• About
  • Advertise
  • Careers
  • Contact
Tuesday, May 12, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home COVID-19

ಕೋವಿಡ್‌ ನಡುವೆ ವಿಮಾನ ವಿಹಾರ ಮಾಡುವಿರಾ? ಹಾಗಾದರೆ, ಈ ವರದಿ ಓದಿ..

cknewsnow desk by cknewsnow desk
November 11, 2020
in COVID-19, NEWS & VIEWS, STATE
Reading Time: 2 mins read
0
ಕೋವಿಡ್‌ ನಡುವೆ ವಿಮಾನ ವಿಹಾರ ಮಾಡುವಿರಾ? ಹಾಗಾದರೆ, ಈ ವರದಿ ಓದಿ..
912
VIEWS
FacebookTwitterWhatsuplinkedinEmail

indigo flight: courtesy; Wikipedia

ಬೆಂಗಳೂರು: ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಕರ್ನಾಟಕದಲ್ಲಿ ಕೋವಿಡ್‌ ಸೋಂಕಿತರ ಪ್ರಮಾಣ ಹೆಚ್ಚಾಗುತ್ತದೆ ಎಂದು ಐಸಿಎಂಆರ್‌ ಎಚ್ಚರಿಕೆ ನೀಡಿದ ನಡುವೆಯೂ ರಾಜ್ಯದಲ್ಲಿ ಸೋಂಕಿತರ ಪ್ರಮಾಣದಲ್ಲಿ ಏರಿಳಿತ ಆಗುತ್ತಲೇ ಇದೆ. ಈ ನಡುವೆ ದೇಶಿಯ ವಿಮಾನ ಸಂಚಾರವೂ ನಿರಾಂತಕವಾಗಿ ಸಾಗಿದ್ದು, ವಿಮಾನ ನಿಲ್ದಾಣ ಮತ್ತು ವಿಮಾನಗಳಲ್ಲಿ ಎಲ್ಲ ಬಗೆಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೋವಿಡ್‌ ಅನ್‌ಲಾಕ್‌ನಿಂದ ಪುಟಿದೆದ್ದಿರುವ ದೇಶಿಯ ನಾಗರೀಕ ವಿಮಾನಯಾನವು ದೀಪಾವಳಿ ಹೊತ್ತಿಗೆ ಒಂದು ಹಂತಕ್ಕೆ ಬಂದು ನಿಂತಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೋವಿಡ್‌ಗೂ ಮೊದಲೇ ಆಪರೇಟ್‌ ಮಾಡುತ್ತಿದ್ದ ಎಲ್ಲ ಮಾರ್ಗಗಳಲ್ಲೂ ವಿಮಾನ ಸಂಚಾರವನ್ನು ಪುನಾರಂಭ ಮಾಡಿದೆ. ಲಭ್ಯ ಮಾಹಿತಿ ಪ್ರಕಾರ ಈಗಾಗಲೇ ಶೇ.90ರಷ್ಟು ದೇಶಿಯ ಮಾರ್ಗಗಳಲ್ಲಿ ಈಗಾಗಲೇ ವಿಮಾನ ಹಾರಾಟ ನಡೆಯುತ್ತಿದೆ. ಪ್ರಯಾಣಕರೂ ಕೋವಿಡ್‌ ಮುನ್ನೆಚ್ಚರಿಕೆಗಳೊಂದಿಗೆ ವಿಮಾನ ವಿಹಾರ ಮಾಡುತ್ತಿದ್ದಾರೆ.

ಹಾಗಾದರೆ, ವಿಮಾನಗಳಲ್ಲಿ ಹಾಗೂ ವಿಮಾನ ನಿಲ್ದಾಣಗಳಲ್ಲಿ ಕೈಗೊಂಡಿರುವ ಕೋವಿಡ್‌ ಮುನ್ನೆಚ್ಚರಿಕೆಗಳ ಬಗ್ಗೆ ಬುಧವಾರ ಸ್ವತಃ ಬೆಂಗಳೂರಿನಿಂದ ಉತ್ತರಾಖಂಡದ ಡೆಹರಾಡೂನ್‌ಗೆ ಇಂಡಿಗೋ ಫ್ಲೈಟ್‌ನಲ್ಲಿ ಪ್ರಯಾಣ ಮಾಡಿದ ಖಾಸಗಿ ಕಂಪನಿ ಉದ್ಯೋಗಿ ಜಿ.ಎನ್.ಚಂದ್ರಶೇಖರ್‌ ತಮ್ಮ ಸ್ವಾನುಭವ ಹಾಗೂ ಕಂಡ ದೃಶ್ಯಗಳನ್ನು ಸಿಕೆನ್ಯೂಸ್‌ ನೌ ಓದುಗರಿಗಾಗಿ ಇಲ್ಲಿ ಹಂಚಿಕೊಂಡಿದ್ದಾರೆ.

