• About
  • Advertise
  • Careers
  • Contact
Monday, November 23, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

cknewsnow desk by cknewsnow desk
November 22, 2026
in NATION, POLITICS, STATE
Reading Time: 1 min read
0
ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?
912
VIEWS
FacebookTwitterWhatsuplinkedinEmail

ಆರ್‌ ಎಸ್‌ ಎಸ್‌ ಹಿನ್ನೆಲೆ, ಸಂಘಟನಾ ಚತುರತೆ, ಪಕ್ಷನಿಷ್ಠೆಗೆ ಒಲಿಯುತ್ತಾ ಹುದ್ದೆ

ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಮಹೇಶ್‌ ಟೆಂಗಿನಕಾಯಿ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಟೆಂಗಿನಕಾಯಿ ಅವರಿಗೆ ಆರ್‌ಎಸ್‌ಎಸ್‌ ಪೂರ್ಣ ಬೆಂಬಲ ವ್ಯಕ್ತಪಡಿಸಿ, ಮುಂಬರುವ ವಿಧಾನಸಭಾ ಚುನಾವಣೆಯನ್ನು ಇವರ ನಾಯಕತ್ವದಲ್ಲೇ ಎದುರಿಸಬೇಕೆಂಬ ನಿಲುವನ್ನು ಹೊಂದಿದೆ.

ಪಟ್ಟ ಕಟ್ಟಲು ಸಿದ್ಧತೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಿತಿನ್‌ ನಬೀನ್‌ ಆಯ್ಕೆ ಆದಂತೆ, ರಾಜ್ಯಾಧ್ಯಕ್ಷ ಸ್ಥಾನಕ್ಕೂ ಆರ್‌ಎಸ್‌ಎಸ್‌ ಹಿನ್ನೆಲೆ ಉಳ್ಳ ಟೆಂಗಿನಕಾಯಿ ಅವರಿಗೆ ಪಟ್ಟ ಕಟ್ಟಲು ಸಿದ್ಧತೆ ನಡೆದಿದೆ.

ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೇರಲು ಭಾರೀ ಪೈಪೋಟಿ ನಡೆದಿದೆ.

ವಿಜಯೇಂದ್ರ ಸಹಾ ಇನ್ನೊಂದು ಅವಧಿಗೆ ಮುಂದುವರೆಸುವಂತೆ ರಾಷ್ಟ್ರೀಯ ಬಿಜೆಪಿ ನಾಯಕರು ಮತ್ತು ಗೃಹ ಸಚಿವ ಅಮಿತ್‌ ಷಾ ಅವರಲ್ಲಿ ಮನವಿ ಮಾಡಿದ್ದಾರೆ.

ವರಿಷ್ಠರಿಗೆ ಮನವಿ

ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇನೆ, ನನ್ನನ್ನೇ ಮತ್ತೊಂದು ಅವಧಿಗೆ ಮುಂದುವರೆಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಮಾಡುವುದಾಗಿ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.

ವಿಜಯೇಂದ್ರ ಸ್ಥಾನಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ, ಮುರುಗೇಶ್‌ ನಿರಾಣಿ, ಬಿ.ಶ್ರೀರಾಮುಲು, ಸುನಿಲ್‌ ಕುಮಾರ್‌ ಭಾರೀ ಕಸರತ್ತು ನಡೆಸಿದ್ದಾರೆ.

ಪಕ್ಷದ ರಾಜ್ಯ ಉಸ್ತುವಾರಿ, ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಹರಿಶ್ಚಂದ್ರ ದ್ವಿವೇದಿ ನೀಡಿರುವ ವರದಿ ಆಧರಿಸಿ ದೆಹಲಿ ವರಿಷ್ಠರು ಮಹತ್ವದ ತೀರ್ಮಾನ ಕೈಗೊಳ್ಳಲಿದ್ದಾರೆ.

ವರಿಷ್ಠರ ಸರಣಿ ಸಭೆ

ವಿಜಯೇಂದ್ರ ಅವರನ್ನು ಮುಂದುವರೆಸಬೇಕೇ ಅಥವಾ ಬೇರೆಯವರನ್ನು ತರಬೇಕೇ ಎಂಬ ಬಗ್ಗೆ ಬಿಜೆಪಿ ವರಿಷ್ಠರು ಸರಣಿ ಸಭೆಗಳನ್ನು ನಡೆಸಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಆಕಾಂಕ್ಷಿಗಳು ದೆಹಲಿ ದಂಡಯಾತ್ರೆ ನಡೆಸಿದ್ದಾರೆ.

ಇದರ ನಡುವೆ ಆರ್‌ಎಸ್‌ಎಸ್‌ ಸಕ್ರಿಯ ಕಾರ್ಯಕರ್ತರೊಬ್ಬರಿಗೆ ಈ ಬಾರಿ ಅವಕಾಶ ಮಾಡಿಕೊಡಬೇಕೆಂದು ಟೆಂಗಿನಕಾಯಿ ಹೆಸರನ್ನು ಮುನ್ನಲೆಗೆ ತಂದಿದೆ.

