• About
  • Advertise
  • Careers
  • Contact
Friday, October 23, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ರಾಜೀನಾಮೆ ಕೊಟ್ಟು ಹೊರಬನ್ನಿ; ಅಪಮಾನಿತ ದಲಿತ ಸಚಿವರಿಗೆ #Jds ಕಿವಿಮಾತು

cknewsnow desk by cknewsnow desk
October 22, 2026
in NATION, POLITICS, STATE
Reading Time: 1 min read
0
ರಾಜೀನಾಮೆ ಕೊಟ್ಟು ಹೊರಬನ್ನಿ; ಅಪಮಾನಿತ ದಲಿತ ಸಚಿವರಿಗೆ #Jds ಕಿವಿಮಾತು
913
VIEWS
FacebookTwitterWhatsuplinkedinEmail

ಮೈಸೂರು ದಸರಾದಲ್ಲಿ ಅವಮಾನ ಪ್ರಸಂಗ; ಬಾಯಲ್ಲಿ ಜಾತ್ಯತೀತ ತತ್ವ, ಆಚರಣೆಯಲ್ಲಿ ಅಸೃಶ್ಯತೆ!; ಕಾಂಗ್ರೆಸ್ ವಿರುದ್ಧ ಜೆಡಿಎಸ್ ವಾಗ್ದಾಳಿ

ಬೆಂಗಳೂರು: ಮೈಸೂರು ದಸರಾ ಮತ್ತು ಜಂಬೂಸವಾರಿ ಮೆರವಣಿಗೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಮ್ಮುಖದಲ್ಲಿಯೇ ರಾಜ್ಯದ ಮೂವರು ದಲಿತ ಮಂತ್ರಿಗಳಿಗೆ ಅಪಮಾನ ಮಾಡಿರುವ ಘಟನೆಯನ್ನು ಜೆಡಿಎಸ್ ಖಂಡಿಸಿದೆ.ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಕಟುವಾದ ಪೋಸ್ಟ್ ಮಾಡಿರುವ ಜೆಡಿಎಸ್; ಇದೇ ನೋಡಿ ಕಾಂಗ್ರೆಸ್’ನಲ್ಲಿ ದಲಿತ ಸಚಿವರಿಗೆ ಸಿಗುತ್ತಿರುವ ರಾಜ ಮರ್ಯಾದೆ ಎಂದು ಕಾಲೆಳೆದಿದೆ.

ದಲಿತರನ್ನು ಕೇವಲ ಮತಬ್ಯಾಂಕ್‌ಗೆ ಮಾತ್ರ ಬಳಸಿಕೊಂಡು, ಅಧಿಕಾರ ಬಂದಾಗ ಅಪಮಾನಿಸುವುದೇ ಕಾಂಗ್ರೆಸ್ ಸಂಸ್ಕೃತಿ! ಮೈಸೂರು ದಸರಾ ಜಂಬೂಸವಾರಿ ವೇದಿಕೆಗೆ ತೆರಳುತ್ತಿದ್ದ ವೇಳೆ ದಲಿತ ಮಂತ್ರಿಗಳನ್ನು ತಡೆದು ಅಪಮಾನಿಸಿರುವುದು ಖಂಡನೀಯ ಎಂದು ಪಕ್ಷ ಹೇಳಿದ್ದು, ಸಿಎಂ ಡಿಕೆಶಿ ಅವರೇ, ನಿಮ್ಮ ಜೊತೆಯಲ್ಲೇ ಬಂದ ಸಂಪುಟದ ಸಹೋದ್ಯೋಗಿಗಳನ್ನು ವೇದಿಕೆಗೆ ಕರೆದೊಯ್ಯದೆ ಹಾಗೆಯೇ ಬಿಟ್ಟು ಹೋದದ್ದು ಯಾಕೆ? ಸ್ವತಃ ಸಚಿವರಿಗೇ ಈ ದುಸ್ಥಿತಿಯಾದರೆ ಇನ್ನು ನಿಮ್ಮ ಆಡಳಿತದಲ್ಲಿ ಸಾಮಾನ್ಯರ ಗತಿಯೇನು? ಇದೇನಾ ನಿಮ್ಮ ಸಾಮಾಜಿಕ ನ್ಯಾಯ? ಇದೇನಾ ನಿಮ್ಮ ಅಂಬೇಡ್ಕರ್ ವಾದ? ಇದೇನಾ ಅವರು ಬರೆದ ಸಂವಿಧಾನದ ಮೇಲಿರುವ ನಂಬಿಕೆ? ನಾಚಿಕೆಯಾಗಬೇಕು ನಿಮಗೆ? ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಬಾಯಲ್ಲಿ ಜಾತ್ಯತೀತ ತತ್ವ, ಆಚರಣೆಯಲ್ಲಿ ಅಸೃಶ್ಯತೆ!! ಇಂಥ ದ್ವಂದ್ವದಿಂದ ಕರ್ನಾಟಕಕ್ಕೆ ಕಳಂಕ ತಂದಿದ್ದೀರಿ ನೀವು..ಅಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನಿಂದಿಸಿ, ಅಪಮಾನಿಸಿ, ಚುನಾವಣಾ ಕಣದಲ್ಲಿ ನಾಲ್ಕು ಬಾರಿ ಸೋಲಿಸಿ, ಚುನಾವಣಾ ಕಣದಿಂದಲೇ ಹತ್ತಿಕ್ಕಿ ದಲಿತಜ್ಯೋತಿಯನ್ನು ನಂದಿಸಿದ ಕಾಂಗ್ರೆಸ್, ಮುಕ್ಕಾಲು ಶತಮಾನದ ನಂತರವೂ ಅದನ್ನು ನಿಷ್ಠೆಯಿಂದ ಪಾಲಿಸುತ್ತಿದೆ. ಶ್ರೀ ಚಾಮುಂಡೇಶ್ವರಿ ಅಮ್ಮನ ಮೆರವಣಿಗೆಯಲ್ಲಿ ದಲಿತ ದ್ವೇಷವನ್ನು ಆಚರಿಸಿದ್ದು ಸಾಕ್ಷಾತ್ ಆ ತಾಯಿಯೇ ನಿಮ್ಮನ್ನು ಕ್ಷಮಿಸುವುದಿಲ್ಲ. ತಪ್ಪು ಮಾಡಿದ್ದೀರಿ, ಮುಂದೆ ಅನುಭವಿಸುತ್ತೀರಿ ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.

