• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home COVID-19

ಕೋವಿಡ್-19 ವಿರುದ್ಧದ ಹೋರಾಟಕ್ಕೆ ಆಯುರ್ವೇದದ ಬಲ; ಖೋಡೆ ಉದ್ಯಮ ಸಮೂಹದಿಂದ ವೈರಾನಾರ್ಮ್ ಅಭಿವೃದ್ಧಿ, ಎನ್/ಎಲ್ ಅನುಪಾತ ತಗ್ಗಿಸುವ ಪ್ರತಿರೋಧಕ

cknewsnow desk by cknewsnow desk
May 15, 2021
in COVID-19, NEWS IN USE, STATE
Reading Time: 1 min read
0
ಕೋವಿಡ್-19 ವಿರುದ್ಧದ ಹೋರಾಟಕ್ಕೆ ಆಯುರ್ವೇದದ ಬಲ; ಖೋಡೆ ಉದ್ಯಮ ಸಮೂಹದಿಂದ  ವೈರಾನಾರ್ಮ್ ಅಭಿವೃದ್ಧಿ, ಎನ್/ಎಲ್ ಅನುಪಾತ ತಗ್ಗಿಸುವ ಪ್ರತಿರೋಧಕ
918
VIEWS
FacebookTwitterWhatsuplinkedinEmail

ಅಪ್ಪಟ ನೈಸರ್ಗಿಕ ಗಿಡಮೂಲಿಕೆಗಳಿಂದ ಮಾಡಲಾಗಿದೆ / ವಿಕ್ಟೋರಿಯಾ ಆಸ್ಪತ್ರೆಯಲ್ಲಿ 250 ಕೋವಿಡ್ ಬಾಧಿತರ ಮೇಲೆ ಯಶಸ್ವಿ ಕ್ಲಿನಿಕಲ್ ಟ್ರಯಲ್

ಬೆಂಗಳೂರು: ಬೆಂಗಳೂರು ಮೂಲದ ಖೋಡೆ ಉದ್ಯಮ ಸಮೂಹವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ, ನಿಸರ್ಗ ಸಹಜ ಗಿಡಮೂಲಿಕೆಗಳನ್ನು ಬಳಸಿ ಅಭಿವೃದ್ಧಿಪಡಿಸಿದ ಆಯುಷ್ ಅನುಮೋದಿತ ಆಯುರ್ವೇದ ಔಷಧಿ ‘ವೈರಾನಾರ್ಮ್’ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ, ಖೋಡೆ ಸಮೂಹವು ಪರ್ಯಾಯ ಔಷಧ ಉದ್ಯಮ ಕ್ಷೇತ್ರವನ್ನು ಪ್ರವೇಶಿಸಿದೆ.

ಕ್ಯಾಪ್ಯೂಲ್ ರೂಪದಲ್ಲಿ ಲಭ್ಯವಿರುವ ‘ವೈರಾನಾರ್ಮ್’ ಅನ್ನು ಅಲ್ತಿಯಾ ಡಿ.ಆರ್.ಎಫ್, ಲೈಫ್ ಸೈನ್ಸಸ್ʼನ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಸುದೀರ್ಘಾವಧಿಯ 3ನೇ ಹಂತದ ಕ್ಲಿನಿಕಲ್ ಟ್ರಯಲ್ (ಚಿಕಿತ್ಸಾ ಪ್ರಯೋಗ)ಗೆ ಒಳಪಡಿಸಿದ ವಿಶಿಷ್ಟ ಆಯುರ್ವೇದ ಕ್ಯಾಪ್ಸೂಲ್ ಇದಾಗಿದೆ ಎಂದು ಖೋಡೆ ಉದ್ಯಮ ಸಮೂಹದ ಉಪಾಧ್ಯಕ್ಷ ಸ್ವಾಮಿ ಖೋಡೆ ಹೇಳಿದರು.

