• About
  • Advertise
  • Careers
  • Contact
Wednesday, October 14, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS CRIME

ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

cknewsnow desk by cknewsnow desk
October 13, 2026
in CRIME, NATION, POLITICS, STATE
Reading Time: 1 min read
0
ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ
915
VIEWS
FacebookTwitterWhatsuplinkedinEmail

ವಿಡಿಯೋಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ತಡೆ ನೀಡಬೇಕೆಂದು ಅಸಲು ದಾವೆ

ಬೆಂಗಳೂರು: ಕರ್ನಾಟಕದಲ್ಲಿ ರಾಜಕಾರಣಿಗಳ ವಿರುದ್ಧ ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಮತ್ತು ಸಚಿವ ಸಂಪುಟದ ಐವರು ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆದಿದೆ ಎಂಬ ಸುದ್ದಿ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲಿಯೇ ಸಿದ್ದರಾಮಯ್ಯ ಎಂಬ ವ್ಯಕ್ತಿ ವಿಡಿಯೋಗಳನ್ನು ಪ್ರಸಾರ ಮಾಡದಂತೆ 42 ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ಕೋರಿದ್ದಾರೆ.

ಸಿದ್ದರಾಮಯ್ಯ ಎಂಬ ವ್ಯಕ್ತಿ ತಮ್ಮ ವಕೀಲ ಎಂ.ಆರ್.ಪ್ರವೀಣ್ ಕಾಮತ್ ಎಂಬುವವರ ಮೂಲಕ 18ನೇ ಸಿಸಿಎಚ್ ನ್ಯಾಯಾಲಯದಲ್ಲಿ ಅಸಲು ದಾವೆ ಹೂಡಿದ್ದಾರೆ. ಅಸಲು ದಾವೆ ಸಂಖ್ಯೆ 7655/2026 ಆಗಿದ್ದು, ಫ್ರೀಡಂ ಟಿವಿ ಎಂಬ ಖಾಸಗಿ ಸೆಟಲೈಟ್ ಸುದ್ದಿ ವಾಹಿನಿಯನ್ನು ಪ್ರತಿವಾದಿಯನ್ನಾಗಿ ಮಾಡಿದ್ದಾರೆ.

ಇದರ ಜತೆಗೆ ಕರ್ನಾಟಕ ಹನಿಟ್ರ್ಯಾಪ್ ಎಂಬ ಹೆಸರಿನ ಯೂಟಬ್ ಲಿಂಕನ್ನು ಕೂಡ ಪ್ರತಿವಾದಿಯನ್ನಾಗಿ ಮಾಡಿ ಆ ವ್ಯಕ್ತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುತ್ತಾರೆ.

ಲಭ್ಯವಾಗಿರುವ ದಾಖಲೆಗಳ ಪ್ರಕಾರ ಕರ್ನಾಟಕದ ಅಗ್ರಗಣ್ಯ ಸುದ್ದಿ ಪತ್ರಿಕೆಗಳು ಹಾಗೂ ಮುಂಚೂಣಿಯಲ್ಲಿರುವ ವಿದ್ಯುನ್ಮಾನ ಮಾಧ್ಯಮ ವಾಹಿನಿಗಳ ವಿರುದ್ಧ ತಡೆ ನೀಡುವಂತೆ ನ್ಯಾಯಾಲಯವನ್ನು ಅರ್ಜಿದಾರರು ಕೋರಿದ್ದಾರೆ.

