ಆದಿಚುಂಚನಗಿರಿ: ಭಕ್ತರ ಪಾಲಿಗೆ ಅದೊಂದು ಆವಿಸ್ಮರಣಿಯ ಘಳಿಗೆ. ಒಂದು ಕಾರ್ತೀಕ ಮಾಸದ ಕೊನೆಯ ಸೋಮವಾರ, ಇನ್ನೊಂದೆಡೆ ಅಮಾವಾಸ್ಯೆ ಕೂಡ. ಈ ಎರಡು ಕಾರಣಕ್ಕಾಗಿ ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ಸೋಮವಾರ ಭಕ್ತಸಾಗರವೇ ಸೇರಿತ್ತು.
ಪ್ರತಿ ವರ್ಷದಂತೆ ಈ ವರ್ಷವೂ ಕ್ಷೇತ್ರದಲ್ಲಿ ಅನೇಕ ವಿಶೇಷಗಳಿದ್ದವು. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಸಾನಿಧ್ಯದಲ್ಲಿ ತಾವು ಪೂಜೆ ಸಲ್ಲಿಸಬೇಕೆಂಬ ನಾನಾ ಭಾಗಗಳಿಂದ ಬಂದಿದ್ದ ಭಕ್ತರು, ಅದರಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದ ಮಹಿಳೆಯರು ಶ್ರೀ ಕಾಲಭೈರವಸ್ವಾಮಿ ಸನ್ನಿಧಿಯಲ್ಲಿ ದೀಪ ಬೆಳಗಿಸಿ ಪುನೀತರಾದರು.
ಈ ಸಂದರ್ಭದಲ್ಲಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ದೇಗುಲದಲ್ಲಿ ಪ್ರಧಾನ ದೀಪವನ್ನು ಬೆಳಗುವ ಮೂಲಕ ಕಾರ್ತೀಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ಜತೆಗೆ; ಕಾರ್ತೀಕ ಮಾಸದ ಕಡೆಯ ಸೋಮವಾರ ಹಾಗೂ ಇನ್ನೊಂದೆಡೆ ಅಮಾವಾಸ್ಯೆಯೂ ಆಗಿದ್ದರಿಂದ ಶ್ರೀಗಳು ಕಾಲಭೈರವೇಶ್ವರ ಸನ್ನಿಧಿಯಲ್ಲಿ ನೆರೆವೇರಿಸಿದ ಪೂಜೆಯನ್ನು ಭಕ್ತರು ಕಣ್ತುಂಬಿಕೊಂಡರು.
ಮುಂಜಾನೆಯಿಂದಲೇ ಶ್ರೀಕ್ಷೇತ್ರದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀ ಕಾಲಭೈರವೇಶ್ವರ ದೇಗುಲವೂ ಸೇರಿ ಅಲ್ಲಿನ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ, ಅಭಿಷೇಕ ಮುಂತಾದ ಕೈಂಕರ್ಯಗಳು ನಡೆದವು.
ಕಲ್ಯಾಣಿಯಲ್ಲಿ ಗಂಗೆಗೆ ಪೂಜೆ
ಅಂತಿಮವಾಗಿ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ದೇವಾಲದ ಎದುರಿಗಿರುವ ಕಲ್ಯಾಣಿಯಲ್ಲಿ ತಾಯಿ ಗಂಗೆಗೆ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಭಕ್ತರು ಕಲ್ಯಾಣಿಯಲ್ಲಿ ಕಾರ್ತೀಕ ದೀಪವನ್ನು ಬಿಡುವ ಮೂಲಕ ಅಮ್ಮನವರಿಗೆ ಹರಿಕೆ ಸಲ್ಲಿಸಿದರು.
ಪೂಜಾ ಕೈಂಕರ್ಯಗಳು ಮುಗಿದ ನಂತರ ಶ್ರೀಗಳ ಸಾನಿಧ್ಯದಲ್ಲಿ ಭಜನೆ ನಡೆಯಿತಲ್ಲದೆ, ಭಕ್ತರು ಕೂಡ ಪಾಲ್ಗೊಂಡು ದೈವಸ್ತುತಿಯಲ್ಲಿ ಪುನೀತರಾದರು.
photos: photos: bnmk photographs
- ಈ ಸುದ್ದಿ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..