ಕ್ಲಿನಿಕಲ್ ಟ್ರಯಲ್ ಪರಿಣಾಮಕಾರಿ

ಕ್ಲಿನಿಕಲ್ ಟ್ರಯಲ್,ಗಳಲ್ಲಿ ಪರಿಣಾಮಕಾರಿ ಎಂದು ದೃಢಪಟ್ಟಿರುವ ‘ವೈರಾನಾರ್ಮ್’ ಅನ್ನು ಅಪೇಕ್ಷಿತ ಫಲಿತಾಂಶ ಪರೀಕ್ಷೆ ಹಾಗೂ ಸುರಕ್ಷತಾ ಅಧ್ಯಯನಗಳಿಗೆ ಒಳಪಡಿಸಲಾಗಿದೆ. ಇದು ದೇಹದಲ್ಲಿ ನ್ಯೂಟ್ರೋಫಿಲ್- ಲಿಂಫೋಸೈಟ್ ಅನುಪಾತವನ್ನು (ಆರೋಗ್ಯಕರ ವ್ಯಕ್ತಿಯಲ್ಲಿ ಎನ್.ಎಲ್.ಆರ್. ಮೌಲ್ಯಾಂಕವು 0.75 ರಿಂದ 3 ರ ಒಳಗೆ ಇರುತ್ತದೆ) ತಗ್ಗಿಸುವ ಮೂಲಕ ವೈರಾಣುಗಳ ಸಂಖ್ಯೆ ಹೆಚ್ಚುವುದನ್ನು ತಡೆಯುತ್ತದೆ. ಆದ್ದರಿಂದ, ಇದನ್ನು ರೋಗಲಕ್ಷಣವಿಲ್ಲದ ಹಾಗೂ ರೋಗಲಕ್ಷಣದೊಂದಿಗೆ ಅಲ್ಪ ಪ್ರಮಾಣದಿಂದ ಸಾಧಾರಣ ಪ್ರಮಾಣದವರೆಗಿನ ಕೋವಿಡ್ ಸೋಂಕಿತರಿಗೆ ಈಗಾಗಲೇ ನೀಡುತ್ತಿರುವ ಚಿಕಿತ್ಸೆಯ ಜೊತೆಗೆ ಹೆಚ್ಚುವರಿಯಾಗಿ ನೀಡಬಹುದು. ಅಲ್ಪ ಪ್ರಮಾಣದ ಸೋಂಕಿನ ಪ್ರಮಾಣವು ಸಾಧಾರಣ ಹಂತಕ್ಕೆ ಹೋಗದಂತೆ ತಡೆಯಲು ಇದು ಸಹಕಾರಿಯಾಗಿದೆ ಎಂದು ಈ ಔಷಧಿಯನ್ನು ಸೂತ್ರೀಕರಿಸಿರುವ ಡಾ.ಕೆ.ಜಿ.ಪದ್ಮನಾಭನ್ ವಿವರಿಸಿದರು.

ಮನುಷ್ಯನ ದೇಹವು ಕಾಯಿಲೆಯ ವಿರುದ್ಧ ತೋರುವ ‘ಜೀವಕೋಶ ಮಧ್ಯವರ್ತಿ ಪ್ರತಿರೋಧ’ವು ವೈರಾಣುಗಳ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದೀಗ ಅಭಿವೃದ್ಧಿಪಡಿಸಲಾಗಿರುವ ‘ವೈರಾನಾರ್ಮ್’, ವ್ಯಕ್ತಿಯ ‘ಜೀವಕೋಶ ಮಧ್ಯವರ್ತಿ ಪ್ರತಿರೋಧ’ವನ್ನು ಹೆಚ್ಚಿಸುವ ಮೂಲಕ ಬೇಗನೇ ಚೇತರಿಸಿಕೊಳ್ಳಲು ಹಾಗೂ ಸೋಂಕು ಹರಡುವುದನ್ನು ತಡೆಯಲು ಸಹಕರಿಸುತ್ತದೆ ಎಂದು ತಿಳಿಸಿದರು.

