ಟ್ರೀಯಲ್‌ ಪಾರ್ಕ್‌ ಭಜನೆ !!
ಸಂಸದರು ಚಿನ್ನ ಇದೆ ಅಂತಾರೆ!

“ಬಿಜಿಎಂಎಲ್‌ ವ್ಯಾಪ್ತಿಯ ಗಣಿಗಾರಿಕೆ ಮಾಡಿರದ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇನ್ನೂ ಇದೆ ಎಂಬ ನಂಬಿಕೆ ಇದೆ. ಜತೆಗೆ, ಕೆಜಿಎಫ್‌ ಪಟ್ಟಣದಲ್ಲಿ ಅಲ್ಲಿ ಬಿದ್ದಿರುವ ಸೈನೇಡ್‌ ಗುಡ್ಡಗಳಲ್ಲೂ ಅಲ್ಪಸ್ವಲ್ಪ ಚಿನ್ನವಿದೆ. ಅದನ್ನೆಲ್ಲ ತೆಗೆಯಬೇಕಿದೆ. ಹಿಂದೆ ಅವರಿವರು ಚಿನ್ನಕ್ಕಾಗಿ ಗಣಿಗಳಿಗೆ ಹೋಗುತ್ತಿದ್ದರು ಎಂಬುದನ್ನು ಕೇಳಿದ್ದೆವು. ಹೀಗಾಗಿ ಇಲ್ಲಿ ಚಿನ್ನ ಇದೆಯಾ, ಇಲ್ಲವಾ ಎಂಬುದನ್ನು ಪರೀಕ್ಷೆ ಮಾಡಿಸಲು ಕೇಂದ್ರ ಸರಕಾರ ಸೂಚನೆ ನೀಡಿದೆ. ಹಿಂದಿನ ಸರಕಾರಗಳು ಬರೀ ಹೇಳುತ್ತಿದ್ದವು. ನಾವು ಕೆಲಸ ಮಾಡಿ ತೋರಿಸುತ್ತಿದ್ದೇವೆ” ಎನ್ನುತ್ತಾರೆ ಕೋಲಾರದ ಸಂಸದ ಮುನಿಸ್ವಾಮಿ. ಡ್ರಿಲ್ಲಿಂಗ್‌ ಶುರುವಾದ ದಿನವೇ ಹೀಗೆ ಹೇಳಿದ ಸಂಸದರ ಮಾತುಗಳು ಮತ್ತೆ ಗಣಿಗಾರಿಕೆ ಆರಂಭ ಆಗಿಯೇ ಬಿಡುತ್ತದೆನೋ ಎಂಬ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಡ್ರಿಲ್ಲಿಂಗ್ ಜಾಗದಲ್ಲಿ ಸಂಸದ ಮುನಿಸ್ವಾಮಿ.

ತಜ್ಞರು ಹೇಳುವುದೇನು?

ನಿಕ್ಷೇಪ ಪತ್ತೆ ಕಾರ್ಯ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ರಾಜ್ಯದ ಪ್ರಮುಖ ಗಣಿ ತಜ್ಞರು, ಮೇಲೆ ತಿಳಿಸಿದ 3,200 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಞೇಪ ಇರುವುದು ಬಹುತೇಕ ಅನುಮಾನ ಅಥವಾ ಇದ್ದರೂ ತೀರಾ ಕಡಿಮೆ ಪ್ರಮಾಣದಲ್ಲಿ ಇರಬಹುದು ಎಂದಿದ್ದಾರೆ. ಹಾಗಾದರೆ, ಈ ಜಾಗ ಕೈಗಾರಿಕಾ ಪಾರ್ಕ್‌ ಸ್ಥಾಪನೆಗೆ ಸೂಕ್ತವಾ? ಅಲ್ಲವಾ? ಎಂಬುದರ ಬಗ್ಗೆಯೂ ಅವರು ನಿಖರವಾಗಿ ಮಾತನಾಡಿದ್ದಾರೆ. ಮತ್ತೊಂದೆಡೆ, ಗಣಿ ಪುನಾರಂಭ ಆದರೆ ನಮ್ಮ ಬಾಕಿ ಯಾರು ಪಾವತಿಸುತ್ತಾರೆ? ಕೈಗಾರಿಕಾ ಪಾರ್ಕ್‌ ಸ್ಥಾಪನೆಯಾದರೆ ನಮ್ಮ ಕಥೆ ಏನು? ಎಂಬ ಪ್ರಶ್ನೆಗಳನ್ನುಗಣಿಗಳಲ್ಲಿ ಕೆಲಸ ಮಾಡಿ ಸೆಟಲ್‌ಮೆಂಟ್‌ಗಾಗಿ ಕಾಯುತ್ತಿರುವ ಕಾರ್ಮಿಕರು ಎತ್ತಿದ್ದಾರೆ.


*ಈ ವರದಿಯ ಮುಂದಿನ ಭಾಗದಲ್ಲಿ ತಜ್ಞರ ಅಭಿಪ್ರಾಯಗಳು ಪ್ರಕಟವಾಗಲಿವೆ. ನಿರೀಕ್ಷಿಸಿ..

*ಕೆಜಿಎಎಫ್‌ ಕುರಿತ ಕೆಳಗಿನ ವರದಿ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ..

ಚಿನ್ನ ಖಾಲಿಯಾದರೂ ಪರವಾಗಿಲ್ಲ!; ಕೆಜಿಎಫ್‌ ಎಂದರೆ ಎಲ್ಲರಿಗೂ ಇಷ್ಟ!! ಏಕೆಂದರೆ…?

P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ನವೆಂಬರ್‌ನಿಂದಲೇ ಕದ ತೆರೆಯಲಿದೆ  ಡಿಗ್ರಿ ಕಾಲೇಜ್; ಕೊನೆಗೂ ಡಿಸೈಡ್‌ ಮಾಡಿದ ಸರಕಾರ

ನವೆಂಬರ್‌ನಿಂದಲೇ ಕದ ತೆರೆಯಲಿದೆ ಡಿಗ್ರಿ ಕಾಲೇಜ್; ಕೊನೆಗೂ ಡಿಸೈಡ್‌ ಮಾಡಿದ ಸರಕಾರ

Leave a Reply Cancel reply

Your email address will not be published. Required fields are marked *

Recommended

ನಂದಿಬೆಟ್ಟದಲ್ಲಿ ಅಪಾಯಕ್ಕೆ ಸಿಲುಕಿದ್ದ ದೆಹಲಿ ಯುವಕನ ರಕ್ಷಣೆ

ನಂದಿಬೆಟ್ಟದಲ್ಲಿ ಅಪಾಯಕ್ಕೆ ಸಿಲುಕಿದ್ದ ದೆಹಲಿ ಯುವಕನ ರಕ್ಷಣೆ

4 years ago
ಜಾಹೀರಾತಿನಲ್ಲಿ ನೆಹರು ಚಿತ್ರಕ್ಕೆ ಕೊಕ್; ಸಣ್ಣತನದ ಪರಮಾವಧಿ

ಜಾಹೀರಾತಿನಲ್ಲಿ ನೆಹರು ಚಿತ್ರಕ್ಕೆ ಕೊಕ್; ಸಣ್ಣತನದ ಪರಮಾವಧಿ

4 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