• About
  • Advertise
  • Careers
  • Contact
Monday, November 23, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ಹೂವಿನಂಥ ಹೃದಯಿ!; HDK ಹೀಗೆ ಹೇಳಿದ್ದು ಯಾರಿಗೆ?

cknewsnow desk by cknewsnow desk
November 23, 2026
in NATION, POLITICS, STATE
Reading Time: 1 min read
0
ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ
911
VIEWS
FacebookTwitterWhatsuplinkedinEmail

ಆಶಾ ಕಾರ್ಯಕರ್ತೆಯರ ಪ್ರತಿಭಟನೆ ತಾರಕಕ್ಕೆ; ರಾಜ್ಯ ಸರಕಾರಕ್ಕೆ ಇಕ್ಕಟ್ಟು

ಬೆಂಗಳೂರು: ಹಗಲು ರಾತ್ರಿ ಎನ್ನದೇ ಚಳಿಯಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪಾಪ.. ಹೂವಿನಂತಹ ಹೃದಯ ಹೊಂದಿರುವ ಮುಖ್ಯಮಂತ್ರಿಗಳು ಆಶಾ ಕಾರ್ಯಕರ್ತೆಯರಿಗೆ ಸ್ಪಂದಿಸಬೇಕಿತ್ತು, ಅವರದ್ದು ಬಂಡೆಯಂಥ ಹೃದಯ ಅಲ್ಲ‌ ಅನ್ನೋದು ನಾನಾ ಭಾವನೆ. ಬಹುಶಃ ಟೋಕಿಯೋ ಪ್ರವಾಸದಿಂದ ವಾಪಸ್ ಬಂದ ಬಳಿಕ ಈ ಹೆಣ್ಣುಮಕ್ಕಳ ನೋವಿಗೆ ಸ್ಪಂದಿಸಬಹುದು ಎಂಬ ನಿರೀಕ್ಷೆ ಇದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಪಕ್ಷದ ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು; ಆಶಾ ಕಾರ್ಯಕರ್ತೆಯರು ಒಂದು ವಾರದಿಂದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಶ್ರಮದ ಬಗ್ಗೆ ಬಾಯಿ ಮಾತಿನಲ್ಲಿ ಎಲ್ಲಾ ಅನುಕಂಪದಿಂದಲೇ ಮಾತನಾಡುತ್ತೇವೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅನ್ನುವುದಕ್ಕಿಂತ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ನಾನು ಒಮ್ಮೆ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳನ್ನು ಕೇಂದ್ರದ ಅಂದಿನ ಶಿಕ್ಷಣ ಸಚಿವರಾಗಿದ್ದ ಧರ್ಮೆಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿಸಿದ್ದೆ. ಇವತ್ತಿ‌ನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಅವರ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದರು.

ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡುವುದಕ್ಕೆ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಆರ್ಥಿಕ ಇಲಾಖೆಯನ್ನು ಮುಖ್ಯಮಂತ್ರಿಗಳೇ ಇಟ್ಟುಕೊಂಡಿದ್ದಾರೆ. ಭಾರತ ಜೋಡೋ ಸಂಘಗಳ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ₹1000 ಕೋಟಿ ಕೊಡುತ್ತಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ಆಶಾ ಕಾರ್ಯಕರ್ತೆಯರ ಬಗ್ಗೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. ನುಡಿದಂತೆ ನಡೆದಿದ್ದೇವೆ ಎಂದು ನೂರಾರು ಬಾರಿ ಈ ಮುಖ್ಯಮಂತ್ರಿ ಹೇಳಿರಬಹುದು ಎಂದು ಸಿಎಂ ನಡೆ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.

ನಮ್ಮ ಮುಖ್ಯಮಂತ್ರಿಗಳದ್ದು ಬಂಡೆ ರೀತಿಯ ಹೃದಯ ಅಲ್ಲ, ಹೂವಿನಂತಹ ಹೃದಯ ಅಲ್ಲವೇ? ಇಷ್ಟೋತ್ತಿಗೆ ಆಶಾ ಕಾರ್ಯಕರ್ತೆಯರ ಸಂಕಷ್ಟಕ್ಕೆ ಅವರು ಮಿಡಿಯಬೇಕಿತ್ತು. ಅವರ ಹೃದಯ ಕರಗಬೇಕಿತ್ತು. ಯಾಕೆ ಕರಗಿಲ್ಲವೋ ಗೊತ್ತಿಲ್ಲ. ಬಹುಶಃ ಜಪಾನ್ ಪ್ರವಾಸದಿಂದ ಬಂದ ಬಳಿಕ ಅವರ ಹೃದಯ ಮಿಡಿಯಬಹುದು.