ಇದು, ಕೋವಿಡ್ ನ ಪ್ರಮುಖ ರೋಗಲಕ್ಷಣವಾದ ಕೆಮ್ಮಿನ ತೀವ್ರತೆ, ಅದರ ಅವಧಿ ಹಾಗೂ ಉಸಿರೆಳೆತವನ್ನು (ವೇಗದ ಉಸಿರಾಟವನ್ನು) ತಗ್ಗಿಸುತ್ತದೆ ಎಂಬುದು ಕ್ಲಿನಿಕಲ್ ಟ್ರಯಲ್ ಗಳಲ್ಲಿ ದೃಢಪಟ್ಟಿದೆ. ಈ ಔಷಧಿಗೆ ಬಳಸುವ ಗಿಡಮೂಲಿಕೆ ಅಂಶಗಳು ವೈರಾಣುವು ಮೂಗಿನಲ್ಲಾಗಲೀ ಅಥವಾ ಗಂಟಲಿನಲ್ಲಾಗಲೀ ಜೀವಕೋಶದೊಂದಿಗೆ ಬೆಸೆದುಕೊಳ್ಳುವುದಕ್ಕೆ ಅವಕಾಶ ನೀಡದಿರುವ ಮೂಲಕ ವ್ಯಕ್ತಿಗೆ ರೋಗದಿಂದ ರಕ್ಷಣೆ ನೀಡುತ್ತವೆ ಎಂದರು.

“ಪರ್ಯಾಯ ಔಷಧಿಗಳ ಪೈಕಿ ‘ವೈರಾನಾರ್ಮ್’ ಮಾತ್ರವೇ ಎನ್.ಎಲ್. ಅನುಪಾತವನ್ನು ಕಡಿಮೆಗೊಳಿಸುತ್ತದೆ ಎಂಬುದನ್ನು ಕ್ಲಿನಿಕಲ್ ಟ್ರಯಲ್ ನಲ್ಲಿ ಕ್ರಮಬದ್ಧವಾಗಿ ಸಾಬೀತುಪಡಿಸಿರುವ ಔಷಧವಾಗಿದೆ. ರೋಗ ಪ್ರತಿರೋಧದ ಮೂಲಭೂತ ತತ್ತ್ವಗಳನ್ನು ಆಧರಿಸಿ ‘ವೈರಾನಾರ್ಮ್’ ಅನ್ನು ಅಭಿವೃದ್ಧಿಪಡಿಸಿರುವುದರಿಂದ ವೈರಸ್ ನ ರೂಪಾಂತರಗಳಿಗೂ ಇದು ಪರಿಣಾಮಕಾರಿಯಾಗಿರುತ್ತದೆ” ಎಂದೂ ಪದ್ಮನಾಭನ್ ಹೇಳಿದರು.

‘ವೈರಾನಾರ್ಮ್’ ವಿಶೇಷ

  • ಅಪ್ಪಟ ನೈಸರ್ಗಿಕ ಗಿಡಮೂಲಿಕೆಗಳಿಂದ ಮಾಡಲಾಗಿದೆ
  • ವಿಕ್ಟೋರಿಯಾ ಆಸ್ಪತ್ರೆಯಲ್ಲಿ 250 ಕೋವಿಡ್ ಬಾಧಿತರ ಮೇಲೆ ಕ್ಲಿನಿಕಲ್ ಟ್ರಯಲ್ ಮಾಡಲಾಗಿದೆ
  • ಆಯುಷ್ ಅನುಮೋದನೆ, ಸಿ.ಟಿ.ಆರ್.ಐ. ಮಾರ್ಗದರ್ಶಿ ಸೂತ್ರಗಳು
  • ಎನ್/ಎಲ್ ಅನುಪಾತ ತಗ್ಗಿಸಿ ಕೊರೋನಾ ವೈರಾಣು ವೃದ್ಧಿಗೆ ಕಡಿವಾಣ ಹಾಕುತ್ತದೆ
  • ಕೆಮ್ಮಿನ ತೀವ್ರತೆ, ಕೆಮ್ಮಿನ ಅವಧಿ & ಉಸಿರೆಳೆತವನ್ನು ತಗ್ಗಿಸುತ್ತದೆ
  • ಯುವಕರು (<40), ಹಿರಿಯರು (>60) ಎಲ್ಲರ ಚೇತರಿಕೆಗೂ ಸಹಕಾರಿ

