18 ವರ್ಷ ಒಳಗಿನವರಿಗೆ ಅನ್ವಯ; ಮಕ್ಕಳನ್ನು ನೋಡಿಕೊಳ್ಳುವುದು ಹೇಗೆ? ಪೋಷಕರಿಗೆ ಇಲ್ಲಿದೆ ಮೋದಿ ಸರಕಾರ ಟಿಪ್ಸ್
ನವದೆಹಲಿ/ಬೆಂಗಳೂರು: ದೇಶಾದ್ಯಂತ ಕೋವಿಡ್ ಎರಡನೇ ಅಲೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಮೂರನೇ ಅಲೆ ಕಾಣಿಸಿಕೊಂಡ ಮೇಲೆ ಮಕ್ಕಳ ಬಗ್ಗೆ ಕೈಗೊಳ್ಳಬೇಕಾದ ಮುತುವರ್ಜಿ ಬಗ್ಗೆ ಕೇಂದ್ರ ಸರಕಾರ ಮಾರ್ಗಸೂಚಿ ಪ್ರಕಟಿಸಿದೆ
ಕೇಂದ್ರದ ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಾರ 18 ವರ್ಷದೊಳಗಿನ ಮಕ್ಕಳಿಗೆ ರೆಮಿಡಿಸಿವಿರ್ ಹಾಗೂ ಸ್ಟೆರಾಯ್ಡ್ ಕೊಡುವಂತಿಲ್ಲ.
ಒಂದೆಡೆ ಕರ್ನಾಟಕ ಸೇರಿ ದೇಶಾದ್ಯಂತ ಎರಡನೇ ಅಲೆ ಇಳಿಮುಖವಾಗುತ್ತಿದ್ದು, ಮೂರನೇ ಅಲೆ ಕಂಡು ಬರುವ ಸಾಧ್ಯತೆಯನ್ನು ರಾಷ್ಟ್ರೀಯ ವೈದ್ಯ ಮಂಡಳಿ ಸೇರಿ ಕೇಂದ್ರದ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಈಗಿರುವ ಆತಂಕದಂತೆ ಮೂರನೇ ಅಲೆ ಮಕ್ಕಳಿಗೆ ತೊಂದರೆ ನೀಡಬಹುದು ಎಂದು ಹೇಳಲಾಗಿದೆ. ಈ ನಡಿವೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸೋಂಕು ಕಂಡು ಬಂದರೆ ಏನು ಮಾಡಬೇಕು? ಎಂಥಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದಬ ಬಗ್ಗೆ ಕೇಂದ್ರವು ಸೂಚನೆಗಳನ್ನು ನೀಡಿದೆ.
ಇಲ್ಲಿದೆ ಸರಕಾರ ಟಿಪ್ಸ್
- ಕಡ್ಡಾಯವಾಗಿ ಮಕ್ಕಳಿಗೆ ರೆಮ್ಡೆಸಿವಿರ್ ಬಳಸುವಂತಿಲ್ಲ. ಸೋಂಕಿತರಲ್ಲಿ ಆಕ್ಸಿಜನ್ ಪ್ರಮಾಣ ಸ್ಥಿರತೆಗೆ ಬಳಸಲಾಗುವ ಈ ಔಷಧದಿಂದ ಬ್ಲ್ಯಾಕ್ ಫಂಗಸ್ ಬರುತ್ತಿರವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ಕೊಡಲಾಗಿದೆ.
- ಮಕ್ಕಳಿಗೆ ಸ್ಟೆರಾಯ್ಡ್ ಕೂಡ ಕೊಡುವಂತಿಲ್ಲ. ಮಕ್ಕಳಲ್ಲಿ ಸೋಂಕಿನ ಸೌಮ್ಯ ಲಕ್ಷಣಗಳು ಇರುವ ಮತ್ತೂ ಲಕ್ಷಣಗಳೇ ಇಲ್ಲದ ಪ್ರಕರಣದಲ್ಲಿ ಸ್ಟೆರಾಯ್ಡ್ ಬಳಕೆ ಬೇಡ. ಒಂದು ಅತ್ಯಂತ ಗಂಭೀರ ಪ್ರಕರಣಗಳು ಕಂಡು ಬಂದರೆ ಸ್ಟೆರಾಯ್ಡ್ ನೀಡಬಹುದು.
- ಐದು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಮಾಸ್ಕ್ ಅಗತ್ಯವಿಲ್ಲ. ಒಂದು ವೇಳೆ ತಂದೆ-ತಾಯಿ ಅಥವಾ ವೈದ್ಯರ ಮುತುವರ್ಜಿಯೊಂದಿಗೆ ಇಂಥ ಮಕ್ಕಳು ಮಾಸ್ಕ್ ಧರಿಸಬಹುದು.
- ವೈದ್ಯರನ್ನು ಸಂಪರ್ಕಿಸದೇ ಮಕ್ಕಳಿಗೆ ಪೋಷಕರೇ ಔಷಧಿ ನೀಡುವಂತಿಲ್ಲ. ಸೋಂಕು ಪತ್ತೆ ಸೇರಿ ಇತರೆ ವೈದ್ಯ ಪರೀಕ್ಷೆಗಳನ್ನು ಸುಮ್ಮನೆ ಮಾಡಿಸುವಂತಿಲ್ಲ.
- ಒಂದು ವೇಳೆ ಸೋಂಕಿನ ಯಾವುದೇ ಲಕ್ಷಣಗಳು ಮಕ್ಕಳಲ್ಲಿ ಕಂಡು ಬಂದರೆ ಮಾರ್ಗಸೂಚಿ ಪ್ರಕಾರವೇ ಚಿಕಿತ್ಸೆ ನೀಡಬೇಕು. ಪೋಷಕರು ಅನಗತ್ಯ ಗೊಂದಲಕ್ಕೆ ಈಡಾಗುವುದು ಬೇಡ. ಜತೆಗೆ, ನಿರ್ದಿಷ್ಟ ರೀತಿಯ ಪೌಷ್ಠಿಕ ಆಹಾರ ಕ್ರಮವನ್ನು ಸೂಚಿಸಲಾಗಿದೆ.
- ಸೋಂಕು ಕಾಣಿಸಿಕೊಂಡ ಮಕ್ಕಳಿಗೆ ಆರು ನಿಮಿಷ ವಾಕಿಂಗ್ ಮಾಡಿಸಿದರೆ ಉತ್ತಮ. ಇದು ೧೨ಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳಿಗೆ ಅನ್ವಯ. ಮಕ್ಕಳಿಗೆ ಆಕ್ಸಿಮೀಟರ್ ಅಳವಡಿಸಿ ವಾಕ್ ಮಾಡಿಸಬೇಕು ಹಾಗೂ ಆರು ನಿಮಿಷದ ನಡಿಗೆಯ ನಂತರ ಆಮ್ಲಜನಕದ ಮಟ್ಟ ಪರಿಶೀಲಿಸಿ ಉಸಿರಾಟದ ತೊಂದರೆ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.