ನಮ್ಮ ಒತ್ತಾಯ ಇಷ್ಟೇ, ಸಂಪುಟದಲ್ಲಿರುವ ಎಲ್ಲಾ ದಲಿತ ಸಚಿವರು ಮುಖ್ಯಮಂತ್ರಿ ಹಾಗೂ ಅವರ ಅಧಿಕಾರಿಗಳು ವರ್ತಿಸಿದ ರೀತಿಯನ್ನು ಖಂಡಿಸಬೇಕು. ಅಷ್ಟೇ ಅಲ್ಲ, ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದ ಇಂತಹ ವ್ಯಕ್ತಿ ಕೈಕೆಳಗೆ ಕೆಲಸ ಮಾಡುವುದೇ ಅಪಮಾನ. ನೀವೆಲ್ಲರೂ ರಾಜೀನಾಮೆ ಬಿಸಾಡಿ ಹೊರಬರುತ್ತೀರೋ ಅಥವಾ ನಿಮ್ಮ ಗೌರವವನ್ನು ಬದಿಗಿಟ್ಟು ಮುಂದುವರಿಯುತ್ತೀರೋ ಎಂಬುದು ನಿಮಗೆ ಬಿಟ್ಟಿದ್ದು ಎಂದು ಅಪಮಾನಿತ ಸಚಿವರಿಗೆ ಕಿವಿಮಾತು ಹೇಳಿದೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ನಾಡಹಬ್ಬ ದಸರಾ ವೇಳೆ ನಿಮ್ಮ ಇಲಾಖೆಯ ಅಧಿಕಾರಿಗಳು ತೋರಿದ ಈ ದುವರ್ತನೆ ಬಗ್ಗೆ ಬಾಯಿಬಿಡಿ. ಬೇಡವಾದದ್ದಕ್ಕೆಲ್ಲಾ ಕಿರುಚಾಡುವ ನೀವು ಈ ಬಗ್ಗೆ ಮಾತನಾಡಿ ಎಂದು ಜೆಡಿಎಸ್ ಒತ್ತಾಯ ಮಾಡಿದೆ.

ಇದೇ ನೋಡಿ ಕಾಂಗ್ರೆಸ್’ನಲ್ಲಿ ದಲಿತ ಸಚಿವರಿಗೆ ಸಿಗುತ್ತಿರುವ ರಾಜ ಮರ್ಯಾದೆ!

ದಲಿತರನ್ನು ಕೇವಲ ಮತಬ್ಯಾಂಕ್‌ಗೆ ಮಾತ್ರ ಬಳಸಿಕೊಂಡು, ಅಧಿಕಾರ ಬಂದಾಗ ಅಪಮಾನಿಸುವುದೇ '@INCKarnataka ಸಂಸ್ಕೃತಿ! ಮೈಸೂರು ದಸರಾ ಜಂಬೂಸವಾರಿ ವೇದಿಕೆಗೆ ತೆರಳುತ್ತಿದ್ದ ವೇಳೆ ದಲಿತ ಮಂತ್ರಿಗಳನ್ನು ತಡೆದು ಅಪಮಾನಿಸಿರುವುದು ಖಂಡನೀಯ.@DKShivakumar ಅವರೇ ,… pic.twitter.com/1vWsWDHJKl