ಲಂಡನ್ ಕೋರ್ಟಿಗೆ ಹೋಗುತ್ತಾರೆಯೇ?

ಕೇಂದ್ರ ಸರ್ಕಾರ ಬರ ಪರಿಹಾರ ನೀಡಿಲ್ಲ. ಪರಿಹಾರಕ್ಕೆ ಕೋರ್ಟ್‌ಗೆ ಹೋಗಬೇಕೂಗುತ್ತದೆ ಅನ್ನುವ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು; ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗುತ್ತೋ, ಲಂಡನ್ ಕೋರ್ಟ್ ಗೆ ಹೋಗುತ್ತೋ ಗೊತ್ತಿಲ್ಲ. ನೈಸ್ ಪ್ರಾಜೆಕ್ಟ್ ವ್ಯಾಜ್ಯ ಬಂದರೆ ಲಂಡನ್ ಕೋರ್ಟ್ ಗೆ ಹೋಗಬೇಕು ಎಂದು ತೀರ್ಮಾನ ಮಾಡಿದ್ದು ಯಾರು? ಸುಪ್ರಿಂ ಕೋರ್ಟ್, ಹೈಕೋರ್ಟ್ ನಲ್ಲಿ ಆಗಲ್ಲ, ಅವರಿಗೆ ಲಂಡನ್ ಕೋರ್ಟ್ ಗೇ ಹೋಗಬೇಕು. ಕಾಂಗ್ರೆಸ್ ಮಹಾನುಭಾವರೇ ಲಂಡನ್ ಕೋರ್ಟ್ ಗೆ ಹೋಗಬೇಕು ಎಂದು ಸರ್ಕಾರದಲ್ಲಿ ತೀರ್ಮಾನಿಸಿದ್ದರು. ಈಗ ಬರದ ವಿಚಾರದಲ್ಲಿ ಲಂಡನ್ ಕೋರ್ಟ್ ಗೆ ರಾಜ್ಯ ಸರ್ಕಾರ ಹೋಗಬಹುದು ಎಂದು ಟಾಂಗ್ ನೀಡಿದರು.

ಪ್ರಧಾನಮಂತ್ರಿಗಳು, ಗೃಹ ಮಂತ್ರಿಗಳ ಜತೆ ಮುಖ್ಯಮಂತ್ರಿಗಳು ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಆತ್ಮೀಯತೆ ಇದ್ದವರು ಕೋರ್ಟ್‌ಗೆ ಹೋಗುವ ಅನಿರ್ವಾಯ ಬರಲ್ಲ ಅನ್ನಿಸುತ್ತೆ ಎಂದ ಅವರು; ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ಯಾವತ್ತೂ ಕೇಂದ್ರ ಸರ್ಕಾರದ ಜತೆ ಸಂಘರ್ಷಕ್ಕೆ ಇಳಿದಿರಲಿಲ್ಲ. ಕೋರ್ಟ್‌ಗೆ ಹೋಗಿರಲಿಲ್ಲ. ಕೊಡಗಿನಲ್ಲಿ ನೆರೆ ಬಂದು ಜನರು ಮನೆಗಳನ್ನು ಕಳೆದುಕೊಂಡಾಂಗ ಕೇಂದ್ರ ಸರ್ಕಾರದ ಮುಂದೆ ಹಣಕ್ಕಾಗಿ ಕಾದಿರಲಿಲ್ಲ. ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಟ್ಟೆ. ಪರಿಹಾರ ಕೊಟ್ಟಿದ್ದೆ, ಮನೆ ನಿರ್ಮಿಸಿಕೊಡುವ ತನಕ ಮಾಸಿಕ ₹10,000 ಬಾಡಿಗೆ ಹಣವನ್ನು ಪ್ರತಿ ಕುಟುಂಬಕ್ಕೂ ನೀಡಿದ್ದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಹಿರಿಯೂರು ಟಿಕೆಟ್ ವಿಚಾರದಲ್ಲಿ ನನಗೆ ಯಾವುದೇ ರೀತಿಯ ಆತುರ ಇಲ್ಲ. ಚುನಾವಣೆ ನಡೆಯುತ್ತಯೋ ಇಲ್ಲವೋ ಗೊತ್ತಿಲ್ಲ. ಮೈತ್ರಿ ಪಕ್ಷದಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುಂದಷ್ಟೇ ನನ್ನ ಆದ್ಯತೆ. ಪಾಪ.. ಮುಖ್ಯಮಂತ್ರಿಗಳು ಸಿಕ್ಕಾಪಟ್ಟೆ ಹಿರಿಯೂರು ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ‌. ಆ ಕ್ಷೇತ್ರವನ್ನು ದತ್ತು ತೆಗೆದುಕೊಂಡು, ಕನಕಪುರದ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತಾರಂತೆ ಎಂದು ಮಾಧ್ಯಮಗಳ ಪ್ರಶ್ನೆಗೆ ಸಚಿವರು ಉತ್ತರಿಸಿದರು‌.

ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷ ಸಭೆ ಮಾಡುತ್ತೇವೆ. ಅಗತ್ಯವಿದ್ದರೆ ಬಿಜೆಪಿ ಜತೆ ಸಭೆ ಮಾಡುತ್ತೇವೆ ಎಂದರು. ಮತಾಂತರ ಮಸೂದೆ , ಗೋಹತ್ಯೆ ನಿಷೇಧ ಮಸೂದೆ ವಾಪಸ್ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ, ಪ್ರಮೋದ್ ಮುತಾಲಿಕ್ ಅವರು ಬಂದಿದ್ದಾರೆ. ಚರ್ಚೆ ಮಾಡ್ತೇವೆ , ನೋಡೋಣ ಎಂದು ಪ್ರತಿಕ್ರಿಯಿಸಿದರು. ಜೆಡಿಎಸ್ ಜಿಬಿಎ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ಮುಖಂಡ ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದರು.

cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

by cknewsnow desk
November 22, 2026
0

ಆರ್‌ ಎಸ್‌ ಎಸ್‌ ಹಿನ್ನೆಲೆ, ಸಂಘಟನಾ ಚತುರತೆ, ಪಕ್ಷನಿಷ್ಠೆಗೆ ಒಲಿಯುತ್ತಾ ಹುದ್ದೆ

ರಾಜ್ಯ ಬಿಜೆಪಿಗೆ ಮೇಜರ್‌ ಸರ್ಜರಿ! ಯಾರು ಎಲ್ಲೆಲ್ಲಿಗೆ?

ರಾಜ್ಯ ಬಿಜೆಪಿಗೆ ಮೇಜರ್‌ ಸರ್ಜರಿ! ಯಾರು ಎಲ್ಲೆಲ್ಲಿಗೆ?

by cknewsnow desk
November 22, 2026
0

ಆರ್.‌ ಅಶೋಕ್‌, ವಿಜಯೇಂದ್ರ ಸ್ಥಾನ ಪಲ್ಲಟ ಖಚಿತ, ಸುನೀಲ್‌ ಕುಮಾರ್‌ʼಗೆ ಆಯಕಟ್ಟಿನ ಜಾಗ ಗ್ಯಾರಂಟಿ

ಸ್ಟಿಂಗ್‌ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಿ, ಪೊಲೀಸ್‌ ಮಹಾನಿರ್ದೇಶಕರಿಗೆ ಗೃಹ ಇಲಾಖೆ ಸೂಚನೆ

ಸ್ಟಿಂಗ್‌ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಿ, ಪೊಲೀಸ್‌ ಮಹಾನಿರ್ದೇಶಕರಿಗೆ ಗೃಹ ಇಲಾಖೆ ಸೂಚನೆ

by cknewsnow desk
November 22, 2026
0

ಪವರ್ ಟಿವಿ ಮಾಲೀಕ, ಸ್ಟಿಂಗ್ ಆಪರೇಷನ್ ನಲ್ಲಿ ಭಾಗಿಯಾದ ವಾಹಿನಿ ನೌಕರರ ವಿರುಧ್ಧ ಕ್ರಮಕ್ಕೆ ಸೂಚನೆ; ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ...

