• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಪ್ರಶ್ಶರ್ಸ್‌ ಮತ್ತೂ ರಿಪೀಟರ್ಸ್‌ಗೆ ನೀಟ್‌ ಪ್ರಶ್ನೆ ಪತ್ರಿಕೆ ಹೇಗಿರಬೇಕು? ಒಂದು ಅರ್ಥಪೂರ್ಣ ಚರ್ಚೆ, ಜತೆಗೊಂದು ಮೌಲಿಕ ಸಲಹೆ

cknewsnow desk by cknewsnow desk
January 17, 2021
in GUEST COLUMN, STATE
Reading Time: 1 min read
0
ಪ್ರಶ್ಶರ್ಸ್‌ ಮತ್ತೂ ರಿಪೀಟರ್ಸ್‌ಗೆ ನೀಟ್‌ ಪ್ರಶ್ನೆ ಪತ್ರಿಕೆ ಹೇಗಿರಬೇಕು? ಒಂದು ಅರ್ಥಪೂರ್ಣ ಚರ್ಚೆ, ಜತೆಗೊಂದು ಮೌಲಿಕ ಸಲಹೆ
911
VIEWS
FacebookTwitterWhatsuplinkedinEmail
  • ಭಾರತಕ್ಕೆ ವೈದ್ಯರನ್ನು ಸಜ್ಜುಗೊಳಿಸಿ ಕೊಡುವ ವೈದ್ಯಕಿಯ ವಿದ್ಯಾರ್ಥಿಗಳ ಮೊದಲ ಮೆಟ್ಟಿಲು ನೀಟ್‌ ಪರೀಕ್ಷೆ ವಿಷಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಎಲ್ಲರೂ ಬಲ್ಲರು. ಪರೀಕ್ಷಾ ಪದ್ಧತಿ, ಮುಖ್ಯವಾಗಿ ಪ್ರಶ್ನೆ ಪತ್ರಿಕೆಗಳ ಮಾದರಿ ಹಾಗೂ ಪ್ರಶ್ಶರ್ಸ್‌ ಜತಗೆ, ರಿಪೀಟರ್ಸ್‌ ಕುರಿತಾದ ವ್ಯತ್ಯಾಸಗಳು ಪ್ರತಿಯೊಬ್ಬರನ್ನು ಆಲೋಚಿಸುವಂತೆ ಮಾಡುತ್ತಿವೆ. ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಅವರು ಇದಕ್ಕೊಂದು ಸ್ಮಾರ್ಟ್‌ ಪರಿಹಾರ ಕಂಡುಕೊಂಡಿದ್ದಾರೆ. ಓದಿ…

ಕೋವಿಡ್ ಹೆಮ್ಮಾರಿಯ ಆರ್ಭಟ ಕಡಿಮೆಯಾದ ಲಕ್ಷಣ ಗೋಚರಿಸಿದ ಮೇಲೆ ಮೊನ್ನೆ ಜನವರಿ 1ರಿಂದ ಶಾಲಾ-ಕಾಲೇಜುಗಳು ನಿಧಾನವಾಗಿ ಬಾಗಿಲು ತೆರೆದುಕೊಳ್ಳತೊಡಗಿವೆ. ಶಾಲೆ-ಕಾಲೇಜುಗಳ ಪುನರಾರಂಭ ವಿದ್ಯಾರ್ಥಿ-ಶಿಕ್ಷಕಗಳಿಬ್ಬರಲ್ಲೂ ಹರುಷ ತಂದಿದೆ. ಏಕೆಂದರೆ ಏನೇ ಆನ್‌ಲೈನ್ ಪಾಠ ಪ್ರವಚನಗಳನ್ನು ಅಧ್ಯಾಪಕ ವೃಂದ ನಿಯತ್ತಾಗಿ ಚಾಚೂ ತಪ್ಪದೆ ನಿರ್ವಹಿಸಿದ್ದರೂ ಅದನ್ನು ಅರ್ಥಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ ತುಂಬಾ ಕಡಿಮೆ. ತರಗತಿಯಲ್ಲಿ ನಡೆಸಲಾಗುವ ಪಾಠ ಪ್ರವಚನದಷ್ಟು ಮನಸ್ಸಿಗೆ ಮೆದುಳಿಗೆ ಆನ್‌ಲೈನ್ ಪಾಠ ಇಳಿಯುವುದಿಲ್ಲವೆನ್ನುವುದು ವಿದ್ಯಾರ್ಥಿಗಳದೇ ಅನುಭವ. ಒಟ್ಟಾರೆ ಕೋವಿಡ್ ಹೆಮ್ಮಾರಿಯಿಂದಾಗಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಜೊತೆಗೆ ಶಾಲಾ ಕಾಲೇಜು ನಿರ್ವಹಿಸುವ ಆಡಳಿತ ವರ್ಗಕ್ಕೆ ಎಲ್ಲರಿಗೂ ಆದ ಹಾನಿ ಅಷ್ಟಿಷ್ಟಲ್ಲ.

