• About
  • Advertise
  • Careers
  • Contact
Thursday, November 26, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home BUSINESS

ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ

cknewsnow desk by cknewsnow desk
November 25, 2026
in BUSINESS, NATION, NEWS IN USE, TECH
Reading Time: 1 min read
0
ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ
913
VIEWS
FacebookTwitterWhatsuplinkedinEmail

ಹೆಚ್.ಡಿ. ಕುಮಾರಸ್ವಾಮಿ ಅವರ ಕೇಂದ್ರದ ಬೃಹತ್ ಕೈಗಾರಿಕೆ ಸಚಿವಾಲಯದ ಯೋಜನೆಗೆ ಸಂಪುಟ ಅನುಮೋದನೆ

ಮುಖ್ಯಾಂಶಗಳು

•₹11000 ಕೋಟಿ ಮೊತ್ತದ ಬೃಹತ್ ಯೋಜನೆ

•ನಿರ್ಮಾಣ, ಮೂಲಸೌಕರ್ಯ ಉಪಕರಣಗಳ ಕ್ಷೇತ್ರದಲ್ಲಿ ಸ್ವಾವಲಂಬನೆ

•ಆಮದು ಅವಲಂಬನೆ ತಗ್ಗಿಸಲು ಪ್ರಧಾನಿಗಳ ದಿಟ್ಟ ಹೆಜ್ಜೆ

•ರೈಲ್ವೆ, ರಸ್ತೆ, ಗಣಿಗಾರಿಕೆ, ಬಂದರು ಇನ್ನಿತರ ಸೌಲಭ್ಯ ನಿರ್ಮಾಣಕ್ಕೆ ಆನೆಬಲ

ನವದೆಹಲಿ: ಭಾರತದ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉದ್ಯಮಕ್ಕೆ ಕೇಂದ್ರದ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಪರಿವರ್ತನಾತ್ಮಕ ಹೆಜ್ಜೆ ಇರಿಸಿದ್ದು, ಪ್ರಧಾನಿಗಳ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ (Construction and Infrastructure Equipment-CIE) ಉತ್ಪಾದನಾ ಪೂರಕ ವ್ಯವಸ್ಥೆಯನ್ನು ಬಲಪಡಿಸಲು ₹11,000 ಕೋಟಿ ಮೌಲ್ಯದ ಬೃಹತ್ ಯೋಜನೆಗೆ ಅನುಮೋದನೆ ನೀಡಿದೆ.

ಈ ಬಗ್ಗೆ ಪ್ರಧಾನಿಗಳಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿರುವ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಬೃಹತ್ ಕೈಗಾರಿಕಾ ಸಚಿವಾಲಯದ ವ್ಯಾಪ್ತಿಯಲ್ಲಿ ಅನುಷ್ಠಾನಕ್ಕೆ ಬರಲಿರುವ ಈ ಯೋಜನೆಯು ರಾಷ್ಟ್ರದ ನಿರ್ಮಾಣ ಮತ್ತು ಮೂಲಭೂತ ಸೌಕರ್ಯಕ್ಕೆ ಹೊಸ ಆಯಾಮ ನೀಡಲಿದೆ ಎಂದಿದ್ದಾರೆ.

ಭಾರತದ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉದ್ಯಮಕ್ಕೆ ಒಂದು ಐತಿಹಾಸಿಕ ಮೈಲಿಗಲ್ಲು.

ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ (CIE) ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ₹11,000 ಕೋಟಿ ಮೌಲ್ಯದ ಬೃಹತ್ ಯೋಜನೆಗೆ… pic.twitter.com/0g7WRnImK7

— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) November 25, 2026

ಈ ಯೋಜನೆಯು ದೇಶೀಯ ಉತ್ಪಾದನೆಯನ್ನು ಬಲಪಡಿಸುತ್ತದೆ, ಸ್ಥಳೀಯ ಉತ್ಪಾದನೆಯನ್ನು (localization) ವೇಗಗೊಳಿಸುತ್ತದೆ. ಜತೆಗೆ ಸುಧಾರಿತ ತಂತ್ರಜ್ಞಾನವನ್ನು ಉತ್ತೇಜಿಸುತ್ತದೆ ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಜತೆಗೆ, ‘ಆತ್ಮನಿರ್ಭರ’ ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿರುವ ಬಲಿಷ್ಠ ಭಾರತದತ್ತ ಇದು ಒಂದು ಬೃಹತ್ ಹೆಜ್ಜೆಯಾಗಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತದ ಆರ್ಥಿಕ ಪ್ರಗತಿಗೆ ಮೂಲಸೌಕರ್ಯ ಅಭಿವೃದ್ಧಿ ಬಹಳ ಮುಖ್ಯವಾಗಿದ್ದು; ರಸ್ತೆ, ರೈಲ್ವೆ, ಮೆಟ್ರೋ, ವಿಮಾನ ನಿಲ್ದಾಣ, ಬಂದರು, ಗಣಿಗಾರಿಕೆ, ಜಲಸಂಪನ್ಮೂಲ ಹಾಗೂ ಇಂಧನ ಕ್ಷೇತ್ರಗಳ ಅಭಿವೃದ್ಧಿಗೆ ಅತ್ಯಾಧುನಿಕ ಯಂತ್ರೋಪಕರಣಗಳ ಅತ್ಯಗತ್ಯವನ್ನು ಪೂರೈಸುವುದು ಈ ಯೋಜನೆಯ ಉದ್ದೇಶ. ಆದರೆ ಇಂತಹ ಪ್ರಮುಖ ಯಂತ್ರೋಪಕರಣಗಳು ಮತ್ತು ಅವುಗಳ ಬಿಡಿಭಾಗಗಳಿಗಾಗಿ ಭಾರತ ಇಂದಿಗೂ ವಿದೇಶಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿದೆ. ಈ ಅವಲಂಬನೆಯನ್ನು ಕಡಿಮೆ ಮಾಡಿ, ಭಾರತವನ್ನೇ ಜಾಗತಿಕ ಮಟ್ಟದ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಈ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