ಸೋನಿಯಾ ಗಾಂಧಿ ಪುಸ್ತಕ ಖರೀದಿಗೆ ರಾಜಕೀಯ ಆಸಕ್ತರು

ಸಿಂಪ್ಲಿ ಸೋನಿಯಾ, ಒಮ್ಮೆ ಓದಿಬಿಡಿ

by cknewsnow desk
November 20, 2026
0

ಬಿಲಾಂಗಿಂಗ್ : ಎ ಜರ್ನಿ ಆಫ್ ಲವ್ (Belonging: A Journey of Love) ಕೃತಿ ವಿಮರ್ಶೆ

ಗ್ರಾಮೀಣ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದೃಢೀಕರಣ

ಗ್ರಾಮೀಣ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದೃಢೀಕರಣ

by cknewsnow desk
November 18, 2026
0

ಇನ್ನು ಮುಂದೆ ಅಂಗೈನಲ್ಲಿ ಆಸ್ತಿ ದಾಖಲೆ

Belonging: A Journey of Love

ಸೋನಿಯಾ ಗಾಂಧಿ ಆತ್ಮಚರಿತ್ರೆ #BelongingA JourneyofLove ಓದಲ್ಲ

by cknewsnow desk
November 18, 2026
0

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿಕೆ

Leave a Reply Cancel reply

Your email address will not be published. Required fields are marked *

Recommended

ಕರ್ನಾಟಕ ಲೋಕಸೇವಾ ಆಯೋಗ ಮೂಲಕ 750 ಕೃಷಿ ಅಧಿಕಾರಿಗಳ ಹುದ್ದೆಗಳ ಭರ್ತಿ

ಕರ್ನಾಟಕ ಲೋಕಸೇವಾ ಆಯೋಗ ಮೂಲಕ 750 ಕೃಷಿ ಅಧಿಕಾರಿಗಳ ಹುದ್ದೆಗಳ ಭರ್ತಿ

3 years ago
ರಾಷ್ಟ್ರಪತಿ ಚುನಾವಣೆ: ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಜೆಡಿಎಸ್‌ ಬೆಂಬಲ ಘೋಷಣೆ

ಸಂಸತ್ತಿನ ಜಂಟಿ ಕಲಾಪದಲ್ಲಿ ರಾಷ್ಟ್ರಪತಿಗಳ ಭಾಷಣ

3 years ago

Popular News

  • ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ

    ಹೂವಿನಂಥ ಹೃದಯಿ!; HDK ಹೀಗೆ ಹೇಳಿದ್ದು ಯಾರಿಗೆ?

    0 shares
    Share 0 Tweet 0
  • ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

    0 shares
    Share 0 Tweet 0
  • ರಾಜ್ಯ ಬಿಜೆಪಿಗೆ ಮೇಜರ್‌ ಸರ್ಜರಿ! ಯಾರು ಎಲ್ಲೆಲ್ಲಿಗೆ?

    0 shares
    Share 0 Tweet 0
  • ಸ್ಟಿಂಗ್‌ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಿ, ಪೊಲೀಸ್‌ ಮಹಾನಿರ್ದೇಶಕರಿಗೆ ಗೃಹ ಇಲಾಖೆ ಸೂಚನೆ

    0 shares
    Share 0 Tweet 0
  • ಸಿಂಪ್ಲಿ ಸೋನಿಯಾ, ಒಮ್ಮೆ ಓದಿಬಿಡಿ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ

ಹೂವಿನಂಥ ಹೃದಯಿ!; HDK ಹೀಗೆ ಹೇಳಿದ್ದು ಯಾರಿಗೆ?

November 23, 2026
ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

November 22, 2026
ರಾಜ್ಯ ಬಿಜೆಪಿಗೆ ಮೇಜರ್‌ ಸರ್ಜರಿ! ಯಾರು ಎಲ್ಲೆಲ್ಲಿಗೆ?

ರಾಜ್ಯ ಬಿಜೆಪಿಗೆ ಮೇಜರ್‌ ಸರ್ಜರಿ! ಯಾರು ಎಲ್ಲೆಲ್ಲಿಗೆ?

November 22, 2026
ಸ್ಟಿಂಗ್‌ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಿ, ಪೊಲೀಸ್‌ ಮಹಾನಿರ್ದೇಶಕರಿಗೆ ಗೃಹ ಇಲಾಖೆ ಸೂಚನೆ

ಸ್ಟಿಂಗ್‌ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಿ, ಪೊಲೀಸ್‌ ಮಹಾನಿರ್ದೇಶಕರಿಗೆ ಗೃಹ ಇಲಾಖೆ ಸೂಚನೆ

November 22, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