— Janata Dal Secular (JDS) (@JanataDal_S) October 22, 2026
Tags: ckdalitDalit ministersinsulated in dasaranewsPolitics
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಬೆಂಗಳೂರು ಸುತ್ತಲಿನ ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು

10 ತಿಂಗಳಾದರೂ ಸಿಗದ ಭೂಮಿ; ರಾಜ್ಯದ ಕೈತಪ್ಪಲಿದೆಯಾ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ

by cknewsnow desk
October 22, 2026
0

ಬೇಸತ್ತು ಮುಖ್ಯಮಂತ್ರಿ ಡಿಕೆಶಿಗೆ ಪತ್ರ ಬರೆದ ಕೇಂದ್ರ ಸಚಿವ #HDK

ದಸರಾದಲ್ಲಿ ದಲಿತ ಮಂತ್ರಿಗಳಿಗೆ ಅವಮಾನ; ಪ್ರಿಯಾಂಕ್ ಖರ್ಗೆ ನೈತಿಕ ಹೊಣೆ ಹೊರಬೇಕು ಎಂದ JDS

ದಸರಾದಲ್ಲಿ ದಲಿತ ಮಂತ್ರಿಗಳಿಗೆ ಅವಮಾನ; ಪ್ರಿಯಾಂಕ್ ಖರ್ಗೆ ನೈತಿಕ ಹೊಣೆ ಹೊರಬೇಕು ಎಂದ JDS

by cknewsnow desk
October 22, 2026
0

ಜೂನಿಯರ್ ಖರ್ಗೆ ರಾಜೀನಾಮೆಗೆ ಜೆಡಿಎಸ್ ದಲಿತ ನಾಯಕರ ಅಗ್ರಹ; ಶಿಷ್ಟಾಚಾರ ಲೋಪಕ್ಕೆ ಗೃಹ ಇಲಾಖೆ ಕಾರಣ

ಅಭ್ಯರ್ಥಿಗಳಿಗೆ ಬರ; ಬಿಜೆಪಿ ಅತೃಪ್ತರಿಗೆ ಕಾಂಗ್ರೆಸ್ ಟಿಕೆಟ್ ಭಾಗ್ಯ!

ಡಿಕೆಶಿ ಸರಕಾರ ಪತನ ಸನ್ನಿಹಿತ

by cknewsnow desk
October 19, 2026
0

ಕಾಂಗ್ರೆಸ್ ಸರಕಾರ ಅಂತ್ಯದ ಹತ್ತಿರದಲ್ಲಿದೆ, ಸ್ಟಿಂಗ್'ಗೆ ಸರಕಾರ ಬಲಿಯಾಗಲಿದೆ ಎಂದ HDK

ಆಪರೇಷನ್‌ ಕಮಲಕ್ಕೆ ಸಿಕ್ಕಿ ಬೇಲಿ ಹಾರಿದ್ದವರಿಗೆ ಶಾಕ್!‌

ಬರದಿಂದ ಭವಿಷ್ಯದಲ್ಲಿ ಅನ್ನ, ನೀರಿಗೂ ಹಾಹಾಕಾರ

by cknewsnow desk
October 19, 2026
0

ಮುಂಗಾರು ವೈಫಲ್ಯದಿಂದ ಶೇ.82ರಷ್ಟು ಆಹಾರ ಉತ್ಪಾದನೆ ಕುಂಠಿತ

ಅಧಿಕಾರಕ್ಕೆ ಬಂದರೆ ಮಹಿಳೆಯರ ಸಾಲ ಮನ್ನಾ

ಖಾಸಗಿ ವಾಹಿನಿ ಮುಖ್ಯಸ್ಥನ ವಿರುದ್ಧ ಶ್ರೀಮತಿ ಅನಿತಾ ಕುಮಾರಸ್ವಾಮಿ ಕಿಡಿ

by cknewsnow desk
October 19, 2026
0

ಎಲ್ಲರಿಗೂ ಜಗನ್ಮಾತೆ ದುರ್ಗಾದೇವಿಯೇ ತಕ್ಕ ಶಾಸ್ತಿ ಮಾಡಲಿದ್ದಾಳೆ ಎಂದ ಮಾಜಿ ಶಾಸಕಿ

ಹೆಚ್.ಡಿ.ಕುಮಾರಸ್ವಾಮಿ ಬೀಸಿದ ಚಾಟಿಯಿಂದ ಎಚ್ಚೆತ್ತ ಸರಕಾರ

ಸಿದ್ದರಾಮಯ್ಯ ಅವರೇ ನಿಮ್ಮ ರಕ್ತ ಕುದಿಯುತ್ತಿಲ್ಲವೇ?