ಈ ಅರ್ಜಿಯ ವಿಚಾರಣೆ ಇಂದು, ಅಂದರೆ ಅಕ್ಟೋಬರ್ 13ರಂದು ನಡೆಯಲಿದೆ. ಜೊತೆಗೆ ನ್ಯಾಯಾಲಯದ ಆದೇಶವು ಈ ದಿನವೇ ಹೊರಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಎಂಬ ವ್ಯಕ್ತಿ ನ್ಯಾಯಾಲಯದ ಮೊರೆ ಹೋಗಿರುವ ಸುದ್ದಿ ಕೂಡ ರಾಜ್ಯದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದೆ. ಪ್ರಮುಖವಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ತಳಮಳ ಸೃಷ್ಟಿಯಾಗಿದೆ. ಹಾಗೆಯೇ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಾರುವೇಷದ ಕಾರ್ಯಾಚರಣೆಯ ಬಗ್ಗೆ ಕಟುವಾಗಿ ಮಾತನಾಡುತ್ತಾ, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು, ಅದರಲ್ಲೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

“ಸ್ಟಿಂಗ್ ಆಪರೇಷನ್ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ. ಯಾರು ಮಾಡ್ತಿದ್ದಾರೆ ಅನ್ನುವ ಸತ್ಯ ಗೊತ್ತಾಗಬೇಕಲ್ಲಲ್ಲವೇ” ಎಂದು ಭಾನುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದರು.

ಸೋಮವಾರವು ಮಾಧ್ಯಮಗಳು ಎದುರಾಗಿ ಕೇಳಿದ ಪ್ರಶ್ನೆಗಳಿಗೆ ಚುಟುಕಾಗಿ ಉತ್ತರಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು; “ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಪ್ರಚಾರ ಆಗುತ್ತಿತ್ತು. ಅದಕ್ಕೆ ಸ್ಟೇ ತೆಗೆದುಕೊಳ್ಳುತ್ತಿದ್ದೇನೆ” ಎಂದು ಹೇಳಿದರು.

ಮಾರುವೇಷದ ಕಾರ್ಯಾಚರಣೆ ವಿಷಯ ಮುನ್ನೆಲೆಗೆ ಬಂದಾಗ ಉಂಟಾಗಿದ್ದ ಕೋಲಾಹಲಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಎಂಬ ವ್ಯಕ್ತಿ ವಿಡಿಯೋಗಳನ್ನು ಪ್ರಸಾರ ಮಾಡಬಾರದು, ಅದಕ್ಕೆ ಮಾಧ್ಯಮಗಳ ವಿರುದ್ಧ ತಡೆ ನೀಡಬೇಕು ಎಂದು ಕೋರ್ಟ್ ಮೊರೆ ಹೋಗಿದ್ದು ಮತ್ತಷ್ಟು ಕಂಪನ ಉಂಟುಮಾಡಿದೆ. ಈ ಮಧ್ಯೆ ಇದರ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರು ಹಿಂಜರಿಯುತ್ತಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರೊಬ್ಬರೇ ಸಿದ್ದರಾಮಯ್ಯ ಅವರಿಗೆ ಅನ್ಯಾಯವಾಗುತ್ತಿದೆ. “ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಹಾಳು ಮಾಡಲು ಕೆಲವರು ವ್ಯವಸ್ಥಿತವಾಗಿ ಸಂಚು ಮಾಡುತ್ತಿದ್ದಾರೆ. ಹೀಗಾಗಿ ಸ್ಟಿಂಗ್ ಮಾಡಿದ ವ್ಯಕ್ತಿಯನ್ನು ಆದಷ್ಟು ಬೇಗ ಬಂದಿಸಬೇಕು” ಎಂದು ಒತ್ತಾಯಿಸಿದ್ದಾರೆ.