ಕೋವಿಡ್ ಕಾರಣದಿಂದಾಗಿ ಇನ್ನಷ್ಟು ಮೇಲ್ನೋಟಕ್ಕೆ ಗೋಚರಿಸದ ತೊಂದರೆಗಳೂ ಉಂಟಾಗಿವೆ. ಆ ಪೈಕಿ ಮುಂದೆ ದ್ವಿತೀಯ ಪಿಯುಸಿ (ವಿಜ್ಞಾನ) ವಿದ್ಯಾರ್ಥಿಗಳಿಗೆ ಸರ್ಕಾರ ನಡೆಸಲಿರುವ ನೀಟ್(NEET) ಪರೀಕ್ಷೆಯ ಬಗ್ಗೆಯೂ ಆತಂಕ ಎದುರಾಗಿದೆ. ಕೇವಲ ಇಷ್ಟೇ ಹೇಳಿಬಿಟ್ಟರೆ ಎದುರಾಗಿರುವ ಆತಂಕ ಎಂತಹುದು ಎಂಬುದು ಯಾರಿಗೂ ಅರ್ಥವಾಗಲಿಕ್ಕಿಲ್ಲ.

ಉತ್ತಮ ಅಂಕದ ಅನಿವಾರ್ಯತೆ

ವೈದ್ಯಕೀಯ ವ್ಯಾಸಂಗ ಮಾಡಬೇಕೆನ್ನುವವರು ದ್ವಿತೀಯ ಪಿಯುಸಿ ಬಳಿಕ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲೇಬೇಕಾದುದು ಅನಿವಾರ್ಯ. ಎಂಜಿನಿಯರಿಂಗ್ ಓದಬೇಕೆನ್ನುವವರು ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಸಾಕು. ನೀಟ್ ಪರೀಕ್ಷೆ ಸಿಇಟಿಯಷ್ಟು ಸರಳ ಹಾಗೂ ಸುಲಭವಲ್ಲ ಎನ್ನುವುದು ಅದನ್ನೆದುರಿಸಿದವರ ಕಹಿ ಅನುಭವ. ನಮ್ಮ ಪರಿಚಿತರ ಮನೆಯ ಸಿರಿ ಶೆಟ್ಟಿ ಎಂಬ ಪ್ರತಿಭಾನ್ವಿತೆ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದರೂ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲಾಗದೆ ಒಂದು ವರ್ಷ ವೃಥಾ ಕಳೆದು ಮತ್ತೆ ನೀಟ್ ಪರೀಕ್ಷೆಗೆ ಹಾಜರಾಗಿ ಕೊನೆಗೂ ವೈದ್ಯಕೀಯ ವ್ಯಾಸಂಗಕ್ಕೆ ಅಗತ್ಯವಿರುವಷ್ಟು ಅಂಕ ಪಡೆದು ಈಗ ಎಂಬಿಬಿಎಸ್ ಅಧ್ಯಯನಕ್ಕೆ ಕಾಲೇಜು ಸೇರಿದ್ದಾಳೆ. ಸರಿ ಶೆಟ್ಟಿ ಪ್ರತಿಭಾನ್ವಿತೆ. ಆದರೆ ವರ್ಷವಿಡೀ ಕಾಲೇಜು, ಲ್ಯಾಬ್, ಬೋರ್ಡ್ ಎಕ್ಸಾಮ್…. ಹೀಗೆ ಎಲ್ಲದಕ್ಕೂ ಸಿದ್ಧತೆ ನಡೆಸುವುದರಲ್ಲೇ ಸಮಯ ವ್ಯಯವಾಗಿದ್ದರಿಂದ ನೀಟ್ ಪರೀಕ್ಷೆಗೆ ಹೆಚ್ಚಿನ ಗಮನ ಕೊಡಲಾಗಲಿಲ್ಲ. ಪರಿಣಾಮ ಆಕೆ ಆಯ್ಕೆಯಾಗಲಿಲ್ಲ. ಅಂತಹ ಪ್ರತಿಭಾನ್ವಿತೆಯ ಪಾಡೇ ಹೀಗಿದ್ದರೆ ಇನ್ನು ಹಳ್ಳಿಗಾಡಿನ ಸರ್ಕಾರಿ ಶಾಲೆ-ಕಾಲೇಜುಗಳನ್ನಾಶ್ರಯಿಸಿ ಓದುವ ಬಡ, ಗ್ರಾಮೀಣ ವಿದ್ಯಾರ್ಥಿಗಳ ಪಾಡೇನಾಗಿರಬಹುದು?

