• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಮಾಗಡಿ ತಾಲ್ಲೂಕಿನಲ್ಲಿ ಇದೆಯಾ ಹಕ್ಕ-ಬುಕ್ಕರ ಸಮಾಧಿ? ಅವರ ವಂಶಸ್ಥರು ಇನ್ನೂ ಇದ್ದಾರಾ?

cknewsnow desk by cknewsnow desk
April 18, 2021
in EDITORS'S PICKS
Reading Time: 1 min read
0
ಮಾಗಡಿ ತಾಲ್ಲೂಕಿನಲ್ಲಿ ಇದೆಯಾ ಹಕ್ಕ-ಬುಕ್ಕರ ಸಮಾಧಿ? ಅವರ ವಂಶಸ್ಥರು ಇನ್ನೂ ಇದ್ದಾರಾ?
940
VIEWS
FacebookTwitterWhatsuplinkedinEmail

ವಾಲ್ಮೀಕಿ ನಾಯಕ ಮಹಾಸಭಾದಿಂದ ವಿಜಯನಗರ ಸಂಸ್ಥಾಪನಾ ದಿನಾಚರಣೆ

ಕೆಲವರು ಹಕ್ಕ-ಹುಕ್ಕರನ್ನು ಹೈಜಾಕ್ ಮಾಡುವ ಕುಚೋದ್ಯ ನಡೆಸುತ್ತಿದ್ದಾರೆ, ಪರವಾಗಿಲ್ಲ. ಇತಿಹಾಸವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ.


ಬೆಂಗಳೂರು: ವಿಜಯನಗರ ಸಂಸ್ಥಾನನ ವಂಶಸ್ಥರು ಇನ್ನೂ ಇದ್ದಾರೆ. ಅವರೆಲ್ಲ ವಾಲ್ಮೀಕಿ ನಾಯಕ ಸಮಾಜದವರು. ಅವರುಗಳ ಈಗಿನ ಸ್ಥಿತಿಗತಿಯ ಬಗ್ಗೆ ಸರಕಾರ ಅಧ್ಯಯನ ನಡೆಸಬೇಕಿದೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಆಗ್ರಹಿಸಿದೆ.

ಬೆಂಗಳೂರಿನ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದಲ್ಲಿಂದು ವಿಜಯನಗರ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು. ಈ ವೇಳೆ ಹಕ್ಕ-ಬುಕ್ಕರು, ಶ್ರೀಕೃಷ್ಣದೇವರಾಯ, ಮದಕರಿ ನಾಯಕ, ಆದಿಕವಿ ಮಹರ್ಷಿ ವಾಲ್ಮೀಕಿ, ಎಲ್.ಜಿ.ಹಾವನೂರರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಕೆಂಪರಾಮಯ್ಯ ಹಾಗೂ ಕಾರ್ಯದರ್ಶಿ ಡಾ. ಡಿ.ಕೆ.ಸಣ್ಣನಾಯಕ್ ಈ ಒತ್ತಾಯ ಮಾಡಿದರು.

ವಾಲ್ಮೀಕಿ ನಾಯಕ ಸಮುದಾಯಕ್ಕೆ ತಮ್ಮದೇ ಆದ ಇತಿಹಾಸ ಇದೆ. ವಿಜಯನಗರ, ಕೆಳದಿ, ಚಿತ್ರದುರ್ಗದ ಮದಕರಿ ಕೋಟೆ ಹೀಗೆ ಹಲವು ಸಂಸ್ಥಾನಗಳನ್ನು ಕಟ್ಟಿ ರಾಜ್ಯಭಾರ ಮಾಡಿದ ಕೀರ್ತಿ ವಾಲ್ಮೀಕಿ ಸಮುದಾಯಕ್ಕಿದೆ. ಅದೇ ರೀತಿ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಇಂದು ವಿಶ್ವಕ್ಕೇ ಮಾದರಿ ಗ್ರಂಥವಾಗಿದೆ. ಹಕ್ಕ-ಬುಕ್ಕರ ಬಗ್ಗೆ ಕೂಡ ಇನ್ನೂ ಸರಕಾರ ಸಂಶೋಧನೆ ನಡೆಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಕಾರ್ಯದರ್ಶಿ ಡಾ. ಡಿ.ಕೆ. ಸಣ್ಣನಾಯಕ್ ಮಾತನಾಡಿ, “ಹಕ್ಕ-ಬುಕ್ಕರು ಕೊನೆಯ ಕಾಲದಲ್ಲಿ ಮಾಗಡಿ ಬಳಿ ಬಂದು ನೆಲೆಸಿದ ಕುರುಹುಗಳಿವೆ. ಮಾಗಡಿ ಸಮೀಪದ ʼಕಲ್ಯಾʼ ಎಂಬ ಗ್ರಾಮದ ಬಳಿ ಹಕ್ಕ-ಬುಕ್ಕರ ಸಮಾಧಿ ಇದೆ ಎನ್ನಲಾಗುತ್ತಿದೆ. ಇದರ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಅವರು ಕೋರಿದರು.

