Lead photo courtesy: Wikipedia
100 ರೂ. ದಾಟಿದ ಲೀಟರ್ ಬೆಲೆ
ಶಿವಮೊಗ್ಗ: ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ದರ 100 ರೂ. ಏರಿಕೆಯಾಗಿರುವುದನ್ನು ಖಂಡಿಸಿ ತಟ್ಟೆ ಜಾಗಟೆ ಬಾರಿಸಿ ಸಿಹಿ ಹಂಚಿ ಅಣಕು ಸಂಭ್ರಮಾಚರಣೆ ನಡೆಸುವ ಮೂಲಕ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ದೇಶಾದ್ಯಂತ ಪೆಟ್ರೋಲ್ ದರ ಏರಿಕೆಯನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ನಗರದಲ್ಲಿ ಪೆಟ್ರೋಲ್ ಬಂಕ್ ಮುಂಭಾಗ ಕೇಂದ್ರ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ತಟ್ಟೆ ಜಾಗಟೆ ಶಂಕುಗಳ ಸದ್ದು ಮಾಡಿ ಪೆಟ್ರೋಲ್ ಬಂಕಿಗೆ ಬರುವ ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ನೀಡುವ ಮುಖಾಂತರ ಅಣಕು ಸಂಭ್ರಮಾಚರಣೆಯನ್ನು ಆಚರಿಸಲಾಯಿತು. ಇದೇನಾ ಅಚ್ಚೆ ದಿನ್ ದಿನ್ ಆಯೆ ಗಾ ಪೆಟ್ರೋಲ್ ದರದಲ್ಲಿ ಶತಕ ಬಾರಿಸಿದ ನರೇಂದ್ರ ಮೋದಿಗೆ ಅಭಿನಂದಿಸುತ್ತದೆ ಎಂದು ಪ್ರಶ್ನಿಸಿತು.
ಕೂಡಲೇ ರಾಷ್ಟ್ರಪತಿಗಳು ಇಂತಹ ಕೋವಿಡ್ʼನಂತಹ ವಿಪತ್ತು ಪರಿಸ್ಥಿತಿಯಲ್ಲೂ ಪೆಟ್ರೋಲ್ ದರದಲ್ಲಿ ಶತಕ ಬಾರಿಸಿದ ಪ್ರಧಾನ ಮಂತ್ರಿಗಳಿಗೆ ಯಾವುದಾದರೂ ʼಭೂಷಣʼ ಅಥವಾ ಯಾವುದಾದರೂ ʼಚಕ್ರ ವೀರʼ ಪ್ರಶಸ್ತಿಗಳನ್ನು ನೀಡಲಿ ಎಂದು ಯುವ ಕಾಂಗ್ರೆಸ್ ಆಗ್ರಹಿಸಿದೆ.