ನೀಟ್ ಪರೀಕ್ಷೆಗೆ ಕುಳಿತುಕೊಳ್ಳುವವರಲ್ಲಿ ಶೇ.50ರಷ್ಟು ರಿಪೀಟರ್ಸ್ (ಎರಡನೇ ಅಥವಾ ಮೂರನೇ ಬಾರಿಗೆ ಪ್ರಯತ್ನಿಸುವವರು) ವಿದ್ಯಾರ್ಥಿಗಳೇ ಇರುತ್ತಾರೆ. ಮೊದಲ ಬಾರಿ ನೀಟ್‌ಗೆ ಹಾಜರಾಗುವ ರೆಗ್ಯುಲರ್ ವಿದ್ಯಾರ್ಥಿಗಳು ಈ ರಿಪೀಟರ್ಸ್ ಜೊತೆಗೆ ಸ್ಪರ್ಧಿಸಬೇಕಾಗುತ್ತದೆ. ಪುನಾ ಪರೀಕ್ಷೆ ಬರೆಯುವವರಿಗೆ ಕಾಲೇಜಿಗೆ ಹೋಗಬೇಕೆಂಬ ಗೊಡವೆ ಇಲ್ಲ. ಲ್ಯಾಬ್, ಬೋರ್ಡ್ ಎಕ್ಸಾಮ್‌ಗಳ ಆತಂಕವಿಲ್ಲ. ಹಾಗಾಗಿ ಅವರು ವರ್ಷವಿಡೀ ಪಿಸಿಬಿಯನ್ನೇ ಓದಿ, ಕೋಚಿಂಗ್ ಪಡೆದು, ಹಿಂದಿನ ಅನುಭವದ ಧೈರ್ಯದಿಂದ ನೀಟ್ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದಲೇ ಎದುರಿಸಿ ಬರೆಯುತ್ತಾರೆ. ರೆಗ್ಯುಲರ್ ವಿದ್ಯಾರ್ಥಿಗಳಿಗೆ ಪರಿಸ್ಥಿತಿ ಹಾಗಿರುವುದಿಲ್ಲ. ಭಯ ಆತಂಕಗಳಿಂದಲೇ ರಿಪೀಟರ್ಸ್ ಜೊತೆಗೆ ಪರೀಕ್ಷೆ ಎದುರಿಸಿ ಕಡಿಮೆ ಅಂಕ ಗಳಿಸಿದಾಗ ಅವರಿಗೆ ಹಿನ್ನಡೆಯುಂಟಾಗಿ ವೈದ್ಯಕೀಯ ವ್ಯಾಸಂಗದ ಕನಸು ಭಗ್ನವಾಗುತ್ತದೆ. ಆ ಕನಸು ನನಸಾಗಲು ಮತ್ತೆ ಒಂದು ವರ್ಷವಿಡೀ ಒದ್ದಾಡಿ ಪರೀಕ್ಷೆಗೆ ಮತ್ತೆ ಹಾಜರಾಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಉತ್ತಮ ಅಂಕ ಗಳಿಸಲಾಗದ ಗ್ರಾಮೀಣ ಪ್ರದೇಶದವರು, ಬಡ ವಿದ್ಯಾರ್ಥಿಗಳು ಸೂಕ್ತ ಕೋಚಿಂಗ್ ಪಡೆಯಲು ಅವಶ್ಯರಾಗಿ ವೈದ್ಯಕೀಯ ವ್ಯಾಸಂಗದ ಕನಸನ್ನೇ ಕೈಬಿಡುವುದೂ ಉಂಟು.

