ಬಾಗೇಪಲ್ಲಿ: ದೇಶದ ಪ್ರತಿಯೊಬ್ಬ ಯುವಕನೂ ಸಹ ದೇಶದ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ರೂಡಿಸಿಕೊಂಡು, ಇತರರಿಗೆ ಮಾದರಿಯಾಗಬೇಕು ಎಂದು ತಾಲ್ಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ತೋಳ್ಳಪಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥರೆಡ್ಡಿ ಕರೆ ನೀಡಿದರು.
ಕ್ರಾಂತಿಕಾರಿ ದೇಶಭಕ್ತರಾದ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರ ಬಲಿದಾನ ದಿವಸ ಹಿನ್ನೆಲೆಯಲ್ಲಿ ತಾಲ್ಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ಪಟ್ಟಣದ ಗೂಳೂರು ವೃತ್ತದಿಂದ ಬಸ್ ನಿಲ್ದಾಣದವರೆಗೆ ಪಂಜಿನ ಮೆರವಣಿಗೆ ನಡೆಸಿದ ವೇಳೆ ಮಾತನಾಡಿದರು ಅವರು.
ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿರುವಂತಹ ಮಹಾನ್ ವ್ಯಕ್ತಿಗಳ ದಿವಸವನ್ನು ಬಿಜೆಪಿ ದೇಶದ ಎಲ್ಲಾ ಕಡೆಗಳಲ್ಲಿಯೂ ಆಚರಿಸಿ ಅವರ ತತ್ತ್ವ ಸಿದ್ದಾಂತಗಳ ಬಗ್ಗೆ ಯುವಕರಿಗೆ ತಿಳಿಸಲಾಗುತ್ತಿದೆ. ದೇಶದ ಪ್ರತಿಯೊಬ್ಬ ಯುವಕನೂ ಸಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ರೂಢಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ನುಡಿದರು.
ಬಿಜೆಪಿ ಪಕ್ಷದ ಬಾಗೇಪಲ್ಲಿ ಮಂಡಲ ಅಧ್ಯಕ್ಷ ಆರ್.ಪ್ರತಾಪ್ ಮಾತನಾಡಿ; ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರಲ್ಲಿ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ನೇಣಿಗೇರಿಸಿದ ದಿನವನ್ನು ಬಲಿದಾನ ದಿವಸ ಎಂದು ಆಚರಿಸಲಾಗುತ್ತಿದೆ. ದೇಶದಲ್ಲಿ ಬ್ರಿಟಿಷರ ಯಾವುದೇ ಆಮಿಷಕ್ಕೆ ಒಳಗಾಗದೆ ದೇಶಕ್ಕಾಗಿ ಹೋರಾಡಿ ಪ್ರಾಣ ಸಮರ್ಪಿಸಿದ ಈ ಮಹಾನ್ ಯೋಧರ ಹಿರಿಮೆ ದೊಡ್ಡದು. ದೇಶಕ್ಕಾಗಿ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ರಾಜಗುರು, ಸುಖದೇವ್, ಸೇರಿದಂತೆ ಅನೇಕ ದೇಶಭಕ್ತರು ತಮ್ಮ ಪ್ರಾಣ ಬಲಿದಾನ ಮಾಡಿದ ಪರಿಣಾಮವಾಗಿ ಇಂದು ನಾವು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ, ಆದರೆ ಅವರ ಬಲಿದಾನ ಸ್ಮರಣೆಯನ್ನು ಪ್ರತಿಯೊಬ್ಬರು ಬಲಿದಾನ ದಿನವಾಗಿ ಆಚರಿಸಲೇಬೇಕು ಎಂದು ಕರೆ ನೀಡಿದರು.
ಯುವ ಮೋರ್ಚಾ ಉಪಾಧ್ಯಕ್ಷ ನರೇಶ್, ಪ್ರಧಾನ ಕಾರ್ಯದರ್ಶಿ ಸುರೇಶ್, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಆರ್.ವೆಂಕಟೇಶ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಧೀರಜ್, ಜಿಲ್ಲಾ ಎಸ್.ಟಿ.ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್, ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಾಬಾ ಫಕೃದ್ದೀನ್, ಮುಖಂಡರಾದ ಹರೀಶ್, ಶಶಿಕುಮಾರ್, ಪ್ರಭಾಕರ್, ವೆಂಕಟರವಣ, ನಾಗಪ್ಪ, ನಿರ್ಮಲಮ್ಮ, ವೆಂಕಟಲಕ್ಷ್ಮಮ್ಮ, ಹರಿಕೃಷ್ಣಾರೆಡ್ಡಿ, ನರೇಂದ್ರ, ಪಾರ್ಥಸಾರಥಿ, ಗಂಗುಲಮ್ಮ, ಎ.ಎಸ್.ಐ. ಶ್ರೀನಿವಾಸ್, ಪ್ರಭಾಕರ ರೆಡ್ಡಿ, ನಾಗರಾಜ್, ಕೋಳಿ ಶ್ರೀನಿವಾಸ್, ಏಟಿಗಡ್ಡಪಲ್ಲಿ ಜಗದೀಶ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.