ಚಿಕ್ಕಬಳ್ಳಾಪುರ: ಅಡುಗೆ ಎಣ್ಣೆ ಸಾಗಿಸುತ್ತಿದ್ದ ಲಾರಿ ಹಾಗೂ ಆಟೋ ಡಿಕ್ಕಿ ಸಂಭವಿಸಿದ ಪರಿಣಾಮ ಲಾರಿಯಲ್ಲಿದ್ದ ಅಡುಗೆ ಎಣ್ಣೆ ರಸ್ತೆಗೆ ಹರಿದ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ವೀರದಿಮ್ಮಮ್ಮನ ಕಣಿವೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ-ಗೌರಿಬಿದನೂರಿಗೆ ತೆರಳುವ ಮಾರ್ಗದಲ್ಲಿರುವ ವೀರದಿಮ್ಮಮ್ಮನ ಕಣಿವೆ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಘಟನೆ ನಡೆದಿದ್ದು ಆಟೋ ಚಾಲಕನು ಲಾರಿಯನ್ನು ಹಿಂದಿಕ್ಕಲು ಹೋಗಿ ಲಾರಿ ಚಾಲಕ ತಿರುವಿನಲ್ಲಿ ಗಾಬರಿಗೊಂಡ ಕಾರಣ ರಸ್ತೆಯ ಸನಿಹದ ಹಳ್ಳಕ್ಕೆ ವಾಲಿದೆ. ಲಾರಿಯ ಟ್ಯಾಂಕ್ ತುಂಬ ಅಡುಗೆ ಎಣ್ಣೆ ಇದ್ದ ಕಾರಣ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆ ಲಾರಿಯು ಪಲ್ಟಿಹೊಡೆದು ಲಾರಿ ಟ್ಯಾಂಕರ್‌ನಲ್ಲಿದ್ದ ಅಷ್ಟೂ ಅಡುಗೆ ಎಣ್ಣೆ ರಸ್ತೆಯಲ್ಲಿ ಹರಿದಿದೆ.
ರಾಷ್ಟಿçÃಯ ಹೆದ್ದಾರಿ ೨೩೪ರ ಕಣಿವೆಯ ಈ ಪ್ರದೇಶವು ತೀರಾ ಕಿರಿದಾಗಿದ್ದು, ರಸ್ತೆ ಎರಡು ವರ್ಷವಾದರೂ ದುರಸ್ಥಿಯಾಗದೆ ಹಾಳಾಗಿದೆ. ಈ ಕಾರಣ ಇಲ್ಲಿಂದ ಸಾಗಿ ಹೋಗುವ ವಾಹನ ಸವಾರರು ಪ್ರಯಾಸದಿಂದ ಮುಂದೆ ಸಾಗಬೇಕಿದೆ. ಇಂಥಹ ಕ್ಲಿಷ್ಟಕರ ಪರಿಸ್ಥಿತಿಯಿಂದಾಗಿ ವಾಹನ ಚಾಲಕರು ನಿತ್ಯ ಹೆಣಗಾಡುವಂತಾಗಿದೆ. ಇದುವರೆಗೂ ಇಂಥಹ ಅಪಘಾತಗಳು ಸಾಕಷ್ಟು ಸಂಭವಿಸಿವೆ. ಈ ಬಗ್ಗೆ ಯಾವೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನು ಮುಂದಾದರೂ ರಸ್ತೆ ದುರಸ್ಥಿ ಸಂಬಂಧ ಕ್ರಮ ಕೈಗೊಳ್ಳದೇ ಹೋದರೆ ಮುಂದಿನ ದಿನಗಳಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಎಚ್ಚರಿಕೆ ನೀಡಿದ್ದಾರೆ.
ವೀರದಿಮ್ಮಮ್ಮನ ಕಣಿವೆಯಲ್ಲಿ ಲಾರಿ ಮುಗಿಚಿ ಬಿದ್ದ ಕಾರಣ ಗಂಟೆ ಗಟ್ಟಲೆ ವಾಹನ ಸಂಚಾರ ವ್ಯತ್ಯಯ ಉಂಟಾಗಿತ್ತು. ಈ ಬಗ್ಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.