• About
  • Advertise
  • Careers
  • Contact
Thursday, November 26, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!

cknewsnow desk by cknewsnow desk
November 25, 2026
in NATION, POLITICS, STATE
Reading Time: 1 min read
0
ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!
913
VIEWS
FacebookTwitterWhatsuplinkedinEmail

ರಾಜ್ಯ ಸರಕಾರದ ದ್ವಂದ್ವ ನೀತಿ; ಆರ್. ಅಶೋಕ್ ಕಟು ಟೀಕೆ

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರ ಗಂಜಿ ಕೇಂದ್ರಕ್ಕೆ ಸುಮಾರು 2,000 ಕೋಟಿ ರೂ. ಖರ್ಚು ಮಾಡುವ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರಿಗೆ ₹480 ಕೋಟಿ ನೀಡಲು ಆಗುತ್ತಿಲ್ಲಾ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಮೇಲೆ ಎಲ್ಲರೂ ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್ ಶಾಸಕರೇ ಆನೆ ವಿಚಾರದಲ್ಲಿ ಸರ್ಕಾರದ ಮೇಲೆ ಬೇಸರಗೊಂಡಿದ್ದಾರೆ. ಆಶಾ ಕಾರ್ಯಕರ್ತೆಯರು ಮಳೆ ಚಳಿಯಲ್ಲಿ ಹೋರಾಟ ಮಾಡುತ್ತಿದ್ದರೂ ಅವರಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಮುಖ್ಯಮಂತ್ರಿ ಜರ್ಮನಿ,‌ ಜಪಾನ್ ಪ್ರವಾಸ ಮಾಡಲಿ. ಆದರೆ ಹೋರಾಟಗಾರರ ರಕ್ಷಣೆಗೆ ಸರಿಯಾದ ವ್ಯವಸ್ಥೆ ಮಾಡಬೇಕಿತ್ತು. ಜಪಾನ್ ನ ರಸ್ತೆ, ಕಸ ವಿಲೇವಾರಿ ವ್ಯವಸ್ಥೆ ನೋಡುತ್ತಿದ್ದಾರೆ. ಆದರೆ ಬೆಂಗಳೂರನ್ನೇ ಇವರು ಸುತ್ತಾಡಿಲ್ಲ ಎಂದು ಟೀಕಿಸಿದರು.

ಇಷ್ಟು ವರ್ಷದಲ್ಲಿ ಇವರು ಬೆಂಗಳೂರಿಗೆ ಏನೂ ಮಾಡದೆ ಕಂಪನಿಗಳು ಮಹಾರಾಷ್ಟ್ರ, ಆಂಧ್ರಕ್ಕೆ ಹೋಗುತ್ತಿವೆ.‌ ಆಶಾ ಕಾರ್ಯಕರ್ತೆಯರನ್ನು ಸಿಎಂ ಸಹೋದರಿ ಎಂದು ಕರೆಯುತ್ತಾರೆ. ಈಗ ಅವರೇ ಬಂಡೆ ಹೃದಯ ಎಂದು ಸಾಬೀತುಪಡಿಸಿದ್ದಾರೆ. ವೀಡಿಯೋ ಕಾಲ್ ಮಾಡುವ ಬದಲು ನೇರವಾಗಿ ಫ್ರೀಡಂ ಪಾರ್ಕ್ ಗೆ ಬಂದು ಅಹವಾಲು ಆಲಿಸಲಿ. ಇಲ್ಲವಾದರೆ ಡಿ.ಕೆ.ಶಿವಕುಮಾರ್ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಸಾಬೀತಾಗುತ್ತದೆ ಎಂದು ಅಶೋಕ ಸವಾಲು ಹಾಕಿದರು.