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಪಕ್ಷ ತೊರೆದು ಕಾಂಗ್ರೆಸ್‌ ಚಿನ್ಹೆಯಡಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು.

ಶೆಟ್ಟರ್‌ ವಿರುದ್ಧ ಜಯ

ಈ ಸಂದರ್ಭದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿದ್ದ ಟೆಂಗಿನಕಾಯಿ ಅವರನ್ನು ಶೆಟ್ಟರ್‌ ವಿರುದ್ಧ ಬಿಜೆಪಿ ಕಣಕ್ಕಿಳಿಸಿತ್ತು, ಭಾರೀ ಅಂತರದಿಂದ ಶೆಟ್ಟರ್‌ ಅವರನ್ನು ಪರಾಭವಗೊಳಿಸಿ ಕ್ಷೇತ್ರವನ್ನು ಬಿಜೆಪಿಗೆ ಉಳಿಸಿಕೊಟ್ಟಿದ್ದರು. ಇದೀಗ ಮಹೇಶ್‌ ಟೆಂಗಿನಕಾಯಿ ಅವರಿಗೆ ಪಕ್ಷದ ರಾಜ್ಯ ನಾಯಕತ್ವ ವಹಿಸಲು ಆರ್‌ಎಸ್‌ಎಸ್‌ ಮುಂದಾಗಿದೆ.

ಅಲ್ಲದೆ, ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್.‌ ಆಶೋಕ್‌ ಅವರಿಗಿಂತ ಉತ್ತಮ ರೀತಿಯಲ್ಲಿ ವಿಷಯಗಳನ್ನು ಪ್ರಸ್ತಾಪ ಮಾಡಿ ರಾಜ್ಯ ಸರಕಾರವನ್ನು ಟೆಂಗಿನಕಾಯಿ ಇಕ್ಕಿಟ್ಟಿಗೆ ಸಿಲುಕಿಸಿದ್ದರು. ಇದು ಅವರಿಗೆ ಪ್ಲಸ್‌ ಆಗಿದೆ.

Tags: ckcknewsnowkarnatakaMahesh Tenginkainew state bjp president
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ರಾಜ್ಯ ಬಿಜೆಪಿಗೆ ಮೇಜರ್‌ ಸರ್ಜರಿ! ಯಾರು ಎಲ್ಲೆಲ್ಲಿಗೆ?

ರಾಜ್ಯ ಬಿಜೆಪಿಗೆ ಮೇಜರ್‌ ಸರ್ಜರಿ! ಯಾರು ಎಲ್ಲೆಲ್ಲಿಗೆ?

by cknewsnow desk
November 22, 2026
0

ಆರ್.‌ ಅಶೋಕ್‌, ವಿಜಯೇಂದ್ರ ಸ್ಥಾನ ಪಲ್ಲಟ ಖಚಿತ, ಸುನೀಲ್‌ ಕುಮಾರ್‌ʼಗೆ ಆಯಕಟ್ಟಿನ ಜಾಗ ಗ್ಯಾರಂಟಿ

ಸ್ಟಿಂಗ್‌ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಿ, ಪೊಲೀಸ್‌ ಮಹಾನಿರ್ದೇಶಕರಿಗೆ ಗೃಹ ಇಲಾಖೆ ಸೂಚನೆ

ಸ್ಟಿಂಗ್‌ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಿ, ಪೊಲೀಸ್‌ ಮಹಾನಿರ್ದೇಶಕರಿಗೆ ಗೃಹ ಇಲಾಖೆ ಸೂಚನೆ

by cknewsnow desk
November 22, 2026
0

ಪವರ್ ಟಿವಿ ಮಾಲೀಕ, ಸ್ಟಿಂಗ್ ಆಪರೇಷನ್ ನಲ್ಲಿ ಭಾಗಿಯಾದ ವಾಹಿನಿ ನೌಕರರ ವಿರುಧ್ಧ ಕ್ರಮಕ್ಕೆ ಸೂಚನೆ; ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ...