  • ವಿಮಾನದೊಳಗೆ / ಪ್ರಯಾಣಿಕರ ಕೋವಿಡ್‌ ಕಿಟ್‌ / ‌ ಚೆಕ್‌ʼಇನ್‌ ಕೌಂಟರ್‌
ಆತಂಕ ಮತ್ತು ನಿರಾತಂಕ

ಬೆಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನಲ್ಲಿ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಉತ್ತಮವಾಗಿ ಕೈಗೊಳ್ಳಲಾಗಿದೆ. ಹಾಗೆಯೇ, ಎಲ್ಲ ವಿಮಾನಗಳಲ್ಲೂ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ. ಮೇಲ್ನೋಟಕ್ಕೆ ಎಲ್ಲವೂ ಉತ್ತಮವಾಗಿಯೇ ಇತ್ತು. ಆದರೆ, ನಮ್ಮೊಳಗೆ ತುಸು ಆತಂಕವೂ ಇರುತ್ತದೆ, ಹಾಗೆಯೇ ಆ ವ್ಯವಸ್ಥೆಗಳನ್ನು ನೋಡಿದಾಗ ಕೊಂಚ ನಿರಾತಂಕವೂ ಆಯಿತು ಎನ್ನುತ್ತಾರೆ ಚಂದ್ರಶೇಖರ್.‌

ಮುಂದುವರಿದು ಅವರು ಹೇಳಿದ್ದು ಇಷ್ಟು;
ಕೋವಿಡ್‌ ಹಿನ್ನೆಲೆಯಲ್ಲಿ ನಿಗದಿತ ವಿಮಾನ ಹತ್ತಬೇಕಾದರೆ ನಾವು ಮೂರು ಗಂಟೆ ಮೊದಲೇ ಚೆಕ್‌ʼಇನ್‌ ಆಗಬೇಕು. ಏರ್‌ಪೋರ್ಟ್‌ ಲಾಂಜ್‌ಗೆ ಎಂಟ್ರಿ ಕೊಡುತ್ತಿದ್ದಂತೆಯೇ ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯ. ಜತೆಗೆ ಮೊದಲ ಸುತ್ತಿನ ಸ್ಯಾನಿಟೈಸೇಷನ್ ಕೂಡ.‌ ಇದಾದ ಮೇಲೆ ಪ್ರಯಾಣಕರು ಚೆಕ್‌ ಇನ್‌ ಆಗಬೇಕಾದರೆ, ಕೌಂಟರ್‌ನಲ್ಲಿ ಆದರೂ ಮಾಡಿಕೊಳ್ಳಬಹುದು ಅಥವಾ ವೆಬ್‌ ಚೆಕ್‌ʼಇನ್‌ ಕೂಡ ಆಗಬಹುದು. ಕೌಂಟರ್‌ ಚೆಕ್‌ʼಇನ್‌ಗೆ ಹೋದರೆ ೧೦೦ ರೂ. ಶುಲ್ಕವಿದೆ. ವೆಬ್‌ ಚೆಕ್‌ʼಇನ್‌ ಮಾಡಿಕೊಂಡರೆ ಅಲ್ಲಿಯೇ ಪ್ರಿಂಟ್‌ ತೆಗೆದುಕೊಳ್ಳುವ ಸೌಲಭ್ಯವಿದೆ. ಇಲ್ಲೆಲ್ಲ ಕೋವಿಡ್‌ ಬಗ್ಗೆ ಪರಿಹಾರಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲಾಗಿದೆ. ಸಮಸ್ಯೆ ಇಲ್ಲ.

