ಬೆಂಗಳೂರು: ಬಾಹುಬಲಿ ಫೇಮ್ ಪ್ರಭಾಸ್ ಮತ್ತು ಕೆಜಿಎಫ್ ಫೇಮ್ ನಿರ್ದೇಶಕ ಪ್ರಶಾಂತ್ ನೀಲ್ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಾರೆಂದು ಕನ್ನಡ ಮಾಧ್ಯಮ ಲೋಕದಲ್ಲಿ ಮೊತ್ತ ಮೊದಲಿಗೆ ನವೆಂಬರ್ ೨೮ರಂದೇ ಬ್ರೇಕ್ ಮಾಡಿತ್ತು ಸಿಕೆನ್ಯೂಸ್ ನೌ.
ಹೈದರಾಬಾದ್‌ನ ಅತ್ಯಂತ ವಿಶ್ವಸನೀಯ ಮೂಲಗಳು ನೀಡಿದ ಮಾಹಿತಿಯನ್ನು ಆಧರಿಸಿ ಈ ಸಿನಿಮಾ ಸುದ್ದಿಯನ್ನು ಬ್ರೇಕ್ ಮಾಡಿತ್ತು ಸಿಕೆನ್ಯೂಸ್ ನೌ. ಅದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಬುಧವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಹಾಗೂ ಪ್ರಶಾಂಶ್ ನೀಲ್ ಈ ಪ್ರಾಜೆಕ್ಟ್ ಅನ್ನು ಅನೌನ್ಸ್ ಮಾಡಿದ್ದಾರೆ. ಆ ಚಿತ್ರಕ್ಕೆ ʼಸಲಾರ್ʼ ಎಂದು ಹೆಸರಿಡಲಾಗಿದೆ.
ಈಗಾಗಲೇ ಕೆಜಿಎಫ್ ಚಾಪ್ಟರ್-1, ಕೆಜಿಎಫ್ ಚಾಪ್ಟರ್-2 ಚಿತ್ರಗಳನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ನಿರ್ಮಿಸಿರುವ ಕಿರಗಂದೂರು, ಪ್ರಭಾಸ್ ಜತೆಗಿನ ಚಿತ್ರವನ್ನೂ ಅದಕ್ಕಿಂತ ಮೀರಿದ ಮಟ್ಟದಲ್ಲಿ ನಿರ್ಮಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಹಿಂದಿನ ಚಿತ್ರಗಳಿಗಿಂತ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಭಾಸ್ ಚಿತ್ರವನ್ನು ಡೈರೆಕ್ಟ್ ಮಾಡುವುದಾಗಿ ಪ್ರಶಾಂತ್ ನೀಲ್ ಹೇಳಿದ್ದಾರೆ.
2021ರ ಜನವರಿಯಿಂದ ಹೊಸ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದಿರುವ ವಿಜಯ್ ಕಿರಗಂದೂರು, “ಸದ್ಯಕ್ಕೆ ಪ್ರಭಾಸ್ ಅವರು ʼರಾಧೆ ಶ್ಯಾಮ್ʼ ಎಂಬ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಅದರ ಶೂಟಿಂಗ್ ಮುಗಿದ ಕೂಡಲೇ ನಮ್ಮ ಚಿತ್ರದ ಚಿತ್ರೀಕರಣ ಆರಂಭವಾಗಬಹುದು” ಎಂದಿದ್ದಾರೆ.
“ಈ ಚಿತ್ರವನ್ನು ಪ್ಯಾನ್ ಮಟ್ಟದಲ್ಲಿಯೇ ನಿರ್ಮಾಣ ಮಾಡಲಾಗುವುದು. ಗುಣಮಟ್ಟ, ಮೇಕಿಂಗ್, ಅದ್ಧೂರಿತನ, ನಟ-ನಟಿಯರು, ತಂತ್ರಜ್ಞಾನ ಸೇರಿದಂತೆ ಯಾವ ಅಂಶದಲ್ಲಿಯೂ ರಾಜಿ ಮಾಡಿಕೊಳ್ಳುವುದಿಲ್ಲ. ತೆಲುಗು, ಕನ್ನಡ, ಹಿಂದಿ, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿದೆ” ಎಂದು ವಿಜಯ್ ಹೇಳಿದ್ದಾರೆ.
- ವಿಜಯ್ ಕಿರಗಂದೂರು, ಪ್ರಶಾಂತ್ ನೀಲ್
- ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಪ್ರಾಜೆಕ್ಟ್ ಅನ್ನು ಕನ್ನಡ ಮಾಧ್ಯಮ ಲೋಕದಲ್ಲಿ ಮೊತ್ತಮೊದಲು ಬ್ರೇಕ್ ಮಾಡಿದ್ದೇ ಸಿಕೆನ್ಯೂಸ್ ನೌ / ಆ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..