ಸೋನಿಯಾ ಗಾಂಧಿ ಪುಸ್ತಕ ಖರೀದಿಗೆ ರಾಜಕೀಯ ಆಸಕ್ತರು

ಸಿಂಪ್ಲಿ ಸೋನಿಯಾ, ಒಮ್ಮೆ ಓದಿಬಿಡಿ

by cknewsnow desk
November 20, 2026
0

ಬಿಲಾಂಗಿಂಗ್ : ಎ ಜರ್ನಿ ಆಫ್ ಲವ್ (Belonging: A Journey of Love) ಕೃತಿ ವಿಮರ್ಶೆ

ಗ್ರಾಮೀಣ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದೃಢೀಕರಣ

ಗ್ರಾಮೀಣ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದೃಢೀಕರಣ

by cknewsnow desk
November 18, 2026
0

ಇನ್ನು ಮುಂದೆ ಅಂಗೈನಲ್ಲಿ ಆಸ್ತಿ ದಾಖಲೆ

Belonging: A Journey of Love

ಸೋನಿಯಾ ಗಾಂಧಿ ಆತ್ಮಚರಿತ್ರೆ #BelongingA JourneyofLove ಓದಲ್ಲ

by cknewsnow desk
November 18, 2026
0

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿಕೆ

ಕಾವೇರಿ ಬಿಕ್ಕಟ್ಟು; ಮೋದಿ ಮಧ್ಯಪ್ರವೇಶಕ್ಕೆ ಹೆಚ್.ಡಿ.ದೇವೇಗೌಡರ ಒತ್ತಾಯ

ಕಾವೇರಿ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ದೇವೇಗೌಡರ ಪತ್ರ

by cknewsnow desk
November 17, 2026
0

ಮೇಕೆದಾಟು ಯೋಜನೆಗೆ ಅನುಮತಿ ನೀಡಿ, ಕಾವೇರಿ ನ್ಯಾಯಮಂಡಳಿ ತೀರ್ಪು ಮರು ಪರಿಶೀಲಿಸಿ ಎಂದು ಆಗ್ರಹ

Leave a Reply Cancel reply

Your email address will not be published. Required fields are marked *

Recommended

ಕಾಂಗ್ರೆಸ್‌ ಸೇರಿದ ಸಿಆರ್‌ ಮನೋಹರ್, ಮಾಲೂರು ನಾಗರಾಜ್‌

ಕಾಂಗ್ರೆಸ್‌ ಸೇರಿದ ಸಿಆರ್‌ ಮನೋಹರ್, ಮಾಲೂರು ನಾಗರಾಜ್‌

5 years ago
ಸಿಇಟಿ ಫಲಿತಾಂಶ 2021: ಇತಿಹಾಸ ಸೃಷ್ಟಿಸಿದ ಮೈಸೂರು ವಿದ್ಯಾರ್ಥಿ

ಸಿಇಟಿ ಫಲಿತಾಂಶ 2021: ಇತಿಹಾಸ ಸೃಷ್ಟಿಸಿದ ಮೈಸೂರು ವಿದ್ಯಾರ್ಥಿ

5 years ago

Popular News

  • ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

    ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

    0 shares
    Share 0 Tweet 0
  • ರಾಜ್ಯ ಬಿಜೆಪಿಗೆ ಮೇಜರ್‌ ಸರ್ಜರಿ! ಯಾರು ಎಲ್ಲೆಲ್ಲಿಗೆ?

    0 shares
    Share 0 Tweet 0
  • ಸ್ಟಿಂಗ್‌ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಿ, ಪೊಲೀಸ್‌ ಮಹಾನಿರ್ದೇಶಕರಿಗೆ ಗೃಹ ಇಲಾಖೆ ಸೂಚನೆ

    0 shares
    Share 0 Tweet 0
  • ಸಿಂಪ್ಲಿ ಸೋನಿಯಾ, ಒಮ್ಮೆ ಓದಿಬಿಡಿ

    0 shares
    Share 0 Tweet 0
  • ಗ್ರಾಮೀಣ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದೃಢೀಕರಣ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

ಜಗದೀಶ್‌ ಶೆಟ್ಟರ್‌ ಸೋಲಿಸಿದ್ದ ಶಾಸಕ ಮಹೇಶ್‌ ಟೆಂಗಿನಕಾಯಿಗೆ ಸಿಗುತ್ತಾ ರಾಜ್ಯ ಬಿಜೆಪಿ ಸಾರಥ್ಯ?

November 22, 2026
ರಾಜ್ಯ ಬಿಜೆಪಿಗೆ ಮೇಜರ್‌ ಸರ್ಜರಿ! ಯಾರು ಎಲ್ಲೆಲ್ಲಿಗೆ?

ರಾಜ್ಯ ಬಿಜೆಪಿಗೆ ಮೇಜರ್‌ ಸರ್ಜರಿ! ಯಾರು ಎಲ್ಲೆಲ್ಲಿಗೆ?

November 22, 2026
ಸ್ಟಿಂಗ್‌ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಿ, ಪೊಲೀಸ್‌ ಮಹಾನಿರ್ದೇಶಕರಿಗೆ ಗೃಹ ಇಲಾಖೆ ಸೂಚನೆ

ಸ್ಟಿಂಗ್‌ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಿ, ಪೊಲೀಸ್‌ ಮಹಾನಿರ್ದೇಶಕರಿಗೆ ಗೃಹ ಇಲಾಖೆ ಸೂಚನೆ

November 22, 2026
ಸೋನಿಯಾ ಗಾಂಧಿ ಪುಸ್ತಕ ಖರೀದಿಗೆ ರಾಜಕೀಯ ಆಸಕ್ತರು

ಸಿಂಪ್ಲಿ ಸೋನಿಯಾ, ಒಮ್ಮೆ ಓದಿಬಿಡಿ

November 20, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