2026-27ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಈ ಯೋಜನೆಗೆ ಒಟ್ಟು ₹11,000 ಕೋಟಿ ಅನುದಾನವನ್ನು ನಿಗದಿಪಡಿಸಲಾಗಿದೆ. ಎಂಟು ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳ್ಳಲಿರುವ ಈ ಯೋಜನೆಯಡಿ ₹10,515 ಕೋಟಿಯನ್ನು ದೇಶೀಯ ಉತ್ಪಾದಕರಿಗೆ ಮಾರಾಟ ಆಧರಿತ ಪ್ರೋತ್ಸಾಹಧನವಾಗಿ ನೀಡಲು ಉದ್ದೇಶಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಭಾರತ ಜಗತ್ತಿನ 3ನೇ ಅತಿದೊಡ್ಡ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಮಾರುಕಟ್ಟೆಯಾಗಿದೆ. ಆದರೂ ಈ ಕ್ಷೇತ್ರದಲ್ಲಿ ದೇಶೀಯ ಉತ್ಪಾದನೆಯ ಪಾಲು ಸರಾಸರಿ ಶೇ.50ರಷ್ಟಿದೆ. ಇದಕ್ಕೆ ಹೋಲಿಸಿದರೆ ಚೀನಾದಲ್ಲಿ ಶೇ.95 ಮತ್ತು ಜಪಾನ್‌ನಲ್ಲಿ ಶೇ.85ರಷ್ಟು ಸ್ಥಳೀಯ ಉತ್ಪಾದನಾ ಪಾಲಿದೆ. ಅಂದರೆ ಭಾರತದಲ್ಲಿ ಬೇಡಿಕೆ ಮತ್ತು ಮಾರುಕಟ್ಟೆ ದೊಡ್ಡದಿದ್ದರೂ, ಅಗತ್ಯವಿರುವ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಬಿಡಿಭಾಗಗಳ ಉತ್ಪಾದನೆಯಲ್ಲಿ ಇನ್ನೂ ಸಾಕಷ್ಟು ಪ್ರಗತಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನಿಗಳ ದೂರದೃಷ್ಟಿಯ ಫಲವಾಗಿ ರೂಪಗೊಂಡಿರುವ ಯೋಜನೆ ನಿರ್ಮಾಣ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಅಗೆಯುವ ಯಂತ್ರಗಳು, ಸುರಂಗ ಕೊರೆಯುವ ಯಂತ್ರಗಳು, ಕ್ರೇನ್‌ಗಳು, ಲೋಡರ್‌ಗಳು, ಎಂಜಿನ್‌ಗಳು, ಹೈಡ್ರಾಲಿಕ್ ವ್ಯವಸ್ಥೆಗಳು ಮತ್ತು ಟ್ರಾನ್ಸ್‌ಮಿಷನ್‌ಗಳಂತಹ ಪ್ರಮುಖ ಉಪಕರಣಗಳ ದೇಶೀಯ ಉತ್ಪಾದನೆಗೆ ಈ ಯೋಜನೆ ಉತ್ತೇಜನ ನೀಡಲಿದೆ. ಇವು ರಸ್ತೆ, ರೈಲ್ವೆ, ಮೆಟ್ರೋ, ಗಣಿಗಾರಿಕೆ, ಬಂದರು ಮತ್ತು ಇಂಧನ ಕ್ಷೇತ್ರಗಳ ಅಭಿವೃದ್ಧಿಗೆ ಅತ್ಯಂತ ಅಗತ್ಯವಾದ ಉಪಕರಣಗಳಾಗಿವೆ. ಭಾರತದಲ್ಲಿ ಈಗ ಮೆಟ್ರೋ ರೈಲು ಯೋಜನೆಗಳು, ರಾಷ್ಟ್ರೀಯ ಹೆದ್ದಾರಿಗಳು, ಸುರಂಗ ಮಾರ್ಗಗಳು, ಬಂದರುಗಳು ಮತ್ತು ಗಣಿಗಾರಿಕೆ ಯೋಜನೆಗಳು ವೇಗವಾಗಿ ವಿಸ್ತರಿಸುತ್ತಿವೆ. ಇಂತಹ ಯೋಜನೆಗಳಿಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ದೇಶದಲ್ಲಿಯೇ ಉತ್ಪಾದಿಸಲು ಸಾಧ್ಯವಾದರೆ ನಿರ್ಮಾಣ ವೆಚ್ಚವನ್ನು ನಿಯಂತ್ರಿಸುವುದರ ಜತೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಭಾರತ ಬಲಿಷ್ಠವಾಗಬಹುದು ಎಂಬುದು ನರೇಂದ್ರ ಮೋದಿ ಅವರ ಆಶಯವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಕೇಂದ್ರ ಸಂಪುಟ ಅನುಮೋದನೆ ನೀಡಿರುವ ನಿರ್ಮಾಣ ಮತ್ತು ಉತ್ಪಾದನಾ ಸಲಕರಣೆಗಳ ಉತ್ತೇಜನ ಯೋಜನೆ, ರಾಷ್ಟ್ರ ನಿರ್ಮಾಣಕ್ಕೆ ಬಹುದೊಡ್ಡ ಕೊಡುಗೆ ನೀಡಲಿದೆ. ಎಲ್ಲಾ ವಲಯಗಳಲ್ಲೂ, ಅತಿ ಮುಖ್ಯವಾಗಿ ಮೂಲಸೌಕರ್ಯ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಬೇಕು ಎಂಬುದು ಪ್ರಧಾನಿಗಳಾದ ನರೇಂದ್ರ ಮೋದಿ ಅವರ ದೃಢಸಂಕಲ್ಪವಾಗಿದೆ. ಅದರ ಭಾಗವಾಗಿ ನಾವು ಅವಿರತವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

ಹೆಚ್.ಡಿ.ಕುಮಾರಸ್ವಾಮಿ

Tags: chinaCIEConstruction and Infrastructure Equipmenthd kumaraswamyindianarendra modinew policy for Construction and equipmentunion cabinet approval
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

by cknewsnow desk
November 26, 2026
0

ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ ಜಾರಿ ನಿರ್ದೇಶನಾಲಯ

ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!

ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!

by cknewsnow desk
November 25, 2026
0

ರಾಜ್ಯ ಸರಕಾರದ ದ್ವಂದ್ವ ನೀತಿ; ಆರ್. ಅಶೋಕ್ ಕಟು ಟೀಕೆ

ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

by cknewsnow desk
November 25, 2026
0

ಧಾರವಾಡ ಜಿ.ಪಂ ಸದಸ್ಯ ಯೋಗೇಶ್‌ ಗೌಡ ಕೊಲೆ

ಕನ್ನಡಿಗರ ಕಣ್ಣೀರು ಹರಿದರೂ ಚಿಂತೆ ಇಲ್ಲ, ತಮಿಳುನಾಡಿಗೆ ಕಾವೇರಿ ಹರಿಯಲಿ ಎನ್ನುತ್ತಿದೆ ಕಾಂಗ್ರೆಸ್