ಹೆಚ್ಚಿನ ಅಧ್ಯಯನಕ್ಕೆ WTO ಅನುಮತಿ

ವಿಶ್ವ ಆರೋಗ್ಯ ಸಂಸ್ಥೆಯು (WTO) ಕೋವಿಡ್ ಬಾಧಿತ ಗರ್ಭಿಣಿಯರಿಗೆ ಹಾಗೂ ಮಗುವಿಗೆ ಜನ್ಮ ನೀಡಿದ ತಾಯಂದಿರ ಮೇಲೆ ‘ವೈರಾನಾರ್ಮ್’ ಬೀರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಅನುಮತಿ ನೀಡಿದೆ ಎಂದು ಅಲ್ತಿಯಾ ಡಿ.ಆರ್.ಎಫ್.ನ ಡಾ. ಮನು ಜಗ್ಗಿ ತಿಳಿಸಿದರು.

ರಾಷ್ಟ್ರೀಯ ಆಸ್ಪತ್ರೆಗಳ ಮೌಲ್ಯಾಂಕನ ಮಂಡಳಿಯ (NABH) ಮಾನ್ಯತೆ ಹೊಂದಿದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಸಿ.ಟಿ.ಆರ್.ಐ. (ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿ- ಇಂಡಿಯಾ) ಅನುಮೋದನೆ ಪಡೆದು ಈ ಕ್ಲಿನಿಕಲ್ ಟ್ರಯಲ್ ನಡೆಸಲಾಗಿದೆ. ಇದಕ್ಕಾಗಿ 250 ಕೋವಿಡ್ ಸೋಂಕಿತರನ್ನು ಆಯ್ಕೆ ಮಾಡಿ 6 ತಿಂಗಳ ಕಾಲ ಪರೀಕ್ಷೆಗಳನ್ನು ನಡೆಸಲಾಯಿತು. ಸಿ.ಟಿ.ಆರ್.ಐ. ಮಾರ್ಗದರ್ಶಿ ಸೂತ್ರದ ಪ್ರಕಾರ, ಇವರನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಇದರಲ್ಲಿ, ಒಂದು ಗುಂಪಿನ 125 ಜನರಿಗೆ ‘ವೈರಾನಾರ್ಮ್’ ಕೊಡಲಾಗುತ್ತಿತ್ತು. ಇನ್ನೊಂದು ಗುಂಪಿನ 125 ಜನರಿಗೆ ‘ವೈರಾನಾರ್ಮ್’ ಕೊಡುತ್ತಿರಲಿಲ್ಲ. ‘ವೈರಾನಾರ್ಮ್’ ಅನ್ನು ಯಾರಿಗೆ ಕೊಟ್ಟಿರಲಿಲ್ಲವೋ ಅವರಿಗಿಂತ ಅದನ್ನು ಯಾರಿಗೆ ಕೊಡಲಾಗಿತ್ತೋ ಅವರಲ್ಲಿ ಚೇತರಿಕೆಯು ಉತ್ತಮವಾಗಿರುವುದು ವಿಶ್ಲೇಷಣೆಗಳಿಂದ ದೃಢಪಟ್ಟಿದೆ ಎಂದು ಕ್ಲಿನಿಕಲ್ ಟ್ರಯಲ್ ನ ಪ್ರಧಾನ ಮೇಲ್ವಿಚಾರಕ ಡಾ.ರಾಧಾಶ್ಯಾಮ್ ನಾಯ್ಕ್ ವಿವರಿಸಿದರು.