ಹಕ್ಕ ಬುಕ್ಕರ ಹೈಜಾಕ್‌

ಮಹಾಸಭಾ ಕೋರ್ ಕಮಿಟಿ ಸದಸ್ಯರಾದ ರಮೇಶ್ ಹಿರೇಜಂಬೂರು ಮಾತನಾಡಿ, “ಹಕ್ಕ ಬುಕ್ಕರ ವಂಶಸ್ಥರ ಚರಿತ್ರೆ ನೋಡಿದರೆ ಇಬ್ಬರೂ ಸೋದರರೂ ವೀರಶೂರರು, ಜೊತೆಗೆ ಇವರು ವಾಲ್ಮೀಕಿ ಕುಡಿಗಳು ಎಂಬುದು ಸ್ಪಷ್ಟವಾಗುತ್ತಿದೆ. ಆದರೆ ಕೆಲವರು ಹಕ್ಕ-ಹುಕ್ಕರನ್ನು ಹೈಜಾಕ್ ಮಾಡುವ ಕುಚೋದ್ಯ ನಡೆಸುತ್ತಿದ್ದಾರೆ, ಪರವಾಗಿಲ್ಲ. ಇತಿಹಾಸವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಹಕ್ಕ ಬುಕ್ಕರು ಕೇವಲ ನಾಯಕ ಸಮುದಾಯಕ್ಕೆ ಮಾತ್ರ ಸೀಮಿತರಾದವರಲ್ಲ. ಎಲ್ಲ ಸಮುದಾಯದವರೂ ಆರಾಧಿಸುವ ವ್ಯಕ್ತಿತ್ವ ಅವರದ್ದು. ಆದರೆ ಹೈಜಾಕ್ ಮಾಡುವ ಕೆಲಸವನ್ನು ಮಾಡುತ್ತಿರುವುದು ಖಂಡನೀಯ. ಹಿರಿಯ ಸಂಶೋಧಕರಾದ ಚೆಂದ್ರಕಾಂತ್ ಬಿಜ್ಜರಗಿ ಹಾಗೂ ಮತ್ತೆ ಕೆಲವರು ಸಮಾಜದಲ್ಲಿ ತಪ್ಪು ಸಂದೇಶ ಸಾರಲು ಹೊರಟಿದ್ದಾರೆ. ಈಗಾಗಲೇ ಚಲನಚಿತ್ರ ಸಾಹಿತಿ, ನಿರ್ಮಾಪಕ ಡಾ. ರಾಧಾಕೃಷ್ಣ ಪಲ್ಲಕ್ಕಿ ಅವರ ಜೊತೆಗೆ ಚೆಂದ್ರಕಾಂತ್ ಬಿಜ್ಜರಗಿ ಮಾತನಾಡಿದ ಆಡಿಯೋ ವೈರಲ್ ಆಗಿದೆ. ಅವರಿಗೆ ಸರಿಯಾದ ಇತಿಹಾಸ ತಿಳಿಸುವ ಕೆಲಸವನ್ನು ರಾಧಾಕೃಷ್ಣ ಪಲ್ಲಕ್ಕಿ ಮಾಡಿದ್ದಾರೆ. ಆದರೆ ತಾವು ಹೇಳುವ ವಾದಕ್ಕೆ ಸರಿಯಾದ ಸಾಕ್ಷ್ಯ ಹಾಗೂ ಉತ್ತರ ನೀಡುವಲ್ಲಿ ಬಿಜ್ಜರಗಿ ವಿಫಲರಾಗಿದ್ದಾರೆ. ಇತಿಹಾಸ ಅರಿಯದವರು ಇತಿಹಾಸ ನಿರ್ಮಾಣ ಮಾಡುವುದು ಅಸಾಧ್ಯ” ಎಂದು ಹೇಳಿದರು.