Tags: ckcknewsnowformer chife minister of KarnatakaKarnataka sting operationsiddaramaiahSting operation
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕೇಂದ್ರ ಸಚಿವ HD ಕುಮಾರಸ್ವಾಮಿ ಪ್ರೆಸ್ ಮೀಟ್ #Live

ಕೇಂದ್ರ ಸಚಿವ HD ಕುಮಾರಸ್ವಾಮಿ ಪ್ರೆಸ್ ಮೀಟ್ #Live

by cknewsnow desk
October 13, 2026
0

ಬೆಂಗಳೂರು ಜೆ.ಪಿ. ಭವನದಿಂದ ನೇರ ಪ್ರಸಾರ

ಡಿಜಿಟ್‌ನೊಂದಿಗೆ  ಸಿಎಂ ಪುತ್ರ ವಿಜಯೇಂದ್ರ ಡೀಲ್ ಬಗ್ಗೆ ಹೇಳಿದ  ಬಸನಗೌಡ ಪಾಟೀಲ್‌ ಯತ್ನಾಳ್‌

ಕಮಲದ ಕೈ ಹಿಡಿಯಲಿರುವ 25 ಕಾಂಗ್ರೆಸ್ ಶಾಸಕರು

by cknewsnow desk
October 12, 2026
0

ಚುನಾವಣೆ ಹೊತ್ತಿಗೆ ಶುರುವಾಗಲಿದೆ ಪಕ್ಷಾಂತರ ಪರ್ವ

ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪುಸೆಟ್ಟುಗಳಿಗೆ 24/7 ಉಚಿತ ವಿದ್ಯುತ್

ಕಾಲ ಉತ್ತರಿಸುತ್ತದೆ ಎನ್ನುವುದು ತನಿಖೆಗೆ ಪರ್ಯಾಯವಲ್ಲ: HDK

by cknewsnow desk
October 12, 2026
0

ಡಿಕೆಶಿಗೆ ತಿರುಗೇಟು; ಸ್ಟಿಂಗ್ ಆಪರೇಷನ್ ಸತ್ಯಾಸತ್ಯತೆ ಹೊರಬರಲು ತನಿಖೆ ಅಗತ್ಯ ಎಂದ ಕೇಂದ್ರ ಸಚಿವರು

ನಾನು, ನನ್ನ ದಾಖಲೆಗಳು ಕ್ಲೀನ್

ಅತೃಪ್ತ ಶಾಸಕರ ಓಲೈಕೆಗೆ ತಲಾ ₹100 ಕೋಟಿ

by cknewsnow desk
October 11, 2026
0

18 ತಿಂಗಳಲ್ಲಿ ಎದುರಾಗಲಿದೆ ವಿಧಾನಸಭಾ ಚುನಾವಣೆ

ನಾಡಹಬ್ಬಕ್ಕೆ ಆರಂಭದಲ್ಲೇ ವಿಘ್ನ; ಮುರಿದುಬಿದ್ದ ನಂದಿ ಕಂಬ

ನಾಡಹಬ್ಬಕ್ಕೆ ಆರಂಭದಲ್ಲೇ ವಿಘ್ನ; ಮುರಿದುಬಿದ್ದ ನಂದಿ ಕಂಬ

by cknewsnow desk
October 11, 2026
0

ನಂದಿ ಧ್ವಜವು ಶುಭ ಸಂಕೇತ

ಸ್ಟಿಂಗ್’ಪಿನ್ ಜತೆ ಸಿಎಂ ಗುಪ್ತ ಸಭೆ

ಸ್ಟಿಂಗ್’ಪಿನ್ ಜತೆ ಸಿಎಂ ಗುಪ್ತ ಸಭೆ

by cknewsnow desk
October 11, 2026
0

ಮೌಂಟ್ ಕಾರ್ಮೆಲ್ ಕಾಲೇಜ್ ಪಕ್ಕದ ಫೈವ್'ಸ್ಟಾರ್ ಹೋಟೆಲ್'ನಲ್ಲಿ ಭೇಟಿ

Next Post
ತಾಪಂ, ಜಿಪಂ ಚುನಾವಣೆ; ಜಿಲ್ಲಾವಾರು ಸಭೆಗಳನ್ನು ಆರಂಭಿಸಿದ HDK

ತಾಪಂ, ಜಿಪಂ ಚುನಾವಣೆ; ಜಿಲ್ಲಾವಾರು ಸಭೆಗಳನ್ನು ಆರಂಭಿಸಿದ HDK

Leave a Reply Cancel reply

Your email address will not be published. Required fields are marked *

Recommended

ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳ ವಿರುದ್ಧ ಹೋರಾಟಕ್ಕೆ ಮುಖಂಡರಿಗೆ ರಣವೀಳ್ಯ ನೀಡಿದ ಹೆಚ್.ಡಿ.ಕುಮಾರಸ್ವಾಮಿ

ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳ ವಿರುದ್ಧ ಹೋರಾಟಕ್ಕೆ ಮುಖಂಡರಿಗೆ ರಣವೀಳ್ಯ ನೀಡಿದ ಹೆಚ್.ಡಿ.ಕುಮಾರಸ್ವಾಮಿ

3 years ago
ಚಾಮುಂಡಿಬೆಟ್ಟದಲ್ಲಿ ಅಪರಾಧ ತಡೆಗೆ ಟಾಸ್ಕ್ ಫೋರ್ಸ್

ಚಾಮುಂಡಿಬೆಟ್ಟದಲ್ಲಿ ಅಪರಾಧ ತಡೆಗೆ ಟಾಸ್ಕ್ ಫೋರ್ಸ್

2 years ago

Popular News

  • ಕೇಂದ್ರ ಸಚಿವ HD ಕುಮಾರಸ್ವಾಮಿ ಪ್ರೆಸ್ ಮೀಟ್ #Live

    ಕೇಂದ್ರ ಸಚಿವ HD ಕುಮಾರಸ್ವಾಮಿ ಪ್ರೆಸ್ ಮೀಟ್ #Live

    0 shares
    Share 0 Tweet 0
  • ತಾಪಂ, ಜಿಪಂ ಚುನಾವಣೆ; ಜಿಲ್ಲಾವಾರು ಸಭೆಗಳನ್ನು ಆರಂಭಿಸಿದ HDK

    0 shares
    Share 0 Tweet 0
  • ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

    0 shares
    Share 0 Tweet 0
  • ಕಮಲದ ಕೈ ಹಿಡಿಯಲಿರುವ 25 ಕಾಂಗ್ರೆಸ್ ಶಾಸಕರು

    0 shares
    Share 0 Tweet 0
  • ಕಾಲ ಉತ್ತರಿಸುತ್ತದೆ ಎನ್ನುವುದು ತನಿಖೆಗೆ ಪರ್ಯಾಯವಲ್ಲ: HDK

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ತಾಪಂ, ಜಿಪಂ ಚುನಾವಣೆ; ಜಿಲ್ಲಾವಾರು ಸಭೆಗಳನ್ನು ಆರಂಭಿಸಿದ HDK

ತಾಪಂ, ಜಿಪಂ ಚುನಾವಣೆ; ಜಿಲ್ಲಾವಾರು ಸಭೆಗಳನ್ನು ಆರಂಭಿಸಿದ HDK

October 13, 2026
ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

October 13, 2026
ಡಿಜಿಟ್‌ನೊಂದಿಗೆ  ಸಿಎಂ ಪುತ್ರ ವಿಜಯೇಂದ್ರ ಡೀಲ್ ಬಗ್ಗೆ ಹೇಳಿದ  ಬಸನಗೌಡ ಪಾಟೀಲ್‌ ಯತ್ನಾಳ್‌

ಕಮಲದ ಕೈ ಹಿಡಿಯಲಿರುವ 25 ಕಾಂಗ್ರೆಸ್ ಶಾಸಕರು

October 12, 2026
ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪುಸೆಟ್ಟುಗಳಿಗೆ 24/7 ಉಚಿತ ವಿದ್ಯುತ್

ಕಾಲ ಉತ್ತರಿಸುತ್ತದೆ ಎನ್ನುವುದು ತನಿಖೆಗೆ ಪರ್ಯಾಯವಲ್ಲ: HDK

October 12, 2026

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