ನಾನು ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡಿದೆ. ಚೆಕ್‌ʼಇನ್‌ ಆಗುವಾಗಲೇ ಇಂಡಿಗೋದವರು ಕೋವಿಡ್‌ ಸುರಕ್ಷತಾ ಕಿಟ್‌ ಕೊಡುತ್ತಾರೆ. ಆ ಕಿಟ್‌ನಲ್ಲಿ ಸ್ಯಾಚೆಟ್‌ ಮಾದರಿಯ ಸ್ಯಾನಿಟೈಸರ್‌ನ ನಾಲ್ಕೈದು ಪಾಕೆಟ್‌ಗಳು, ಒಂದು ಮಾಸ್ಕ್‌, ಮುಖಕ್ಕೆ ಕೋವಿಡ್‌ ಫೇಸ್‌ಶೀಲ್ಡ್‌ ನೀಡುತ್ತಾರೆ. ಸಾಮಾನ್ಯವಾಗಿ ವಿಮಾನದಲ್ಲಿ ಇಕ್ಕೆಲಗಳಲ್ಲಿ ತಲಾ ಮೂರು ಆಸಗಳಿದ್ದು, ನಡುವೆ ಓಡಾಡಲು ಪ್ಯಾಸೇಜ್‌ ಇರುತ್ತದೆ. ಈ ಮೂರು ಆಸನಗಳ ಪೈಕಿ ಮಧ್ಯದ ಆಸನದಲ್ಲಿ ಕೂರುವ ಪ್ರಯಾಣಿಕರಿಗೆ ಇಡೀ ದೇಹವನ್ನು ಕವರ್‌ ಮಾಡುವ ಪಿಪಿಇ ಕಿಟ್‌ ನೀಡಲಾಗುತ್ತದೆ. ಪ್ಯಾಸೇಜ್ ಪಕ್ಕ ಅಥವಾ ವಿಂಡೋ ಕಡೆ ಕೂರುವ ಪ್ರಯಾಣಿಕರಿಗೆ ಈ ಕಿಟ್‌ ನೀಡಲಾಗುವುದಿಲ್ಲ.

ಸೆಕ್ಯೂರಿಟಿ ಚೆಕ್‌ ಕೂಡ ಸೆನ್ಸಾರ್‌ ಸಿಸ್ಟಮ್‌ ಮೂಲಕವೇ ಇರುತ್ತದೆ. ದೈಹಿಕ ಸ್ಪರ್ಶ ಎಂಬುದು ಇರುವುದೇ ಇಲ್ಲ. ಲಗೇಜ್‌ಗೂ ಇದೇ ಮಾದರಿಯ ಚೆಕ್‌ ಇದೆ. ಎಲ್ಲವೂ ಆಟೋಮ್ಯಾಟಿಕ್.‌

–ಜಿ.ಎನ್.ಚಂದ್ರಶೇಖರ್‌

ವಿಮಾನದಲ್ಲಿಯೂ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಲಾಗಿತ್ತು. ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಮುನ್ನ ವಿಮಾನವನ್ನು ಸ್ಯಾನಿಟೈಸ್‌ ಮಾಡಲಾಗಿತ್ತು. ಕೋವಿಡ್‌ ಮುನ್ನೆಚ್ಚರಿಕೆ, ದೈಹಿಕ ಅಂತರದ ಬಗ್ಗೆ ಸೂಚನೆಗಳನ್ನು ನೀಡಲಾಗುತ್ತಿತ್ತು. ವಿಮಾನ ಹತ್ತುವಾಗ ಇಳಿಯುವಾಗ ತಳ್ಳುವಂತಿಲ್ಲ. ಮುಖ್ಯವಾಗಿ ಗಗನಸಖಿಯರು, ಸಿಬ್ಬಂದಿ ಈ ಬಗ್ಗೆ ಹೆಚ್ಚು ಗಮನ ಹರಿಸಿದ್ದರಲ್ಲದೆ, ಹಿರಿಯ ನಾಗರಿಕರ ನೆರವಿಗೆ ಧಾವಿಸುತ್ತಿದ್ದರು. ಮಧ್ಯದ ಸೀಟಿನಲ್ಲಿ ಕೂತಿದ್ದ ಪ್ರಯಾಣಿಕರಿಗೆ ಪಿಪಿಇ ಕಿಟ್‌ ಕಡ್ಡಾಯ ಮಾಡಲಾಗಿತ್ತು. ಇನ್ನು ಅಕ್ಕಪಕ್ಕ ಸೀಟುಗಳಲ್ಲಿದ್ದವರು ಇಂಥ ಕಿಟ್‌ಗಳನ್ನು ಧರಿಸಿದ್ದರು. ಕಡ್ಡಾಯವಿಲ್ಲದಿದ್ದರೂ ಮುನ್ನೆಚ್ಚರಿಕೆಯಿಂದ ಅವರು ಅವುಗಳನ್ನು ಧರಿಸಿದ್ದರು. ಉಳಿದಂತೆ ವಿಮಾನವು ಶೇ.80ರಷ್ಟು ತುಂಬಿತ್ತು.