ಅನಗತ್ಯವಾಗಿ ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡುವುದು ಬೇಡ. ಇಂದು ಇಡೀ ರಾಜ್ಯದಲ್ಲಿ ನಾಯಕ ಸಮುದಾಯ ವಿಜಯನಗರ ಸಂಸ್ಥಾಪನಾ ದಿನಾಚರಣೆ ಆಚರಿಸುತ್ತಿದೆ. ಇದು ಶ್ಲಾಘನೀಯ ಸಂಗತಿ. ನಾಯಕ ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಬೇಕು. ಆಗ ಮಾತ್ರ ಈ ರೀತಿಯ ಇತಿಹಾಸ ತಿರುಚುವವರಿಗೆ ತಕ್ಕ ಉತ್ತರ ನೀಡಲು ಸಾಧ್ಯ. ಇಷ್ಟು ದಿನ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರನ್ನ ಕಂಡೆ ಮಾರುದ್ದ ಓಡುತ್ತಿದ್ದವರೆಲ್ಲ ಈಗ ಮೀಸಲಾತಿಗಾಗಿ ತಾವೂ ಒತ್ತಾಯಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ ಈ ಮೂಲಕವಾದರೂ ಸಮಾಜದಲ್ಲಿ ಸಮಾನತೆ ಜಾರಿಯಾಗಲಿ. ಆದರೆ ಸರ್ಕಾರ ಹಕ್ಕ ಬುಕ್ಕರು, ಶ್ರೀಕೃಷ್ಣದೇವರಾಯ ಸೇರಿದಂತೆ ವಿಜಯನಗರ ಸಂಸ್ಥಾನದ ಇತಿಹಾಸವನ್ನು ಇನ್ನಷ್ಟು ಅಧ್ಯಯನ ನಡೆಸಬೇಕು. ತುಮಕೂರಿನ ಹುಲಿಕುಂಟೆ ಬಳಿ ಹಕ್ಕ-ಬುಕ್ಕರ ವಂಶಸ್ಥರು ಇದ್ದಾರೆಂಬ ಮಾತುಗಳಿವೆ. ಈಗಾಗಲೇ ಅದು ಸರ್ಕಾರದ ಗಮನಕ್ಕೂ ಬಂದಿದೆ. ಇಂತಹ ಸಂದರ್ಭದಲ್ಲಿ ಇದರ ಅಧ್ಯಯನ ನಡೆಸಬೇಕು. ವಿಜಯನಗರದ ಅಧಿದೇವತೆ ರಾಯಮ್ಮ. ರಾಯ ಎಂದರೆ ರಾಜ, ಅಮ್ಮ ಎಂದರೆ ಮಾತೆ. ರಾಯಮ್ಮ ಎಂದರೆ ರಾಜಮಾತೆ ಎಂದರ್ಥ. ಇದನ್ನೇ ಅನೇಕರು ತಪ್ಪಾಗಿ ಅರ್ಥೈಸಿ ತಮಗೆ ಬೇಕಾದ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ. ವಿಜಯನಗರದ ವಂಶಸ್ಥರ ಮನೆ ದೇವರ ದಾರಮಾದಲಿಂಗೇಶ್ವರ. ಈ ದೇವರು ಕೂಡ ಹುಲಿಕುಂಟೆ ಬಳಿ ಇದೆ. ಹಕ್ಕಬುಕ್ಕರ ನಂತರ ಅವರ ವಂಶಜರು ತುಮಕೂರು, ಬೆಂಗಳೂರು ಗ್ರಾಮಾಂತರ ಭಾಗಗಳಿಗೆ ಬಂದು ನೆಲೆಸಿದ ಕುರುಹುಗಳಿವೆ. ಇವುಗಳ ಬಗ್ಗೆ ಅಧ್ಯಯನ ನಡೆಸಬೇಕು. ವಾಲ್ಮೀಕಿ ಅಧ್ಯಯನ ಪೀಠಕ್ಕೆ ಸರ್ಕಾರ ಅಧ್ಯಕ್ಷರನ್ನು, ಪದಾಧಿಕಾರಿಗಳನ್ನು ನೇಮಕ ಮಾಡಿ ಇಂತಹವುಗಳ ಬಗ್ಗೆ ಅಧ್ಯಯನ ನಡೆಸಲು ಅನುವು ಮಾಡಿಕೊಡಬೇಕು. ಆ ಮೂಲಕ ಸಮಾಜಕ್ಕೆ ರಾಜ್ಯದ ಇತಿಹಾಸದ ನೈಜ ಸ್ಥಿತಿ ತಿಳಿಸುವ ಕೆಲಸ ಸರಕಾರದಿಂದಲೇ ಆಗಬೇಕು ಎಂದು ರಮೇಶ್ ಹಿರೇಜಂಬೂರು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಮಹಾಸಭಾ ಪದಾಧಿಕಾರಿಗಳಾದ ಸಿಂಗಾಪುರ ವೆಂಕಟೇಶ್, ಆರ್. ತಿಮ್ಮರಾಜು, ಜಿ. ನಾಗರಾಜು ಗಾಣದ ಹುಣಸೆ, ಹನುಮಂತಪ್ಪ ಕಟಿಗೇರ್ ಮುಂತಾದವರು ಉಪಸ್ಥಿತರಿದ್ದರು.