ಈ ವರ್ಷ ಕೋವಿಡ್ ಹೆಮ್ಮಾರಿಯ ಹಾವಳಿ ಬೇರೆ. ಸೂಕ್ತ ತರಗತಿಗಳು ನಡೆಯದೆ ಪಾಠ ಪ್ರವಚನಗಳಾಗಿಲ್ಲ. ಆನ್‌ಲೈನ್ ಪಾಠಗಳು ಅರ್ಥವಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಅಭಾವ, ನೆಟ್‌ವರ್ಕ್ ಸಮಸ್ಯೆಗಳಿಂದಾಗಿ ಆನ್‌ಲೈನ್ ಪಾಠಗಳು ವಿದ್ಯಾರ್ಥಿಗಳನ್ನು ಅಷ್ಟಾಗಿ ತಲಪಿಯೇ ಇಲ್ಲ. ಹೀಗಿರುವಾಗ ದ್ವಿತೀಯ ಪಿಯುಸಿ (ವಿಜ್ಞಾನ) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸುವುದು, ನೀಟ್ ಪರೀಕ್ಷೆಯಲ್ಲಿ ಇನ್ನೂ ಅತ್ಯುತ್ತಮ ಅಂಕ ಗಳಿಸುವುದು ಎಣಿಸಿದಷ್ಟು ಸುಲಭವಂತೂ ಖಂಡಿತಾ ಅಲ್ಲ.

ರಿಪೀಟರ್ಸ್ʼಗಳದ್ದೇ ಸಿಂಹಪಾಲು

ಕಳೆದ ವರ್ಷ ಸುಮಾರು 15 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದರು. ಅದರಲ್ಲಿ ಶೇ.೫೦ರಷ್ಟು ಅಂದರೆ 7.5 ಲಕ್ಷ ವಿದ್ಯಾರ್ಥಿಗಳು ರಿಪೀಟರ್ಸ್! ಸುಮಾರು 529 ಮೆಡಿಕಲ್ ಕಾಲೇಜುಗಳಿದ್ದು, 75 ಸಾವಿರ ಸೀಟುಗಳಿದ್ದು ಅದನ್ನು ಗಿಟ್ಟಿಸುವುದರಲ್ಲೂ ರಿಪೀಟರ್ಸ್ ವಿದ್ಯಾರ್ಥಿಗಳದೇ ಸಿಂಹಪಾಲು. ಈ ಬಾರಿ ಪರೀಕ್ಷೆಗೆ ಹಾಜರಾಗುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು. ಆದರೆ ಕಾಲೇಜುಗಳ ಹಾಗೂ ಲಭ್ಯವಿರುವ ಸೀಟುಗಳ ಸಂಖ್ಯೆಯಲ್ಲಂತೂ ಏರಿಕೆ ಇರುವುದಿಲ್ಲ. ಹೀಗಾಗಿ ರೆಗ್ಯುಲರ್ ವಿದ್ಯಾರ್ಥಿಗಳ ವೈದ್ಯಕೀಯ ವ್ಯಾಸಂಗ ಮಾಡಬೇಕೆಂಬ ಕನಸು ಕನಸಾಗಿಯೇ ಉಳಿಯುವುದರಲ್ಲಿ ಸಂದೇಹವಿಲ್ಲ.