by cknewsnow desk
October 17, 2026
0

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಬೇಸರ

Next Post
ಬೆಂಗಳೂರು ಸುತ್ತಲಿನ ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು

10 ತಿಂಗಳಾದರೂ ಸಿಗದ ಭೂಮಿ; ರಾಜ್ಯದ ಕೈತಪ್ಪಲಿದೆಯಾ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ

Leave a Reply Cancel reply

Your email address will not be published. Required fields are marked *

Recommended

ತಮಿಳುನಾಡಿಗೆ ಕೇರ್‌ ಮಾಡಬೇಡಿ, ಮೊದಲು ಪ್ರಧಾನಿ ಮನವೊಲಿಸಿ

ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಒಂದು ಹುದ್ದೆಗೆ 25ರಿಂದ 50 ಲಕ್ಷ ರೂ. ರೇಟು!!

5 years ago
ಬೈ ಎಲೆಕ್ಷನ್‌ ನಂತರ ಬಾಗೇಪಲ್ಲಿ ಜೆಡಿಎಸ್‌ ಟಿಕೆಟ್‌ ಫೈನಲ್‌

ಬೈ ಎಲೆಕ್ಷನ್‌ ನಂತರ ಬಾಗೇಪಲ್ಲಿ ಜೆಡಿಎಸ್‌ ಟಿಕೆಟ್‌ ಫೈನಲ್‌

5 years ago

Popular News

  • ಬೆಂಗಳೂರು ಸುತ್ತಲಿನ ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು

    10 ತಿಂಗಳಾದರೂ ಸಿಗದ ಭೂಮಿ; ರಾಜ್ಯದ ಕೈತಪ್ಪಲಿದೆಯಾ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ

    0 shares
    Share 0 Tweet 0
  • ರಾಜೀನಾಮೆ ಕೊಟ್ಟು ಹೊರಬನ್ನಿ; ಅಪಮಾನಿತ ದಲಿತ ಸಚಿವರಿಗೆ #Jds ಕಿವಿಮಾತು

    0 shares
    Share 0 Tweet 0
  • ದಸರಾದಲ್ಲಿ ದಲಿತ ಮಂತ್ರಿಗಳಿಗೆ ಅವಮಾನ; ಪ್ರಿಯಾಂಕ್ ಖರ್ಗೆ ನೈತಿಕ ಹೊಣೆ ಹೊರಬೇಕು ಎಂದ JDS

    0 shares
    Share 0 Tweet 0
  • ಡಿಕೆಶಿ ಸರಕಾರ ಪತನ ಸನ್ನಿಹಿತ

    0 shares
    Share 0 Tweet 0
  • ಬರದಿಂದ ಭವಿಷ್ಯದಲ್ಲಿ ಅನ್ನ, ನೀರಿಗೂ ಹಾಹಾಕಾರ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಬೆಂಗಳೂರು ಸುತ್ತಲಿನ ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು

10 ತಿಂಗಳಾದರೂ ಸಿಗದ ಭೂಮಿ; ರಾಜ್ಯದ ಕೈತಪ್ಪಲಿದೆಯಾ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ

October 22, 2026
ರಾಜೀನಾಮೆ ಕೊಟ್ಟು ಹೊರಬನ್ನಿ; ಅಪಮಾನಿತ ದಲಿತ ಸಚಿವರಿಗೆ #Jds ಕಿವಿಮಾತು

ರಾಜೀನಾಮೆ ಕೊಟ್ಟು ಹೊರಬನ್ನಿ; ಅಪಮಾನಿತ ದಲಿತ ಸಚಿವರಿಗೆ #Jds ಕಿವಿಮಾತು

October 22, 2026
ದಸರಾದಲ್ಲಿ ದಲಿತ ಮಂತ್ರಿಗಳಿಗೆ ಅವಮಾನ; ಪ್ರಿಯಾಂಕ್ ಖರ್ಗೆ ನೈತಿಕ ಹೊಣೆ ಹೊರಬೇಕು ಎಂದ JDS

ದಸರಾದಲ್ಲಿ ದಲಿತ ಮಂತ್ರಿಗಳಿಗೆ ಅವಮಾನ; ಪ್ರಿಯಾಂಕ್ ಖರ್ಗೆ ನೈತಿಕ ಹೊಣೆ ಹೊರಬೇಕು ಎಂದ JDS

October 22, 2026
ಅಭ್ಯರ್ಥಿಗಳಿಗೆ ಬರ; ಬಿಜೆಪಿ ಅತೃಪ್ತರಿಗೆ ಕಾಂಗ್ರೆಸ್ ಟಿಕೆಟ್ ಭಾಗ್ಯ!

ಡಿಕೆಶಿ ಸರಕಾರ ಪತನ ಸನ್ನಿಹಿತ

October 19, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