“ಡಿಸಿ ಚಿಕ್ಕಬಳ್ಳಾಪುರ (DC Chikkaballpur)” ಎಂಬ ಹೆಸರಿನಿಂದ ನಕಲಿ ಫೇಸ್‌ಬುಕ್ ಖಾತೆ ತೆರೆಯಲಾಗಿದ್ದು, ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ, ನಂತರ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದಿರುವ ಖದೀಮರು, ಪರಿಚಿತರಿಗೆ ಪರಿಚಿತರಿಗೆ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಸಿಕೊಳ್ಳವ ಪ್ರಯತ್ನ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಈ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಪೊಲೀಸರಿಗೆ ದೂರು ನೀಡಿರುವ ಅವರು, ಯಾವುದೇ ಕಾರಣಕ್ಕೂ ನಕಲಿ ಖಾತೆಯಾದ ಡಿಸಿ ಚಿಕ್ಕಬಳ್ಳಾಪುರ (DC Chikkaballpur) ನಿಂದ ಬರುವ ಯಾವುದೇ ಫ್ರೆಂಡ್ ರಿಕ್ವೆಸ್ಟ್ʼಗಳನ್ನು ಸ್ವೀಕರಿಸಬಾರದು ಎಂದು ಜನರಿಗೆ ಕಿವಿಮಾತು ಹೇಳಿದ್ದಾರೆ. ಸದ್ಯಕ್ಕೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆಂದು ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಅವರ ನೈಜ ಫೇಸ್‌ಬುಕ್ ಖಾತೆಯಲ್ಲಿನ ಫೋಟೋವನ್ನೇ ಪ್ರೊಫೈಲ್ ಫೋಟೊ ಆಗಿ ಬಳಸಿರುವ ಖದೀಮರು, ನಕಲಿ ಖಾತೆ ಸೃಷ್ಟಿಸಿದ್ದಾರೆ. ಅವರೊಂದಿಗೆ ಇರುವ ಸ್ನೇಹಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಫ್ರೆಂಡ್ ಆಗಿದ್ದಾರೆ. ನಂತರ ಅನುಮಾನ ಬಾರದಂತೆ ಎಫ್‌ಬಿ ಮೆಸೆಂಜರ್ ಮೂಲಕ ಹಣಕ್ಕೆ ಡಿಮಾಂಡ್ ಮಾಡಿದ್ದಾರೆ. ಕೆಲವರು ಹಣ ವರ್ಗಾವಣೆ ಮಾಡಿರುವ ಅನುಮಾನವೂ ಇದೆ.
ನಕಲಿ ಫೇಸ್‌ಬುಕ್ ಖಾತೆ
ಫ್ರೆಂಡ್ ರಿಕ್ವೆಸ್ಟ್ ಓಕೆ ಮಾಡಬೇಡಿ
ಈ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಜಿಲ್ಲಾಧಿಕಾರಿ ಆರ್.ಲತಾ ಅವರು; “ಡಿಸಿ ಚಿಕ್ಕಬಳ್ಳಾಪುರ (DC Chikkaballpur)” ಎಂಬ ಹೆಸರಿನಿಂದ ನಕಲಿ ಫೇಸ್‌ಬುಕ್ ಖಾತೆ ತೆರೆಯಲಾಗಿದ್ದು, ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ, ನಂತರ ಹಣ ವಸೂಲಿ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಈ ಬಗ್ಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದೇನೆ” ಎಂದರು.
ಇತ್ತೀಚಿನ ದಿನಗಳಲ್ಲಿ ಎಲ್ಲೋ ಅಜ್ಞಾನ ಸ್ಥಳದಲ್ಲಿ ಕೂತು ಸೈಬರ್ ಅಪರಾಧ ಮಾಡುವುದು ಹೆಚ್ಚಾಗಿದೆ. ಸಾರ್ವಜನಿಕರು ಸದಾ ಎಚ್ಚರವಾಗಿರಬೇಕು. ಜನರು ಯಾವುದೇ ಕಾರಣಕ್ಕೂ ಈ ನಕಲಿ ಫೇಸ್‌ಬುಕ್ ಖಾತೆಯಿಂದ ಬರುವ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಬಾರದು ಹಾಗೂ ಹಣವನ್ನೂ ವರ್ಗಾವಣೆ ಮಾಡಬಾರದು.
-ಆರ್.ಲತಾ, ಜಿಲ್ಲಾಧಿಕಾರಿ
“ಸಾಮಾಜಿಕ ಜಾಲತಾಣಗಳನ್ನು ಬಳಸಬೇಕಾದರೆ ಎಚ್ಚರಿಕೆಯಿಂದ ಇರಬೇಕು. ಫ್ರೆಂಡ್ ರಿಕ್ಷೆಸ್ಟ್ ಕಳಿಸುವವರ ಬಗ್ಗೆ ಪರಿಶೀಲನೆ ಮಾಡಬೇಕು. ನಾನಂತೂ ಯಾರಿಗೂ ಫೆಂಡ್ ರಿಕ್ವೆಸ್ಟ್ ಕಳಿಸುವುದಿಲ್ಲ. ಯಾರಾದರೂ ಫೆಂಡ್ ರಿಕ್ವೆಸ್ಟ್ ಅವರ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ಮಾಡುತ್ತೇನೆ. ರಿಕ್ವೆಸ್ಟ್ ಬಂದ ಕೂಡಲೇ ಓಕೆ ಮಾಡಬಾರದು. ವಂಚಕರು ಎರಡು ಇನ ಮೋಸ ಮಾಡಲು ಪ್ರಯತ್ಮ ಮಾಡುತ್ತಾರೆ. ಅಷ್ಟರೊಳಗೆ ನಾವು ಜಾಗೃತರಾದರೆ ಅವರು ಸುಮ್ಮನಾಗುತ್ತಾರೆ. ಕೆಲವರು ನನಗೆ ಈ ಬಗ್ಗೆ ವಾಟ್ಸಾಪ್ ಮಾಡಿದ್ದಾರೆ. ಹಣ ಕೊಡಿ ಅಂತ ಖದೀಮರು ಪೋನ್ ಪೆ, ಗೂಗಲ್ ಪೇ ನಂಬರ್ ಕೊಟ್ಟಿದ್ದಾರೆ. ಈ ಎಲ್ಲ ವಿವರಗಳನ್ನು ಎಸ್‌ಪಿ ಅವರಿಗೆ ನೀಡಿದ್ದೇನೆ” ಎಂದು ಮಾಹಿತಿ ನೀಡಿದರು ಜಿಲ್ಲಾಧಿಕಾರಿ.
ನಕಲಿ ಖಾತೆಯ ಮತ್ತಷ್ಟು ಮಾಹಿತಿ
ಅಂದ ಹಾಗೆ, ಜಿಲ್ಲಾಧಿಕಾರಿಯ ನಕಲಿ ಫೇಸ್‌ಬುಕ್ ಖಾತೆಯನ್ನು 479ಜನ ಲೈಕ್ ಮಾಡಿದ್ದು, 566 ಜನ ಫಾಲೋ ಮಾಡುತ್ತಿದ್ದಾರೆ. 1,626 ಜನ ಈ ಖಾತೆಯನ್ನು ಪರಿಶೀಲನೆ ಮಾಡಿದ್ದಾರೆ. 23-08-2007ರಂದು ಇದನ್ನು ತೆರೆಯಲಾಗಿದೆ ಎಂದು ಎಂದು ಫೇಸ್‌ಬುಕ್ ಗೋಡೆಯ ಮೇಲೆ ಖದೀಮರು ಬರೆದುಕೊಂಡಿದ್ದಾರೆ.