ಅಷ್ಟೇ ಅಲ್ಲ, ಇದೊಂದು ಸಾಮಾಜಿಕ ಅನ್ಯಾಯ ಹಾಗೂ ಅಸಮಾನತೆಗೆ ದಾರಿ ಹಾಕಿಕೊಟ್ಟಂತಾಗುವುದಿಲ್ಲವೆ? ಎನ್ನುವುದು ಶಿಕ್ಷಣ ತಜ್ಞರ, ಪೋಷಕರ ಕಳವಳ ಹಾಗೂ ಚಿಂತೆ. ಈ ಬಾರಿಯೂ ನೀಟ್ ಪರೀಕ್ಷೆ ತೆಗೆದುಕೊಂಡ ಸುಮಾರು 15,93,462 ವಿದ್ಯಾರ್ಥಿಗಳಲ್ಲಿ ಶೇ. 50ಕ್ಕೂ ಹೆಚ್ಚು ಹಳಬರೇ (ರಿಪೀಟರ್ಸ್) ಆಗಿದ್ದಾರೆ.

ಈ ಸಾಮಾಜಿಕ ಅನ್ಯಾಯ, ಅಸಮಾನತೆಯನ್ನು ಸರಿಪಡಿಸುವ ಬಗೆ ಹೇಗೆ? ಈ ಬಗ್ಗೆ ಶಿಕ್ಷಣ ಸಚಿವರು, ಸರ್ಕಾರ, ಶಿಕ್ಷಣ ತಜ್ಞರು ಗಂಭೀರವಾಗಿ ಆಲೋಚಿಸಬೇಕಾದ ಅಗತ್ಯವಿದೆ. ಕೋವಿಡ್ ವರ್ಷದಲ್ಲಿ ಪರೀಕ್ಷೆಗೆ ಕುಳಿತ ರೆಗ್ಯುಲರ್ ವಿದ್ಯಾರ್ಥಿಗಳಿಗೆ ಸೂಕ್ತ ಕೃಪಾಂಕ ನೀಡಬಹುದೆ? ನೀಟ್ ಪರೀಕ್ಷೆಯನ್ನು ಮುಂದೂಡಬಹುದೆ? ರೆಗ್ಯುಲರ್ ಮತ್ತು ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಮಾನದಂಡದ ಪರೀಕ್ಷೆ ನಡೆಸಬಹುದೆ? ರಿಪೀಟರ್ಸ್ ಬ್ಯಾಚ್‌ಗೆ ಸ್ವಲ್ಪ ಕ್ಲಿಷ್ಟ ಪ್ರಶ್ನೆಗಳಿರುವ ಪ್ರಶ್ನೆ ಪತ್ರಿಕೆ, ರೆಗ್ಯುಲರ್ಸ್ ಬ್ಯಾಚ್‌ಗೆ ಕೊಂಚ ಸುಲಭ ಪ್ರಶ್ನೆಗಳಿರುವ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಪ್ರತ್ಯೇಕ ಪರೀಕ್ಷೆ ನಡೆಸಿದರೆ ಹೇಗೆ? ಅಥವಾ ಈ ಸಮಸ್ಯೆಯನ್ನು ಸುರಳೀತವಾಗಿ ಬಗೆಹರಿಸಲು ಇನ್ನೇನಾದರೂ ಪರಿಹಾರ ಮಾರ್ಗಗಳನ್ನು ಕಂಡು ಹುಡುಕಬಹುದೆ? ಶಿಕ್ಷಣ ಸಚಿವರು, ಸರ್ಕಾರದ ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ತಜ್ಞರು ಈ ಪ್ರಶ್ನೆಗಳನ್ನು ಎದುರಿಟ್ಟುಕೊಂಡು ಅಮಾಲೋಚನೆ ನಡೆಸಬೇಕೆಂಬುದು ವೈದ್ಯಕೀಯ ವ್ಯಾಸಂಗ ವಂಚಿತ ಬಡ ವಿದ್ಯಾರ್ಥಿಗಳ ಪೋಷಕರ ಆಗ್ರಹ.