ಗಮನ ಸೆಳೆದ ಮತ್ತೊಂದು ಅಂಶವೆಂದರೆ, ಇದು ಕಿರಿಯ ವಯಸ್ಕರು (40ಕ್ಕಿಂತ ಕಡಿಮೆ ವರ್ಷ) ಹಾಗೂ ಹಿರಿಯ ವಯಸ್ಕರು (60ಕ್ಕಿಂತ ಹೆಚ್ಚು ವರ್ಷ), ಎರಡೂ ವಯೋಮಾನದವರಲ್ಲಿ, ‘ಟಿ’ ಜೀವಕೋಶಗಳ ಪ್ರತಿರೋಧವನ್ನು ಉತ್ತೇಜಿಸುವ ಜೊತೆಗೆ ಜೀವಕೋಶೀಯ ಉರಿಯೂತವನ್ನು ಕಡಿಮೆಗೊಳಿಸುತ್ತದೆ ಎಂಬುದು ಕಂಡುಬಂದಿದೆ. ಕೋವಿಡ್ 2ನೇ ಅಲೆಯು ಹಿರಿಯ ವಯಸ್ಸಿನವರ ಜೊತೆಗೆ ಕಿರಿಯ ವಯಸ್ಸಿನವರನ್ನೂ ಬಾಧಿಸುತ್ತಿರುವ ಈ ಸನ್ನಿವೇಶದಲ್ಲಿ ಇದು ಹೆಚ್ಚು ಗಮನ ಸೆಳೆದಿದೆ. ಜೀವಕೋಶ ಪ್ರತಿರೋಧದಲ್ಲಿ ಆಗುವ ಹೆಚ್ಚಳವು ದೀರ್ಘಾವಧಿ ಚೇತರಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಅಲ್ಲದೇ, ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಗಳಂತಹ ಸಹವರ್ತಿ ರೋಗಗಳಿಂದ ಬಾಧಿತರಾದವರಿಗೂ ‘ವೈರಾನಾರ್ಮ್’ ಸುರಕ್ಷಿತ ಎಂಬುದು ಸಾಬೀತಾಗಿದೆ ಎಂದು ಆರೋಗ್ಯ ಸೇವಾ ಉದ್ಯಮ ಪರಿಣತ ರಾಜೀವ್ ನಾಗಿ ತಿಳಿಸಿದರು.

ಈ ಆಯುರ್ವೇದ ಕ್ಯಾಪ್ಸೂಲ್ ಬಿಡುಗಡೆಯಾಗುತ್ತಿರುವುದಕ್ಕೆ ತಮ್ಮ ಖುಷಿಯನ್ನು ಹಂಚಿಕೊಂಡ ಖೋಡೆ ಉದ್ಯಮ ಸಮೂಹದ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಸ್ವಾಮಿ ಖೋಡೆ ಅವರು “ನಮ್ಮ ಕುಟುಂಬದ ಹಿರಿಯರ ಆಶೀರ್ವಾದ ಹಾಗೂ ದೂರದರ್ಶಿತ್ವದ ಬಲದಿಂದ ಅಪ್ಪಟ ನೈಸರ್ಗಿಕ ಗಿಡಮೂಲಿಕೆಗಳ ಅಂಶಗಳನ್ನು ಬಳಸಿ ಅಡ್ಡಪರಿಣಾಮಗಳಲ್ಲಿದ ಉತ್ಪನ್ನ ರೂಪಿಸುವಲ್ಲಿ ನಾನು ಶಕ್ತಿ ಮೀರಿ ತೊಡಗಿಸಿಕೊಂಡಿದ್ದೇನೆ. ಕ್ಲಿನಿಕಲ್ ಟ್ರಯಲ್ ನಲ್ಲಿ ‘ವೈರಾನಾರ್ಮ್’ ಪರಿಣಾಮಕಾರಿ ಎಂದು ದೃಢಪಟ್ಟಿದ್ದು, ಅದರ ಹಿಂದಿನ ತಾಂತ್ರಿಕ ವಿವರಗಳನ್ನು ಜನರ ಮುಂದಿಡಲು ಸಂತೋಷವಾಗುತ್ತಿದೆ” ಎಂದರು.