ಇನ್ನು ಡೆಹರಾಡೂನ್‌ನಲ್ಲಿ ವಿಮಾನ ಇಳಿದು ನಿರ್ಗಮಿಸುವಾಗಲೂ ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯವಿತ್ತು. ಜತೆಗೆ, ಆಗಮಿಸುವ ಪ್ರಯಾಣಿಕರ ವಿವರಗಳನ್ನು ದಾಖಲು ಮಾಡಲಾಗುತ್ತಿತ್ತು. ವಿಶೇಷವಾಗಿ ಪ್ರವಾಸಿಗರ ಮೇಲೆ ಹೆಚ್ಚು ನಿಗಾ ಇರಿಸಲಾಗಿತ್ತು. ಏನಕ್ಕೆ ಬಂದಿದ್ದೀರಿ? ಯಾವಾಗ ವಾಪಸ್‌ ಹೋಗುತ್ತೀರಿ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದ ಅಧಿಕಾರಿಗಳು, ಪ್ರಯಾಣಿಕರಿಗೆ ಕೋವಿಡ್‌ ಮುನ್ನೆಚ್ಚರಿಕೆ ಬಗ್ಗೆ ಮಾಹಿತಿ ನೀಡುತ್ತಿದ್ದರು ಎಂದು ಚಂದ್ರಶೇಖರ್‌ ಮಾಹಿತಿ ನೀಡಿದರು.

story photos: GN Chandrashekar

Tags: Bangalore airportCovid-19flight journey
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಲೋಕ ಚಿಕಿತ್ಸಕ ವೈದ್ಯನಾಥೇಶ್ವರನ ಗುಡಿಗೇ ಶಸ್ತ್ರಚಿಕಿತ್ಸೆ; ಅಮಾನಿ ಭೈರಸಾಗರದೆದುರು ಶಿವಸನ್ನಿಧಿ

ಲೋಕ ಚಿಕಿತ್ಸಕ ವೈದ್ಯನಾಥೇಶ್ವರನ ಗುಡಿಗೇ ಶಸ್ತ್ರಚಿಕಿತ್ಸೆ; ಅಮಾನಿ ಭೈರಸಾಗರದೆದುರು ಶಿವಸನ್ನಿಧಿ

Leave a Reply Cancel reply

Your email address will not be published. Required fields are marked *

Recommended

ಮುಂದಿನ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಗುಟ್ಟುಬಿಟ್ಟುಕೊಟ್ಟ ಬಂಗಾರಪೇಟೆ ಶಾಸಕ ಎಸ್.ಎನ್‌.ನಾರಾಯಣಸ್ವಾಮಿ

ಹರ್ಷ ಹಂತಕರನ್ನು ಗಲ್ಲಿಗೇರಿಸಿ: ಸಿದ್ದರಾಮಯ್ಯ

4 years ago
ಎತ್ತಿನಹೊಳೆ ಎತ್ತ? ಈವರೆಗೆ 9003.86 ಕೋಟಿ ರೂ. ಖರ್ಚು!!

ಎತ್ತಿನಹೊಳೆ ಎತ್ತ? ಈವರೆಗೆ 9003.86 ಕೋಟಿ ರೂ. ಖರ್ಚು!!

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