ಸೋನಿಯಾ ಗಾಂಧಿಯವರ ಪುಸ್ತಕ ಬಿಡುಗಡೆಗೆ ಎಲ್ಲಿಲ್ಲದ ಉತ್ಸಾಹ ತೋರಿದ್ದರು. ಪಕ್ಷದಲ್ಲಿ ಎಲ್ಲರೂ ಖರೀದಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಸಚಿವ ಮುನಿಯಪ್ಪ ಹತ್ತು ಸಾವಿರ ಪುಸ್ತಕ ಖರೀದಿ ಮಾಡುವುದಾಗಿ ಹೇಳಿದ್ದಾರೆ. ಪುಸ್ತಕ ಮಾರಾಟಕ್ಕೂ ಮೊದಲು ಜನರ ಸಮಸ್ಯೆ ಆಲಿಸಬೇಕು. ಆ ಪುಸ್ತಕದ ಬರವಣಿಗೆ ಹೇಗೂ ಹಾಳಾಗಿದೆ. ಇದಕ್ಕೆ ತೋರುವ ಉತ್ಸಾಹವನ್ನು ಆಶಾ ಹೋರಾಟಗಾರರ ಸಮಸ್ಯೆ ಈಡೇರಿಸಲು ತೋರಿಸಲಿ ಎಂದು ಆಗ್ರಹಿಸಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮೋದಿ ₹1,000 ಸಹಾಯಧನ ನೀಡಿದ್ದರು. 50 ಲಕ್ಷ ರೂ. ವಿಮೆ ಮಾಡಿಸಿದ್ದರು. ಕೋವಿಡ್ ಸಮಯದಲ್ಲಿ ಒಂದು ಸಲ ₹3,000 ನಂತರ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ₹1,000 ಹೆಚ್ಚಿಸಲಾಗಿತ್ತು. ಬಳಿಕ ಬಜೆಟ್ ನಲ್ಲೇ ₹1,000 ಘೋಷಿಸಲಾಯಿತು. ಆದರೆ ಸಿದ್ದರಾಮಯ್ಯ ಸಿಎಂ ಆದ ಕೂಡಲೇ ಅದನ್ನು ಹಿಂಪಡೆಯಲಾಯಿತು ಎಂದು ದೂರಿದರು.

ಆಶಾ ಕಾರ್ಯಕರ್ತರು ಹೆಚ್ಚಾಗಿ ರಾಜ್ಯ ಸರ್ಕಾರದ ಆರೋಗ್ಯ ಕಾರ್ಯಕ್ರಮಗಳಿಗೆ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಪ್ರತಿಯೊಬ್ಬ ಮಹಿಳೆಗೆ ₹15,000 ಮಾತ್ರ ನೀಡಬೇಕಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಅವರ ಶಾಪ ತಟ್ಟಲಿದೆ ಎಂದು ಅಶೋಕ ಎಚ್ಚರಿಸಿದರು.

ವಿನಯ್ ಕುಲಕರ್ಣಿ, ನಾಗೇಂದ್ರ ಜೈಲಿಗೆ ಹೋಗಿದ್ದು, ಇದೊಂದು ರೌಡಿಗಳ ಸರ್ಕಾರ ಎಂದು ಅವರು ಟೀಕಿಸಿದರು.

ನಯನ ಮೋಟಮ್ಮ ಸೇರಿದಂತೆ ಕಾಂಗ್ರೆಸ್ ಶಾಸಕರು ಜನರ ಕಣ್ಣಿಗೆ ಮಣ್ಣೆರಚಲು ರಾಜೀನಾಮೆ ನಾಟಕವಾಡಿದ್ದಾರೆ. ಇವರ ರಾಜೀನಾಮೆ ಪತ್ರ ಒಂದು ಸಾಲಿನಲ್ಲೇ ಇರಬೇಕು.‌ ಆದರೆ ಅದು ಒಂದು ಸಾಲಿನಲ್ಲಿ ಬರೆದಿಲ್ಲ ಹಾಗೂ ನೇರವಾಗಿ ಸ್ಪೀಕರ್ ಗೆ ನೀಡಿಲ್ಲ. ಹೀಗೆ ಸುಮ್ಮನೆ ಮೊದಲೇ ಮಾತಾಡಿಕೊಂಡು ನಾಟಕ ಮಾಡಿದ್ದಾರೆ.‌ ಅವರು ನಿಜಕ್ಕೂ ರಾಜೀನಾಮೆ‌ ನೀಡಿದ್ದರೆ ಆನೆಗಾಗಿ ರಾಜೀನಾಮೆ ನೀಡಿದರು ಎಂದು ದಾಖಲೆಯಾಗುತ್ತಿತ್ತು ಎಂದು ಪ್ರತಿಪಕ್ಷ ನಾಯಕ ಕುಟುಕಿದರು.