‘ವೈರಾನಾರ್ಮ್’ ಸದ್ಯಕ್ಕೆ ಎಲ್.ಕೆ.ವೆಲ್ನೆಸ್ ಸೆಂಟರ್ (#75, 3ನೇ ಕ್ರಾಸ್, ರೆಸಿಡೆನ್ಸಿ ರಸ್ತೆ, ಬೆಂಗಳೂರು-560025) ಇಲ್ಲಿ ಲಭ್ಯವಿದೆ. ಆಸಕ್ತರು 080-40934216/ 93801 74977 ಸಂಪರ್ಕಿಸಬಹುದು. ಇದರ ಬೆಲೆ 60 ಕ್ಯಾಪ್ಸೂಲ್ ಗಳ ಬಾಟಲಿಗೆ ರೂ. 2000.

ಕೆಂಗಲ್ ಶ್ರೀಪಾದ ರೇಣು ಹಾಗೂ ತಜ್ಞವೈದ್ಯರು ಸುದ್ದಿಗೋಷ್ಠಿಯಲ್ಲಿದ್ದರು.

Tags: Bengalurucovid19 karnatakadabur research foundationindiakarnatakakhoday groupswamy Khodayviranorm
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಹಳ್ಳಿ ಜನರಿಗೆ ಒಳ್ಳೆಯ ಸುದ್ದಿ; ನಗರ & ಪಟ್ಟಣ ಕೊಳೆಗೇರಿಗಳಲ್ಲಿನ ಸೋಂಕಿತರಿಗೆ ಇನ್ಮೇಲೆ  ಹೋಮ್‌ ಐಸೋಲೇಷನ್‌ ಇರಲ್ಲ; ಎಲ್ಲರಿಗೂ ಕೋವಿಡ್‌ ಕೇರ್‌ನಲ್ಲೇ ಟ್ರೀಟ್‌ಮೆಂಟ್

ಹಳ್ಳಿ ಜನರಿಗೆ ಒಳ್ಳೆಯ ಸುದ್ದಿ; ನಗರ & ಪಟ್ಟಣ ಕೊಳೆಗೇರಿಗಳಲ್ಲಿನ ಸೋಂಕಿತರಿಗೆ ಇನ್ಮೇಲೆ ಹೋಮ್‌ ಐಸೋಲೇಷನ್‌ ಇರಲ್ಲ; ಎಲ್ಲರಿಗೂ ಕೋವಿಡ್‌ ಕೇರ್‌ನಲ್ಲೇ ಟ್ರೀಟ್‌ಮೆಂಟ್

Leave a Reply Cancel reply

Your email address will not be published. Required fields are marked *

Recommended

ಮಕ್ಕಳ ಪಾಲಿನ ಕಾಮಧೇನು ಗುಡಿಬಂಡೆ ಶ್ರೀ ಬಾಲಾಂಜನೇಯ ಸ್ವಾಮಿ

ಮಕ್ಕಳ ಪಾಲಿನ ಕಾಮಧೇನು ಗುಡಿಬಂಡೆ ಶ್ರೀ ಬಾಲಾಂಜನೇಯ ಸ್ವಾಮಿ

5 years ago
ಜಾತಿಗಣತಿ ವರದಿ ಪರಿಶೀಲನೆಗೆ ಸಂಪುಟ ಉಪಸಮಿತಿ?; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತ್ತ ಎಲ್ಲರ ಚಿತ್ತ

ಜಾತಿಗಣತಿ ವರದಿ ಪರಿಶೀಲನೆಗೆ ಸಂಪುಟ ಉಪಸಮಿತಿ?; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತ್ತ ಎಲ್ಲರ ಚಿತ್ತ

2 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