Ra Na Gopala Reddy Bagepalli
ಬಾಗೇಪಲ್ಲಿ: ಈಗ ಎಲ್ಲಾ ಕಡೆ ಬಿಸಿಲಿನ ಆರ್ಭಟ ಜೋರಾಗಿದೆ. ಅರಣ್ಯದಲ್ಲಿ ಕಾಡು ಪ್ರಾಣಿಗಳಿಗೆ ಆಹಾರ ಮತ್ತು ಕುಡಿಯುವುದಕ್ಕೆ ನೀರು ಕೂಡ ಸರಿಯಾಗಿ ಸಿಗುತ್ತಿಲ್ಲ. ಬಿಸಿಲಿನ ಝಳಕ್ಕೆ ತತ್ತರಿಸಿ ಹೋಗಿರುವ ಕಾಡಿನ ಪ್ರಾಣಿಗಳು ನಾಡಿನತ್ತ ಹೆಜ್ಜೆ ಹಾಕುತ್ತಿವೆ.
ಮತ್ತೊಂದೆಡೆ ಬೀದಿ ಬದಿಯ ನಾಯಿಗಳು ಕಾಡಿನಲ್ಲಿರುವ ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿದ್ದು, ಇಂತಹದ್ದೇ ಒಂದು ಘಟನೆ ಬಾಗೇಪಲ್ಲಿ ಪಟ್ಟಣದ 7ನೇ ವಾರ್ಡ್ʼನಲ್ಲಿ ನಡೆದಿದ್ದು, ನಾಯಿಗಳ ದಾಳಿಗೆ ಹೆದರಿ ದಾರಿ ತಪ್ಪಿದ ಜಿಂಕೆಯನ್ನು ಸ್ಥಳೀಯರು ರಕ್ಷಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಬಳಿಕ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನೆರವಿನಿಂದ ಪರಗೋಡು ಸಾಲು ಮರದ ತಿಮ್ಮಕ್ಕ ಅರಣ್ಯಕ್ಕೆ ಅ ಜಿಂಕೆಯನ್ನು ಬಿಟ್ಟಿದ್ದಾರೆ.