Tags: hakka bukkahampikarnatakast reservationvijayanagara empire
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಜೈಲಿನಿಂದ ಹೊರಬಂದ ಕೂಡಲೇ ಮೀಡಿಯಾ ಮುಂದೆ ಕುಳಿತ ಅಲ್ಲು ಅರ್ಜುನ್‌

ಜೈಲಿನಿಂದ ಹೊರಬಂದ ಕೂಡಲೇ ಮೀಡಿಯಾ ಮುಂದೆ ಕುಳಿತ ಅಲ್ಲು ಅರ್ಜುನ್‌

by cknewsnow desk
December 14, 2024
0

ಅರೆಸ್ಟ್ ಆದ 24 ಗಂಟೆಗಳಲ್ಲೇ ಜೈಲಿನಿಂದ ರಿಲೀಸ್; ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ ಪುಷ್ಪಾ - 2

ಉದ್ಯೋಗ & ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಸ

ಉದ್ಯೋಗ & ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಸ

by cknewsnow desk
July 23, 2024
0

ಪ್ರಧಾನಿ ಕನಸಿನ 'ವಿಕಸಿತ ಭಾರತ' ನಿರ್ಮಾಣಕ್ಕೆ ಶಕ್ತಿ ತುಂಬುವ ಬಜೆಟ್

ಹಾಸನ ಪೆನ್‍ಡ್ರೈವ್ ಪ್ರಕರಣ; ಅಶ್ಲೀಲ ವಿಡಿಯೋ ಲೀಕ್‌ ಹಿಂದೆ DCM ಡಿಕೆಶಿ ಕೈ ಚಳಕ

ಹಾಸನ ಪೆನ್‍ಡ್ರೈವ್ ಪ್ರಕರಣ; ಅಶ್ಲೀಲ ವಿಡಿಯೋ ಲೀಕ್‌ ಹಿಂದೆ DCM ಡಿಕೆಶಿ ಕೈ ಚಳಕ

by cknewsnow desk
May 6, 2024
0

ನಾಗಮಂಗಲದ ಎಲ್.‌ಆರ್.‌ಶಿವರಾಮೇಗೌಡ ಮಧ್ಯಸ್ಥಿಕೆ; ಮೊಬೈಲ್‌ ಸಂಭಾಷಣೆ ಆಡಿಯೋ ಬಿಡುಗಡೆ

ಶ್ರೀರಾಮ ನವಮಿ ಶುಭಾಶಯಗಳು

ಶ್ರೀರಾಮ ನವಮಿ ಶುಭಾಶಯಗಳು

by cknewsnow desk
April 17, 2024
0

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇದಸೇ | ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ || ಶ್ರೀ ರಾಮ ಜಾನಕೀನಾಥ ತಾಟಕಾಸುರ ಮರ್ದನ | ಇಕ್ಷ್ವಾಕುಕುಲಸಂಭೂತ ರಣಪಂಡಿತ ರಾಘವಃ...

