ಚಿಕ್ಕಬಳ್ಳಾಪುರ: ಮಹಿಳೆಯರನ್ನು ಗೌರವಯುತವಾಗಿ ನಡೆಸಿಕೊಳ್ಳುವ ಸಂಸ್ಕೃತಿ ನಮ್ಮದಾಗಬೇಕು. ಇಂಥಹ ಗೌರವ ಕೇವಲ ಸಭೆ ಸಮಾರಂಭಗಳಿಗೆ ಸೀಮಿತವಾಗಬಾರದು. ಎಲ್ಲಡೆ ಅವರನ್ನು ನಾವು ಗೌರವಿಸೋಣ ಎಂದು ಗೊಲ್ಡನ್ ಗ್ಲೀಮ್ಸ್ ಕಾಲೇಜ್ ಪ್ರಾಂಶುಪಾಲ ಸಿ.ಎಂ.ಮುನಿಕೃಷ್ಣಪ್ಪ ಹೇಳಿದರು.
ಅವರು ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಧಕರ ಸತ್ಕಾರ್ಯ ಕಾರ್ಯಕ್ರಮದಲ್ಲಿ ಕಾಲೇಜಿನಿಂದ ಸಾಧಕಿ ಸಾಫ್ಟ್‌ವೇರ್ ಎಂಜಿನಿಯರ್ ನರ್ಮದಾರೆಡ್ಡಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಮಹಿಳೆ ಎಲ್ಲಾ ರಂಗಗಳಲ್ಲಿ ಪುರುಷರಿಗೆ ಸರಿಸಮನಾಗಿ ಅಹರ್ನಿಶಿ ದುಡಿಯುತ್ತಿರುವ ಚೈತನ್ಯ ರೂಪಿಯಾಗಿದ್ದಾಳೆ. ಆಕೆಯ ಶ್ರಮಕ್ಕೆ ಬೆಲೆ ಕಟ್ಟಲಾಗದು, ತಾಯಿಯಾಗಿ, ಮಡದಿಯಾಗಿ, ಸಹೊದರಿಯಾಗಿ ತನ್ನ ಕರ್ತವ್ಯವನ್ನು ಸಮರ್ಥವಾಗಿ ಮಾಡುವುದರ ಜತೆಗೆ ರಾಜಕೀಯ, ಕ್ಷೇತ್ರಗಳಲ್ಲೂ ಪರಿಣಿತಿ ಪಡೆಯುತಿರುವುದು ಆಶಾದಾಯಕ ಬೆಳವಣಿಗೆ. ಮಹಿಳೆಯರನ್ನು ಗೌರವ ಹಾಗೂ ವಿನಯವಂತಿಕೆಯಿಂದ ನಡೆಸಿಕೊಳ್ಳುವ ಸದ್ಭಾವನೆಗಳನ್ನು ನಾವು ರೂಢಿಸಿಕೊಳ್ಳಬೇಕು ಎಂದರು ಅವರು.
ಹಕ್ಕುಗಳನ್ನು ಸಾಧಿಸಿಕೊಳ್ಳಬೇಕು
ಸಾಫ್ಟ್‌ವೇರ್ ಎಂಜನಿಯರ್ ಹಾಗೂ ಮಾನವ ಹಕ್ಕುಗಳ ಜನಪರ ಒಕ್ಕೂಟ ಮಹಿಳಾ ಅಧ್ಯಕ್ಷೆ ನರ್ಮದಾ ರೆಡ್ಡಿ ಮಾತನಾಡಿ; ಸಮಾಜದಲ್ಲಿ ಒಬ್ಬ ಮಹಿಳೆಗೆ ನೀಡುವ ಗೌರವ ನಮ್ಮತನದ ಕಾರ್ಯಶೀಲತೆ ಇನ್ನಷ್ಟು ಹೆಚ್ಚಾಗಲಿದೆ, ಮಹಿಳೆಯರಿಗಾಗಿ ಮೀಸಲಿಟ್ಟಿರುವ ಹಕ್ಕುಗಳನ್ನು ಸಮರ್ಥವಾಗಿ ಪ್ರತಿಯೊಬ್ವ ಮಹಿಳೆಯೂ ಪಡೆದುಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕು ಇದು ಸದಾಚಾರದ ಪ್ರತೀಕವಾಗಲಿದೆ ಎಂದರು.
ಮಹಿಳೆ ಎಲ್ಲಾ ರಂಗಗಳಲ್ಲಿ ಮುಂಚೂಣಿಯಲ್ಲಿ ಇದ್ದು ಇತರರಿಗೆ ನಾವೇನು ಕಮ್ಮಿ ಎನ್ನುವ ಪಂಕ್ತಿ ನಮಗಿದೆ. ಅದರ ಅನುಗುಣವಾಗಿ ಸಮಾಜದ ಜನಪರ ಕಾರ್ಯಕ್ರಮಗಳಲ್ಲಿ ಹಾಗೂ ಸಮಾಜದ ಸುಸ್ಥಿರತೆಯಲ್ಲಿ ಸಮಾಜದಿಂದ ನಮಗೇನು ಕೊಡುಗೆ ಎನ್ನುವಿದಕ್ಕಿಂದ ಸಮಾಜಕ್ಜೆ ನಮ್ಮ ಕೊಡುಗೆ ಏನೆಂಬುದರ ಬಗ್ಗೆ ಮನನ ಮಾಡಿಕೊಳ್ಳಬೇಕು ಎಂದ ಅವರು ಗೊಲ್ಡನ್ ಗ್ಲೀಮ್ಸ್ ಕಾಲೇಜಿನಿಂದ ನೀಡಿದ ಗೌರವ ಸತ್ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ ಮಾನವ ಹಕ್ಕುಗಳ ಜನಪರ ಒಕ್ಕೂಟದ ನಿರ್ದೇಶಕಿ ಗೀತಾ ರಾಜ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ವೇಳೆ ಕಾಲೇಜಿನ ಆಡಳಿತಾಧಿಕಾರಿ ಮೊಹನ್, ಪತ್ರಕರ್ತ ನಾರಾಯಣಸ್ವಾಮಿ, ಪ್ರಾಧ್ಯಾಪಕರಾದ ಬಾಲಕೀರ್ತಿ ಮೇರಿ, ಕವಿತಾ ಮಂಜುನಾಥ್, ಶ್ರೀನಿವಾಸ್, ವಿನೋದ್ ಮುಂತಾದವರು ಇದ್ದರು.