ಬೇರೆ ರಾಜ್ಯಗಳಲ್ಲಿಯೂ ಇಂತಹುದೇ ಸಮಸ್ಯೆ ಎದುರಾಗಿರುವ ಸಾಧ್ಯತೆ ಇದ್ದೇ ಇದೆ. ಆ ರಾಜ್ಯಗಳಲ್ಲಿ ಯಾವ ರೀತಿಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಅಧ್ಯಯನ ಮಾಡುವುದೂ ಅಗತ್ಯವಿದೆ.

ಒಟ್ಟಿನಲ್ಲಿ ವೈದ್ಯಕೀಯ ವ್ಯಾಸಂಗ ಕನಸು ಹೊತ್ತು ನೀಟ್ ಪರೀಕ್ಷೆಗೆ ಕುಳಿತುಕೊಳ್ಳುವ ರೆಗ್ಯುಲರ್ ವಿದ್ಯಾರ್ಥಿಗಳ ಪರಿಶ್ರಮಕ್ಕೂ ಸಾರ್ಥಕತೆ ಸಿಗುವಂತಾಗಬೇಕು ಎನ್ನುವುದೇ ಶಿಕ್ಷಣಾಭಿಮಾನಿಗಳ, ಶಿಕ್ಷಣಾಸಕ್ತರ ಆಶಯ. 

***

ಮೇಲಿನ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ / photo: BNMK photographs

ದು.ಗು. ಲಕ್ಷ್ಮಣ

  • ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಮುಲಾಜಿಲ್ಲದೆ ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.
  • ದು.ಗು.ಲಕ್ಷ್ಮಣರು ಬರೆದ ಇನ್ನೊಂದು ಅಮೋಘ ಲೇಖನವನ್ನು ಓದಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ
ಎ.ಕೆ.ಗೋಪಾಲನ್‌ ಮಾತು ಕೇಳದೇ ಕಮ್ಯುನಿಸ್ಟರು ಹಾಳಾದರು! ಬಿಜೆಪಿಗರು ದತ್ತೋಪಂತರು ಹೇಳಿದ್ದನ್ನು ಕೇಳಲೇಬೇಕು, ಇಲ್ಲದಿದ್ದರೆ ಇವರೂ ಹಾಳಾಗುವುದು ಖಚಿತ!!

Tags: du gu laxmanaindianational eligibility cum entrance testneet
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಸೋಮವಾರದಿಂದ ಹೆಚ್ಚಿನ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ: ಮೊದಲ ದಿನದ ವ್ಯಾಕ್ಸಿನೇಶನ್‌ನಿಂದ ಯಾರಿಗೂ ಅಡ್ಡ ಪರಿಣಾಮವಾಗಿಲ್ಲ ಎಂದ ಸಚಿವ ಡಾ.ಕೆ.ಸುಧಾಕರ್

ಸೋಮವಾರದಿಂದ ಹೆಚ್ಚಿನ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ: ಮೊದಲ ದಿನದ ವ್ಯಾಕ್ಸಿನೇಶನ್‌ನಿಂದ ಯಾರಿಗೂ ಅಡ್ಡ ಪರಿಣಾಮವಾಗಿಲ್ಲ ಎಂದ ಸಚಿವ ಡಾ.ಕೆ.ಸುಧಾಕರ್

Leave a Reply Cancel reply

Your email address will not be published. Required fields are marked *

Recommended

ತೇಲುತ್ತಿದೆ ಕೆ.ಆರ್.ಪುರ!!

ತೇಲುತ್ತಿದೆ ಕೆ.ಆರ್.ಪುರ!!

4 years ago
ಮುನ್ನಡೆಗೆ ಕಣ್ಣಾದ ಮಹಾಗುರುವು

ಮುನ್ನಡೆಗೆ ಕಣ್ಣಾದ ಮಹಾಗುರುವು

4 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