ಬಾಗೇಪಲ್ಲಿ: ತಾಲೂಕಿನ ಚಿನ್ನೇಪಲ್ಲಿ ಕ್ರಾಸ್ ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಕಾಲೇಜು ವಿಧ್ಯಾರ್ಥಿಗಳು ದುರಂತ ಸಾವಿಗೀಡಾದ ಗುರುವಾರ ಘಟನೆ ನಡೆದಿದೆ.
ಚಿನ್ನೇಪಲ್ಲಿ ರೈತ ಕೃಷಿ ಚಟುವಟಿಕೆಗಾಗಿ ತಮ್ಮ ಜಮೀನಿನಲ್ಲಿ ಈ ಕೃಷಿ ಹೊಂಡವನ್ನು ನಿರ್ಮಿಸಿದ್ದರು.
ಈ ಕೃಷಿ ಹೊಂಡದ ಬಳಿಗೆ ಗುರುವಾರ ಮಧ್ಯಾಹ್ನ ಈಜಲು ಬಂದ ಬಾಗೇಪಲ್ಲಿ ಪಟ್ಟಣದ ಬ್ಲೂಮ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಯುವಕರು ಹೊಂಡದ ಮಣ್ಣಿನಲ್ಲಿ ಸಿಲುಕಿ ಪ್ರಾಣ ಬಿಟ್ಟಿದ್ದಾರೆ.
ಪಟ್ಟಣದ 3ನೇ ವಾರ್ಡ್‌ನ ಅಬ್ದುಲ್ ರಹೀಮ್ ಪುತ್ರ ಮಹಮ್ಮದ್ ಸುಹೇಲ್ (17), ಅದೇ ವಾರ್ಡ್ʼನ ಜಿಲಾನ್ ಬಾಷಾ ಅವರ ಪುತ್ರ ಅಫ್ರೀದ್ ಭಾಷಾ (17) ಈಜಲು ಕೃಷಿ ಹೊಂಡಕ್ಕೆ ಇಳಿದಿದ್ದಾರೆ. ಆದರೆ ಕೃಷಿ ಹೊಂಡದಲ್ಲಿ ಮಣ್ಣಿನಲ್ಲಿ ಸಿಲುಕಿ ಇಬ್ಬರೂ ಮೃತಪಟ್ಟಿದ್ದಾರೆ.
ಸುದ್ದಿ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ಧಾವಿಸಿದ ಬಾಗೇಪಲ್ಲಿ ಪಟ್ಟಣದ ತಾಲೂಕು ದಂಡಾಧಿಕಾರಿ ದಿವಾಕರ್, ಪೋಲಿಸ್ ಆರಕ್ಷಕ ವೃತ್ತ ನಿರೀಕ್ಷಿಕ ರಾಜು, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು.
ಜಿಲ್ಲೆಯಲ್ಲಿ ಕೃಷಿ ಹೊಂಡಗಳಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ಈ ಬಗ್ಗೆ ಕಳವಳ ವ್ಯಕ್ತವಾಗಿದೆ. ಬೇಸಿಗೆಯಲ್ಲಿ ಯುವಕರಲ್ಲಿ ಈಜಾಡುವ ಪ್ರವೃತ್ತಿ ಹೆಚ್ಚಾಗಿದ್ದು, ಲಾಕ್‌ಡೌನ್ ವೇಳೆಯಲ್ಲಿ ಇವರಿಬ್ಬರೂ ಹೊರಬಂದು ನೀರು ಪಾಲಾಗಿದ್ದಾರೆ.