ಕಾವೇರಿ ವಿಚಾರದಲ್ಲಿ ಕರ್ನಾಟಕ ಮಾಡಿದ ತಪ್ಪುಗಳು

by cknewsnow desk
November 25, 2026
0

ರಾಜಕೀಯ ಇಚ್ಛಾಶಕ್ತಿ ಕೊರತೆ; ತಮಿಳುನಾಡು ಎದುರು ರಾಜ್ಯಕ್ಕೆ ನಿರಂತರ ವೈಫಲ್ಯ

ನವೆಂಬರ್ 16ರಿಂದ ಶಬರಿಮಲೆ ಮಂಡಲೋತ್ಸವ; ಕೋವಿಡ್ ನೆಗೆಟೀವ್ ಪತ್ರ ಇದ್ದರೆ ಮಾತ್ರ ಅಯ್ಯಪ್ಪ ದರ್ಶನ

ಅಯ್ಯಪ್ಪ ಭಕ್ತರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ; ಪಂಪಾ ನದಿ ಮಲೀನ ಮಾಡಿದರೆ ₹5000 ದಂಡ

by cknewsnow desk
November 24, 2026
0

ಆರೋಗ್ಯಕ್ಕೆ ಸಂಬಂಧಿಸಿ ಸಲಹೆ; ವಿಮಾನ ಕ್ಯಾಬಿನ್ ನಲ್ಲಿ ಇರುಮುಡಿ ಕಟ್ಟು ಒಯ್ಯಲು ಅನುಮತಿ

ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ

ಹೂವಿನಂಥ ಹೃದಯಿ!; HDK ಹೀಗೆ ಹೇಳಿದ್ದು ಯಾರಿಗೆ?

by cknewsnow desk
November 23, 2026
0

ಆಶಾ ಕಾರ್ಯಕರ್ತೆಯರ ಪ್ರತಿಭಟನೆ ತಾರಕಕ್ಕೆ; ರಾಜ್ಯ ಸರಕಾರಕ್ಕೆ ಇಕ್ಕಟ್ಟು

Next Post
KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

Leave a Reply Cancel reply

Your email address will not be published. Required fields are marked *

Recommended

ಗುಡಿಬಂಡೆಯಲ್ಲಿ ಹುಲಿ ದಿನಾಚರಣೆ

ಗುಡಿಬಂಡೆಯಲ್ಲಿ ಹುಲಿ ದಿನಾಚರಣೆ

3 years ago
ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆ; ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಬಿಜೆಪಿ ಅತಿರಥಮಹಾರಥರ ಡೇ ಔಟ್‌

ವಿದೇಶದಲ್ಲೇ ಓದಿ; ಆದರೆ, ಭಾರತಕ್ಕೆ ಸೇವೆ ಮೀಸಲಿಡಿ: ಹೊಸ ವೈದ್ಯರಿಗೆ ಪಾಠ ಮಾಡಿದ ಡಾಕ್ಟರ್

6 years ago

Popular News

  • KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

    KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

    0 shares
    Share 0 Tweet 0
  • ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ

    0 shares
    Share 0 Tweet 0
  • ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!

    0 shares
    Share 0 Tweet 0
  • ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

    0 shares
    Share 0 Tweet 0
  • ಕಾವೇರಿ ವಿಚಾರದಲ್ಲಿ ಕರ್ನಾಟಕ ಮಾಡಿದ ತಪ್ಪುಗಳು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

KPSC ಅಕ್ರಮಕ್ಕೆ ಟ್ವಿಸ್ಟ್; ಪೊಲೀಸರಿಗೆ ದೂರು ಕೊಟ್ಟ ED

November 26, 2026
ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ

ನಿರ್ಮಾಣ, ಮೂಲಸೌಕರ್ಯ ಉಪಕರಣ ಉದ್ಯಮಕ್ಕೆ ಕೇಂದ್ರದಿಂದ ₹11,000 ಕೋಟಿ ಯೋಜನೆ

November 25, 2026
ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!

ಕಾಂಗ್ರೆಸ್ಸಿಗರ ಗಂಜಿ ಕೇಂದ್ರಕ್ಕೆ ₹2,000 ಕೋಟಿ; ಆಶಾ ಕಾರ್ಯಕರ್ತರಿಗೆ ₹480 ಕೊಡಲು ಹಣವಿಲ್ಲ!

November 25, 2026
ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

ಹೈಕೋರ್ಟ್‌ ಆದೇಶ ರದ್ದು: 2 ವಾರದಲ್ಲಿ ಶರಣಾಗಲು ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಆದೇಶ

November 25, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