ಪ್ರಕಾಶ್ ರೈ ಸಂಸ್ಥೆಗೆ ಸರಕಾರದ ಹಣ; ದಾರಿ ತಪ್ಪಿದ ಕಲಾವಿದ ಎಂದು ಕುಟುಕಿದ JDS

ಪ್ರಕಾಶ್ ರೈ ಸಂಸ್ಥೆಗೆ ಸರಕಾರದ ಹಣ; ದಾರಿ ತಪ್ಪಿದ ಕಲಾವಿದ ಎಂದು ಕುಟುಕಿದ JDS

by cknewsnow desk
April 16, 2024
0

ಕುಮಾರಸ್ವಾಮಿ ಅವರನ್ನು ದಾರಿ ತಪ್ಪಿದ ಮಗ ಎಂದ ನಟನಿಗೆ ತಿರುಗೇಟು ಕೊಟ್ಟ ದಳ

Next Post
CEN ಪೊಲೀಸರ ಭರ್ಜರಿ ಭೇಟೆ; ಚಿಕ್ಕಬಳ್ಳಾಪುರ, ಕೋಲಾರ ಕಡೆಯ ಮುಗ್ಧ ಯುವತಿಯರನ್ನು ಯಾಮಾರಿಸಿ ದಿಲ್ಲಿಯಲ್ಲಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಬಂಗಾರಪೇಟೆ  ಖತರ್ನಾಕ್‌ ಮಹಿಳೆ ಕೊನೆಗೂ ಅಂದರ್‌

CEN ಪೊಲೀಸರ ಭರ್ಜರಿ ಭೇಟೆ; ಚಿಕ್ಕಬಳ್ಳಾಪುರ, ಕೋಲಾರ ಕಡೆಯ ಮುಗ್ಧ ಯುವತಿಯರನ್ನು ಯಾಮಾರಿಸಿ ದಿಲ್ಲಿಯಲ್ಲಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಬಂಗಾರಪೇಟೆ ಖತರ್ನಾಕ್‌ ಮಹಿಳೆ ಕೊನೆಗೂ ಅಂದರ್‌

Leave a Reply Cancel reply

Your email address will not be published. Required fields are marked *

Recommended

ನಮ್ಮ ದೇಶದಲ್ಲೇ ತಯಾರಾದ ಕೊರೊನಾ ಲಸಿಕೆ ಕುರಿತು ಅಗೌರವ ಬೇಡ; ಭಾರತ್ ಬಯೋಟೆಕ್ ನಂಬಿಕೆಗೆ ಅರ್ಹವಾದ ಕಂಪನಿ ಎಂದ ಡಾ.ಕೆ.ಸುಧಾಕರ್

ಜನವರಿ 16ರಂದು ಲಸಿಕೆ ವಿತರಣೆ; ಕೊಟ್ಟ ಲಸಿಕೆ ಪಡೆಯಬೇಕು, ಅದೇ ಬೇಕು-ಇದೇ ಬೇಕೆಂದು ಡಿಮಾಂಡ್‌ ಮಾಡುವಂತಿಲ್ಲ

5 years ago
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲಿಗೆ ಡಜನ್‌+ ಕಾರಣಗಳು! ಮಮತಾ ಬ್ಯಾನರ್ಜಿ ಅವರನ್ನು ಮಣಿಸುವ ಭರದಲ್ಲಿ ಆಗುತ್ತಿದ್ದ ಡ್ಯಾಮೇಜ್‌ ಕಂಟ್ರೋಲ್‌ ಮಾಡಲಿಲ್ಲ ಬಿಜೆಪಿ!!

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲಿಗೆ ಡಜನ್‌+ ಕಾರಣಗಳು! ಮಮತಾ ಬ್ಯಾನರ್ಜಿ ಅವರನ್ನು ಮಣಿಸುವ ಭರದಲ್ಲಿ ಆಗುತ್ತಿದ್ದ ಡ್ಯಾಮೇಜ್‌ ಕಂಟ್ರೋಲ್‌ ಮಾಡಲಿಲ್ಲ ಬಿಜೆಪಿ!!

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