ಶಬರಿಮಲೆ: ಮೇದಂ ಮಾಸದ ಪೂಜೆ ಹಾಗೂ ವಿಷುಕಾನಿ ದರ್ಶನದ ಪ್ರಯುಕ್ತ ಶ್ರೀ ಕ್ಷೇತ್ರ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯವನ್ನು ಈ ತಿಂಗಳ 10ರಿಂದ 18ರವರೆಗೂ ತೆರೆಯಲಾಗುವುದು.
ಈ ಸಂದರ್ಭದಲ್ಲಿ ಭಕ್ತರು ಸ್ವಾಮಿ ಅಯಪ್ಪ ದರ್ಶನ ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಯಾತ್ರೆ ಕೈಗೊಳ್ಳುವ ಭಕ್ತರು ಕೋವಿಡ್ ಆರ್ಟಿಪಿಸಿಆರ್ ನೆಗೆಟೀವ್ ಸರ್ಟಿಫಿಕೇಟ್ ಅಥವಾ ಕೋವಿಡ್ ವ್ಯಾಕ್ಷಿನ್ ಪಡೆದ ಪ್ರಮಾಣ ಪತ್ರವನ್ನು ಹೊಂದಿರಬೇಕು ಎಂದು ಶಬರಿಮಲೆ ಸಾರ್ವಜನಿಕ ಸಂಪರ್ಕಾಧಿಕಾರಿ ಸುನೀಲ್ ಅರಮಾನೂರ್ ಅವರು ಸಿಕೆನ್ಯೂಸ್ ನೌʼಗೆ ತಿಳಿಸಿದ್ದಾರೆ.
ಉಳಿದಂತೆ ಸನ್ನಿಧಾನದಲ್ಲಿ ಕೋವಿಡ್ ತಡೆ ವಿಚಾರದಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿಯಮಿತ ತಪಾಸಣೆ, ದೈಹಿಕ ಅಂತರ ಹಾಗೂ ಸ್ಯಾನಿಟೈಸೇಷನ್ಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.