•Lead cartoon | AI

Tags: Asha workers protestbjpckcknewsnowCongress governmentkarnatakar ashokwomens
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

by cknewsnow desk
November 26, 2026
0

ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ ಜಾರಿ ನಿರ್ದೇಶನಾಲಯ

ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ

ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ

by cknewsnow desk
November 25, 2026
0

ಹೆಚ್.ಡಿ. ಕುಮಾರಸ್ವಾಮಿ ಅವರ ಕೇಂದ್ರದ ಬೃಹತ್ ಕೈಗಾರಿಕೆ ಸಚಿವಾಲಯದ ಯೋಜನೆಗೆ ಸಂಪುಟ ಅನುಮೋದನೆ

ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

by cknewsnow desk
November 25, 2026
0

ಧಾರವಾಡ ಜಿ.ಪಂ ಸದಸ್ಯ ಯೋಗೇಶ್‌ ಗೌಡ ಕೊಲೆ

ಕನ್ನಡಿಗರ ಕಣ್ಣೀರು ಹರಿದರೂ ಚಿಂತೆ ಇಲ್ಲ, ತಮಿಳುನಾಡಿಗೆ ಕಾವೇರಿ ಹರಿಯಲಿ ಎನ್ನುತ್ತಿದೆ ಕಾಂಗ್ರೆಸ್

ಕಾವೇರಿ ವಿಚಾರದಲ್ಲಿ ಕರ್ನಾಟಕ ಮಾಡಿದ ತಪ್ಪುಗಳು

by cknewsnow desk
November 25, 2026
0

ರಾಜಕೀಯ ಇಚ್ಛಾಶಕ್ತಿ ಕೊರತೆ; ತಮಿಳುನಾಡು ಎದುರು ರಾಜ್ಯಕ್ಕೆ ನಿರಂತರ ವೈಫಲ್ಯ

ನವೆಂಬರ್ 16ರಿಂದ ಶಬರಿಮಲೆ ಮಂಡಲೋತ್ಸವ; ಕೋವಿಡ್ ನೆಗೆಟೀವ್ ಪತ್ರ ಇದ್ದರೆ ಮಾತ್ರ ಅಯ್ಯಪ್ಪ ದರ್ಶನ

ಅಯ್ಯಪ್ಪ ಭಕ್ತರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ; ಪಂಪಾ ನದಿ ಮಲೀನ ಮಾಡಿದರೆ ₹5000 ದಂಡ

by cknewsnow desk
November 24, 2026
0

ಆರೋಗ್ಯಕ್ಕೆ ಸಂಬಂಧಿಸಿ ಸಲಹೆ; ವಿಮಾನ ಕ್ಯಾಬಿನ್ ನಲ್ಲಿ ಇರುಮುಡಿ ಕಟ್ಟು ಒಯ್ಯಲು ಅನುಮತಿ

ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ

ಹೂವಿನಂಥ ಹೃದಯಿ!; HDK ಹೀಗೆ ಹೇಳಿದ್ದು ಯಾರಿಗೆ?

by cknewsnow desk
November 23, 2026
0

ಆಶಾ ಕಾರ್ಯಕರ್ತೆಯರ ಪ್ರತಿಭಟನೆ ತಾರಕಕ್ಕೆ; ರಾಜ್ಯ ಸರಕಾರಕ್ಕೆ ಇಕ್ಕಟ್ಟು

Next Post
ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ

ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ

Leave a Reply Cancel reply

Your email address will not be published. Required fields are marked *

Recommended

ಕರ್ನಾಟಕ ಲೋಕಸೇವಾ ಆಯೋಗ ಮೂಲಕ 750 ಕೃಷಿ ಅಧಿಕಾರಿಗಳ ಹುದ್ದೆಗಳ ಭರ್ತಿ

ಕರ್ನಾಟಕ ಲೋಕಸೇವಾ ಆಯೋಗ ಮೂಲಕ 750 ಕೃಷಿ ಅಧಿಕಾರಿಗಳ ಹುದ್ದೆಗಳ ಭರ್ತಿ

3 years ago
ಚಿಕ್ಕಬಳ್ಳಾಪುರ ಜಿಲ್ಲೆಗೆ ದೇವೇಗೌಡರು

ಚಿಕ್ಕಬಳ್ಳಾಪುರ ಜಿಲ್ಲೆಗೆ ದೇವೇಗೌಡರು

5 years ago

Popular News

  • KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

    KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

    0 shares
    Share 0 Tweet 0
  • ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ

    0 shares
    Share 0 Tweet 0
  • ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!

    0 shares
    Share 0 Tweet 0
  • ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

    0 shares
    Share 0 Tweet 0
  • ಕಾವೇರಿ ವಿಚಾರದಲ್ಲಿ ಕರ್ನಾಟಕ ಮಾಡಿದ ತಪ್ಪುಗಳು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

November 26, 2026
ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ

ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ

November 25, 2026
ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!

ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!

November 25, 2026
ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

November 25, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